Link copied!
Sign in / Sign up
0
Shares

ಗರ್ಭಾವಸ್ಥೆಯಲ್ಲಿ ನೀವು ಅನಾರೋಗ್ಯ ಅನುಭವಿಸಿದರೆ, ಅದು ನಿಮ್ಮ ಮಗುವಿನ ಹೇಗೆ ಪರಿಣಾಮ ಬೀರುತ್ತದೆ ಗೊತ್ತೇ?

ಹೆಣ್ಣಿಗೆ ತಾನು ಗರ್ಭಿಣಿ ಎಂದು ತಿಳಿದಾಗ ಆಗುವ ಸಂತೋಷಕ್ಕೆ ಪಾರವೇ ಇಲ್ಲ. ನೀವು ನಿಮ್ಮ ಕರುಳ ಕುಡಿಯ ಬರುವಿಕೆಯ ದಾರಿಯನ್ನು ಕಾಯುತ್ತಿದ್ದೀರಾ? ಸ್ವಲ್ಪ ನಿಧಾನಿಸಿ,  ನಿಮ್ಮ ಆರೋಗ್ಯದ ಬಗ್ಗೆಯೂ ಸ್ವಲ್ಪ ಗಮನವಿರಲಿ. ನೀವು ಏನು ತಿನ್ನುತ್ತೀರ, ಕುಡಿಯುತ್ತೀರ, ನೋಡುತ್ತೀರ, ಎಲ್ಲವು ನಿಮ್ಮ ಮಗುವಿನ ಮಾನಸಿಕ ಹಾಗು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ತಾಯಿಯು ಅನಾರೋಗ್ಯಕ್ಕೆ ಒಳಗಾದರೆ, ಗರ್ಭದ್ದಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮಗಳಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಕೆಲವೊಮ್ಮೆ ಗರ್ಭಿಣಿಯರಲ್ಲಿ, ಜ್ವರ, ಶೀತ , ನೆಗಡಿಯಂತಹ ಸಾಮಾನ್ಯ ಖಾಯಿಲೆಗಳು ಬಂದರೆ, ಬೆಳೆಯುತ್ತಿರುವ ಕೂಸು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಇಂತಹ ಸಮಯದ್ದಲ್ಲಿ ನೀವು ಮೊದಲಿಗೆ ಜ್ವರವನ್ನು ಕಡಿಮೆ ಮಾಡುವ ವಿಧಾನಗಳನ್ನು ಪಾಲಿಸಬೇಕು.

ಗರ್ಭಾವಸ್ಥೆಯಲ್ಲಿ ಜ್ವರಕ್ಕೆ ಮಾತ್ರೆಯನ್ನು ತೆಗೆದುಕೊಳ್ಳಬಾರದು ಎಂದು ವೈದ್ಯರು ಸೂಚಿಸಿದ್ದಾರೆ. ಮನೆಯಲ್ಲಿಯೇ ವಿಶ್ರಾಂತಿ ಹಾಗು ಆಹಾರದಿಂದ  ಜ್ವರವನ್ನು ಕಡಿಮೆ ಮಾಡಬಹುದು. ಲಘುವಾದ ಆಹಾರಗಳು, ಪೇಯಗಳು ದೇಹದ ತಾಪಮಾನವನ್ನು ಕಡಿಮೆ ಮಾಡುತ್ತದೆ. ಗರ್ಭಿಣಿಯರಲ್ಲಿ ಬರುವ ಆರೋಗ್ಯದ ಸಮಸ್ಯೆಗಳು, ಹುಟ್ಟಲಿರುವ ಮಗುವಿನ ಬೆಳವಣಿಗೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ ಬನ್ನಿ.

ಪ್ರತಿದಿನವು ತಾಯಿಯ ಗರ್ಭದೊಳಗೆ ಬೆಳೆಯುತ್ತಿರುವ ಮಗುವಿಗೆ, ತಾಯಿಯ ದೇಹದಲ್ಲಾಗುವ ಸಣ್ಣ ಸಣ್ಣ ಬದಲಾವಣೆಗಳು ಕೂಡ ತಿಳಿಯುತ್ತದೆ. ತಾಯಿಗೆ ಆಯಾಸವಾದರೆ, ಮಗುವಿಗೂ ಸಹ ಅದರ ಅನುಭವವಾಗುತ್ತದೆ. ಅದೇ ರೀತಿ ಮಗುವಿಗೆ ಹಸಿವಾದಾಗ, ತಾಯಿಗೂ ಸಹ ಹಸಿವಾಗುತ್ತದೆ ಹೀಗೆ ತಾಯಿ ಮತ್ತು ಮಗು ಒಂದೇ ದೇಹದಲ್ಲಿರುವ, ಎರಡು ಹೃದಯಗಳ್ಳಿದ್ದಂತೆ. ಒಂದನ್ನು ಬಿಟ್ಟು ಇನ್ನೊಂದು ಬದುಕುವುದಿಲ್ಲ ಎನ್ನುವಷ್ಟು, ಅವಿನಾಭಾವ ಸಂಬಂಧವನ್ನು ಹೊಂದಿರುತ್ತಾರೆ.

ಹೀಗೆ ತನ್ನ ಬೆಳವಣಿಗೆಗೆ ತಾಯಿಯನ್ನೇ ಸಂಪೂರ್ಣವಾಗಿ ಅವಲಂಭಿತವಾಗಿರುವ ಕಂದಮ್ಮಗಳು, ನಿತ್ಯವು ಗರ್ಭದೊಳಗೆ ಸಕ್ರಿಯವಾಗಿ ಬೆಳವಣಿಗೆಯಾಗುತ್ತಿರುತ್ತವೆ. ವಾರದ ಅನ್ವಯ ಮಗುವಿನ ಬೆಳವಣಿಗೆಯನ್ನು, ವೈದ್ಯರು ನಿರ್ಣಯಿಸುತ್ತಾರೆ. ಕೈ,, ಕಾಲು, ಬೆರಳುಗಳು, ಹೃದಯ, ರಕ್ತನಾಳಗಳು, ಮಾಂಸ ಖಂಡಗಳು ಹೀಗೆ ಹಲವಾರು ಅಂಗಾಂಗಳ ರಚನೆ, ಸದಾ ಕಾರ್ಯರೂಪದಲ್ಲಿರುತ್ತದೆ. ಹಾಗಾಗಿ ಗರ್ಭಿಣಿಯರು ಯಾವುದೇ ರೀತಿಯ ಅನಾರೋಗ್ಯಕ್ಕೆ ಒಳಗಾದರೆ, ಮಗುವಿನ ಪ್ರತಿನಿತ್ಯದ ಬೆಳೆವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಸಹಜ ದೇಹದ ತಾಪಮಾನ (೯೮.೬ ಡಿಗ್ರಿ)ಕ್ಕಿಂತ ೧೦೦.೪ ಡಿಗ್ರಿ ತಾಪಮಾನ ಏರಿದರು, ಗರ್ಭಿಣಿಯರಲ್ಲಿ ಗರ್ಭಪಾತ/ ಮಗುವಿಗೆ ಅಂಗವೈಕಲ್ಯಗಳಾಗುವ ಸಾಧ್ಯತೆಗಳು ಹೆಚ್ಚು ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ವೈದ್ಯರು ಹೇಳುವ ಪ್ರಕಾರ ಗರ್ಭಾವಸ್ಥೆಯ, ಮೊದಲ ೩ ತಿಂಗಳ್ಳಲ್ಲಿ, ಗರ್ಭಿಣಿಯರಿಗೆ ಜ್ವರ  ಕಾಣಿಸಿಕೊಂಡರೆ ಹುಟ್ಟುವ ಮಕ್ಕಳ್ಳಲ್ಲಿ, ಸೀಳು ತುಟಿ, ನರತಂತು ಜಾಲ, ಹೃದಯ ಸಂಬಂಧಿ ಖಾಯಿಲೆಗಳು ಕಂಡುಬರುವ ಸಾಧ್ಯತೆಗಳು ಹೆಚ್ಚು. ಇಷ್ಟೆಲ್ಲಾ ತಿಳಿಸಿರುವ ವೈದ್ಯಕೀಯ ಸಮೀಕ್ಷೆ, ಯಾಕೆ ಹೀಗಾಗುತ್ತದೆ ಎಂಬ ಅನ್ವೇಷಣೆಯಲ್ಲಿ ಕಾರ್ಯನಿರತವಾಗಿದೆ. ಜ್ವರ ಮತ್ಯಾವುದೋ ರೋಗದ ಗುಣ ಲಕ್ಷಣವೇ ಅಥವಾ ಸಾಮಾನ್ಯ ಸೋಂಕಿನಿಂದ ಹೀಗಾಗುತ್ತಿದೆಯೇ ಎಂದು ನಿಖರವಾಗಿ ತಿಳಿದುಬಂದಿಲ್ಲ. ಆದರೆ ಗರ್ಭಿಣಿಯರಲ್ಲಿ ಅನಿಯಂತ್ರಿತ ಜ್ವರ ಬಂದರೆ ಹುಟ್ಟುವ ಮಕ್ಕಳ್ಳಲ್ಲಿ  ವೈಫಲ್ಯಗಳು ಕಂಡುಬರುವುದು ಮಾತ್ರ ಖಚಿತವಾಗಿದೆ.

ಆದ್ದರಿಂದ ಗರ್ಭಿಣಿಯರೇ ನಿಮ್ಮ ಮಗುವಿನ ಆರೋಗ್ಯ ನಿಮ್ಮ ಕೈಯಲ್ಲಿದೆ. ಯಾವುದೇ ಆರೋಗ್ಯದ ಸಮಸ್ಯೆಯಿಲ್ಲದೆ, ನಿಮ್ಮ ಮಗು ಆರೋಗ್ಯವಾಗಿ ಜನಿಸಬೇಕಾದರೆ, ನೀವು ನಿತ್ಯವು ಪೌಷ್ಟಿಕ ಆಹಾರ, ಹಣ್ಣು ಹಂಪಲು, ವ್ಯಾಯಾಮ, ನಿಗದಿತ ಸಮಯಕ್ಕೆ ನಿದ್ರೆ ಮಾಡುವುದು ಮುಂತಾದ  ಅಭ್ಯಾಸಗಳನ್ನು ನಿಮ್ಮ ದಿನಚರಿಯಲ್ಲಿ ರೂಢಿಸಿಕೊಳ್ಳಿ. ಅತೀ ಮುಖ್ಯವಾಗಿ ಯಾವುದೇ ವಸ್ತುವನ್ನು ಮುಟ್ಟಿದಾಗ, ನಿಮ್ಮ ಕೈ ತೊಳೆಯುವುದ್ದನ್ನು ಮರೆಯಬೇಡಿ. ಹೆಚ್ಚಿನ ಸಂಖೆಯ ರೋಗಾಣುಗಳು ನಿಮ್ಮ ದೇಹದೊಳಗೆ ಸೇರುವುದು ನಿಮ್ಮ ಹಸ್ಥಗಳಿಂದಲೇ. ಹಾಗಾಗಿ ಶುಚಿತ್ವದ ಕಡೆ ಆದಷ್ಟು ಗಮನವಹಿಸಿ, ನಿಮ್ಮ ಮಗುವನ್ನು ರೋಗಾಣುಗಳಿಂದ ದೂರವಿಡಿ.

ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ನಿಮ್ಮಂತೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಾವಿರಾರು ತಾಯಂದಿರೊಂದಿಗೆ ಇದನ್ನು ಹಂಚಿಕೊಳ್ಳಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon