Link copied!
Sign in / Sign up
4
Shares

ಗರ್ಭಾವಸ್ಥೆಯಲ್ಲಿ ಆಮ್ಲ(ಬೆಟ್ಟದ ನೆಲ್ಲಿಕಾಯಿ) ಸೇವನೆಯ ಪ್ರಯೋಜನಗಳು

ಗರ್ಭಾವಸ್ಥೆ ಎಂದರೆ ಬಯಕೆ, ಮತ್ತು ಈ ಬಯಕೆಗಳಿಗೆ ಯಾವುದೇ ಅಡ್ಡಿ ಇಲ್ಲ. ಮೊದಲನೇ ತ್ರೈಮಾಸಿಕದಲ್ಲಿ ಸಾಮಾನ್ಯವಾಗಿ ನಮ್ಮ ಬಯಕೆಗಳು ಹುಳಿ ಆಹಾರ ಪದಾರ್ಥಗಳ ಮೇಲೆ ಒಲವನ್ನು ತೋರುತ್ತದೆ. ಹುಳಿ ಆಹಾರ ಪದಾರ್ಥದಲ್ಲಿ ಬಯಕೆ ಆಗುವ ಒಂದು ಆಹಾರ ಎಂದರೆ ನೆಲ್ಲಿಕಾಯಿ.

ನಿಂಬೆಹಣ್ಣಿನಂತೆ ಕಾಣುವ ಅದ್ಬುತ ಹಣ್ಣು ಆಮ್ಲ ಅಥವಾ ನೆಲ್ಲಿಕಾಯಿ. ಇದು ಸಿಹಿ ಮತ್ತು ಹುಳಿ ಮಿಶ್ರಿತ ರುಚಿಯನ್ನು ಹೊಂದಿದೆ. ಇದು ನಮ್ಮ ಪೂರ್ವಜರ ಕಾಲದಿಂದಲೂ ಆಯುರ್ವೇದ ಔಷಧಿ ಆಗಿದೆ ಮತ್ತು ಇದು ತನ್ನಲ್ಲಿ ಅನೇಕ ಪೌಷ್ಟಿಕಾಂಶಗಳನ್ನು, ಕಬ್ಬಿಣಾಂಶವನ್ನು, ವಿಟಮಿನ್ ಗಳನ್ನು, ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಅನ್ನು ಒಳಗೊಂಡಿದೆ.

ಗರ್ಭಾವಸ್ಥೆಯಲ್ಲಿ ನೆಲ್ಲಿಕಾಯಿ ಸೇವನೆ ಮಾಡಬಹುದೇ? ಅದರ ಸಂಪೂರ್ಣ ಮಾಹಿತಿಯನ್ನು ಮತ್ತು ಇದು ಗರ್ಭಿಣಿ ಮೇಲೆ ಮಾಡುವ ಪ್ರಭಾವವನ್ನು ತಿಳಿದುಕೊಳ್ಳಿ.

ಗರ್ಭಾವಸ್ಥೆಯಲ್ಲಿ ನೆಲ್ಲಿಕಾಯಿ ಸೇವನೆ ಮಾಡಬಹುದೇ?

ಹೌದು, ಗರ್ಭಾವಸ್ಥೆಯಲ್ಲಿ ನೆಲ್ಲಿಕಾಯಿ ಸೇವಿಸಬಹುದು, ಇದು ತನ್ನಲ್ಲಿ ಹಲವು ಸೂಕ್ಷ್ಮ ಪೋಷಕಾಂಶಗಳನ್ನು ಒಳಗೊಂಡಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಇದು ಅತ್ಯುತ್ತಮ ರಕ್ತ ಶುದ್ಧಿಕಾರಕ, ಶಕ್ತಿ ನೀಡುವ ಆಹಾರ ಮತ್ತು ಯಾವುದೇ ಅಡ್ಡಪರಿಣಾಮ ಇಲ್ಲ.

ಗರ್ಭಾವಸ್ಥೆಯಲ್ಲಿ ನೆಲ್ಲಿಕಾಯಿ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳು

ನೆಲ್ಲಿಕಾಯಿಯನ್ನು ನೇರವಾಗಿ ಅಥವಾ ಪುಡಿ ಮಾಡಿ, ಅಥವಾ ಬೇರೆ ವಿಧಾನದಲ್ಲಿ ಕೂಡ ಸೇವಿಸಬಹುದು. ಇದರ ಸೇವನೆಯಿಂದ ತಾಯಿ ಮತ್ತು ಮಗು ಇಬ್ಬರಿಗೂ ಪ್ರಯೋಜನವಿದೆ. ಅದರಲ್ಲಿ ಕೆಲವು ಪ್ರಯೋಜನಗಳನ್ನು ಇಲ್ಲಿ ತಿಳಿದುಕೊಳ್ಳಿ.

೧.ಮಲಬದ್ದತೆಯನ್ನು ನಿವಾರಿಸುತ್ತದೆ

ಜಠರ ಕರುಳಿನ ಅಸ್ವಸ್ಥೆಗಳಾದ, ಮಲಬದ್ಧತೆ ಮತ್ತು ಹೆಮೋರ್ರೊಯ್ಡ್ಸ್ ಗರ್ಭಾವಸ್ಥೆಯಲ್ಲಿ ಸಾಮಾನ್ಯ. ನೆಲ್ಲಿಕಾಯಿ ಅಗತ್ಯವಿರುವ ಫೈಬರ್ ಅನ್ನು ಒದಗಿಸಿ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ ಮತ್ತು ಜಠರ ಕರುಳಿನ ಅಸ್ವಸ್ಥೆಗಳನ್ನು ನಿವಾರಿಸುತ್ತದೆ.

೨.ರಕ್ತದೊತ್ತಡವನ್ನು ಸುಧಾರಿಸುತ್ತದೆ

ನೆಲ್ಲಿಕಾಯಿಯಲ್ಲಿ ವಿಟಮಿನ್ C ಹೇರಳವಾಗಿದೆ, ಇದು ರಕ್ತನಾಳಗಳನ್ನು ಶುದ್ದೀಕರಿಸುತ್ತದೆ ಮತ್ತು ಇದು ರಕ್ತದೊತ್ತಡವನ್ನು ಸುಧಾರಿಸುತ್ತದೆ. ತಾಜಾ ನೆಲ್ಲಿಕಾಯಿ ರಸವನ್ನು ಪ್ರತಿದಿನ ಸೇವಿಸುವುದರಿಂದ ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಾಡುವ ಎದೆಯುರಿ, ಮತ್ತು ಅಸಿಡಿಟಿ ಸಮಸ್ಯೆಗಳನ್ನು ಶಮನ ಮಾಡುತ್ತದೆ.

೩.ಬೆಳಗಿನ ಕಾಯಿಲೆಯನ್ನು ನಿವಾರಿಸುತ್ತದೆ

ಬಹುತೇಕ ಎಲ್ಲಾ ತಾಯಿಯರಿಗೂ ಕಾಡುವ, ಗರ್ಭಾವಸ್ಥೆಯ ಮೊದಲ ಲಕ್ಷಣ ಬೆಳಗಿನ ಕಾಯಿಲೆ. ನೆಲ್ಲಿಕಾಯಿಯಲ್ಲಿ ಶಕ್ತಿ -ಹೆಚ್ಚಿಸುವ ಮತ್ತು ಚೇತನ ನೀಡುವ ಅಂಶವಿದ್ದು, ದುರ್ಬಲತೆಯಿಂದ ಜಯಿಸಲು ಅಥವಾ ಹೊರಬರಲು ಸಹಾಯ ಮಾಡುತ್ತದೆ. ಜೊತೆಗೆ ಇದು ಆಯಾಸ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹಕ್ಕೆ ಶಕ್ತಿ ನೀಡುತ್ತದೆ.

೪.ರಕ್ತವನ್ನು ಶುದ್ದೀಕರಿಸುತ್ತದೆ

ನೆಲ್ಲಿಕಾಯಿ ನಿರ್ವಿಷಗೊಳಿಸುವ ಗುಣವನ್ನು ಹೊಂದಿದ್ದು, ಅದು ರಕ್ತವನ್ನು ಶುದ್ಧ ಮಾಡುತ್ತದೆ. ಹಾನಿಕರವಾದ ಪಾದರಸ ಮತ್ತು ಸೀಸವನ್ನು ನಿರ್ಮೂಲನೆ ಮಾಡಿ ರಕ್ತ ಮತ್ತು ಆಮ್ಲಜನಕ ನಿರಂತರವಾಗಿ ಸರಾಗವಾಗಿ ಬೆಳೆಯುತ್ತಿರುವ ಭ್ರೂಣಕ್ಕೆ ಹರಿಯುವಂತೆ ಮಾಡುತ್ತದೆ.

೫.ರಕ್ತಹೀನತೆಯನ್ನು ತಡೆಯುತ್ತದೆ

ನೆಲ್ಲಿಕಾಯಿ ವಿಟಮಿನ್ C ಮತ್ತು ಕಬ್ಬಿಣಾಂಶದ ಅತ್ಯುತ್ತಮ ಮೂಲ. ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಸಾಮಾನ್ಯವಾಗಿರುವಂತೆ ಇವು ನೋಡಿಕೊಳ್ಳುತ್ತದೆ.

೬.ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ನೆಲ್ಲಿಕಾಯಿ ಗ್ಯಾಸ್ಟ್ರಿಕ್ ರಸಗಳನ್ನು ಪ್ರಚೋದಿಸುತ್ತದೆ ಮತ್ತು ಇದರಿಂದಾಗಿ ಆಹಾರ ಜೀರ್ಣಕ್ರಿಯೆ ಮತ್ತು ಹೀರಿಕೊಳ್ಳುವಿಕೆಗೆ ನೆರವಾಗುತ್ತದೆ. ನಿಯಮಿತ ಮತ್ತು ನಿರಂತರ ನೆಲ್ಲಿಕಾಯಿ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆ ಮತ್ತು ಅಸಿಡಿಟಿ ಸಮಸ್ಯೆಯನ್ನು ನಿವಾರಿಸಬಹುದು.

೭.ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ

ಆಂಟಿಆಕ್ಸಿಡೆಂಟ್ಸ್ ಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಮತ್ತು ವಿಟಮಿನ್ C ಸಾಮಾನ್ಯ ಸೋಂಕುಗಳಾದ ಶೀತ ಮತ್ತು ಮೂತ್ರನಾಳದ ಸೋಂಕು ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ಇವುಗಳು ಗರ್ಭಾವಸ್ಥೆಯಲ್ಲಿ ಸಾಮಾನ್ಯ. ಇದರ ಮತ್ತೊಂದು ಪ್ರಯೋಜನ ಎಂದರೆ ಹೆರಿಗೆ ನಂತರ ಎದೆಹಾಲು ಮೂಲಕ ಮಗುವಿಗೆ ಪ್ರತಿರಕ್ಷಣಾ ವ್ಯವಸ್ಥೆ ಸೇರಿ ಮಗುವಿನಲ್ಲಿ ಇದು ಹೆಚ್ಚಾಗುವುದು.

೮.ಗರ್ಭಧಾರಣೆಯ ಮಧುಮೇಹವನ್ನು ತೊಲಗಿಸುತ್ತದೆ

ಆಂಟಿ-ಡೈಯಾಬಿಟಿಕ್ ಗುಣ ಹೊಂದಿರುವ ನೆಲ್ಲಿಕಾಯಿ ಗರ್ಭಾವಸ್ಥೆಯಲ್ಲಿ ಬರಬಹುದಾದ ಮಧುಮೇಹವನ್ನು ಬರದಂತೆ ತಡೆಯುತ್ತದೆ.

ಗರ್ಭಾವಸ್ಥೆಯಲ್ಲಿ ತಾಜಾ ಒಂದು ನೆಲ್ಲಿಕಾಯಿಯನ್ನು ಪ್ರತಿದಿನ ಸೇವಿಸದರೆ ಒಳ್ಳೆಯದು, ಶೀತ ಇರುವಾಗ ಇದರ ಸೇವನೆಯನ್ನು ಮಾಡಬೇಡಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon