Link copied!
Sign in / Sign up
35
Shares

ಗರ್ಭಿಣಿಯರು ಈ 5 ಹಣ್ಣುಗಳನ್ನು ಸೇವಿಸಬಾರದು, ಏಕೆ?

ಗರ್ಭಾವಸ್ಥೆಯ ಸಮಯದಲ್ಲಿ ನೀವು ಪ್ರತಿಯೊಂದು ವಿಷಯದಲ್ಲೂ ಹೆಚ್ಚಿನ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ನೀವು ತೆಗೆದುಕೊಳ್ಳುವ ನಿರ್ಣಯಗಳು ಅಥವಾ ನಿಮ್ಮ ಎಲ್ಲಾ ತರಹದ ಚಟುವಟಿಕೆಗಳು ನಿಮ್ಮೊಂದಿಗೆ ನಿಮ್ಮ ಮಗುವಿನ ಮೇಲೂ ಪ್ರಭಾವ ಬೀರುತ್ತದೆ. ಇನ್ನು ಮುಂದೆ ನೀವು ನಿಮ್ಮ ಜೊತೆ ನಿಮ್ಮ ಮಗುವನ್ನು ಕಾಳಜಿ ಮಾಡಬೇಕು. ಅದರಲ್ಲೂ ಆಹಾರದ ವಿಷಯಕ್ಕೆ ಬಂದರೆ, ಆರೋಗ್ಯಕರ ಮತ್ತು ಸರಿಯಾದ ಆಹಾರಗಳನ್ನು ಆಯ್ಕೆಮಾಡಿಕೊಳ್ಳುವುದು ಅನಿವಾರ್ಯ, ಏಕೆಂದರೆ ಆಹಾರದಲ್ಲಿ ನಿಮ್ಮ ಮಗುವಿಗೂ ಪಾಲಿದೆ. ಎಲ್ಲಾ ಪರಿಸ್ಥಿತಿಗಳಲ್ಲೂ ಹಣ್ಣನ್ನು ಸೇವಿಸುವುದು ಒಳ್ಳೆಯದು, ಆದರೆ ಇದಕ್ಕೆ ವಿರುದ್ದವಾಗಿ ಕೆಲವು ಹಣ್ಣುಗಳನ್ನು ಗರ್ಭಾವಸ್ಥೆಯಲ್ಲಿ ಸೇವಿಸಬಾರದು, ಆ ಹಣ್ಣುಗಳು ಮತ್ತು ಸೇವಿಸದಿರಲು ಕಾರಣಗಳನ್ನು ಇಲ್ಲಿ ನೀಡಲಾಗಿದೆ.

೧. ಪಪ್ಪಾಯ(ಪರಂಗಿ) ಹಣ್ಣು

ಪಪ್ಪಾಯ, ಅದರಲ್ಲೂ ಕಾಯಿ ಪರಂಗಿ ಅಥವಾ ದೊರಗಾಯಿ ಪರಂಗಿಗಳಲ್ಲಿ ಲ್ಯಾಟೆಕ್ಸ್ ಅಂಶವು ಹೆಚ್ಚಾಗಿರುವುದರಿಂದ, ಅದು ಗರ್ಭಕೋಶವು ಕುಗ್ಗುವಂತೆ(ಸಂಕೊಚನಗೊಳ್ಳುವಂತೆ) ಪ್ರಚೋದಿಸುತ್ತದೆ. ಪಪ್ಪಾಯಗಳನ್ನು ಒಳಗೊಂಡ ಹಣ್ಣಿನ ಸಲಾಡ್ ಅಥವಾ ಪಪ್ಪಾಯ ಮಿಶ್ರಿತ ಆಹಾರ ಪದಾರ್ಥಗಳನ್ನು ಮತ್ತು ಪಪ್ಪಾಯ ಕಿಣ್ವಗಳಿರುವ ಪದಾರ್ಥಗಳನ್ನು ಗರ್ಭಿಣಿಯರು ಸೇವಿಸಬಾರದು. ಇದರಿಂದ ಗರ್ಭಕೋಶಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ಪಟ್ಟಿಯಲ್ಲಿ ಪರಂಗಿ ಹಣ್ಣನ್ನು ಸೇರಿಸಲಾಗಿದೆ. ಆದರೆ ಚೆನ್ನಾಗಿ ಹಣ್ಣಾಗಿರುವ ಪರಂಗಿಯು ಗರ್ಭಿಣಿಯರಿಗೆ ಒಳ್ಳೆಯದು. ಇದರಲ್ಲಿ ಹೆಚ್ಚು ಉತ್ಕರ್ಷಣ ನಿರೋಧಕ ಅಂಶವಿದೆ.

೨. ದ್ರಾಕ್ಷಿ

ಗರ್ಭಾವಸ್ಥೆಯಲ್ಲಿ ದ್ರಾಕ್ಷಿ ಸೇವಿಸುವುದರ ಬಗ್ಗೆ ಹಲವು ವಾಗ್ವಾದಗಳು ನಡೆಯುತ್ತಿವೆ. ಅದರಂತೆ, ಕೆಲವು ತಜ್ಞರು ಗರ್ಭಾವಸ್ಥೆಯಲ್ಲಿ ದ್ರಾಕ್ಷಿ ಸೇವಿಸಲು ಸಲಹೆ ನೀಡಿದರೆ, ಕೆಲವರು ದ್ರಾಕ್ಷಿಯನ್ನು ಸೇವಿಸದಂತೆ ಸೂಚಿಸುತ್ತಾರೆ. ದ್ರಾಕ್ಷಿಯನ್ನು ಸೇವಿಸದೆ ಇರುವುದು ಒಳ್ಳೆಯದು, ಏಕೆಂದರೆ ದ್ರಾಕ್ಷಿ ಗಿಡಕ್ಕೆ ಹೆಚ್ಚು ಕೀಟನಾಶಕಗಳನ್ನು ಸಿಂಪಡಿಸಿರುತ್ತಾರೆ. ಹಾಗೂ ದ್ರಾಕ್ಷಿಯ ಮೇಲ್ಮೈ ಪದರ ಸುಲಭದಲ್ಲಿ ಜೀರ್ಣವಾಗುವುದಿಲ್ಲ ಮತ್ತು ಇದು ಮಲಬದ್ಧತೆಗೆ ಕಾರಣವಾಗಬಹುದು. ದ್ರಾಕ್ಷಿಯಲ್ಲಿ ಕಾರ್ಬೋಹೈಡ್ರೇಟ್ಸ್ ಹೆಚ್ಚಿರುವುದರಿಂದ ಅದು ಗ್ಲುಕೋಸ್ ಆಗಿ ಬದಲಾಗಿ ನಿಮ್ಮ ರಕ್ತದ ಶುಗರ್ ಅನ್ನು ಹೆಚ್ಚಿಸಬಹುದು. ಇದರಿಂದ ನಿಮಗೆ ಅಥವಾ ನಿಮ್ಮ ಮಗುವಿಗೆ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಇದೆ. ಒಂದೆರಡು ದ್ರಾಕ್ಷಿ ತಿನ್ನುವುದರಿಂದ ನಿಮ್ಮ ದೇಹಕ್ಕೆ ಬೇಕಾಗಿರುವ ಪೌಷ್ಟಿಕಾಂಶಗಳು ಸಿಗುತ್ತವೆ.

೩. ಬಾಳೆಹಣ್ಣು

ಬಾಳೆಹಣ್ಣು ತಿನ್ನಲು ಸುಲಭವಾದ ಹಣ್ಣು ಮತ್ತು ಅದಕ್ಕಾಗಿಯೇ ಅದು ಎಲ್ಲರಿಗೂ ಇಷ್ಟವಾಗಿರುವುದು. ಇದರಲ್ಲಿ ನಿಮ್ಮ ದೇಹಕ್ಕೆ ಬೇಕಾಗಿರುವ ಪೊಟ್ಯಾಷಿಯಮ್ ಇದೆ. ದ್ರಾಕ್ಷಿ ಅಂತೆ ಇದರಲ್ಲೂ ಕಾರ್ಬೋಹೈಡ್ರೇಟ್ ಗಳು ಹೆಚ್ಚಿರುವುದರಿಂದ ಇದು ಕೂಡ ನಿಮ್ಮ ರಕ್ತದ ಶುಗರ್ ಅನ್ನು ಹೆಚ್ಚಿಸಬಹುದು. ನೀವು ಗರ್ಭಿಣಿ ಮಧುಮೇಹ ಹೊಂದಿದ್ದರೆ, ನಿಮ್ಮ ಮಗುವಿನ ಜನನದ ತನಕ ಅದರ ಸೇವನೆಯನ್ನು ನಿಲ್ಲಿಸುವುದು ಉತ್ತಮ.

೪. ಪೈನಾಪಲ್(ಅನಾನಸ್)

ಅನಾನಸ್ ಗಳು  ವಿಟಮಿನ್ಸ್, ಖನಿಜಗಳು ಮತ್ತು ಪ್ರೋಟಿನ್ಸ್ ಗಳ ಒಂದು ಅದ್ಭುತ ಮೂಲವಾಗಿದ್ದರು, ಗರ್ಭಧಾರಣೆಯ ಆರಂಭಿಕ ದಿನಗಳಲ್ಲಿ ಇದರಿಂದ ದೂರವಿರುವುದು ಒಳ್ಳೆಯದು. ಅನಾನಸ್ ನಲ್ಲಿರುವ ಬ್ರೋಮೆಲಿನ್ ಎಂಬ ಕಿಣ್ವವು, ಗರ್ಭಕಂಠವನ್ನು ದುರ್ಬಲವಾಗಿಸಬಹುದು, ಇದರಿಂದ ಅಕಾಲಿಕ ಪ್ರಸವ ಅಥವಾ ಗರ್ಭಪಾತವಾಗಬಹುದು. ಅನಾನಸ್ ಸಮೃದ್ಧ ಸಕ್ಕರೆ ಸಾಂದ್ರತೆಯನ್ನು ಹೊಂದಿದೆ, ಇದರಿಂದ ಗರ್ಭಧಾರಣೆಯಲ್ಲಿ ಮಧುಮೇಹ ಸಂಭವಿಸುವ ಸಾಧ್ಯತೆ ಹೆಚ್ಚು. ಇದು ಗರ್ಭಕೋಶ ಸಂಕುಚಿತವನ್ನು ಪ್ರಚೋದಿಸಬಹುದು, ಇದು ಬೆಳೆಯುತ್ತಿರುವ ಭ್ರೂಣಕ್ಕೆ ತುಂಬಾ ಅಪಾಯಕಾರಿಯಾಗಿದೆ.

೫. ಖರ್ಜೂರ

ನೈಸರ್ಗಿಕವಾಗಿ ಅಪಾರ ಅಸಾಧಾರಣ ಸಕ್ಕರೆಯನ್ನು ಖರ್ಜೂರ ಹೊಂದಿದೆ. ಇದು ಹೆಚ್ಚು ಸಕ್ಕರೆ(ಸಿಹಿ)ಯಾಗಿರುವುದರಿಂದ, ರಕ್ತದಲ್ಲಿ ಶುಗರ್ ಅಂಶವನ್ನು ಹೆಚ್ಚು ಮಾಡಬಹುದು, ಇದರಿಂದ ತಾಯಿ ಮತ್ತು ಮಗು ಇಬ್ಬರೂ ಮಧುಮೇಹ ರೋಗಕ್ಕೆ ತುತ್ತಾಗಬಹುದು. ಮಗು ಜನಿಸುವವರೆಗೆ ಇದನ್ನು ಸೇವಿಸದೆ ಇರುವುದು ಒಳ್ಳೆಯದು.

ನೀವು ಆದಷ್ಟು ಹಸಿ ಮತ್ತು ತೊಳೆಯದೇ ಇರುವ ಹಣ್ಣು ಮತ್ತು ತರಕಾರಿಗಳ ಸೇವನೆ ಮಾಡುವುದರಿಂದ ದೂರವಿರುವುದು ಒಳ್ಳೆಯದು. ಪೂರ್ವ ಸಿದ್ದ ಆಹಾರ ಪದಾರ್ಥಗಳು ಮತ್ತು ಒಣ ಹಣ್ಣುಗಳಲ್ಲಿ, ಸಕ್ಕರೆಯ ಅಂಶವು ಇರಬಹುದು ಆದ್ದರಿಂದ ಅದರ ಸೇವನೆಯನ್ನು ಕಡಿಮೆ ಮಾಡುವುದು ಒಳ್ಳೆಯದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon