Link copied!
Sign in / Sign up
1
Shares

ಗರ್ಭಾವಸ್ಥೆಯಲ್ಲಿ ಪ್ರಯಾಣಿಸುವುದು: ಯಾವಾಗ ಮಾಡಬೇಕು ಮತ್ತು ಮಾಡಬಾರದು

ಗರ್ಭಾವಸ್ಥೆಯಲ್ಲಿ ಖಚಿತವಾಗಿ ಬಹಳಷ್ಟು ತೊಡಕುಗಳನ್ನು ಎದುರುಸುತ್ತಿರಿ, ಆದರೆ ನಿಮ್ಮ ಮಗುವಿನ ಜನನದ ಮುನ್ನ ಒಂದು ಕೊನೆಯಬಾರಿ ಪ್ರಯಾಣಿಸುವುದು ಅತ್ಯಂತ ರೋಮಾಂಚನಕಾರಿಯಾಗಿರಬಹುದು.

ಆದ್ದರಿಂದ, ಗರ್ಭಾವಸ್ಥೆಯಲ್ಲಿ ಪ್ರಯಾಣದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಸಲಹೆಗಳು ಇಲ್ಲಿವೆ, ಏಕೆಂದರೆ ಇದು ಒಂಬತ್ತು ತಿಂಗಳ ಅವಧಿಯಲ್ಲಿ ಯಾವುದೇ ಸಮಯದಲ್ಲಿ ನೀವು ಮಾಡಬಹುದಾದ ವಿಷಯವಲ್ಲ.

ಮೊದಲನೇ ತ್ರೈಮಾಸಿಕ

ಖಂಡಿತವಾಗಿ, ನೀವು ನಿಮ್ಮ ಮೊದಲನೇ ತ್ರೈಮಾಸಿಕದಲ್ಲಿ ಪ್ರಯಾಣ ಮಾಡಬಹುದು, ಆದರೆ ವಾಕರಿಕೆ(ವಾಂತಿ) ಮತ್ತು ಬಳಲಿಕೆ(ಆಯಾಸ) ನಿಮ್ಮ ಪ್ರಯಾಣದ ಅನುಭವವನ್ನು ಕೆಟ್ಟದಾಗಿ ಮಾಡಬಹುದು. ಹೆಚ್ಚು ಶ್ರಮ ಅಥವಾ ಕಠಿಣ ಪ್ರಯಾಣದಿಂದ ಗರ್ಭಪಾತವಾಗುವ ಸಾಧ್ಯತೆಗಳಿವೆ.

ಎರಡನೇ ತ್ರೈಮಾಸಿಕ

ಶೌಚಾಲಯಕ್ಕೆ ನಿಮ್ಮ ಭೇಟಿ ಕಡಿಮೆಯಾಗುವುದರಿಂದ ಇದು ಪ್ರಯಾಣಿಸಲು ಉತ್ತಮ ಸಮಯ. ನೀವು ಈಗ ನಿಮ್ಮ ಮಗುವಿನ ನೂಕುವಿಕೆಗೆ ಹೊಂದಿಕೊಂಡಿರುವಿರಿ ಮತ್ತು ಅದಕ್ಕೆ ಅಗತ್ಯ ಶಕ್ತಿಯನ್ನು ಪಡೆದಿರುವಿರಿ. ಆದರೆ ನೀವು ನಡೆಯುವಾಗ ಜಾಗರೂಕರಾಗಿರಿ ಮತ್ತು ನೀವು ಕೆಳಗೆ ಬೀಳದಂತೆ ಅಥವಾ ಮಗುವಿಗೆ ಯಾವುದೇ ಹಾನಿಯಾಗದಂತೆ ಎಚ್ಚರವಹಿಸಿ(ನಡೆಯುವಾಗ ಕಾಲು ಜಾರುವುದು ಮುಂತಾದವುಗಳು ಸಂಭವಿಸಬಾರದು).

ಮೂರನೇ ತ್ರೈಮಾಸಿಕ

ನಿಮ್ಮ ಕೊನೆಯ ತ್ರೈಮಾಸಿಕವನ್ನು ನೀವು ತಲುಪಿದ ನಂತರ, ನಿಮ್ಮ ಮನೆಯಲ್ಲಿ ಇರುವುದು ಉತ್ತಮ. ಒಂದು ವೇಳೆ, ಹಠಾತ್ ತೊಡಕುಗಳು ಅಥವಾ ನಿಮ್ಮ ಮಗುವು ಉದರದಿಂದ ಆಚೆ ಬರಲು ಅವಸರ ಪಡುತ್ತಿದ್ದರೆ, ವಿಶ್ವಾಸಾರ್ಹ ವೈದ್ಯರು ಹತ್ತಿರ ಇರುವುದರಿಂದ ಸ್ವಲ್ಪಮಟ್ಟಿಗೆ ಶಾಂತಗೊಳ್ಳಲು ಸಹಾಯವಾಗುತ್ತದೆ ಮತ್ತು ಅವರು ನಿಮ್ಮ ಎಲ್ಲಾ ಹಠಾತ್ ಬದಲಾವಣೆಗೆ ಸೂಕ್ತ ಪರಿಹಾರ ನೀಡುವರು.

ನೀವು ಯಾವಾಗ ಪ್ರಯಾಣ ಮಾಡಬಹುದು…

೧.ನಿಮ್ಮ ತಜ್ಞರಿಂದ ಸಮ್ಮತಿ ದೊರೆತಾಗ. ಯಾವಾಗಲು ನಿಮ್ಮ ವೈದ್ಯರ ಸಲಹೆ ಪಡೆಯಿರಿ, ಈಗ ನೀವು ಪ್ರಯಾಣ ಮಾಡಬಹುದೇ ಎಂದು(ಇದರಿಂದ ಯಾವುದೇ ತೊಂದರೆ ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ), ಮತ್ತು ನಿಮ್ಮ ಪ್ರಯಾಣದ ಸಂಪೂರ್ಣ ವಿವರಣೆಯನ್ನು ಅವರಿಗೆ ನಿಡಿದ್ದಿರಿ ಎಂದು ಖಾತರಿಮಾಡಿಕೊಳ್ಳಿ.

೨.ಸಾರಿಗೆ ವಿಧಾನವು ಗರ್ಭಿಣಿಯರಿಗೆ ಅನುಕೂಲಕರವಾಗಿದೆಯೇ ಎಂಬುದನ್ನು ಗಮನಿಸಿ, ಮತ್ತು ಅವರ ಸಮ್ಮತಿ ಪಡೆಯುದು ಒಳ್ಳೆಯದು. ವಿಮಾನ ಮತ್ತು ಕಾರುಗಳನ್ನು, ರೈಲು ಮತ್ತು ಬಸ್ಸುಗಳಿಗಿಂತ ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ.

೩.ಪರಿಣಿತರು ನೀವು ಪ್ರಯಾಣಿಸಬಹುದು ಎಂದು ಸಮ್ಮತಿ ನೀಡಿದಾಗ. ಸೂಕ್ತ ಸಲಹೆ ಪಡೆದು ಹೋಗುವುದು.

೪.ನೀವು ಪ್ರಯಾಣ ಮಾಡುವ ಸ್ಥಳದಲ್ಲಿ ಪರ್ಯಾಯ ವೈದ್ಯರ ಸಂಪರ್ಕ ಅಥವಾ ವಿಳಾಸ ಹೊಂದಿರುವುದು ಒಳ್ಳೆಯದು.

೫.ನಿಮ್ಮ ಆರೋಗ್ಯವು ಇನ್ನು ಮುಂದೆ ಹೋಗಲು ಉತ್ತಮವಾಗಿದೆ ಎಂಬುದನ್ನು ಗಮನಿಸಿ.ನೆನಪಿನಲ್ಲಿರಿಸಿಕೊಳ್ಳಿ, ಗರ್ಭಾವಸ್ಥೆಯಲ್ಲಿ ತೊಡಕುಗಳು ಹೆಚ್ಚು ಹಣವನ್ನು ವ್ಯಯಿಸುವಂತೆ ಮಾಡಬಹುದು.

೬.ನಿಮ್ಮ ಪ್ರಸವಪೂರ್ವ ದಾಖಲೆಯ ಪ್ರತಿಯನ್ನು ನಿಮ್ಮೊಂದಿಗೆ ಇರಿಸಿಕೊಂಡಿರಿ. ವಿಶೇಷವಾಗಿ, ನೀವು ತುಂಬಾ ದಿನಗಳ ಕಾಲ ಅಲ್ಲೇ ಉಳಿದುಕೊಳ್ಳುವ ಯೋಜನೆಯಲ್ಲಿದ್ದರೆ.

ನೀವು ಯಾವಾಗ ಪ್ರಯಾಣ ಮಾಡಬಾರದು…

೧.ರಕ್ತಸ್ರಾವವಾಗುತ್ತಿದ್ದರೆ: ಇದರ ಅರ್ಥ ನಿಮಗೆ ಗರ್ಭಪಾತ, ಬೇಗನೆ ಪ್ರಸವವಾಗುವುದು ಅಥವಾ ಜರಾಯು ತೊಂದರೆಗೆ ಒಳಗಾಗುವ ಅವಕಾಶಗಳು ಹೆಚ್ಚು.

೨.ಮೊಂಡುತನದ ತಲೆನೋವು ನಿಮ್ಮಲ್ಲಿದ್ದರೆ: ಇದು ಮಾಮೂಲಿ ತಲೆ ನೋವು ಎಂದು ನೀವು ಭಾವಿಸಬಹುದು, ಆದರೆ ಅದನ್ನು ಪರಿಶೀಲಿಸಿಕೊಳ್ಳುವುದು ಒಳ್ಳೆಯದು.

೩.ನಿಮ್ಮ ದೃಷ್ಟಿಯ ಶಕ್ತಿ ಕುಂದಿದಾಗ: ಅಸ್ಪಷ್ಟ ಮತ್ತು ಮಸುಕಾದ ದೃಷ್ಟಿ ನಿಮ್ಮ ಕಣ್ಣಿನ ನರಗಳ ಊತವನ್ನು ಸೂಚಿಸುತ್ತದೆ.

೪.ಹೊಟ್ಟೆ ಬಾಗದಲ್ಲಿ ನೋವು ಬಂದಂತೆ ಅನಿಸಿದರೆ: ನೀವು ಎಲ್ಲೇ ಪ್ರಯಾಣಿಸುತ್ತಿದ್ದರೂ, ಯೋಚಿಸಬೇಡಿ, ಅದನ್ನು ಅಲ್ಲೇ ರದ್ದುಗೊಳಿಸಿ. ಎಲ್ಲಾದಕ್ಕಿಂತ ನಿಮ್ಮ ಮತ್ತು ಮಗುವಿನ ಆರೋಗ್ಯ ತುಂಬಾ ಮುಖ್ಯ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon