Link copied!
Sign in / Sign up
0
Shares

ಗರ್ಭಾವಸ್ಥೆಯಲ್ಲಿ ಬೆನ್ನು ನೋವಿನ ಸಮಸ್ಯೆಗೆ ಸರಳ ಪರಿಹಾರಗಳು!

ವಿವಿಧ ಕಾರಣಗಳಿಂದ ಗರ್ಭಿಣಿಯರು ಸೊಂಟ ನೋವನ್ನು ಅನುಭವಿಸುವುದು ಸರ್ವೇಸಾಮಾನ್ಯ ಹಾರ್ಮೋನ್ ಬದಲಾವಣೆಗಳು ಅಥವಾ ಶರೀರದಲ್ಲಾಗುವ ಮಾರ್ಪಾಡುಗಳು ಕೆಲವೊಮ್ಮೆ ಸೊಂಟ ನೋವಿಗೆ ಕಾರಣವಾಗಬಹುದು. ಒತ್ತಡವೂ ಸೊಂಟ ನೋವು ಬರಲು ಇನ್ನೊಂದು ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ.

ಈ ವಿಷಯಗಳ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ

-ಪ್ರಸವಕಾಲದಲ್ಲಿ ‘ರಿಲಾಕ್ಸಿನ್’ ಎನ್ನುವ ಹಾರ್ಮೋನುಗಳು ಸ್ರವಿಸಲ್ಪಡುವುದರಿಂದ ಸೊಂಟದ ಸುತ್ತಲಿನ ಲಿಗಾಮೆಂಟುಗಳನ್ನು ಸಡಿಲಗೊಳಿಸುತ್ತದೆ. ಇದು ಶರೀರದ ರಚನೆಯನ್ನು ಮಾರ್ಪಾಡುಗೊಳಿಸುವುದರಿಂದ ಸೊಂಟ ನೋವು ಕಂಡುಬರುತ್ತದೆ.

-ರೆಕ್ಟಸ್ ಅಬ್ಡೋಮಿನಸ್ ಮಸಲ್ಸ್ ಅಥವಾ ಅಬ್ಸ್ ಎಂದು ಕರೆಯಲ್ಪಡುವ ಅವಯವಗಳ ಸ್ಥಾನಪಲ್ಲಟದಿಂದಲೂ ಸೊಂಟ ನೋವು ಕಾಡುತ್ತದೆ. ಗರ್ಭಪಾತ್ರವು ವಿಕಸಿಸಲ್ಪಡುವುದರಿಂದ, ಅದು ನಿಮ್ಮ

-ಸೊಂಟಕ್ಕೆ ಒತ್ತಡವನ್ನು ಹೇರುವುದು ಸೊಂಟ ನೋವಿಗೆ ಕಾರಣೀಭೂತವಾಗುತ್ತದೆ.

-ನಿದ್ರಾಹೀನತೆಯು ಪ್ರಸವ ಕಾಲದ ಸೊಂಟ ನೋವಿಗೆ ಕಾರಣವಾಗುತ್ತದೆ. ಅಸ್ತವ್ಯಸ್ತ ಭಂಗಿಗಳಲ್ಲಿ ಮಲಗುವುದು ಕೂಡಾ ಸಹಿಸಲಸಾಧ್ಯವಾದ ಸೊಂಟನೋವು ನೀಡುತ್ತದೆ.

-ಸೊಂಟ ನೋವು ಎಷ್ಟೊಂದು ಭಯಾನಕವೆಂದೂ, ಅದರಿಂದ ಉಂಟಾಗುವ ಕಿರಿಕಿರಿಯೂ ತಿಳಿದಕಾರಣ, ಸೊಂಟವನ್ನು ತಡೆ ಹಿಡಿಯಬಹುದಾದ ಕೆಲವು ಸಲಹೆಗಳನ್ನು ನೀಡಿದ್ದೇವೆ.

1.ಎತ್ತರ ಕಾಲಿನ ಚಪ್ಪಲನ್ನು(ಹೀಲ್ಸ್) ಧರಿಸಬೇಡಿ

ಗರ್ಭ ಕಾಲದಲ್ಲಿ ನಿಮ್ಮ ಶರೀರದ ನಿಲುವು ಪ್ರಮುಖ ಪಾತ್ರ ವಹಿಸುತ್ತದೆ. ಆದ ಕಾರಣ ಶರೀರದ ನಿಲುವಿಗೆ ತೊಂದರೆಯಾಗದಂತೆ ಹೀಲ್ಸ್ ಧರಿಸದಿರಿ. ಸಾಧ್ಯವಾದಷ್ಟು ಫ್ಲ್ಯಾಟ್(ಚಪ್ಪಟೆ) ಅಥವಾ ಸ್ನೀಕರ್ಸ್ ಅನ್ನು ಬಳಸಿರಿ.

2. ಪ್ರಸವದ ಮುನ್ನಿನ ಯೋಗ

ಪ್ರಾಚೀನ ಕಾಲದ ಈ ಕ್ರೀಡೆಯು ಹಲವಾರು ರೀತಿಯಲ್ಲಿ ಪ್ರಯೋಜನಕಾರಿ. ಅ ಯೋಗವು ಸೊಂಟ ನೋವು ಹಾಗೂ ಹಲವಾರು ಅನಾಟಮಿ ತೊಂದರೆಗಳಿಗೆ ಪರಿಹಾರಿ.ಶರೀರದ ಉತ್ತಮ ನಿಲುವಿಗೆ ಸಹಕರಿಸುವ ಯೋಗವು, ಹಾರ್ಮೋನು ತೊಂದರೆಗಳನ್ನು ಕೂಡ ಹತೋಟಿಯಲ್ಲಿಡುತ್ತದೆ.

3.ಸ್ಕ್ವಾಟ್ಸ್ (ಕುಕ್ಕರುಗಾಲಿನ ವ್ಯಾಯಾಮ)

ಸೊಂಟ ಬಗ್ಗಿಸಿ ಮಾಡುವಂತಹ ಯಾವುದೇ ಕೆಲಸ ಕಾರ್ಯಗಳನ್ನು ಮಾಡಬೇಡಿ. ಭಾರದ ವಸ್ತುಗಳನ್ನು ಎತ್ತದಂತೆ ಸಲಹೆ ನೀಡುವುದರೊಂದಿಗೇ, ಭಾರ ಎತ್ತಲೇ ಬೇಕಾದ ಸಂದರ್ಭಗಳಲ್ಲಿ ಬಗ್ಗದೆ ಕುಕ್ಕರುಗಾಲಲ್ಲಿ ಕುಳಿತುಕೊಂಡು ಭಾರವನ್ನು ಎತ್ತಿ ಕೊಳ್ಳಿರೆಂದು ಸಲಹೆ ಮಾಡುತ್ತಿದ್ದೇವೆ. ಬೆನ್ನೆಲುಬಿಗೆ ಒತ್ತಡ ನೀಡದಂತೆ ಸ್ಕ್ವಾಟ್‍ಗಳು ಸಹಾಯಿಸುತ್ತವೆ. ಹಾಗಾಗಿ ಸೊಂಟ ನೋವಿನಿಂದ ರಕ್ಷಿಸುತ್ತದೆ.

4.ನಿದ್ರಿಸುವ ಭಂಗಿಯನ್ನು ಬದಲಾಯಿಸಿ

ಇಡೀ ರಾತ್ರಿ ಅಂಗಾತ ಮಲಗುವುದು ಕೂಡ ಸೊಂಟ ನೋವಿಗೆ ಕಾರಣವಾಗುತ್ತದೆ. ಎಡ ಅಥವಾ ಬಲ ಮಗ್ಗುಲಿಗೆ ಮಲಗುವುದರಿಂದ, ಸೊಂಟಕ್ಕೆ ನೀಡುವ ಒತ್ತಡವು ಕಡಿಮೆಯಾಗಿ ಸೊಂಟ ನೋವು ಕೂಡ ತಹಂಬದಿಗೆ ಬರುವುದು. ಮಲಗುವುದರಿಂದ ಸೊಂಟಕ್ಕೆ ಆರಾಮ ದೊರೆಯುವುದರಿಂದ, ಇಂದಿನಿಂದಲೇ ನೀವು ಮಲಗುವ ರೀತಿಯನ್ನು ಬದಲಾಯಿಸಿ; ವ್ಯತ್ಯಾಸವನ್ನು ತಿಳಿಯಿರಿ.

5.ಮಂಜುಗಡ್ಡೆ ಮಸಾಜು

ಬಟ್ಟೆಯೊಂದರಲ್ಲಿ ಮಂಜುಗಡ್ಡೆಯನ್ನು ಕಟ್ಟಿಕೊಂಡು, ಸೊಂಟನೋವಿರುವ ಭಾಗಗಳಲ್ಲಿ ಮಸಾಜ್ ಮಾಡುವುದರಿಂದ ನೋವಿಗೆ ಆಹಾರ ದೊರೆಯುವುದು.

ಕೆಲವೇ ನಿಮಿಷಗಳ‍ಲ್ಲಿ ಸೊಂಟ ನೋವು ಮಾಯವಾಗುವುದರಿಂದ, ನೀವು ನಿಮಗೆ ಮಸಾಜ್ ಮಾಡಿದ ಸಂಗಾತಿಗೆ ಧನ್ಯವಾದ ಹೇಳುವಿರಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon