Link copied!
Sign in / Sign up
0
Shares

ಗರ್ಭಾವಸ್ಥೆಯಲ್ಲಿನ ಸಾಮಾನ್ಯ ಅಸಹಜತೆ/ಅಸ್ವಸ್ಥತೆ ಮತ್ತು ಅದನ್ನು ಬಗೆಹರಿಸಲು ಕೆಲ ಸಲಹೆಗಳು

ನಿಮಗೆ ತಿಳಿದೇ ಇದೆ, ಗರ್ಭಾವಸ್ಥೆಯಲ್ಲಿ ಅಸ್ವಸ್ಥತೆ ಸಾಮಾನ್ಯ ಎಂದು, ಆದರೆ ಸಾಮಾನ್ಯ ಅಸ್ವಸ್ಥೆ ಯಾವುದು ಹಾನಿಕಾರಕ ರೋಗ ಯಾವುದು, ಅದನ್ನು ಹೇಗೆ ಗುರುತಿಸುವುದು ಮತ್ತು ಅದಕ್ಕೆ ಪರಿಹಾರ ಏನು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ, ಗರ್ಭಾವಸ್ಥೆಯ ಸಾಮಾನ್ಯ ಅಸ್ವಸ್ಥತೆ ಮತ್ತು ಅದನ್ನು ಸರಿಪಡಿಸಿಕೊಳ್ಳಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

೧.ಉಬ್ಬಿರುವ ರಕ್ತನಾಳಗಳು

ನಿಮ್ಮ ದೇಹಕ್ಕೆ ಬಿಗಿಯಾಗಿ ಇರುವಂತಹ ಬಟ್ಟೆಗಳನ್ನು ಧರಿಸುವುದನ್ನು ಆದಷ್ಟು ಕಡಿಮೆ ಮಾಡಿ. ಅದನ್ನು ಬಳಸದೇ ಆರಾಮದಾಯಕವಾಗಿರುವ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು. ನಿಮ್ಮ ಕಾಲುಗಳಿಗೆ ವಿಶ್ರಾಂತಿಯನ್ನು ನೀಡಿ ಮತ್ತು ನಿಮಗೆ ಆರಾಮದಾಯಕ ಅನಿಸಿದಷ್ಟು ಕಾಲನ್ನು ಆಡಿಸಿ. ಹೆಚ್ಚು ಸಮಯ ನಿಂತುಕೊಳ್ಳುವುದನ್ನು ಕಡಿಮೆಮಾಡಿ. ಹೆಚ್ಚು ಸಮಯ ನಿಂತುಕೊಳ್ಳುವ ಬದಲು ನಡೆದಾಡಿ. ವೈದ್ಯರ ಸಲಹೆ ಪಡೆಯಿರಿ.

೨.ಎದೆಯುರಿ

ಆಗಾಗ್ಗೆ, ಸ್ವಲ್ಪ ಸ್ವಲ್ಪ ಹಸಿವಾದಾಗ ಆಹಾರಗಳನ್ನು ಸೇವಿಸಿ. ಮಸಾಲೆಯುಕ್ತ ಅಥವಾ ಎಣ್ಣೆ ಜಿಡ್ಡುಯುಳ್ಳ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಊಟ ಮಾಡಿದ ತಕ್ಷಣ ಮಲಗಬೇಡಿ, ವೈದ್ಯರ ಸಲಹೆ ಪಡೆಯಿರಿ.

೩.ಸುಸ್ತು

ರಕ್ತಹೀನತೆಯ ಕಾರಣದಿಂದ ಕೆಲವೊಮ್ಮೆ ಗರ್ಭಾವಸ್ಥೆಯಲ್ಲಿ ಸುಸ್ತು ಕಾಣಿಸಿಕೊಳ್ಳುತ್ತದೆ. ರಕ್ತಹೀನತೆಗೆ ರಕ್ತದಲ್ಲಿ ಸರಿಯಾಗಿ ಆಮ್ಲಜನಕ ಸಿಗದಿರುವುದು ಅಥವಾ ಕೆಂಪು ರಕ್ತ ಕಣ ಕಳಪೆ ಗುಣ ಮಟ್ಟ ಹೊಂದುವುದು. ಇದರ ಬಗ್ಗೆ ವೈದ್ಯರ ಬಳಿ ಸರಿಯಾಗಿ ಪರೀಕ್ಷಿಸಿಕೊಳ್ಳಿ.

೪.ಬೆಳಗಿನ ಕಾಯಿಲೆ

ವಾಂತಿ ಬರುವುದು ಅಥವಾ ವಾಕರಿಕೆ ಆಗುವುದು ಗರ್ಭಾವಸ್ಥೆಯಲ್ಲಿ ಬೆಳಗ್ಗೆ ಅಥವಾ ರಾತ್ರಿ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು. ನಿಮಗೆ ಹಸಿವಾದಾಗ ಮಾತ್ರ ಸ್ವಲ್ಪ ಸ್ವಲ್ಪ ಆರೋಗ್ಯಕರ ಆಹಾರ ಸೇವಿಸಿ. ಮಸಾಲೆಯುಕ್ತ, ಜಿಡ್ಡಿನ ಪದಾರ್ಥ ಇರುವ ಆಹಾರವನ್ನು ಸೇವಿಸಬೇಡಿ.

ಬೆಳಗಿನ ಕಾಯಿಲೆಯಿಂದ ನಿಮ್ಮ ತೂಕದಲ್ಲಿ ಬದಲಾವಣೆ ಕಂಡು ಬಂದರೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಿ.

೫.ವಸಡುಗಳಲ್ಲಿ ರಾಕ್ತಸ್ರಾವ

ನಿರಂತರವಾಗಿ ಬ್ರಷ್ ಮಾಡಿರಿ, ಹಲ್ಲನ್ನು ಸ್ವಚ್ಛಗೊಳಿಸಲು ದಂತ ವೈದ್ಯರನ್ನು ಭೇಟಿ ಮಾಡಿ. ಆದರೆ ನೀವು ಗರ್ಭಿಣಿ ಎಂಬುದನ್ನು ಅವರಲ್ಲಿ ಹೇಳಲು ಮರೆಯದಿರಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon