Link copied!
Sign in / Sign up
4
Shares

ಗರ್ಭಿಣಿ ಆಗಿದ್ದಾಗ ರಕ್ತಸ್ರಾವ : ನೀವು ತಿಳಿದಿರಬೇಕಾದದ್ದು!

ಯಾವುದೇ ತರಹದ ಸ್ರಾವ ಅಥವಾ ಹರಿವು ಗರ್ಭಾವಸ್ಥೆಯಲ್ಲಿ ಭಯ ತರಿಸುವಂತಹದ್ದು, ಮತ್ತು ಇದು ಮೂರರಲ್ಲಿ ಒಬ್ಬ ಮಹಿಳೆ ಇದನ್ನು ಸಾಮಾನ್ಯವಾಗಿ ಅನುಭವಿಸುವಳು, ಮತ್ತು ಇದು ಮಗು ಅಥವಾ ತಾಯಿ ಯಾರಿಗೂ ತೊಂದರೆಯನ್ನು ಅಥವಾ ಹಾನಿಯನ್ನು ಮಾಡುವುದಿಲ್ಲ. ಗರ್ಭಿಣಿ ಮಹಿಳೆಯರು ಸಂಭೋಗದ ನಂತರ ಸಣ್ಣ ಕಲೆಗಳನ್ನು ಕಾಣುವುದು ಸಹಜವಾಗಿದೆ. ಮತ್ತು ಕೆಲವು ಗರ್ಭಿಣಿ ಮಹಿಳೆಯರು ರಕ್ತಸ್ರಾವವನ್ನು ಅನುಭವಿಸುವರು ಇದು ಅವರ ಗರ್ಭಾವಸ್ಥೆಯ ಕಾರಣದಿಂದ ಅಲ್ಲ ಅವರಿಗೆ ಆಗಿರುವ ಸೋಂಕಿನಿಂದ ಅಥವಾ ಯೋನಿಯ ತೊಂದರೆ ಕಾರಣದಿಂದ.

ನಿಮ್ಮ ಗರ್ಭಾವಸ್ಥೆಯಲ್ಲಿ ರಕ್ತಸ್ರಾವವನ್ನು ಕಾಣಲು ಕಾರಣಗಳು

ವೈದ್ಯರು ಅಂದಾಜಿಸುವ ಪ್ರಕಾರ ಗರ್ಭಾವಸ್ಥೆಯಲ್ಲಿ ಶೇಕಡಾ ೨೫ರಿಂದ ೪೦ರಷ್ಟು ಮಹಿಳೆಯರು ಯೋನಿಯ ಹರಿವನ್ನು ಅನುಭವಿಸುವರು. ಮೊದಲ ತ್ರೈಮಾಸಿಕದ ನಂತರ ಇದು ಸಾಮಾನ್ಯವಾಗಿ ಕಡಿಮೆಯಾಗುತ್ತದೆ. ವೈದ್ಯರ ಪ್ರಕಾರ ಗರ್ಭಾವಸ್ಥೆಯಲ್ಲಿ ಸಣ್ಣ ಕಲೆ ಅಥವಾ ರಕ್ತಸ್ರಾವ ಆಗಲು ಕಾರಣಗಳು

೧.ಅಂತರ್ನಿವೇಶನ ರಕ್ತಸ್ರಾವ, ಇದು ನಿಮ್ಮ ಗರ್ಭಾವಸ್ಥೆಯ ೪ನೇ ವಾರದಲ್ಲಿ ಆಗಬಹುದು, ಇದಕ್ಕೆ ಕಾರಣ ಫಲವತ್ತತ್ತೆಯಾದ ಮೊಟ್ಟೆಯು ಗರ್ಭಕೋಶದ ಗೋಡೆಯ ಮೇಲೆ ಅಂಟಿಕೊಳ್ಳುವುದು.

೨.ಹಾರ್ಮೋನುಗಳಲ್ಲಿ ಬದಲಾವಣೆ

೩.ಲೈಂಗಿಕ ಸಂಭೋಗ

೪.ಸೋಂಕು

೫.ನಿಮ್ಮ ದೇಹದ ಒಳಭಾಗಗಳ ಪರೀಕ್ಷೆ ಮಾಡಿರುವುದು.

ನಿಮ್ಮ ಗರ್ಭಾವಸ್ಥೆಯಲ್ಲಿನ ಮಧ್ಯಭಾಗ ಅಂದರೆ ೪ ರಿಂದ ೬ನೇ ತಿಂಗಳಿನಲ್ಲಿ ರಕ್ತಸ್ರಾವ ಗಂಭೀರ ವಿಷಯವಾಗಿ ಪರಿಗಣಿಸುವುದು ಒಳ್ಳೆಯದು ಇದು,

೧.ಇದು ಜರಾಯು(ಪ್ಲಾಸೆಂಟಾ)ದ ಸುತ್ತಲೂ ರಕ್ತಸ್ರಾವ ಇರಬಹುದು. ಇತರಹದ ರಕ್ತಸ್ರಾವ ಕಂಡುಬಂದರೂ ಸಾಮಾನ್ಯ ಗರ್ಭಾವಸ್ಥೆಯನ್ನು ನೀವು ಮುಂದುವರೆಸಬಹುದು, ಆದರೆ ಅದಕ್ಕೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಇದನ್ನು ಸರಿಯಾಗಿ ತೋರಿಸಿಕೊಳ್ಳಲಿಲ್ಲ ಎಂದರೆ, ಹೆರಿಗೆ ಸಮಯದಲ್ಲಿ ತೊಂದರೆಯನ್ನು ಅನುಭವಿಸಬೇಕಾದೀತು.

೨.ರಾಸಾಯನಿಕ ಗರ್ಭಧಾರಣೆ, ಮೊಟ್ಟೆಯು ಫಲವತ್ತಾಗಿ ಆದರೆ ಗರ್ಭಾಶಯದಲ್ಲಿ ಸಂಪೂರ್ಣವಾಗಿ ನಿಂತಿರದ ಕಾರಣ ಇದು ಸಂಭವಿಸುತ್ತದೆ.

೩.ಗರ್ಭಪಾತ, ಇದು ಸ್ವಾಭಾವಿಕವಾಗಿ ಮಗುವನ್ನು ಗರ್ಭಾವಸ್ಥೆಯ ಮೊದಲ ೨೦ನೇ ವಾರದಲ್ಲಿ ಕಳೆದುಕೊಳ್ಳುವುದು. ರಕ್ತಸ್ರಾವ ಆಗುವ ಸಮಯದಲ್ಲಿ ನಿಮಗೆ ಸೆಳೆತ ಅಥವಾ ಹೊಟ್ಟೆ ನೋವು ಕಾಣಿಸಿದರೆ ಗರ್ಭಪಾತ ಆಗುವ ಸಾಧ್ಯತೆ ಹೆಚ್ಚಿರುತ್ತದೆ, ನೀವು ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

೪.ಅಪಸ್ಥಾನಿಯ ಗರ್ಭಾವಸ್ಥೆ, ಫಲವತ್ತಾದ ಮೊಟ್ಟೆಯು ಗರ್ಭಕೋಶ ಬಿಟ್ಟು ಬೇರೆ ಸ್ಥಾನದಲ್ಲಿ ಅವರಿಸಿಕೊಳ್ಳುವುದನ್ನು ಅಪಸ್ಥಾನೀಯ ಗರ್ಭಾವಸ್ಥೆ ಎನ್ನುವರು. ಇದು ಸಾಮಾನ್ಯವಾಗಿ ಫಾಲೋಪಿಯನ್ ನಾಳದಲ್ಲಿ ಆಗುತ್ತದೆ. ಇದನ್ನು ಕೆಲವೊಮ್ಮೆ ನಾಳದ ಗರ್ಭಧಾರಣೆ ಎಂದು ಕರೆಯುವರು. ಇದು ಸಾಮಾನ್ಯ ಗರ್ಭಾವಸ್ಥೆಯಂತೆ ಆಗುವುದಿಲ್ಲ ಮತ್ತು ತಾಯಿಗೆ ಹೆಚ್ಚು ಅಪಾಯ ಆಗುವ ಸಾಧ್ಯತೆ ಇರುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon