Link copied!
Sign in / Sign up
18
Shares

ಗರ್ಭಾವಸ್ಥೆಯಲ್ಲಿ ಸೇವಿಸಬೇಕಾದ ಮತ್ತು ಸೇವಿಸಬಾರದ ಆಹಾರ ಪದಾರ್ಥಗಳು

ಗರ್ಭಾವಸ್ಥೆಯು, ಮಹಿಳೆಯು ತನಗೆ ಮತ್ತು ತನ್ನ ಶಿಶುವಿಗೆ ಸೇರಿಸಿ ಆಹಾರ ಸೇವಿಸುವ ಸಮಯ. ಇದು ತಾಯಿಯ ದೇಹವು, ತನ್ನ ಗರ್ಭದಲ್ಲಿ ಮಗುವನ್ನು ಬೆಳೆಸುವ ಕ್ರಿಯೆ. ಆದ್ದರಿಂದ ತಾಯಿಯು ತನ್ನ ಜೀವನ ಶೈಲಿಯ ಬಗ್ಗೆ ಈಗ ಹೆಚ್ಚು ಕಾಳಜಿಯನ್ನು ಹೊಂದಬೇಕು, ಇದು ಅವಳ ಮತ್ತು ಅವಳ ಉದರದಲ್ಲಿರುವ ಮಗುವಿನ ಆರೋಗ್ಯ ದೃಷ್ಟಿಯಿಂದ, ಅದರಲ್ಲೂ ಅವಳು ಏನನ್ನು ಸೇವಿಸುತ್ತಾಳೆ ಎಂಬುದು ಮುಖ್ಯವಾಗುತ್ತದೆ.

ಏನನ್ನು ಸೇವಿಸಬಹುದು?
೧. ಕಾರ್ಬೋಹೈಡ್ರೇಟ್ಸ್

ಕಾರ್ಬೋಹೈಡ್ರೇಟ್ಸ್ ಗಳು ಶಕ್ತಿಯ ಅತ್ಯುತ್ತಮ ಮೂಲವಾಗಿವೆ. ಇದು ನೀವು ಸೇವಿಸುವ ಪ್ರತಿ ಆಹಾರದ ಭಾಗವಾಗಿರಬೇಕು. ಆಲೂಗಡ್ಡೆ, ಅಕ್ಕಿ ಮತ್ತು ಬ್ರೆಡ್ ಗಳಲ್ಲಿ ಇವು ಇವೆ.

೨. ಅಪರ್ಯಾಪ್ತ(ಅನ್ಸ್ಯಾಚುರೆಟೆಡ್) ಕೊಬ್ಬು

ಅಪರ್ಯಾಪ್ತ ಕೊಬ್ಬುಗಳು ಉತ್ತಮ ಕೊಬ್ಬುಗಳು, ಅದು ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟರಾಲ್ ಅನ್ನು ಹೆಚ್ಚಿಸುವುದಿಲ್ಲ ಅಥವಾ ಸಂಗ್ರಹಿಸುವುದಿಲ್ಲ. ಸಂಸ್ಕರಿಸಿದ ತರಕಾರಿ ಎಣ್ಣೆಗಳು ಕೆಟ್ಟ ಕೊಬ್ಬುಗಳನ್ನು (ಸ್ಯಾಚುರೇಟೆಡ್ ಕೊಬ್ಬುಗಳು) ಹೊಂದಿರುವುದರಿಂದ, ಕಚ್ಚಾ ಆಲಿವ್ ಎಣ್ಣೆ, ಕಡಲೆಕಾಯಿ ಎಣ್ಣೆ ಅಥವಾ ಸೂರ್ಯಕಾಂತಿ ಎಣ್ಣೆಯನ್ನು ಬಳಸುವುದು ಉತ್ತಮ. ಅಪರ್ಯಾಪ್ತ ಕೊಬ್ಬನ್ನು ಹೆಚ್ಚಾಗಿ ಹೊಂದಿರುವ ಆಹಾರ ಪದಾರ್ಥಗಳೆಂದರೆ, ಆವಕಾಡೋಸ್, ಒಣ ಹಣ್ಣುಗಳು, ದ್ವಿಧಳ ಧಾನ್ಯಗಳು, ಅಗಸೆ ಬೀಜಗಳು, ಸಾಲ್ಮನ್ ಮೀನು ಇತ್ಯಾದಿಗಳು.

೩. ಪ್ರೋಟಿನ್ಸ್

ನಿಮ್ಮ ಮಗುವಿನ ಸ್ನಾಯು ರಚನೆಗೆ ಮತ್ತು ನಿಮ್ಮ ದೇಹದಲ್ಲಿನ ಬದಲಾವಣೆಗಳ ಪುಷ್ಟಿಗೆ ಪ್ರೋಟಿನ್ಸ್ ಗಳು ಅತ್ಯಗತ್ಯ. ಮೀನು, ಮಾಂಸ, ಮೊಟ್ಟೆ, ಬೀಜಗಳು(ದ್ವಿಧಳ ಧಾನ್ಯಗಳು), ಬೀನ್ಸ್, ಸೋಯಾ ಉತ್ಪನ್ನಗಳ ಆಹಾರಗಳಲ್ಲಿ ಪ್ರೋಟೀನ್ ಗಳು ಸಮೃದ್ಧವಾಗಿದ್ದು ನೀವು ಗರ್ಭಾವಸ್ಥೆಯಲ್ಲಿ ಇದನ್ನು ನಿಯಮಿತವಾಗಿ ತಿನ್ನುವುದು ಒಳಿತು.

೪. ವಿಟಮಿನ್ಸ್ ಮತ್ತು ಖನಿಜಾಂಶಗಳು

ಗರ್ಭಾವಸ್ಥೆಯಲ್ಲಿ, ವಿಟಮಿನ್ಸ್ ಮತ್ತು ಖನಿಜಾಂಶಗಳ ಬೇಡಿಕೆ ದೇಹದಲ್ಲಿ ಹೆಚ್ಚಿರುವುದರಿಂದ, ಇವುಗಳ ಕೊರತೆ ಕಾಣಿಸಿಕೊಳ್ಳುವುದು ಸಾಮಾನ್ಯ. ನಿಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ಇದನ್ನು ಒದಗಿಸುವುದು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಕ್ಯಾಲ್ಸಿಯಂ ಮತ್ತು ಸತುವಿನ ಬಗ್ಗೆ ಹೆಚ್ಚು ಗಮನವಹಿಸಬೇಕು. ಕ್ಯಾಲ್ಸಿಯಮ್ ಅನ್ನು ಹೆಚ್ಚಾಗಿ ತನ್ನಲ್ಲಿರಿಸಿಕೊಂಡಿರುವ ಆಹಾರ ಪದಾರ್ಥಗಳೆಂದರೆ, ಹಾಲಿನ ಉತ್ಪನ್ನಗಳು, ಬ್ರೋಕೋಲಿ, ಸೋಯಾಬೀನ್. ಸತುವಿನ ಅಂಶವನ್ನು ಹೆಚ್ಚಾಗಿ ಹೊಂದಿರುವ ಆಹಾರ ಪದಾರ್ಥಗಳೆಂದರೆ, ಕೋಳಿ, ಸಿಗಡಿ, ಏಡಿ, ಹಾಲಿನ ಉತ್ಪನ್ನಗಳು, ಶುಂಠಿ, ಈರುಳ್ಳಿ, ಧಾನ್ಯಗಳು, ಗೋಧಿ, ಮೊಟ್ಟೆ, ಅಕ್ಕಿ ಮತ್ತು ಸೂರ್ಯಕಾಂತಿ ಬೀಜಗಳು.

೫. ಫೈಬರ್

ಗರ್ಭಾವಸ್ಥೆಯಲ್ಲಿ ನಿಮ್ಮ ಕರುಳಿನ ಚಲನೆಗಳನ್ನು ಸುಲಭ ಮಾಡಲು ಆಹಾರದಲ್ಲಿನ ಫೈಬರ್ ಗಳು ಸಹಾಯ ಮಾಡುತ್ತವೆ, ಈ ತಿಂಗಳುಗಳಲ್ಲಿ ಮಲಬದ್ಧತೆಯಾಗುವ ಸಂಭಾವ್ಯ ಇರುವ ಕಾರಣ, ಅದನ್ನು ಸುಲಭವಾಗಿಸಲು ಫೈಬರ್ ಗಳು ಸಹಾಯ ಮಾಡುತ್ತವೆ. ಇವುಗಳನ್ನು ಹೊಂದಿರುವ ಆಹಾರ ಪದಾರ್ಥಗಳೆಂದರೆ, ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ದ್ವಿಧಳ ಧಾನ್ಯಗಳು.

ಏನನ್ನು ಸೇವಿಸಬಾರದು?

೧.ಗರ್ಭಾವಸ್ಥೆಯಲ್ಲಿ, ನೀವು ಹಸಿ ಅಥವಾ ಬೇಯಿಸಿದ ಮಾಂಸವನ್ನು ಸೇವಿಸಬಾರದು, ಏಕೆಂದರೆ ಮಾಂಸವು ತನ್ನಲ್ಲಿ ಬ್ಯಾಕ್ಟಿರಿಯಾಗಳನ್ನು ಉತ್ಪತ್ತಿ ಮಾಡಲು ಅನುವುಮಾಡಿಕೊಡುತ್ತದೆ.

೨.ಹೆಚ್ಚಿನ ಪಾದರಸವಿರುವ ಮೀನನ್ನು ಸೇವಿಸದಿರಿ, ಇದರಿಂದ ನಿಮ್ಮ ಮಗುವಿನ ಮೆದುಳಿಗೆ ತೊಂದರೆಯಾಗಬಹುದು, ಮತ್ತು ನಿಮ್ಮ ಮಗುವು ದುರ್ಬಲಗೊಳ್ಳಲು ಇದು ಕಾರಣವಾಗಬಹುದು. ಇಂತಹ ಮೀನುಗಳೆಂದರೆ, ಟ್ಯೂನ ಮೀನು, ಶಾರ್ಕ್, ಕತ್ತಿ ಮೀನು ಮತ್ತು ಟೈಲ್ಫಿಶ್.

೩.ಹಸಿ ಮೊಟ್ಟೆ ಅಥವಾ ಹಸಿ ಮೊಟ್ಟೆಯನ್ನು ಒಳಗೊಂಡಿರುವ ಯಾವುದೇ ಆಹಾರ ಪದಾರ್ಥಗಳನ್ನು ಸೇವಿಸದಿರಿ, ಏಕೆಂದರೆ ಇದು ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟಿರಿಯಾ ಸೋಂಕಿಗೆ ಕಾರಣವಾಗಬಹುದು.

೪.ಪಾಶ್ಚರೀಕರಿಸದ ಹಾಲಿಂದ ತೊಂದರೆಯಾಗಬಹುದು.

೫.ಮೊದಲ ತ್ರೈಮಾಸಿಕದಲ್ಲಿ ಕೆಫೀನ್ ಅನ್ನು ಸಂಪೂರ್ಣವಾಗಿ ತಡೆಗಟ್ಟಬೇಕು ಮತ್ತು ನಂತರವೂ, ಇದರ ಪ್ರಮಾಣವು ದಿನಕ್ಕೆ ೨೦೦ ಮಿ.ಗ್ರಾಂ.ಗಿಂತಲೂ ಹೆಚ್ಚಾಗಬಾರದು. ಕೆಲವು ಅಧ್ಯಯನಗಳು ಕೆಫೀನ್ ಗರ್ಭಪಾತಗಳಿಗೆ ಕಾರಣವಾಗಬಹುದು ಎಂದು ಹೇಳುತ್ತವೆ.

೬.ಮಧ್ಯಪಾನವನ್ನು ಈ ಸಮಯದಲ್ಲಿ ಸಂಪೂರ್ಣವಾಗಿ ನಿಷೇದಿಸುವುದು ಒಳ್ಳೆಯದು.

ಸಾಮಾನ್ಯ ಸಲಹೆಗಳು

೧.ಚೆನ್ನಾಗಿ ತೊಳೆದ ಹಣ್ಣುಗಳು ಮತ್ತು ತರಕಾರಿಗಳನ್ನು ಉಪಯೋಗಿಸಿ.

೨.ನಿಮ್ಮ ಆಹಾರ ಸೇವನೆಯು ಪೌಷ್ಟಿಕಾಂಶಗಳ ಸಮತೋಲನದಿಂದ ಕೂಡಿರಬೇಕು.

೩.ಸಮಯ ಕಳೆಯಲು ಕುರುಕಲು ತಿಂಡಿಗಳ ಸೇವನೆಯನ್ನು ಬಿಡಿ. ಅದರಬದಲು, ಆರೋಗ್ಯಕರ ತಿನಿಸುಗಳಾದ ಗೆಣಸು, ಮನೆಯಲ್ಲಿ ತಯಾರಿಸಿದ ಲಘು ಉಪಹಾರ, ದ್ವಿಧಳ ಧಾನ್ಯಗಳು ಮತ್ತು ಹಣ್ಣುಗಳನ್ನು ಆಯ್ಕೆಮಾಡಿಕೊಳ್ಳಿ.

೪.ಹೆಚ್ಚಾಗಿ ನೀರು ಕುಡಿಯಿರಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon