Link copied!
Sign in / Sign up
4
Shares

ಗರ್ಭಾವಸ್ಥೆಯಲ್ಲಿ ಶವರ್ಮ ಸೇವನೆ ಸುರಕ್ಷಿತವೇ? (Is It Safe To Eat Shawarma During Pregnancy? in Kannada)

ಪ್ರತಿ ಹೆಣ್ಣಿನ ಜೀವನದಲ್ಲಿ ಗರ್ಭಾವಸ್ಥೆಯ ಅವಧಿ ಅತ್ಯಂತ ಮುಖ್ಯವಾದದ್ದು. ಆಕೆ ತೆಗೆದುಕೊಳ್ಳುವ ಪ್ರತಿ ನಿರ್ಧಾರದಲ್ಲಿ - ತಾನು ಮಲಗುವ ಬಗೆಯಿಂದ ತಾನು ಸೇವಿಸುವ ಆಹಾರದವರೆಗೆ - ಮಗುವಿನ ಒಳಿತನ್ನು ಯೋಚಿಸುತ್ತಾಳೆ. ಗರ್ಭಾವಸ್ಥೆಯಲ್ಲಿ ಶವರ್ಮ ದಂತಹ ಕೆಲವು ಆಹಾರಗಳ ಬಗ್ಗೆ ಬಯಕೆ ಹುಟ್ಟುವುದು ಸಾಮಾನ್ಯ. ಆದರೆ, ಗರ್ಭಾವಸ್ಥೆಯಲ್ಲಿ ಶವರ್ಮ ಸೇವನೆ ಸುರಕ್ಷಿತವೇ? ಈ ಲೇಖನದಲ್ಲಿ ತಿಳಿದುಕೊಳ್ಳೋಣ. 

ಪರಿವಿಡಿ:

೧. ಶವರ್ಮದ ಪೌಷ್ಟಿಕ ಮೌಲ್ಯ (Nutritional Value of Shawarma in Kannada)
೨. ಶವರ್ಮ ಪಾಕವಿಧಾನ (Shawarma Recipe in Kannada)

೩. ಗರ್ಭಾವಸ್ಥೆಯಲ್ಲಿ ಶವರ್ಮ ಸುರಕ್ಷಿತವೇ? (Is Shawarma Safe During Pregnancy in Kannada)

೪. ಗರ್ಭಾವಸ್ಥೆಯಲ್ಲಿ ಹುಮ್ಮ್ಯೂಸ್ ಸುರಕ್ಷಿತವೇ? (Is Hummus Safe During Pregnancy in Kannada)

೫. ನಿರ್ಣಯ (Conclusion in Kannada)

೧. ಶವರ್ಮದ ಪೌಷ್ಟಿಕ ಮೌಲ್ಯ (Nutritional Value of Shawarma in Kannada):

ಶವರ್ಮ ಮಧ್ಯಪ್ರಾಚ್ಯದಲ್ಲಿ ಪ್ರಸಿದ್ಧತೆ ಪಡೆದಿರುವ ಲಘು ಆಹಾರ. ವೈದ್ಯರ ಅನುಸಾರ ಶವರ್ಮ ಹೆಚ್ಚಿನ ಕ್ಯಾಲೋರಿಯನ್ನು ಹೊಂದಿರುವ ಕಾರಣ ಗರ್ಭಾವಸ್ಥೆಯಲ್ಲಿ ಇದನ್ನು ಸೇವಿಸದೇ ಇರುವುದು ಸೂಕ್ತ. ಈ ಕೆಳಗೆ ನೀಡಿರುವ ಮಾಹಿತಿ ನಿಮಗೆ ಶವರ್ಮದ ಪೌಷ್ಟಿಕ ಮೌಲ್ಯ ಮತ್ತು ಕ್ಯಾಲೊರಿಗಳ ಸಂಕ್ಷಿಪ್ತ ತಿಳಿವಳಿಕೆಯನ್ನು ನೀಡುತ್ತದೆ. 

೨. ಶವರ್ಮ ಪಾಕವಿಧಾನ (Shawarma Recipe in Kannada):

ಗರ್ಭಾವಸ್ಥೆಯಲ್ಲಿ ಶವರ್ಮ ಸೇವನೆ ವಿರುದ್ಧವಾಗಿ ವೈದ್ಯರು ಸಲಹೆ ನೀಡಿದರೂ, ಅದು ಮಧ್ಯಪ್ರಾಚ್ಯದ ಪ್ರಸಿದ್ಧವಾದ ಸ್ಟ್ರೀಟ್ ಫುಡ್ ಗಳಲ್ಲಿ ಒಂದಾಗಿದೆ. ಮ್ಯಾರಿನೇಟ್ ಮಾಡಿರುವ ಮಾಂಸದ ಪದರುಗಳನ್ನು ನಿಧಾನವಾಗಿ ಲಂಬವಾದ ರಾಟಿಸ್ಸೆರೀ ಮೇಲೆ ಸುಟ್ಟು ಬೇಯಿಸಿ ತಯಾರಿಸಲಾಗುತ್ತದೆ. 

ಸಾಮಾಗ್ರಿಗಳು:

- ಜೀರಿಗೆ ಪುಡಿ (¾ tbsp)

- ಅರಿಶಿನ ಪುಡಿ ( ¾ tbsp)

- ಕೊತ್ತಂಬರಿ ಪುಡಿ (¾ tbsp)

- ಬೆಳ್ಳುಳ್ಳಿ ಪುಡಿ ( ¾ tbsp)

- ಪೆಪ್ರಿಕಾ (¾ tbsp)

- ಅರೆದ ಲವಂಗ (½ tbsp)

- ೮ ಮೂಳೆರಹಿತ, ಚರ್ಮ ರಹಿತ ಮಾಂಸ 

- ಈರುಳ್ಳಿ (1)

- ನಿಂಬೆ ಹಣ್ಣಿನ ರಸ (1 cup)

- ಪ್ರೈವೇಟ್ ರಿಸರ್ವ್ ಎಕ್ಸ್ಟ್ರಾ ರಿಸರ್ವ್ ವರ್ಜಿನ್ ಆಲಿವ್ ಎಣ್ಣೆ (⅓ cup)

ಶವರ್ಮ ಹೇಗೆ ತಯಾರಿಸಬೇಕು:

ವಿಧಾನ: 

೧. ಒಂದು ಚಿಕ್ಕ ಬಟ್ಟಲಿನಲ್ಲಿ ಜೀರಿಗೆ, ಅರಿಶಿನ, ಕೊತ್ತಂಬರಿ ಪುಡಿ, ಬೆಳ್ಳುಳ್ಳಿ ಪುಡಿ, ಪೆಪ್ರಿಕಾ, ಲವಂಗ ಕಲೆಸಿರಿ. ಸ್ವಲ್ಪ ಸಮಯ ಬದಿಗಿಡಿ. 

೨. ಮಾಂಸವನ್ನು ಒಣಗಿಸಿ, ಎರಡೂ ಬಾಡಿಗೆ ಉಪ್ಪನ್ನು ಹಚ್ಚಿ. ನಂತರ ಅದನ್ನು ತಿನ್ನಲು ಬರುವ ತುಂಡುಗಳ ಗಾತ್ರದಲ್ಲಿ ತೆಳುವಾಗಿ ಕತ್ತರಿಸಿ. 

೩. ಮಾಂಸದ ತುಂಡುಗಳನ್ನು ಒಂದು ದೊಡ್ಡ ಬಟ್ಟಲಿನಲ್ಲಿ ಇಡಿ. ನಂತರ ಶವರ್ಮದ ಮಸಾಲೆಯನ್ನು ಇದರಲ್ಲಿ ಸೇರಿಸಿ, ಬೆರೆಸಿರಿ. ನಂತರ ಈರುಳ್ಳಿ, ನಿಂಬೆ ರಸ ಮತ್ತು ಆಲಿವ್ ಎಣ್ಣೆಯನ್ನು ಇದಕ್ಕೆ ಸೇರಿಸಿ. ಎಲ್ಲವನ್ನು ಬೆರೆಸಿ. ಅದನ್ನು ಒಂದು ಪಾತ್ರೆಯಲ್ಲಿ ಮುಚ್ಚಿ, ೩ ತಾಸಿನವರೆಗೆ ಫ್ರಿಡ್ಜ್ ನಲ್ಲಿಡಿ. 

೪. ಅದು ತಯಾರಾದ ನಂತರ, ಅದನ್ನು ಓವೆನ್ ನಲ್ಲಿ ೪೨೫ ಡಿಗ್ರಿ ಫಾರ್ಹೆನೆಟ್ ಶಾಖದಲ್ಲಿ ಪ್ರಿಹೀಟ್ ಮಾಡಿ. ಅದು ಪ್ರಿಹೀಟ್ ಆದ ನಂತರ ಹೊರಗಿಟ್ಟು ತಣ್ಣಗಾಗಿಸಿ. 

೫. ಈ ರೀತಿ ಮ್ಯಾರಿನೇಟ್ ಆಗಿರುವ ಮಾಂಸವನ್ನು ಈರುಳ್ಳಿಯೊಂದಿಗೆ ಪದರವಾಗಿ ಎಣ್ಣೆ ಹಚ್ಚಿರುವ ಬೇಕಿಂಗ್ ಶೀಟ್ ಮೇಲೆ ಹರಡಿ. ಪ್ರಿಹೀಟ್ ಮಾಡಿರುವ ಓವೆನ್ ನಲ್ಲಿ ೩೦ ನಿಮಿಷಗಳ ಕಾಲ ಅದನ್ನು ಬೇಯಿಸಿ.

೬. ಎರಡು ಸ್ಲೈಡರ್ ಬನ್ ಗಳ ಮಧ್ಯೆ ಶವರ್ಮವನ್ನು ಇಟ್ಟು, ಸಾಸ್ ನೊಂದಿಗೆ ಅದನ್ನು ಸವಿಯಿರಿ. 

ಶವರ್ಮ ಸುಲಭವಾಗಿ ಪಡೆಯಬಹುದಾದ ಆಹಾರವಾದರೂ, ಅದು ಆರೋಗ್ಯಕರವಲ್ಲದ್ದು. ರೊಟೇಸ್ಸಾರೀ ಅಲ್ಲಿ ಹಾಕಿರುವ ಮ್ಯಾರಿನೇಟೆಡ್ ಮಾಂಸದಲ್ಲಿ ಆಗಲೇ ಅತಿಯಾದ ಕೊಬ್ಬಿನಾಂಶ ಇರುತ್ತದೆ. ಅದರೊಂದಿಗೆ, ಮಾಂಸದ ಮೇಲೆ ಅಧಿಕ ಸೀಸನಿಂಗ್ ಮಾಡುವ ಕಾರಣ ಅದರಲ್ಲಿ ಅತಿಯಾದ ಸೋಡಿಯಂ ಅಂಶ ಕೂಡಾ ಇರುತ್ತದೆ. ಈ ಶವರ್ಮವನ್ನು ಬೇರೆ ಯಾವುದಾದರೂ ಸಾಂಪ್ರದಾಯಿಕ ಪಕ್ಕವಾದ್ಯಗಳ ಜೆಟ್ ಏರಿಸಿ ತಿಂದರೆ, ಅದು ನಿಮ್ಮ ಆರೋಗ್ಯದ ಮೇಲೆ ಅನಾರೋಗ್ಯಕರ ಪರಿಣಾಮ ಬೀರುವಲ್ಲಿ ಇನ್ನೂ ಹೆಚ್ಚಿನ ಸಹಾಯ ಮಾಡುತ್ತದೆ: ಹುಮ್ಮ್ಯೂಸ್ ಮತ್ತು ಬೆಳ್ಳುಳ್ಳಿ ಸಾಸ್ ಗಳು ಅಧಿಕ ಕ್ಯಾಲೋರಿಗಳನ್ನು ಹೊಂದಿದೆ. ಅದರಂತೆಯೇ ಫ್ರೆಂಚ್ ಫ್ರೈಸ್ ಸಹ. 

[Back To Top]

 

೩. ಗರ್ಭಾವಸ್ಥೆಯಲ್ಲಿ ಶವರ್ಮ ಸುರಕ್ಷಿತವೇ? (Is Shawarma Safe During Pregnancy in Kannada)

ಗರ್ಭಾವಸ್ಥೆ ಪ್ರತಿ ಹೆಣ್ಣಿನ ಜೀವನದಲ್ಲಿ ಅಸಾಧಾರಣ ಗಳಿಗೆಗಳಲ್ಲಿ ಒಂದು. ಈ ಘಟ್ಟದಲ್ಲಿ ಸಹಜವಾಗಿ ಪ್ರತಿ ಹೆಣ್ಣು ತಾನು ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಕಾಳಜಿವಹಿಸುತ್ತಾಳೆ. ಏಕೆಂದರೆ ತಾಯಿ ಸೇವಿಸುವ ಆಹಾರ ಮಗುವಿನ ಆರೋಗ್ಯಕ್ಕೆ ತೊಂದರೆ ಉಂಟು ಮಾಡಬಹುದು. ಹಾಗಾಗಿ, ಶವರ್ಮ ಗರ್ಭಾವಸ್ಥೆಯಲ್ಲಿ ಸುರಕ್ಷಿತವೇ ಎನ್ನುವ ಪ್ರಶ್ನೆಯನ್ನು ಸಾಮಾನ್ಯವಾಗಿ ಪ್ರತಿ ಗರ್ಭಿಣಿಯೂ ಕೇಳಬಯಸುತ್ತಾರೆ. ಅದಕ್ಕೆ ಉತ್ತರ - ಶವರ್ಮ ಗರ್ಭಾವಸ್ಥೆಯಲ್ಲಿ ಸುರಕ್ಷಿತವಲ್ಲ! ಏಕೆಂದರೆ ವೈದ್ಯರು ಹೇಳುವ ಪ್ರಕಾರ ಶವರ್ಮದಲ್ಲಿ ಸ್ಯಾಚುರೇಟೆಡ್ ಫಾಟ್ಸ್ ಗಳಿದ್ದು, ಅದು ನಿಮ್ಮ ರಕ್ತದ ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸಿ, ನಿಮ್ಮ ಸ್ನಾಯುಗಳು ಜಡಗೊಳ್ಳುವಂತೆ ಮಾಡುತ್ತದೆ. 

ವೈದ್ಯರು ಶವರ್ಮ ಸೇವನೆ ವಿರುದ್ಧ ಸಲಹೆ ನೀಡಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಕೆಲವು ಇಲ್ಲಿವೆ:

೧. ಆಹಾರದಿಂದ ನಂಜುಂಟಾಗುವುದು (ಫುಡ್ ಪಾಯ್ಸನಿಂಗ್):

ಶವರ್ಮ ಸ್ಟ್ರೀಟ್ ಫುಡ್ ಆಗಿರುವುದರಿಂದ, ಅದರಲ್ಲಿ ಹಲವಾರು ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳಿರುವ ಸಾಧ್ಯತೆ ಹೆಚ್ಚು. ಇದರಿಂದ ಸೋಂಕುಗಲುಂಟಾಗಬಹುದು. ಹಾಗಾಗಿ, ಗರ್ಭಾವಸ್ಥೆಯಲ್ಲಿ ಇದನ್ನು ಸೇವಿಸದೇ ಇರುವುದು ಸೂಕ್ತ. 

೨. ಕ್ಯಾನ್ಸರ್ ಉಂಟು ಮಾಡುವ ಸಾಧ್ಯತೆ: 

ಪ್ರಾಣಿಗಳ ಪ್ರೋಟೀನ್ ಹೆಚ್ಚಿರುವ ಆಹಾರ ಸೇವಿಸಿ, ತಾಜಾ ಹಣ್ಣು ಮತ್ತು ತರಕಾರಿಗಳನ್ನು ಕಡಿಮೆ ಸೇವಿಸುವುದರಿಂದ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಹಾಗಾಗಿ, ತಾಯಂದಿರು ಶವರ್ಮ ಸೇವಿಸದೇ ಇರುವುದು ಒಳಿತು. 

೩. ನೀರಿನಿಂದ ರೋಗ ಉಂಟಾಗಬಹುದು: 

ಸ್ಟ್ರೀಟ್ ಫುಡ್ ಗಳಲ್ಲಿ ಯಾವ ಬಗೆಯ ನೀರನ್ನು ಉಪಯೋಗಿಸಿರುತ್ತಾರೆ ಎನ್ನುವುದರ ಅರಿವು ನಿಮಗಿರುವುದಿಲ್ಲ. ಆ ನೀರು ಕಲುಷಿತಗೊಂಡಿರಬಹುದು. 

[Back To Top]

೪. ಗರ್ಭಾವಸ್ಥೆಯಲ್ಲಿ ಹುಮ್ಮ್ಯೂಸ್ ಸುರಕ್ಷಿತವೇ? (Is Hummus Safe During Pregnancy in Kannada)

ಸಾಮಾನ್ಯವಾಗಿ, ಹುಮ್ಮ್ಯೂಸ್ ಅನ್ನು ಕಡಲೆ ಮತ್ತು ಎಳ್ಳಿನ ಬೀಜಗಳನ್ನು ಅರೆದು ಮಾಡಿರುವ ತಹಿಣಿ ಉಪಯೋಗಿಸಿ ತಯಾರಿಸಲಾಗುತ್ತದೆ. ಈ ಸಾಮಗ್ರಿಗಳೊಂದಿಗೆ ನಿಂಬೆ ಹಣ್ಣು, ಮತ್ತು ಇತರ ಸೀಸೋನಿಂಗ್ ಗಳನ್ನೂ ಬಳಸಲಾಗುತ್ತದೆ. ಇವುಗಳು ಸಾಮಾನ್ಯವಾಗಿ ತಾಯಿಗೆ ಅಥವಾ ಮಗುವಿಗೆ ಯಾವುದೇ ರೀತಿಯ ಹಾನಿಯುಂಟು ಮಾಡುವುದಿಲ್ಲ. ಏಕೆಂದರೆ ಹುಮ್ಮ್ಯೂಸ್ ನಲ್ಲಿ ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಐರನ್, ವಿಟಮಿನ್, ಮತ್ತು ಫೋಲೇಟ್ ಗಳಿರುತ್ತವೆ. ಈ ಪೌಷ್ಟಿಕಾಂಶಕಗಳು ತಾಯಿ ಮತ್ತು ಬೆಳೆಯುತ್ತಿರುವ ಮಗುವನ್ನು ಪೋಷಿಸುತ್ತವೆ. ಹುಮ್ಮ್ಯೂಸ್ ನ ಕೆಲವು ಅರೋಗ್ಯ ಲಾಭಗಳು ಇಲ್ಲಿವೆ. 

೧. ಉರಿಯೂತದ ವಿರುದ್ಧ ಹೋರಾಡುತ್ತದೆ:

ಉರಿಯೂತ ನಿಮ್ಮ ದೇಹದ ರಕ್ಷಣಾ ಕಾರ್ಯವಿಧಾನ. ಅದು ನಿಮಗೆ ಉಂಟಾಗಬಹುದಾದ ಸೋಂಕು, ಗಾಯಗಳು ಮತ್ತು ಇತರೆ ರೋಗಗಳನ್ನು ತಡೆಗಟ್ಟುತ್ತದೆ. ಆದರೆ ಕಳವು ಬಾರಿ ಈ ಉರಿಯೂತ ಅಗತ್ಯವಿರುವ ಸಮಯಕ್ಕಿಂತ ಹೆಚ್ಚು ಕಾಲ ನಿಮ್ಮನ್ನು ಕಾಡಬಹುದು. ಇದನ್ನು ದೀರ್ಘಾವಧಿಯ ಉರಿಯೂತ ಎನ್ನುತ್ತಾರೆ. ಇದು ಉಂಟಾಗಬಹುದಾದ ಹಲವು ಗಂಭೀರ ಅರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹುಮ್ಮ್ಯೂಸ್ ನಲ್ಲಿರುವ ಪೌಷ್ಟಿಕತೆ ಈ ದೀರ್ಘಅವಧೂಯ ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. 

೨. ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ: 

ಹುಮ್ಮ್ಯೂಸ್ ನಲ್ಲಿರುವ ಹಲವು ಗುಣಲಕ್ಷಣಗಳು ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತಿಸುವಲ್ ಸಹಾಯ ಮಾಡತ್ತದೆ. ಹುಮ್ಮ್ಯೂಸ್ ನಲ್ಲಿರುವ ಕಡಲೆ ಕಡಿಮೆ ಗ್ಲಿಸೆಮಿಕ್ ಇಂಡೆಕ್ಸ್ ಹೊಂದಿದ್ದು, ಅದು ನಿಮ್ಮ ಆಹಾರದಲ್ಲಿರುವ ಸಕ್ಕರೆ ಮಟ್ಟವನ್ನು ಅಳೆಯುವಲ್ಲಿ ಸಹಾಯ ಮಾಡುತ್ತದೆ. 

೩. ಹೃದಯಕ್ಕೆ ಸಂಬಂಧಿತ ರೋಗಗಳನ್ನು ತಡೆಯುತ್ತದೆ:

ಇಡೀ ಜಗತ್ತಿನಲ್ಲಿ ಪ್ರತಿ ೪ ಸಾವುಗಳಲ್ಲಿ ೧ ಸಾವು ಹೃದಯ ಸಂಬಂಧಿತ ರೋಗಗಳಿಂದ ಉಂಟಾಗುತ್ತದೆ. ಹುಮ್ಮ್ಯೂಸ್ ನಲ್ಲಿರುವ ಹಲವು ಸಾಮಗ್ರಿಗಳು ಈ ಹೃದಯ ಸಂಬಂಧಿತ ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. 

೪. ಆರೋಗ್ಯಕರ ದೇಹದ ತೂಕವನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ:

ಹುಮ್ಮ್ಯೂಸ್ ನಿಮ್ಮ ದೇಹದ ತೂಕವನ್ನು ಕಡಿಮೆಗೊಳಿಸಿ, ಅದನ್ನು ಅಗತ್ಯವಿರುವ ಮಟ್ಟದಲ್ಲಿ ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ. 

[Back To Top]

೫. ನಿರ್ಣಯ (Conclusion in Kannada):

ಶವರ್ಮ ಒಂದು ಬಗೆಯ ಸ್ಟ್ರೀಟ್ ಫುಡ್ ಆಗಿರುವ ಕಾರಣ ಗರ್ಭಿಣಿಯರು ಈ ಆಹಾರದಿಂದ ದೂರವಿರುವುದು ಒಳಿತು. ಏಕೆಂದರೆ ಗರ್ಭಾವಸ್ಥೆಯಲ್ಲಿ ಪ್ರತಿ ಹೆಣ್ಣಿನ ದೇಹಕ್ಕೆ ಕ್ಯಾಲ್ಸಿಯಂ, ಪೋರ್ಟನ್ನ್ಸ್, ಮತ್ತು ಐರನ್ ಗಳಂತಹ ಪೌಷ್ಟಿಕತೆಯ ಅಗತ್ಯವಿರುತ್ತದೆ. ಹಾಗಾಗಿ, ಶವರ್ಮದಂತಹ ಲಘು ಆಹಾರದ ಸೇವನೆ ಗರ್ಭಾವಸ್ಥೆಯಲ್ಲಿ ಸುರಕ್ಷಿತವಲ್ಲ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon