Link copied!
Sign in / Sign up
15
Shares

ಗರ್ಭಾವಸ್ಥೆಯಲ್ಲಿ ಮಗುವು ಯಾವಾಗ ತನ್ನ ಸ್ಥಿತಿಯನ್ನು ಕೆಳಮುಖವಾಗಿ ಮಾಡಿಕೊಳುತ್ತದೆ?

 

ಅನೇಕ ಮಹಿಳೆಯರು, ಅದರಲ್ಲೂ, ಮೊದಲ ಬಾರಿಗೆ ಗರ್ಭಧರಿಸಿರುವವರು, ಮಗುವು ಯಾವಾಗ ತನ್ನ ಸ್ಥಾನವನ್ನು ಜನನ ಸಮಯಕ್ಕೆ ಬದಲಿಸಿಕೊಳ್ಳುತ್ತದೆ ಎಂಬುದರ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿರುತ್ತಾರೆ. ಹೆರಿಗೆ ಸಮಯದಲ್ಲಿ ಮಗುವಿನ ಸ್ಥಾನ ಯೋನಿಯ ಕಡೆಗೆ ಮಗುವಿನ ತಲೆ ಇರುವುದು. ಮಗುವು ಹೊರ ಬರುವಾಗ ಮೊದಲು ಮಗುವಿನ ತಲೆಯು ಆಚೆ ಬರಬೇಕು. ಈ ಲೇಖನ ನಿಮಗೆ ಮಗುವು ಯಾವಾಗ ಜನಿಸಲು ತನ್ನ ಸ್ಥಾನವನ್ನು ಬದಲಿಸಿಕೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ.

ಗರ್ಭಾವಸ್ಥೆಯಲ್ಲಿ ಯಾವಾಗ ಮಗುವು ತನ್ನ ತಲೆಯನ್ನು ಯೋನಿಯ ಕಡೆಗೆ ತಿರುಗಿಸಿಕೊಳ್ಳುತ್ತದೆ?

ನಿಮ್ಮ ಗರ್ಭಾವಸ್ಥೆಯನ್ನು ನೀವು ಮುಂದುವರೆಸುತ್ತಿದ್ದರೂ, ನಿಮ್ಮ ಮಗುವಿನ ಸ್ಥಿತಿಯನ್ನು ಗಮನಿಸಿಕೊಳ್ಳುವುದು ತುಂಬಾ ಪ್ರಮುಖ ಅಂಶವಾಗಿದೆ. ನೀವು ೩೦ವಾರಗಳ ಗರ್ಭಿಣಿಯಾಗಿದ್ದಾಗ, ನಿಮ್ಮ ಶಿಶುವು ಸೆಫಲಿಕ್(ತಲೆ ಕೆಳಗೆ ಮಾಡಿರುವ) ಸ್ಥಾನದಲ್ಲಿರಬೇಕು. ದುರದೃಷ್ಟವಶಾತ್, ಇದು ನಿರೀಕ್ಷಿತ ತಾಯಂದಿರ ಕನಿಷ್ಠ ೨೫%ರಷ್ಟು ಪ್ರಕರಣಗಳಲ್ಲಿ ಇದು ಆಗುವುದಿಲ್ಲ.

ಹಾಗಿದ್ದರೂ, ಮಗುವಿನ ತಲೆಯು ಕೆಳಮುಖ ಮಾಡಲು ೩೪ವಾರಗಳನ್ನು ತಗೆದುಕೊಳ್ಳುವುದು ಸಾಮಾನ್ಯವಾಗಿದೆ. ಕೆಲವು ಮಕ್ಕಳು ತಮ್ಮ ತಲೆಯನ್ನು ಕೆಳಮುಖ ಮಾಡಿಕೊಳ್ಳಲು ಗರ್ಭಾವಸ್ಥೆ ಮಹಿಳೆಯ ೩೪ವಾರಗಳನ್ನು ತೆಗೆದುಕೊಳ್ಳಬಹುದು. ಇದು ಸಾಮಾನ್ಯವಾಗಿದ್ದು, ಇದರ ಬಗ್ಗೆ ಚಿಂತಿಸ ಬೇಕೆಲ್ಲ. ಆದರೆ ಮಗುವು ೩೬ವಾರಗಳು ಆದರೂ ತನ್ನ ತಲೆಯನ್ನು ಕೆಳಮುಖ ಮಾಡಿಲ್ಲ ಎಂದರೆ ಆವಾಗ ನೀವು ಹೆಚ್ಚು ಕಾಳಜಿಯನ್ನು ವಹಿಸಬೇಕು ಮತ್ತು ವೈದ್ಯರನ್ನು ಭೇಟಿಮಾಡಬೇಕು. ಈ ಹಂತದಲ್ಲಿ ಸಹ ಸ್ವಾಭಾವಿಕವಾದ ತಿರುವನ್ನು ಮಗು ಪಡೆಯುವುದಕ್ಕೆ ಸಾಧ್ಯವಿದೆ. ಕೆಲವು ಅಪರೂಪದ ಸಂದರ್ಭಗಳಲ್ಲಿ ಮಗುವು ಹೆರಿಗೆಯ ಸಮಯದಲ್ಲಿ ಸ್ವಾಭಾವಿಕವಾಗಿ ತಿರುವನ್ನು ಮಾಡಿಕೊಳ್ಳುತ್ತದೆ.

ಮಗುವು ಏಕೆ ತನ್ನ ಸ್ಥಿತಿಯನ್ನು ತಲೆಕೆಳಗಾಗಿ ಮಾಡಿಕೊಳ್ಳುತ್ತದೆ?

ನಿಮ್ಮ ಮಗುವಿನ ತಲೆಯ ಸ್ಥಾನವನ್ನು ನಿಮ್ಮ ಮಗುವಿನ ಗಾತ್ರ ಮತ್ತು ನಿಮ್ಮ ಗರ್ಭಾಶಯದ ಗಾತ್ರದಿಂದ ನಿರ್ಧರಿಸಲಾಗುತ್ತದೆ ಎಂದು ಅರ್ಥಮಾಡಿಕೊಳ್ಳುವುದು ಮುಖ್ಯ. ಆರಂಭಿಕ ಗರ್ಭಾವಸ್ಥೆಯಲ್ಲಿ, ನಿಮ್ಮ ಮಗುವಿಗೆ ಗರ್ಭಾಶಯದಲ್ಲಿ ಸಾಕಷ್ಟು ಜಾಗವಿದೆ. ನಿಮ್ಮ ಗರ್ಭಧಾರಣೆಯು ಮುಂದುವರೆದಂತೆ, ಗರ್ಭಾಶಯದಲ್ಲಿ ಜಾಗವು ಕಡಿಮೆಯಾಗುತ್ತದೆ ಮತ್ತು ಹೀಗಾಗಿ ನಿಮ್ಮ ಮಗು ಒಂದು ಅನುಕೂಲಕರವಾದ ಸ್ಥಾನವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತದೆ. ಮಗುವಿನ ಕೆಳಭಾಗವು ಗರ್ಭಾಶಯದ ಮೇಲಿನ ಭಾಗವನ್ನು ಆಕ್ರಮಿಸುತ್ತದೆ ಮತ್ತು ಮಗುವಿನ ತಲೆ ಜನ್ಮ ಕಾಲುವೆಯ ಕಡೆಗೆ ತಿರುವು ಪಡೆದುಕೊಳ್ಳುತ್ತದೆ.

ನಿಮ್ಮ ಗರ್ಭಾಶಯವು ಹಿಂದಿನ ಗರ್ಭಧಾರಣೆಗಳಿಂದ ವಿಸ್ತರಿಸಲ್ಪಟ್ಟಿದ್ದರೆ ಮತ್ತು ನಿಮ್ಮ ಮಗುವು ಚಿಕ್ಕದಾಗಿದ್ದರೆ, ಜನ್ಮ ಸಿದ್ಧ ಸ್ಥಾನವನ್ನು ಅಳವಡಿಸಿಕೊಳ್ಳಲು ಅವರಿಗೆ ಕಷ್ಟವಾಗುತ್ತದೆ. ನಿಮ್ಮ ಗರ್ಭಕೋಶದಲ್ಲಿ ಯಾವುದೇ ವೈಪರೀತ್ಯಗಳು ಇದ್ದಲ್ಲಿ ಅಥವಾ ನಿಮ್ಮ ಗರ್ಭಾಶಯದೊಳಗೆ ಫೈಬ್ರೊಯಿಡ್ಗಳು ಚಾಚಿದಿದ್ದರೆ ನಿಮ್ಮ ಶಿಶು ತಲೆಕೆಳಗೆ ಮಾಡಲು ಸಾಧ್ಯವಾಗುವುದಿಲ್ಲ. ಅವಳಿ ಗರ್ಭಾವಸ್ಥೆಯಲ್ಲಿ, ಶಿಶುಗಳಲ್ಲಿ ಅಥವಾ ಇಬ್ಬರಲ್ಲಿ ಒಬ್ಬರು ತಲೆಯನ್ನು ಕೆಳಗಿಳಿಸಲು ಸಾಧ್ಯವಾಗುವುದಿಲ್ಲ.

ಹೆರಿಗೆ ಸಾಮಾನ್ಯವಾಗಿ ಸುಲಭವಾಗಿ ಆಗಲು ಮಗುವು ತನ್ನ ಸ್ಥಾನವನ್ನು ತಲೆಕೆಳಗಾಗಿ ಮಾಡಿಕೊಂಡಿರಬೇಕು. ನಿಮ್ಮ ಮಗುವು ತಲೆಕೆಳಗೆ ಮಾಡಿಕೊಂಡಿದ್ದರೆ ಒಳ್ಳೆಯದು, ಒಂದು ವೇಳೆ ತಲೆಕೆಳಗೆ ಮಾಡಿಕೊಂಡಿಲ್ಲ ಎಂದರೆ ಕೂಡಲೇ ನಿಮ್ಮ ವೈದ್ಯರನ್ನು ಭೇಟಿ ಮಾಡಿ. ಸಾಮಾನ್ಯವಾಗಿ ೩೨ನೇ ವಾರದ ಸ್ಕ್ಯಾನಿಂಗ್ ನಲ್ಲಿ ಇದನ್ನು ವೈದ್ಯರು ನಿಮಗೆ ತಿಳಿಸಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon