Link copied!
Sign in / Sign up
6
Shares

ಗರ್ಭಾವಸ್ಥೆಯಲ್ಲಿ ಈ ಸಣ್ಣ ತಪ್ಪುಗಳು ಗಂಭೀರ ಸಮಸ್ಯೆಗಳಾಗಿ ನಿಮ್ಮನ್ನು ಕಾಡಬಹುದು!

ಹೆಣ್ಣಿನ ಮರೆಯಲಾರದ ಅತ್ಯಂತ ಸಂತೋಷದ ದಿನಗಳಾದ ಗರ್ಭಾವಸ್ಥೆಯಲ್ಲಿ ನೀವು ಮಾಡುವ ಸಣ್ಣ ತಪ್ಪುಗಳು ನಿಮ್ಮ ಮಗುವಿನ ಮೇಲೆ ಗಂಭೀರ ಪರಿಣಾಮವನ್ನು ಬೀರಬಹುದು. ನಿಮಗೆ ತಿಳಿದಿರುವ ಹಾಗೆ ಗರ್ಭಾವಸ್ಥೆಯಲ್ಲಿ ನಿಮ್ಮ ಪತಿ ಮತ್ತು ಮನೆಯವರ ಸಹಾಯ ನಿಮಗೆ ತುಂಬಾ ಅಗತ್ಯ.

ಗರ್ಭಾವಸ್ಥೆಯಲ್ಲಿ ಮಹಿಳೆಯರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಆ ತಪ್ಪುಗಳು ಮಗುವಿನ ಆರೋಗ್ಯದ ಮೇಲೆ ಹಾಗೂ ತಾಯಿ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅವು ಸಣ್ಣ ತಪ್ಪುಗಳು ಎಂದೆನಿಸಿದರೂ ಅವುಗಳಿಂದ ಅಪಾಯವಾಗಬಹುದು. ಹಾಗಾದರೆ ಅವರು ಮಾಡುವ ಸಾಮಾನ್ಯ ತಪ್ಪುಗಳು ಯಾವವು? ಅವುಗಳಿಂದ ಏನು ತೊಂದರೆ ಎಂಬುದನ್ನು ತಿಳಿಯೋಣ.

೧.ಅಗತ್ಯ ಮೀರಿ ಆಹಾರ ಸೇವನೆ

ಈ ಸಮಯದಲ್ಲಿ ಮಹಿಳೆಯರು ಪೌಷ್ಟಿಕಾಂಶಕವುಳ್ಳ, ಅಧಿಕ ಪ್ರೊಟೀನ್ ಇರುವ ವಿಟಮಿನ್ ಗಳಿರುವ ಆರೋಗ್ಯಕರ ಆಹಾರವನ್ನು ತಮಗೆ ಬೇಕಿರುವಷ್ಟು ಸೇವಿಸಬೇಕು. ಆದರೆ, ಕೆಲವು ಮಹಿಳೆಯರು ನನ್ನೊಳಗೆ ಇನ್ನೊಂದು ಜೀವವಿದೆ ಅದಕ್ಕೂ ಆಹಾರ ಬೇಕು ಎಂಬ ತಪ್ಪು ಕಲ್ಪನೆಯಲ್ಲಿ ತಮ್ಮ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವರು. ಮತ್ತು ಆರೋಗ್ಯವಲ್ಲದ ಬಾಯಿರುಚಿ ಆಹಾರ ಸೇವನೆಯನ್ನು ಮಾಡುವರು. ಇದು ಅಧಿಕ ರಕ್ತದೊತ್ತಡ ಮತ್ತು ಗರ್ಭಧಾರಣೆಯ ಮಧುಮೇಹವನ್ನು ಉಂಟುಮಾಡುತ್ತದೆ.

೨.ಬೆಳಗಿನ ತಿಂಡಿಯನ್ನು ಸೇವಿಸದೆ ಇರುವುದು

ಕೆಲವರು ಬೆಳಗಿನ ಅರೋಗ್ಯ ಸಮಸ್ಯೆಯನ್ನು ತಮ್ಮ ಗರ್ಭಾವಸ್ಥೆಯಲ್ಲಿ ಎದುರಿಸುವರು ಮತ್ತು ಅದರ ಚಿಂತೆಯಿಂದ ಅಥವಾ ಬೆಳಗ್ಗೆ ತಿಂಡಿ ಮಾಡದೇ ಇರುವುದರಿಂದ ಇದು ಸರಿಯಾಗಬಹುದು ಎಂಬ ತಪ್ಪು ಕಲ್ಪನೆಯಿಂದ ಉಪಹಾರ ಸೇವಿಸದೆ ಇರುವರು. ಇದು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ಮೂರು ಹೊತ್ತಿನ ಊಟ ಹಾಗೂ ಎರಡು ಹೊತ್ತಿನ ತಿಂಡಿಯನ್ನು ಸೇವಿಸಬೇಕಾಗಬಹುದು.

೩.ಔಷಧಗಳು

ಕೆಲವರು ತಮಗೆ ಮೊದಲೇ ಇದ್ದ ಕಾಯಿಲೆಯ ಔಷದಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತಾರೆ. ಮತ್ತೆ ಕೆಲವರು ತಮಗೆ ಏನಾದರು ಸ್ವಲ್ಪ ತಲೆನೋವು ಅಥವಾ ಮೈ ಕೈ ನೋವು ಬಂದರೆ ಮೆಡಿಕಲ್ ಸ್ಟೋರ್ ನಲ್ಲಿ ವೈದ್ಯರ ಸಲಹಾ ಚೀಟಿ ಇಲ್ಲದೆ ಸಾಮಾನ್ಯ ಔಷಧಿಗಳನ್ನು ಸೇವಿಸುತ್ತಾರೆ, ಈ ಸಮಯದಲ್ಲಿ ಇವು ತುಂಬಾ ಅಪಾಯಕಾರಿ. ತಮಗೆ ಇರುವ ಕಾಯಿಲೆಯ ಔಷಧಗಳನ್ನು ನಿಲ್ಲಿಸುವುದರಿಂದ ಮಗುವಿಗೂ ಆ ರೋಗ ಬರುವ ಸಾಧ್ಯತೆ ಹೆಚ್ಚು. ಈ ವಿಚಾರದಲ್ಲಿ ವೈದ್ಯರ ಸಲಹೆ ಪಡೆಯುವುದು ಸೂಕ್ತ.

೪.ವ್ಯಾಯಾಮ

ಗರ್ಭಾವಸ್ಥೆಯಲ್ಲಿ  ಮಹಿಳೆಯರಿಗೆ ಆರಾಮದಾಯಕ ವ್ಯಾಯಾಮದ ಅಗತ್ಯವಿರುತ್ತದೆ, ಆದರೆ ವ್ಯಾಯಾಮ ಮಾಡಿದರೆ ಒಳ್ಳೆಯದು ಎಂದು ಕಠಿಣ ವ್ಯಾಯಾಮ ಮಾಡುವುದು ಗರ್ಭಪಾತಕ್ಕೆ ಅಥವಾ ಅವಸರದ ಹೆರಿಗೆಗೆ ಅಥವಾ ಅಕಾಲಿಕ ಜನ್ಮಕ್ಕೆ ದಾರಿ ಮಾಡಿಕೊಡುತ್ತದೆ. ಇದರ ಬಗ್ಗೆ ವೈದ್ಯರ ಬಳಿ ಸಲಹೆ ಪಡೆಯುವುದು ಒಳ್ಳೆಯದು.

೫.ಒತ್ತಡ/ಖಿನ್ನತೆ

ಒತ್ತಡಕ್ಕೆ ಒಳಗಾದರೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಒತ್ತಡಕ್ಕೆ ಒಳಗಾದಾಗ ಮಗುವು ಪೌಷ್ಟಿಕಾಂಶವನ್ನು ಹೀರಿಕೊಳ್ಳುವುದರಲ್ಲಿ ವಿಫಲವಾಗುತ್ತದೆ. ಇದು ಗರ್ಭಪಾತಕ್ಕೆ ದಾರಿಮಾಡಿಕೊಡುತ್ತದೆ. ಅಥವಾ ಮಗುವಿನಲ್ಲಿ ಬೆಳವಣಿಗೆ ಕುಂಠಿತವಾಗಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon