Link copied!
Sign in / Sign up
3
Shares

ಗರ್ಭಾವಸ್ಥೆಯಲ್ಲಿ ಸೇವಿಸಲೆಬೇಕಾದ ೫ ಆಹಾರ ಪದಾರ್ಥಗಳು

ಗರ್ಭಾವಸ್ಥೆಯಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ನಿರ್ಣಾಯಕ ಅಂಶಗಳೆಂದರೆ ಆರೋಗ್ಯಕರ ಆಹಾರ ಸೇವನೆ. ಈ ಸಮಯದಲ್ಲಿ, ನಿಮ್ಮ ದೇಹಕ್ಕೆ ಹೆಚ್ಚು ಖನಿಜಾಂಶಗಳು, ಪೌಷ್ಟಿಕಾಂಶಗಳು, ಮತ್ತು ವಿಟಮಿನ್ ಗಳ ಅವಶ್ಯಕತೆ ಇರುತ್ತದೆ. ೨ನೇ ಮತ್ತು ೩ನೇ ತ್ರೈಮಾಸಿಕದಲ್ಲಿ ನೀವು ಪ್ರತಿ ದಿನ ೩೫೦-೫೦೦ ಹೆಚ್ಚುವರಿ ಕ್ಯಾಲೊರಿಗಳನ್ನು ತೆಗೆದುಕೊಳ್ಳಬೇಕೆಂದು ಶಿಫಾರಸು ಮಾಡಲಾಗಿದೆ. ನಿಮ್ಮ ಆಹಾರ ಸೇವನೆಯಲ್ಲಿ ಪೌಷ್ಟಿಕಾಂಶಗಳ ಕೊರತೆ ಕಾಣಿಸಿದರೆ, ಅದು ನಿಮ್ಮ ಮಗುವಿನ ಬೆಳವಣಿಗೆ ಮೇಲೆ ಋಣಾತ್ಮಕವಾಗಿ ಪ್ರಭಾವ ಬೀರುತ್ತದೆ. ಆರೋಗ್ಯಕರ ಆಹಾರ ಸೇವನೆಯಿಂದ ನಿಮ್ಮ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

 ನೀವು ಗರ್ಭವತಿಯಾದಾಗ ಸೇವಿಸಬೇಕಾದ ೫ ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳು

೧.ಗೆಣಸು

ಗೆಣಸಿನಲ್ಲಿ ಬೀಟಾ-ಕೆರೋಟಿನ್ ಅತಿ ಹೇರಳವಾಗಿ ಸಿಗುತ್ತದೆ, ಇದು ಒಂದು ಪೌಷ್ಟಿಕಾಂಶ, ಇದನ್ನು ನಮ್ಮ ದೇಹವು ವಿಟಮಿನ್ ಎ(A) ಆಗಿ ಪರಿವರ್ತಿಸುತ್ತದೆ. ಇದು  ಆರೋಗ್ಯಕರ ಶಿಶು ಬೆಳವಣಿಗೆಗೆ ಅತ್ಯಂತ ಪ್ರಮುಖವಾದುದು. ಒಬ್ಬ ಗರ್ಭಿಣಿ ಮಹಿಳೆಯಾಗಿ, ನಿಮಗೆ ದಿನನಿತ್ಯದಲ್ಲಿ ಶೇಕಡ ೧೦-೪೦ರಷ್ಟು ವಿಟಮಿನ್ ಗಳನ್ನು ಸೇವಿಸಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ದಿನಕ್ಕೆ ಸುಮಾರು ೧೦೦-೧೫೦ ಗ್ರಾಂ.ನಷ್ಟು ಬೇಯಿಸಿದ ಗೆಣಸನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಬೇಕಾಗಿರುವ ವಿಟಮಿನ್ ಎ ಅನ್ನು ಅದು ಒದಗಿಸುತ್ತದೆ. ಗೆಣಸು ಹೆಚ್ಚು ಫೈಬರ್ ಅಂಶವನ್ನು ಒಳಗೊಂಡಿದೆ, ಆದ್ದರಿಂದ ಇದು, ನಿಮ್ಮ ದೇಹದ ಜೀರ್ಣಕ್ರಿಯೆಯನ್ನು ವೃದ್ದಿಸುತ್ತದೆ, ನೀವು ತೃಪ್ತಿ ಹೊಂದುವಂತೆ ಮಾಡುತ್ತದೆ, ಮತ್ತು ನಿಮ್ಮ ರಕ್ತದ ಶುಗರ್ ಅನ್ನು ಕಡಿಮೆ ಮಾಡುತ್ತದೆ.

೨. ಹಾಲು ಉತ್ಪನ್ನಗಳು

ನಿಮ್ಮ ಗರ್ಭದಲ್ಲಿ ಬೆಳೆಯುತ್ತಿರುವ ಶಿಶುವಿನ ಬೇಡಿಕೆಗಳನ್ನು ಈಡೇರಿಸಲು, ಅಧಿಕ ಪ್ರೋಟಿನ್ ಮತ್ತು ಕ್ಯಾಲ್ಸಿಯಮ್ ಅನ್ನು ತಗೆದುಕೊಳ್ಳುವುನ್ನು ಶಿಫಾರಸ್ಸು ಮಾಡುತ್ತೇವೆ. ಹಾಲು ಉತ್ಪನ್ನಗಳು ಎರಡು ವಿಧದ ಉನ್ನತ-ಗುಣಮಟ್ಟದ ಪ್ರೋಟೀನ್ ಗಳಿಂದ ಸಮೃದ್ಧವಾಗಿವೆ: ಕ್ಯಾಸಿನ್ ಮತ್ತು ವ್ಹೆಯ್(whey). ಕ್ಯಾಲ್ಸಿಯಮ್ ಮತ್ತು ರಂಜಕದ ಒಂದು ಅತ್ಯುತಮ ಮೂಲ ಹಾಲು ಆಗಿದೆ. ಮೊಸರು ಗರ್ಭಿಣಿ ಮಹಿಳೆಯರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಬೇರೆ ಯಾವ ವಸ್ತುಗಳಲ್ಲೂ ಇರದಷ್ಟು, ಹೆಚ್ಚಿನ ಕ್ಯಾಲ್ಸಿಯಮ್ ಇದೆ. ಇದರಿಂದ ಮಹಿಳೆಯ ಜೀರ್ಣಶಕ್ತಿಯು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ.

೩. ಬೇರ್ರಿಸ್

ಬೆರ್ರಿಗಳು ನೀರು, ಅಗತ್ಯವಾದ ಕಾರ್ಬೋಹೈಡ್ರೇಟ್ಸ್ ಗಳು, ವಿಟಮಿನ್ ಸಿ, ಫೈಬರ್ ಮತ್ತು ಸಸ್ಯ ಸಂಯುಕ್ತಗಳಿಂದ ಕೂಡಿವೆ. ಬೆರ್ರಿಗಳು ಹೆಚ್ಚು ಪ್ರಮಾಣದಲ್ಲಿ ವಿಟಮಿನ್ ಸಿ(C) ಅನ್ನು ಹೊಂದಿರುತ್ತವೆ, ಇದು ದೇಹವು ಕಬ್ಬಿಣಾಂಶವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಚರ್ಮದ ಆರೋಗ್ಯಕ್ಕೆ ಮತ್ತು ಪ್ರತಿರಕ್ಷಾಣ ವ್ಯವಸ್ಥೆಯನ್ನು ಹೆಚ್ಚಿಸಲು ವಿಟಮಿನ್ ಸಿ ನ ಅಗತ್ಯವಿದೆ. ಇದರಲ್ಲಿ ಹೆಚ್ಚು ಪೌಷ್ಟಿಕಾಂಶಗಳಿವೆ, ಆದರೆ ಕಡಿಮೆ ಪ್ರಮಾಣದ ಕ್ಯಾಲೋರಿಗಳಿವೆ.

೪. ಧಾನ್ಯಗಳು

ಗರ್ಭಾವಸ್ಥೆಯು ಕ್ಯಾಲೋರಿಗಳ ಬೇಡಿಕೆ ಜೊತೆಗೆ ಬರುತ್ತದೆ, ಅದರಲ್ಲೂ, ೨ನೆ ತ್ರೈಮಾಸಿಕ ಮತ್ತು ೩ನೆ ತ್ರೈಮಾಸಿಕದಲ್ಲಿ ಇದು ಹೆಚ್ಚು ಕ್ಯಾಲೊರಿಗಳನ್ನು ಬಯಸುತ್ತದೆ. ಧಾನ್ಯಗಳು ಈ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸಬಲ್ಲವು. ಧಾನ್ಯಗಳು ಹೆಚ್ಚು ಸಸ್ಯ ಸಂಯುಕ್ತಗಳು, ವಿಟಮಿನ್, ಮತ್ತು ಫೈಬರ್ ಅನ್ನು ಒಳಗೊಂಡಿದೆ. ಓಟ್ಸ್ ಪ್ರೋಟಿನ್ ಅನ್ನು ಹೊಂದಿದೆ, ಇದು ಗರ್ಭಿಣಿ ಮಹಿಳೆಯರಿಗೆ ಅವಶ್ಯಕವಾದದ್ದು. ಇದರ ಜೊತೆಗೆ, ವಿಟಮಿನ್-ಬಿ, ಫೈಬರ್, ಮತ್ತು ಮ್ಯಾಗ್ನಿಷಿಯಂ ಅನ್ನು ಇದು ಒಳಗೊಂಡಿದೆ, ಇದು ಗರ್ಭಿಣಿ ಮಹಿಳೆಗೆ ಅವಶ್ಯಕವಾಗಿರುವವು.

೫. ಒಣ ಹಣ್ಣುಗಳು

ಒಣ ಹಣ್ಣುಗಳು ಸಾಮಾನ್ಯವಾಗಿ, ಕ್ಯಾಲೋರಿ, ಫೈಬರ್, ವಿವಿಧ ಜೀವ ಸತ್ವಗಳು, ಮತ್ತು ಖನಿಜಾಂಶಗಳನ್ನು ತನ್ನಲ್ಲಿ ಇರಿಸಿಕೊಂಡಿದೆ. ಒಣ ಹಣ್ಣುಗಳ ಒಂದು ಸೇವನೆ, ನಿಮಗೆ ಅಗತ್ಯವಿರುವ ಫೊಲೇಟ್, ಕಬ್ಬಿಣಾಂಶ, ಪೊಟ್ಯಾಷಿಯಂ ಗಳನ್ನು ಒಳಗೊಂಡಂತೆ, ಖನಿಜಾಂಶಗಳನ್ನು ಮತ್ತು ವಿಟಮಿನ್ ಗಳನ್ನು ಹೆಚ್ಚು ಪ್ರಮಾಣದಲ್ಲಿ ನಿಮ್ಮ ದೇಹಕ್ಕೆ ಒದಗಿಸುತ್ತದೆ. ಒಣದ್ರಾಕ್ಷಿ ಜೊತೆಗೆ ಖರ್ಜೂರಗಳು, ಫೈಬರ್, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಸಸ್ಯ ಸಂಯುಕ್ತ ಅಂಶಗಳನ್ನು ಹೆಚ್ಚಾಗಿ ಒಳಗೊಂಡಿದೆ. ಖರ್ಜೂರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ, ನಿಮಗೆ ಸಿಸೇರಿಯನ್ ಬದಲು ಸಾಮಾನ್ಯ ಹೆರಿಗೆಯನ್ನು ಮಾಡಬಹುದು. ಒಣ ಹಣ್ಣುಗಳು ನೈಸರ್ಗಿಕವಾಗಿ ಸಿಹಿ ಅಂಶ ಒಂದಿರುವುದರಿಂದ, ಸಕ್ಕರೆಯ ಬದಲು ಇದನ್ನು ಬಳಸುವುದು ಉತ್ತಮ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon