Link copied!
Sign in / Sign up
4
Shares

ಗರ್ಭಾವಸ್ಥೆಯಲ್ಲಿ ಬಯಕೆಗಳು ಏಕೆ ಉಂಟಾಗುತ್ತವೆ?

ನೀವು ಗರ್ಭಿಣಿಯಾದಾಗ, ಮಗುವಿನ ಬಗ್ಗೆ ಎಲ್ಲಾ ಮಾತುಗಳನ್ನು ಹೊರತುಪಡಿಸಿ, ನೀವು ಅತಿಯಾಗಿ ಕೇಳಿಸಿಕೊಳ್ಳುವ ಮತ್ತೊಂದು ವಿಷಯವಿದೆ- ಅದು ನೀವು ಅತ್ಯಂತ ಇಷ್ಟ ಪಟ್ಟು ಕೇಳುವ ಆಹಾರದ ಕಡು ಬಯಕೆಗಳು. ಆದರೆ, ಒಬ್ಬ ತಾಯಿಯಾಗಿ ಅದನ್ನು ಹೇಳಲು ಯಾವುದೇ ನಾಚಿಕೆ ಪಡಬೇಕಿಲ್ಲ!, ಕಡು ಬಯಕೆಗಳು ಗರ್ಭಾವಸ್ಥೆಯ ವಾಸ್ತವಿಕ ಸಂಗತಿಗಳು, ಮತ್ತು ಇದು ಮಾನಸಿಕ ವಿದ್ಯಮಾನ ಎಂದು ವೈಜ್ಞಾನಿಕವಾಗಿ ಸಾಭೀತಾಗಿದೆ. ಇವೆಲ್ಲದರ ಹೊರತು, ನಿಮ್ಮೊಳಗೆ ಒಂದು ಸಂಪೂರ್ಣ ಜೀವ(ಮಾನವ) ಬೆಳೆಯುತ್ತಿದೆ.

ಮನುಷ್ಯರು ಸಾಮಾನ್ಯವಾಗಿ ತಮ್ಮ ಇಷ್ಟದ ಆಹಾರಗಳನ್ನು ಸೇವಿಸಲು ಬಯಸುತ್ತಾರೆ. ಆದಾಗ್ಯೂ, ಗರ್ಭಿಣಿಯರು ತಮ್ಮ ವಿಚಿತ್ರ ಬಯಕೆಗಳನ್ನು ಹೊಂದಿರುತ್ತಾರೆ- ಅದು ಚಾಕೊಲೇಟ್ಸ್, ಗೋಬಿ ಮಂಚೂರಿ, ಮಾವಿನಕಾಯಿ, ಹುಣಸೆ ಹಣ್ಣು ಮತ್ತು ಇಡ್ಲಿ ಆಗಿರಬಹುದು. ಎಲ್ಲಾ ನಿರ್ಧಿಷ್ಟ ಕಡು ಬಯಕೆಗಳನ್ನು ವಿವರಿಸಲಾಗುವುದಿಲ್ಲ, ಕೆಲವು ಮಹಿಳೆಯರು ಕೆಲವನ್ನು ಬಯಸುತ್ತಾರೆ, ಆದರೆ ಗರ್ಭಿಣಿಯರಲ್ಲಿ ಏಕೆ ಇಗೆ ಆಗುತ್ತದೆ ಎಂದು ನಾವು ಖಂಡಿತವಾಗಿಯೂ ತಿಳಿಸಬಲ್ಲವು.

ಗರ್ಭಾವಸ್ಥೆಯಲ್ಲಿ, ನಿಮ್ಮ ಸಾಮಾನ್ಯ ಬಯಕೆಗಳು ತೀವ್ರಗೊಳ್ಳುತ್ತದೆ(ಹೆಚ್ಚಾಗುತ್ತದೆ). ನೀವು ಐಸ್-ಕ್ರೀಮ್ ಅನ್ನು ಇಷ್ಟ ಪಡುತ್ತಿದ್ದರೆ, ನೀವು ಗರ್ಭಿಣಿಯಾದಾಗ ಇದು ಅನಿಯಂತ್ರಿತ ಕಡುಬಯಕೆಯಾಗುತ್ತದೆ. ಇದು ನಿಮ್ಮ ಇತರೇ ಹವ್ಯಾಸಗಳಿಗೂ ಹರಡಬಹುದು. ನೀವು ಮಸಾಲೆಯುಕ್ತ ಆಹಾರಗಳನ್ನು ಅಥವಾ ಕುರಕಲು ತಿಂಡಿಗಳನ್ನು ಇಷ್ಟ ಪಡುತ್ತಿದ್ದರೆ, ಅದರ ಮೇಲೆ ಮತ್ತಷ್ಟು ಅತಿಯಾದ ಅಸೆಯಾಗಿ ಅದನ್ನು ಹಂಬಲಿಸುತ್ತೀರಾ. ಇಂತಹ ಸಂದರ್ಭಗಳಲ್ಲಿ, ನಿಮ್ಮ ಕಡುಬಯಕೆಗಳಿಗಿಂತ, ಮಾತೃತ್ವ ಪ್ರವೃತ್ತಿಗಳು ಹೆಚ್ಚು ಶಕ್ತಿಶಾಲಿಯಾಗಿರುತ್ತವೆ, ಆದ್ದರಿಂದ ನೀವು ಮಗುವಿಗೆ ಹಾನಿಯಾಗುವಂತಹ ಆಹಾರಗಳ ಸೇವನೆಯನ್ನು ನಿಲ್ಲಿಸುತ್ತೀರಾ.

ನಿಮ್ಮ ಗರ್ಭಧಾರಣೆಯ ಮೊದಮೊದಲಿನಲ್ಲಿ ನಿಮಗೆ ಬಹಳಷ್ಟು ತಿನಿಸುಗಳ ಮೇಲೆ ವಾಕರಿಕೆ ಉಂಟಾಗಬಹುದು, ಹಾಗಾಗಿ ನೀವು ಸ್ವಲ್ಪ ಎಚ್ಚರ ವಹಿಸಬೇಕು. ನೀವು ಈಗಾಗಲೇ ಬೆಳಗಿನ ಬೇನೆ (ಮಾರ್ನಿಂಗ್ ಸಿಕ್ಕ್ನೆಸ್ಸ್/ morning sickness) ಅನುಭವಿಸುತ್ತಿರುವದರಿಂದ, ನಿಮ್ಮ ದೇಹಕ್ಕೆ ಹಿಡಿಸದ ಆಹಾರ ಸೇವಿಸಲು ಮುಂದಾದರೆ, ಮತ್ತಷ್ಟು ತೊಂದರೆ ಉಂಟಾಗುತ್ತದೆ. ಆದರೆ ಗರ್ಭಧಾರಣೆ ಸಮಯದ ಬಹುಪಾಲು ನೀವು ನಿಮ್ಮ ಬಯಕೆಗಳಿಗೆ ಶರಣಾಗುತ್ತೀರ.

ಗರ್ಭಿಣಿಯರಿಗೆ ಬಯಕೆ ಏಕೆ ಉಂಟಾಗುತ್ತದೆ ಎಂಬುದಕ್ಕೆ ನಿಖರವಾದ ಕಾರಣ ಇಲ್ಲ. ಒಂದು ಕಾರಣ ಏನಿರಬಹುದು ಎಂದರೆ - ಈ ಸಮಯದಲ್ಲಿ ನಿಮ್ಮ ಹಾರ್ಮೋನ್ ಗಳು ಗಮನಾರ್ಹ ಬದಲಾವಣೆ ಹೊಂದುತ್ತವೆ. ನಿಮ್ಮ ಹಸಿವು ಮತ್ತು ಮೆಟಾಬಲಿಸಮ್ ನಿಯಂತ್ರಿಸುವ ಹಾರ್ಮೋನ್ ಗಳು ಹಾಗು ಹಸಿವಿನ ಉತ್ತೇಜಕಗಳು ಕೂಡ ಬದಲಾಗುತ್ತವೆ. ಇದು ನಿಮ್ಮ ಹಸಿವನ್ನು ತುಂಬಾನೇ ಹೆಚ್ಚಿಸುತ್ತದೆ ಹಾಗು ಅದಲ್ಲದೆ ನಿಮಗೆ ತಿನ್ನಲು ಆಗುವುದಕ್ಕಿಂತ ಹೆಚ್ಚು ತಿನಿಸುಗಳಿಗೆ ನೀವು ಹಪಹಪಿಸುತ್ತೀರ.

ನಿಮಗೆ ಕೆಲವು ತಿನಿಸುಗಳ ಮೇಲೆ ಬಯಕೆ ಏಕೆ ಉಂಟಾಗುವುದಕ್ಕೆ ಕಾರಣ, ನಿಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಅದರಿಂದ ಲಭ್ಯ ಆಗುವುದಕ್ಕೆ ಇರಬಹುದು. ಇನ್ನೂ ಕೆಲವು ಸಮಯ, ನಿಮ್ಮ ನಾಲಿಗೆಯು ಬೇರೇ ಬೇರೇ ರುಚಿಯ ತಿನಿಸುಗಳಿಗೆ ಆಸೆ ಪಡುತ್ತಿರಬಹುದು. ಇಷ್ಟರಲ್ಲಿ ನಿಮಗೆ ಬಯಕೆ ಉಂಟಾಗುವುದಕ್ಕೆ ನಿಖರ ಕಾರಣ ಯಾವುದು ಎಂಬುದರ ಬಗ್ಗೆ ಚಿಂತೆ ನಿಮಗೆ ಬೇಡ. ಬಸುರಿ ಬಯಕೆ ಎಂದು ಬೇಕಾದನ್ನು ಕೇಳಿ ಕೇಳಿ ಮಾಡಿಸಿಕೊಂಡು ತಿನ್ನಿ! ಕೈಲಾಗದಷ್ಟು ತಿನ್ನಬೇಡಿ ಅಷ್ಟೇ!

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon