Link copied!
Sign in / Sign up
5
Shares

ಗರ್ಭಾವಸ್ಥೆಯಲ್ಲಿ ನೀವು ತಿಳಿದಿರಬೇಕಾದ ಅತಿ ಮುಖ್ಯವಾದ ವಿಷಯಗಳು

ಗರ್ಭಾವಸ್ಥೆಯು ಮಹಿಳೆಯ ಖುಷಿಯ ದಿನಗಳು,  ಜೊತೆಗೆ ಅಸ್ವಸ್ಥತೆ ಅಸಹಜತೆ ನೋವು ಗೊಂದಲಗಳನ್ನು ಒಳಗೊಂಡಿರುವ ದಿನಗಳು ಹೌದು. ಕೆಲವರು ಸಾಮಾನ್ಯ ಎಂದು ಪರಿಗಣಿಸುವ ಕೆಲವು ವಿಷಯಗಳು ಕೂಡ ತೊಂದರೆಯನ್ನು ಉಂಟುಮಾಡಬಹುದು. ಆದ್ದರಿಂದ ನಿಮ್ಮ ಗರ್ಭಾವಸ್ಥೆಯಲ್ಲಿ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳಿತು.

೧.ಪ್ರಸವಪೂರ್ವ ತಪಾಸಣೆ/ಚಿಕಿತ್ಸೆ ಕಡ್ಡಾಯವೇ/ಬಹಳ ಮುಖ್ಯವೇ?

ಹೌದು, ಪ್ರಸವಪೂರ್ವದಲ್ಲಿ ನಿಮ್ಮ ತಪಾಸಣೆ ಮತ್ತು ಚಿಕಿತ್ಸೆಗಳು ತುಂಬಾನೇ ಮುಖ್ಯ. ನೀವು ಮತ್ತು ನಿಮ್ಮ ಮಗುವಿನ ಅರೋಗ್ಯ, ಬೆಳವಣಿಗೆಯ ಗತಿ, ಉದರದೊಳಗೆ ಶಿಶುವಿನ ಸ್ಥಿತಿ, ಮುಂತಾದ ವಿಷಯಗಳನ್ನು ತಿಳಿದುಕೊಳ್ಳಲು ಇದು ತುಂಬಾ ಮುಖ್ಯ.

೨.ಗರ್ಭಾವಸ್ಥೆಯಲ್ಲಿ ಎಷ್ಟು ತೂಕವನ್ನು ಹೊಂದಬಹುದು?

ನೀವು ಎಷ್ಟು ತೂಕವನ್ನು ಪಡೆಯಬಹುದು ಎಂಬುದರ ಬಗ್ಗೆ ನಿಮ್ಮ ವೈದ್ಯರ ಬಳಿ ವಿಚಾರಿಸಿ. ಇದು ಪ್ರತಿಯೊಬ್ಬರಲ್ಲೂ ವಿಭಿನ್ನವಾಗಿರುತ್ತದೆ, ಆದರೆ ಸಾಮಾನ್ಯವಾಗಿ ೧೧ ರಿಂದ ೧೪ಕೆ.ಜಿ.ಯ ವರೆಗೆ ತೂಕವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನೀವು ಸಾಕಷ್ಟು ತೂಕವನ್ನು ಹೊಂದಿಲ್ಲದಿದ್ದರೆ, ಸ್ವಲ್ಪ ತೂಕವನ್ನು ಪಡೆಯಬೇಕು. ನೀವು ಅಗತ್ಯಕ್ಕಿಂತ ಹೆಚ್ಚು ತೂಕ ಇದ್ದರೆ ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು.

೩.ಏನನ್ನು ಸೇವಿಸಬಹುದು?

ನಿಮ್ಮ ಮತ್ತು ಮಗುವಿನ ಅರೋಗ್ಯ ಕಾಪಾಡಿಕೊಳ್ಳಲು ನೀವು ಸಮತೋಲನವಾಗಿ ಆರೋಗ್ಯಕರ ಆಹಾರ ಸೇವಿಸುವುದು ತುಂಬಾ ಒಳ್ಳೆಯದು. ಕೆಲವು ಆಹಾರಗಳು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ, ಸರಿಯಾಗಿ ಬೇಯಿಸಿರದ ಮಾಂಸ, ಮೊಟ್ಟೆ, ಮೀನು ತಿನ್ನುವುದು ಒಳ್ಳೆಯದಲ್ಲ. ಸರಿಯಾದ ಆಹಾರ ಕ್ರಮಕ್ಕೆ ನಿಮ್ಮ ವೈದ್ಯರನ್ನು ಭೇಟಿ ಮಾಡಿ.

ಪೌಷ್ಠಿಕಾಂಶವುಳ್ಳ, ಪ್ರೊಟೀನ್ ಮತ್ತು ಮುಂತಾದ ದೇಹಕ್ಕೆ ಪುಷ್ಠಿ ಅರೋಗ್ಯ ಹೆಚ್ಚಿಸುವ ಮತ್ತು ರೋಗನಿರೋಧಕಗಳನ್ನು ಹೆಚ್ಚಿಸುವ ಆಹಾರ ಸೇವಿಸುವುದು ಒಳ್ಳೆಯದು.

೪.ವಿಟಮಿನ್ ಗಳನ್ನು ತೆಗೆದುಕೊಳ್ಳಬಹುದೇ?

ಗರ್ಭಾವಸ್ಥೆಯಲ್ಲಿ ಕನಿಷ್ಠ ೪೦೦ ಮೈಕ್ರೋಗ್ರಾಮ್ ನಷ್ಟು ವಿಟಮಿನ್ ಗಳನ್ನು ನೀವು ಪ್ರತಿದಿನ ತೆಗೆದುಕೊಳ್ಳಬೇಕು. ಇದು ನಿಮ್ಮ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ನಿಮ್ಮ ವೈದ್ಯರ ಸಲಹೆಯು ಇದರಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.

೫.ಔಷಧಿಗಳನ್ನು ತೆಗೆದುಕೊಳ್ಳಬಹುದೇ?


ನೀವು ಸೇವಿಸುವ ಪ್ರತಿಯೊಂದು ಸಣ್ಣ ವಸ್ತುವು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದು, ಏಕೆಂದರೆ ನೀವು ಸೇವಿಸುವ ಪ್ರತಿ ವಸ್ತುವು ನಿಮ್ಮ ಮೂಲಕ ಮಗುವನ್ನು ಸೇರುತ್ತದೆ. ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವ ಮೊದಲು ನೀವು ನಿಮ್ಮ ವೈದ್ಯರನ್ನು ವಿಚಾರಿಸಬೇಕು. ಈ ಸಮಯದಲ್ಲಿ ವೈದ್ಯರ ಸಲಹೆ ಇಲ್ಲದೆ ಔಷದಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon