Link copied!
Sign in / Sign up
1
Shares

ಗರ್ಭಾವಸ್ಥೆಯಲ್ಲಿ ಮಗುವಿನ ಒದೆತದ ಬಗ್ಗೆ ನಿಮಗೆ ತಿಳಿಯದ 7 ಕುತೂಹಲಕಾರಿ ಸಂಗತಿಗಳು

ನೀವು ಗರ್ಭಧರಿಸಿರುವಿರಾ? ಅಭಿನಂದನೆಗಳು, ನೀವು ಮಗುವಿನ ಆಟಗಳನ್ನು ಒದೆತವನ್ನು ನಿರೀಕ್ಷಿಸುತ್ತಿದ್ದೀರಾ? ಹಾಗಾದರೆ ಇದನ್ನು ನೀವು ತಿಳಿದಿರುವುದು ಒಳ್ಳೆಯದು. ನಿಮಗೆ ವೈದ್ಯರು ಮಗುವಿನ ಒದೆತವನ್ನು ಅನುಭವಿಸಲು ಹೇಳಿರಬಹುದು, ನೀವು ಮಗುವಿನ ಆಟವನ್ನು ಒದೆತವನ್ನು ಅನುಭವಿಸುತ್ತಿರಬಹುದು, ಆದರೆ ಅದರ ಬಗೆಗಿನ ಈ ಕುತೂಹಲಕಾರಿ ಅಂಶಗಳ ಬಗ್ಗೆ ನಿಮಗೆ ಯಾರು ಹೇಳಿರುವುದಿಲ್ಲ.

ಗರ್ಭಾವಸ್ಥೆಯಲ್ಲಿ ಮಗುವಿನ ಒದೆತದ ಬಗ್ಗೆ 7 ಕುತೂಹಲಕಾರಿ ಸಂಗತಿಗಳು

೧.ಒದೆತಗಳು ಉತ್ತಮ ಅಭಿವೃದ್ಧಿ ಮತ್ತು ಮಗುವಿನ ಆರೋಗ್ಯವನ್ನು ಸೂಚಿಸುತ್ತದೆ

ಒದೆತ ಉತ್ತಮ ಅಭಿವೃದ್ಧಿ ಮತ್ತು ಇನ್ನು ಹುಟ್ಟಿರದ ಮಗುವಿನ ಆರೋಗ್ಯದ ಸಂಕೇತವಾಗಿದೆ. ಒದೆತ ನಿಮ್ಮ ಮಗುವು ಉದರದೊಳಗೆ ಸಕ್ರಿಯವಾಗಿದೆ ಎಂಬುದನ್ನು ಸೂಚಿಸುತ್ತದೆ. ನೀವು, ಮಗುವು ಬಿಕ್ಕಳಿಸುವಾಗ, ಸ್ಥಾನ ಬದಲಿಸುವಾಗ, ಆಟವಾಡುವಾಗ ಆಗುವ ಮಗುವಿನ ಹಲವು ಒದೆತಗಳನ್ನು ಅನುಭವಿಸಬಹುದು.

೨.ವಾತಾವರಣದ ಬದಲಾವಣೆಗೆ ಶಿಶುಗಳು ಪ್ರತಿಕ್ರಿಯೆ ನೀಡುತ್ತದೆ

ವಾತಾವರಣದಲ್ಲಿನ ಬದಲಾವಣೆಯನ್ನು ಎದುರಿಸಲು ಶಿಶುಗಳು ಕೆಲವೊಮ್ಮೆ ಒದೆಯುತ್ತವೆ. ಕೆಲವು ಹೊರಗಿನ ಪ್ರಚೋದನೆಗೆ ಪ್ರತಿಕ್ರಿಯೆ ನೀಡಲು, ಸ್ಥಾನ ಬದಲಿಸುತ್ತವೆ ಅಥವಾ ತಮ್ಮ ಅಂಗಗಳನ್ನು ಹಿಗ್ಗಿಸುತ್ತವೆ(ಮೈ ಮುರಿಯುತ್ತವೆ), ಹೊರಗಿನ ವಾತಾವರಣ ಎಂದರೆ ತಾಯಿಯು ಸ್ವೀಕರಿಸುವ ಶಬ್ದ ಮತ್ತು ಅಥವಾ ಆಹಾರ ಆಗಿರಬಹುದು. ಒದೆತವು ಸೂಕ್ತ ಮತ್ತು ಸಾಮಾನ್ಯ ಬೆಳವಣಿಗೆ ಆಗಿದ್ದು, ಇದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

೩.ಎಡ ಮಗ್ಗುಲಾಗಿ ಮಲಗುವುದು, ಶಿಶುವು ಒದೆತವನ್ನು ಹೆಚ್ಚು ಮಾಡುತ್ತದೆ

ಮಗುವನ್ನು ಉದರದೊಳಗೆ ಇರಿಸಿಕೊಂಡಿರುವ ತಾಯಿ, ಎಡ ಮಗ್ಗಲಗಿ ಮಲಗಿದಾಗ ತನ್ನ ಮಗುವಿನ ಒದೆತವನ್ನು ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಅನುಭವಿಸಬಹುದು. ಎಡ ಮಗ್ಗುಲಾಗಿ ಮಲಗುವುದು ರಕ್ತ ಸಂಚಲನ ದೇಹದ ಪೂರ ಸರಾಗವಾಗಿ ಹರಿಯಲು ಸಹಾಯ ಮಾಡುತ್ತದೆ, ಇದರಿಂದ ಮಗುವಿನ ಚಲನೆಯಲ್ಲಿ ಬೆಳವಣಿಗೆಯನ್ನು ಕಾಣಬಹುದು ಮತ್ತು ನೀವು ಹೆಚ್ಚು ಒದೆತವನ್ನು ಅನುಭವಿಸಬಹುದು.

೪.ನೀವು ಆಹಾರ ಸೇವಿಸಿದ ನಂತರ ಮಗುವಿನ ಒದೆತವನ್ನು ನೀವು ಅನುಭವಿಸಬಹುದು

ನಿಮ್ಮ ಊಟದ ನಂತರ ನೀವು ನಿಮ್ಮ ಮಗುವಿನ ಒದೆತವನ್ನು ಆಗಾಗ್ಗೆ ಅನುಭವಿಸಬಹುದು. ವಿಶೇಷವಾಗಿ, ಆರೋಗ್ಯಕರ ಮಗುವು ಪ್ರತಿ ದಿನಕ್ಕೆ ಸುಮಾರು ೧೫ ರಿಂದ ೨೦ ಬಾರಿ ಒದೆಯುವುದು ಸಾಮಾನ್ಯವಾಗಿದೆ.

೫.ಶಿಶುಗಳು ಗರ್ಭಾವಸ್ಥೆಯ ೯ ವಾರಗಳ ನಂತರ ಒದೆಯಲು ಪ್ರಾರಂಭಿಸುತ್ತವೆ

ನೀವು ಗರ್ಭಿಣಿ ಆಗಿರುವೆ ಎಂದು ತಿಳಿದ ತಕ್ಷಣ ನಿಮ್ಮ ತಲೆಯಲ್ಲಿ ಬರುವುದು ಹಲವಾರು ಹೇಳುವರು ಮಗುವು ಉದರದೊಳಗೆ ಆಡುವುದು ತಿಳಿಯುತ್ತಿದೆಯೇ? ಎಂದು ಕೇಳುವುದು ಮತ್ತು ಅದನ್ನು ಅನುಭವಿಸಲು ನೀವು ತುಂಬಾ ಉತ್ಸುಕರಾಗಿರುವಿರಿ. ನಿಮ್ಮ ಮಗುವು ಉದರದೊಳಗೆ ೯ ವಾರ ಕಳೆಯುತ್ತಿದ್ದಂತೆ ಒದೆಯಲು ಪ್ರಾರಂಭಿಸುತ್ತದೆ. ಆದರೆ ಪ್ರಾರಂಭಿಕ ಒದೆತವು ನಿಮ್ಮ ಅನುಭವಕ್ಕೆ ಬರುವುದಿಲ್ಲ, ಅದನ್ನು ಅಲ್ಟ್ರಾಸೌಂಡ್ ಸ್ಕ್ಯಾನ್ ಮೂಲಕ ನೋಡಬಹುದು ಅಥವಾ ತಿಳಿಯಬಹುದು ಅಷ್ಟೇ. ಹಲವು ಮಹಿಳೆಯರಿಗೆ ಉದರದೊಳಗೆ ಅಲುಗಾಡಿದಂತೆ ಅಥವಾ ಅಳ್ಳಾಡಿಸಿದನಂತೆ ಅನುಭವವಾಗುತ್ತದೆ. ೨೪ವಾರಗಳ ನಂತರ ನೀವು ಇದನ್ನು ಸ್ಪಷ್ಟವಾಗಿ ಅನುಭವಿಸಲು ಪ್ರಾರಂಭಿಸುವಿರಿ.

೬.ಶಿಶುವಿನ ಕಡಿಮೆ ಒದೆತ ತೊಂದರೆ ಎಂದು ಭಾವಿಸಬಹುದು

೨೮ ವಾರಗಳ ನಂತರ ವೈದ್ಯರು ನಿಮಗೆ ಮಗುವಿನ ಒದೆತಗಳನ್ನು ಗಮನದಲ್ಲಿರಿಸಿಕೊಳ್ಳಲು ಸೂಚಿಸುವರು. ನೀವು ಅದನ್ನು ಗಮನಿಸಿದಾಗ ಸಾಮಾನ್ಯ ಒದೆತಕ್ಕಿಂತ ಕಡಿಮೆ ಒದೆತವನ್ನು ಅನುಭವಿಸಿದರೆ ಅದು ಮಗುವಿಗೆ ಸರಿಯಾಗಿ ಆಮ್ಲಜನಕ ಪೂರೈಕೆ ಆಗುತ್ತಿಲ್ಲ ಎಂದರ್ಥ. ಭ್ರೂಣದ ಚಲನೆ ಅಥವಾ ಒದೆತ ಕಡಿಮೆ ಆಗಲು ಮತ್ತೊಂದು ಕಾರಣ ಸಕ್ಕರೆ ಪ್ರಮಾಣ ಕಡಿಮೆ ಆಗುವುದು. ತಾಯಿ ಊಟ ಮಾಡಿ ಒಂದು ಗಂಟೆ ಆದರೂ ಶಿಶುವಿನ ಚಲನೆ ಅಥವಾ ಒದೆತವನ್ನು ಅನುಭವಿಸಿಲ್ಲ ಎಂದರೆ ನೀವು ಎಚ್ಚರಿಕೆವಹಿಸುವುದು ಒಳ್ಳೆಯದು. ಈ ಸಮಯದಲ್ಲಿ ನೀವು ತಣ್ಣೀರು ಕುಡಿಯುವುದು ಮತ್ತು ಸ್ವಲ್ಪ ದೂರ ನಡೆದಾಡುವುದು ಉತ್ತಮ.

ಎರಡು ಗಂಟೆ ಆದರೂ ಮಗುವು ಒದೆತವನ್ನು ಅನುಭವಿಸಿಲ್ಲ ಎಂದರೆ ಅಥವಾ ೨ ಒದೆತಕ್ಕಿಂತ ಹೆಚ್ಚು ಅನುಭವಿಸಿಲ್ಲ ಎಂದರೆ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.

೭.೩೬ ವಾರಗಳ ನಂತರ ಕಡಿಮೆ ಒದೆತ ತೊಂದರೆ ಎಂದು ಅರ್ಥವಲ್ಲ

ಈ ಸಮಯದಲ್ಲಿ ಮಗುವು ತಾಯಿಯ ಉದರದೊಳಗೆ ೪೦ ರಿಂದ ೫೦ ನಿಮಿಷ ವಿಶ್ರಾಂತಿಯನ್ನು ಪಡೆಯುತ್ತದೆ. ೩೬ನೇ ವಾರದ ಗರ್ಭಾವಸ್ಥೆಯ ನಂತರ, ಮಗುವು ದೊಡ್ಡದಾಗಿ ಬೆಳೆದಿದ್ದು, ಅಷ್ಟು ಸುಲಭವಾಗಿ ತಿರುಗಿಕೊಳ್ಳಲು ಆಗುವುದಿಲ್ಲ. ನೀವು ಈ ಸಮಯದಲ್ಲಿ ನಿರ್ದಿಷ್ಟ ಒದೆತವನ್ನು ಅನುಭವಿಸಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon