Link copied!
Sign in / Sign up
19
Shares

ಗರ್ಭಾವಸ್ಥೆಯಲ್ಲಿ ಬೆನ್ನು ನೋವು : ಕಾರಣ ಮತ್ತು ಪರಿಹಾರ

ಬೆನ್ನು ನೋವು ಅಥವಾ ಅಸ್ವಸ್ಥತೆ ಗರ್ಭಾವಸ್ಥೆಯಲ್ಲಿ ಸಾಮಾನ್ಯ, ಹೆಚ್ಚಿನ ಮಹಿಳೆಯರಲ್ಲಿ ಇದನ್ನು ನಿರೀಕ್ಷಿಸಬಹುದು. ಬೆನ್ನು ನೋವು ನಿಮ್ಮ ಗರ್ಭಾವಸ್ಥೆಯ ಯಾವ ಸಮಯದಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ಆದಾಗ್ಯೂ, ಇದು ಮಗು ಹೊಟ್ಟೆಯಲ್ಲಿ ಬೆಳೆದಾಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಬೆನ್ನು ನೋವು ನಿಮ್ಮ ದಿನನಿತ್ಯದ ವಾಡಿಕೆಯ ಅಥವಾ ನಿಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡಲು ಅಡ್ಡಪಡಿಸಬಹುದು ಅಥವಾ ನಿಮ್ಮ ಒಳ್ಳೆಯ ರಾತ್ರಿ ನಿದ್ದೆಯನ್ನು ಭಂಗ ಪಡಿಸಬಹುದು.

ಗರ್ಭಾವಸ್ಥೆಯಲ್ಲಿ ಬೆನ್ನು ನೋವು ಎಷ್ಟು ಸಾಮಾನ್ಯವಾಗಿದೆ?

ವರದಿಯ ಪ್ರಕಾರ ಶೇಕಡಾ ೫೦ರಿಂದ ೭೦ ರಷ್ಟು ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಬೆನ್ನು ನೋವಿನ ಅನುಭವವನ್ನು ಪಡೆಯುತ್ತಾರೆ ಅಥವಾ ಬೆನ್ನು ನೋವನ್ನು ಅನುಭವಿಸುತ್ತಾರೆ.

ಗರ್ಭಾವಸ್ಥೆಯಲ್ಲಿ ಬೆನ್ನು ನೋವು ಅಥವಾ ಅಸ್ವಸ್ಥತೆಗೆ ಸಂಭವನೀಯ ಕಾರಣಗಳ ಪಟ್ಟಿ ಇಲ್ಲಿದೆ.

ಹಾರ್ಮೋನುಗಳು: ಗರ್ಭಾವಸ್ಥೆಯಲ್ಲಿ ಬಿಡುಗಡೆಯಾಗುವ ಹಾರ್ಮೋನುಗಳು ಶ್ರೋಣಿ(ಪೆಲ್ವಿಕ್) ಕುಹರದ ಪ್ರದೇಶದಲ್ಲಿ ಅಸ್ಥಿರಜ್ಜುಗಳನ್ನು ಮೃದುಗೊಳಿಸಲು ಅವಕಾಶ ಮಾಡಿಕೊಡುತ್ತದೆ ಮತ್ತು ಜನನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೀಲುಗಳನ್ನು ಸಡಿಲಗೊಳಿಸುತ್ತವೆ. ಇದರಿಂದ ಹಿಗ್ಗುವಿಕೆ ಆಗಿ ಬೆನ್ನು ನೋವು ಬರಬಹುದು.

ಗರ್ಭಾಶಯದ ಕೇಂದ್ರ: ನಿಮ್ಮ ಗರ್ಭಾಶಯದ ಕೇಂದ್ರ, ಮಗು/ಭ್ರೂಣ ಮತ್ತು ಗರ್ಭ ಬೆಳೆದಂತೆ ನಿಧಾನವಾಗಿ ತನ್ನ ನಿಲುವನ್ನು ಮುಂದುವರೆಸುತ್ತದೆ. ಇದು ನಿಮ್ಮ ದೇಹಸ್ಥಿತಿಯನ್ನು ಬದಲಿಸಲು ಕಾರಣವಾಗುತ್ತದೆ.

ಹೆಚ್ಚುವರಿ ತೂಕ: ನೀವು ಈ ಸಮಯದಲ್ಲಿ ನಿಮ್ಮ ತೂಕದ ಜೊತೆಗೆ, ನಿಮ್ಮ ಕಂದಮ್ಮನ ತೂಕವನ್ನು ಹೊತ್ತಿರುವಿರಿ, ಇದನ್ನು ತಡೆಯಲು ನಿಮ್ಮ ಬೆನ್ನೆಲುಬು ಶಕ್ತವಾಗಿರಬೇಕು. ನಿಮ್ಮ ಬೆನ್ನು ಇದಕ್ಕೆ ಬೆಂಬಲಿಸ ಬೇಕು, ಇಲ್ಲವಾದಲ್ಲಿ ಬೆನ್ನು ನೋವು ಹೆಚ್ಚಾಗುವುದು ಸಹಜ, ಸರಿಯಾದ ಪೌಷ್ಟಿಕ ಆಹಾರ ಸೇವನೆ ಮಾಡುವುದು ಒಳಿತು.

ದೇಹಸ್ಥಿತಿ/ಭಂಗಿ ಅಥವಾ ಸ್ಥಾನ: ಕಳಪೆ ಭಂಗಿ, ಅತಿ ಹೆಚ್ಚು ನಿಂತಿರುವುದು, ಮತ್ತು ಹೆಚ್ಚು ಬಗ್ಗಿ ಕೆಲಸ ಮಾಡುವುದು ನಿಮ್ಮ ಬೆನ್ನು ನೋವನ್ನು ಹೆಚ್ಚಿಸುತ್ತದೆ.

ಒತ್ತಡ: ಸಾಮಾನ್ಯವಾಗಿ ಒತ್ತಡ ದೇಹದ ದುರ್ಬಲ ಪ್ರದೇಶಗಳ ಮೇಲೆ ಪ್ರಭಾವ ಬೀರುತ್ತದೆ, ಮತ್ತು ನಿಮ್ಮ ಶ್ರೋಣಿ(ಪೆಲ್ವಿಕ್) ಪ್ರದೇಶದಲ್ಲಿ ಬದಲಾವಣೆಯಾಗುವುದರಿಂದ, ನೀವು ಬೆನ್ನು ನೋವನ್ನು ಒತ್ತಡದ ಗರ್ಭಾವಸ್ಥೆಯಲ್ಲಿ ಹೆಚ್ಚಾಗಿ ಅನುಭವಿಸಬೇಕಾಗುತ್ತದೆ.

ನೀವು ಅನುಭವಿಸುತ್ತಿರುವ ಬೆನ್ನು ನೋವನ್ನು ಕಡಿಮೆ ಮಾಡಲು ಸಹಾಯವಾಗುವ ಕೆಲವು ಸಲಹೆಗಳು ಇಲ್ಲಿವೆ,.

ನೀವು ಮಾಡಬಹುದಾಂತಹ, ನಿಮ್ಮ ಆರೋಗ್ಯ ರಕ್ಷಕರು ಸಲಹೆ ನೀಡಿದ/ಹೇಳಿದ ಕೆಲವು ವ್ಯಾಯಾಮಗಳನ್ನು ಮಾಡಿ, ಬೆನ್ನು ಮತ್ತು ಹೊಟ್ಟೆಯನ್ನು ಬಲಪಡಿಸಿಕೊಳ್ಳಿ(ಪೌಷ್ಠಿಕ ಆಹಾರ ಸೇವನೆ).

ಬಗ್ಗಿ ಕೆಲಸ ಮಾಡುವುದನ್ನು ಕಡಿಮೆ ಮಾಡಿ.

ಸೂಕ್ತವಾದ ಬೆಂಬಲವನ್ನು ಒದಗಿಸದ ಎತ್ತರದ ಹೀಲ್ಸ್(ಹೈ ಹೀಲ್ಸ್) ಮತ್ತು ಇತರ ಶೂಗಳನ್ನು ಬಳಸುವುದನ್ನು/ಉಪಯೋಗಿಸುವುದನ್ನು ನಿಲ್ಲಿಸಿ.

ಅಂಗಾತ ಮಲುಗುವುದನ್ನು ಕಡಿಮೆ ಮಾಡಿ.

ಆದಷ್ಟು ವಿಶ್ರಾಂತಿ ತೆಗೆದುಕೊಳ್ಳಿ. ಸ್ವಲ್ಪ ದೂರ ನಡೆದಾಡುವುದು ಕಾಲುಗಳನ್ನು ಆಡಿಸುವುದು ಒಳ್ಳೆಯದು.

ಪೌಷ್ಠಿಕ ಆಹಾರ ಸೇವನೆ ಮಾಡಿ, ಆದಷ್ಟು ಮಸಾಲೆಯುಕ್ತ ಹೊರಗಿನ ತಿಂಡಿಗಳನ್ನು ನಿಲ್ಲಿಸಿ.

ನಿಮಗೆ ಹೆಚ್ಚು ಬೆನ್ನು ನೋವು ಅಥವಾ ಕಿಬ್ಬೊಟ್ಟೆ/ಕೆಳಹೊಟ್ಟೆ ನೋವು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon