Link copied!
Sign in / Sign up
3
Shares

ಗರ್ಭಾವಸ್ಥೆಯಲ್ಲಿ ಶುಂಠಿ ರಸದ ೧೦ ಲಾಭಗಳು (10 Benefits Of Ginger Juice During Pregnancy in Kannada)

ಶುಂಠಿ, ಭಾರತೀಯ ಪಾಕಪದ್ಧತಿಯಲ್ಲಿ ವ್ಯಾಪಕವಾಗಿ ಬಳಸಲಾಗುವ ಘಟಕಾಂಶವಾಗಿದೆ. ಇದು ಆಹಾರವನ್ನು ಸುವಾಸನೆಭರಿತ ಮತ್ತು ಸ್ವಾದಿಷ್ಟವಾಗಿಸುವುದಷ್ಟೇ ಅಲ್ಲದೇ, ಆಹಾರಕ್ಕೆ ಪರಿಮಳವನ್ನೂ ನೀಡುತ್ತದೆ. ಜನಪ್ರಿಯತೆ ಪಡೆದಿರುವ ಭಾರತೀಯ ಮಸಾಲೆ ಪದಾರ್ಥ, ಶುಂಠಿ, ಅನೇಕ ಔಷಧಿಗಳಲ್ಲಿ ಉಪಯೋಗವಾಗುತ್ತದೆ. ಶುಂಠಿ ಹಲವಾರು  ಪ್ರಯೋಜನಗಳನ್ನು ಹೊಂದಿದ್ದು, ಒಂದು ಸೂಕ್ತವಾದ  ಮನೆಮದ್ದಾಗಿದೆ. 

ಶುಂಠಿಯ ಅಸಂಖ್ಯಾತ  ಪ್ರಯೋಜನಗಳು ಮತ್ತು ಸ್ವಾದದೊಂದಿಗೆ, ಶುಂಠಿಯ ಬೇರನ್ನೂ ಒಳಗೊಂಡು, ಎಲ್ಲಾ ಭಾಗಗಳು ಪೌಷ್ಠಿಕತೆಯಿಂದ ತುಂಬಿದೆ. ಶುಂಠಿಯ ಘಟಕಾಂಶಗಳಾದ ಜಿಂಜರಾಲ್, ಶೋಗವ್ಳ್ ಮತ್ತು ಪೆರಡಾಲ ಇದರ ಉರಿಯೂತದ ವಿರೋಧಿ ಗುಣಲಕ್ಷಣಗಳಿಗೆ ಕಾರಣವಾಗುತ್ತವೆ. ಇದು ಆಂಟಿಆಕ್ಸಿಡೆಂಟ್ಸ್ ಗಳನ್ನೂ ಹೊಂದಿದ್ದು, ಹಲವಾರು ಅರೋಗ್ಯ ಲಾಭಗಳಿಗೆ ಕಾರಣವಾಗಿದೆ. 

ಶುಂಠಿ ಸಂಪೂರ್ಣ ಪಾಕಸಾಮಗ್ರಿಯಾಗಿದ್ದು, ನಿಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ಸುಧಾರಿಸುವುದರೊಂದಿಗೆ ನಿಮ್ಮ ತೂಕವನ್ನು ಇಳಿಸುವಲ್ಲಿ ಸಹಾಯ ಮಾಡುತ್ತದೆ. ಶುಂಠಿಯ ಅರೋಗ್ಯ ಪ್ರಯೋಜನಗಳು ಯಾವುದೇ ಬಗೆಯ ರಹಸ್ಯವಾಗಿ ಉಳಿದಿಲ್ಲ. ಇವುಗಳ ಬಗ್ಗೆ ೧೩ನೇ ಶತಮಾನದಿಂದ ತಿಳಿದಿದೆ. ಎಲ್ಲಾ ಜೀವರಾಶಿಗಳಿಗೂ ಒಳಿತು ಮಾಡುವ ಶುಂಠಿ, ಗರ್ಭಾವಸ್ಥೆಯಲ್ಲಿ ಅತ್ಯುತ್ತಮ. 

ಪರಿವಿಡಿ: 

೧. ಶುಂಠಿ ರಸದ ಪೌಷ್ಟಿಕ ಮೌಲ್ಯ (Nutritional Value Of Ginger Juice in Kannada)

೨. ಶುಂಠಿ ರಸವನ್ನು ಹೇಗೆ ತಯಾರಿಸಬೇಕು? (How To Make Ginger Juice? in Kannada)

೩. ಶುಂಠಿ ರಸದ ಲಾಭಗಳು (Benefits Of Ginger Juice in Kannada)

೪. ಶುಂಠಿ ರಸದ ಅಡ್ಡಪರಿಣಾಮಗಳು (Side Effects Of Ginger Juice in Kannada)

೫. ನಿರ್ಣಯ (Conclusion in Kannada)

೧. ಶುಂಠಿ ರಸದ ಪೌಷ್ಟಿಕ ಮೌಲ್ಯ (Nutritional Value Of Ginger Juice in Kannada):

ಮೊದಲೇ ತಿಳಿಸಿರುವಂತೆ ಒಂದು ಕಪ್ ಶುಂಠಿ ರಸದಲ್ಲಿ ೧.೦೭ ಗ್ರಾಂ ಕಾರ್ಬೋಹೈಡ್ರೇಟ್, ೧೨ ಗ್ರಾಂ ಡೈಟರಿ ಫೈಬರ್, ೧೧ ಗ್ರಾಂ ಪ್ರೋಟೀನ್ ಮತ್ತು ವಿಟಮಿನ್ ಬಿ೩ ಮತ್ತು ಬಿ೬, ಐರನ್, ಮೆಗ್ನೀಷಿಯಂ, ಫೋಲೇಟ್, ಮತ್ತು ನಿಯಾಸಿನ್ ನಂತಹ ವಿವಿಧ ಮಟ್ಟದ ವಿಟಮಿನ್ ಮತ್ತು ಮಿನರಲ್ಸ್ ಗಳನ್ನೂ ಹೊಂದಿದೆ. 

೨. ಶುಂಠಿ ರಸವನ್ನು ಹೇಗೆ ತಯಾರಿಸಬೇಕು? (How To Make Ginger Juice? in Kannada)

* ಶುಂಠಿ ಸುಲಿದು, ತುಂಡರಿಸಿ. ನಂತರ ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. 

* ನೀರನ್ನು ಸೇರಿಸಿ ಅದನ್ನು ಗ್ರೈಂಡರ್ ಅಥವಾ ಅರೆಯುವ ಯಂತ್ರದಲ್ಲಿ ಅರೆಯಿರಿ. 

* ಶುಂಠಿ ರಸದಲ್ಲಿರುವ ಗಟ್ಟಿ ಪದಾರ್ಥವನ್ನು ತೆಗೆದುಹಾಕಲು, ರಸವನ್ನು ಸೋಸಿರಿ. 

* ಅರ್ಧ ನಿಂಬೆಹಣ್ಣನ್ನು ಹಿಂಡಿಕೊಂಡು, ಅದನ್ನು ಸ್ವಾದಿಷ್ಟಕರವಾಗಿ ಮತ್ತು ಆರೋಗ್ಯಕರವಾಗಿ ಮಾಡಿಕೊಳ್ಳಿ. 

* ಈ ರಸದಿಂದಾಗಿ ನಿಮ್ಮ ಹೊಟ್ಟೆಯಲ್ಲಿ ಉಷ್ಣ ವಿಪರೀತ ಅನ್ನಿಸಿದರೆ, ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ. 

[Back To Top]

೩. ಶುಂಠಿ ರಸದ ಲಾಭಗಳು (Benefits Of Ginger Juice in Kannada):

ಶುಂಠಿ ರಸವನ್ನು ಸುಲಭವಾಗಿ ತಯಾರಿಸಬಹುದಾಗಿದ್ದು, ಆರೋಗ್ಯಕರ ಸಹ. ಆದರಿಂದ ಅವುಗಳ ಅರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

೧. ಶುಂಠಿಯ ಉರಿಯೂತದ ವಿರೋಧಿ ಗುಣಲಕ್ಷಣ:

ನಮ್ಮ ದೇಹದ ನೈಸರ್ಗಿಕ ಮತ್ತು ಸ್ವಯಂ ಸಂರಕ್ಷಣೆ ಕಾರ್ಯಗಳಲ್ಲಿ ಒಂದು ಉರಿಯೂತ. ಶುಂಠಿಯಲ್ಲಿರುವ ಜೈವಿಕ ಶಕ್ತಿಯ ವಿರೋಧಿ ಘಟಕಾಂಶವಾಗಿರುವ ಜಿಂಜೆರಾಲ್ ಹೆಚ್ಚಿನ ಔಷಧೀಯ ಗುಣವನ್ನು ಹೊಂದಿದ್ದು, ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. 

ಬಡಆಹಾರ ಪದ್ಧತಿ ಮತ್ತು ಕ್ರಿಯಾತ್ಮಕ ಜೀವನಶೈಲಿ ಹೊಂದಿರುವವರು ಸ್ನಾಯು ನೋವು ಉಂಟು ಮಾಡುವ ದೀರ್ಘಕಾಲಿಕ ಉರಿಯೂತವನ್ನು ಪ್ರತಿದಿನ ಶುಠಿ ರಸವನ್ನು ಸೇವಿಸುವುದರಿಂದ ಕಡಿಮೆಗೊಳಿಸಬಹುದು. ಹಾಗಾಗಿ, ಗರ್ಭಾವಸ್ಥೆಯಲ್ಲಿ ಸ್ನಾಯು ನೋವುಗಳನ್ನು ತಡೆಗಟ್ಟವು ಶುಂಠಿ ರಸ ದೇಹಕ್ಕೆ ಒಂದು ವರದಂತಾಗುತ್ತದೆ. 

೨. ಶುಂಠಿ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ: 

ಶುಂಠಿ ಅತ್ಯಂತ ಹಳೆಯ ಪ್ರಯೋಜನಗಳಲ್ಲಿ  ಒಂದು - ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು. ಶುಂಠಿಯ ರೈಜೋಮ್ ಘಟಕಾಂಶ ಇನ್ಸುಲಿನ್ ಸೇವಿಸದೇ ಸ್ನಾಯುವಿನ ಜೀವಕೋಶಗಳು ಗ್ಲುಕೋಸ್ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿ ದಿನ ಶುಂಠಿ ರಸವನ್ನು ಸೇವಿಸುವುದರಿಂದ, ನಿಮ್ಮ ದೇಹದ ಅಗತ್ಯತೆಗಳ ಬಗ್ಗೆ ಕಾಳಜಿ ವಹಿಸಿ, ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಭಾಯಿಸುವಲ್ಲಿ ಸಹಾಯ ಮಾಡುತ್ತದೆ. 

೩. ಶುಂಠಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ಶುಂಠಿಯಲ್ಲಿರುವ ವಿಟಮಿನ್ ಸಿ ಬಿಳಿ ರಕ್ತಕಣಗಳನ್ನು ಹೆಚ್ಚಿಸಿ, ರೋಗ ನಿರೋಧಕ ಶಕ್ತಿಯನ್ನು ವರ್ಧಿಸುವಲ್ಲಿ ಸಹಾಯ ಮಾಡುತ್ತದೆ. ಬಿಳಿ ರಕ್ತಕಣಗಳು ಎಲ್ಲಾ ರೀತಿಯ ಹಾನಿಕಾರಕ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಿ, ನಿಮ್ಮ ದೇಹಕ್ಕೆ ಉಂಟಾಗಬಹುದಾದ ರೋಗಗಳನ್ನು ತಡೆಗಟ್ಟುತ್ತದೆ. ಗರ್ಭಾವಸ್ಥೆಯಲ್ಲಿ ಬಲಿಷ್ಠವಾದ ರೋಗನಿರೋಧಕ ಶಕ್ತಿಯನ್ನು ಹೊಂದುವುದು ಅನಿವಾರ್ಯ. ಹಾಗಾಗಿ, ಪ್ರತಿ ದಿನ ಶುಂಠಿ ರಸವನ್ನು ಕಡಿಯುವುದು ಒಳಿತು. ಇದು ನಿಮ್ಮ ದೇಹ ವೇಗವಾಗಿ ಚೇತರಿಸಿಕೊಳ್ಳಲೂ ಸಹಾಯ ಮಾಡುತ್ತದೆ. 

೪. ಶುಂಠಿ ಮೊಡವೆ ತೊಂದರೆಯನ್ನು ನಿವಾರಿಸುತ್ತದೆ:

ಉರಿಯೂತದ ವಿರೋಧಿ ಘಟಕಾಂಶಗಳನ್ನು ಹೊಂದಿರುವ ಶುಂಠಿ ರಸ ಉರಿಯಿಂದ ಕೂಡಿರುವ ಮೊಡವೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಮೊಡವೆಗಳು ಪುನರಾವರ್ತಿತಗೊಳ್ಳುವಂತೆ ಸಹ ಶುಂಠಿ ತಡೆಗಟ್ಟುತ್ತದೆ. 

೫. ಶುಂಠಿ ಮುಪ್ಪಿನ ವಿರೋಧಿ:

ಶುಂಠಿ ರಸದಲ್ಲಿ ಪ್ರಾಯಶಃ ೪೦ ಆಂಟಿಆಕ್ಸಿಡೆಂಟ್ ಗಳಿದ್ದು, ಫ್ರೀ ರಾಡಿಕಲ್ ಹಾನಿಯನ್ನು ತಡೆಗಟ್ಟುತ್ತದೆ. ಇದರಿಂದಾಗಿ ನಿಮ್ಮ ಮುಖದ ಚರ್ಮ ಮುಪ್ಪಾದರದಂತೆ ಕಾಪಾಡುತ್ತದೆ. ಅದರೊಂದಿಗೆ, ಇದು ನಿಮ್ಮ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಿ, ನಿಮ್ಮ ಚರ್ಮ ಹೊಳೆಯುವಂತೆ ಮಾಡುತ್ತದೆ. ಸ್ನಾಯುಗಳನ್ನು ಯೌವ್ವನಭರಿತವಾಗಿ ಇರಿಸಲು ಚರ್ಮಶಾಸ್ತ್ರಜ್ಞರು ಸೂಚಿಸುವ ಅತ್ಯಂತ ಹಳೆಯ ಔಷಧಿಗಳಲ್ಲಿ ಒಂದು, ಶುಂಠಿ ರಸ. 

[Back To Top]

೬. ಶುಂಠಿ ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ:

ಶುಂಠಿ ಅತ್ಯತ್ತಮ ಪ್ರಯೋಜನಗಳಲ್ಲಿ ಒಂದು, ಅದು ಸಕ್ರಿಯವಾದ ಏಜೆಂಟ್ ಆಗಿದ್ದು, ನಿಮ್ಮ ದೇಹದ ಜೀರ್ಣಕ್ರಿಯೆಯಲ್ಲಿ ಭಾಗವಹಿಸುತ್ತದೆ. 

ನಿಮ್ಮ ಆಹಾರದ ಜೀರ್ಣಕ್ರಿಯೆಯನ್ನು ಶುಂಠಿ ರಸವನ್ನು ಸೇವಿಸುವುದರಿಂದ ಸುಧಾರಿಸಬಹುದು. ಏಕೆಂದರೆ ಅದರಲ್ಲಿ ನೈಸರ್ಗಿಕವಾದ ಕಿಣ್ವಗಳು ಇದ್ದು, ಅವುಗಳು ನಿಮ್ಮ ದೇಹದ ಫ್ಯಾಟ್ ಮತ್ತು ಪೌಷ್ಟಿಕಾಂಶಗಳನ್ನು ಸೂಕ್ತವಾಗಿ ಹೀರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಶುಂಠಿ ರಸ ಸೇವಿಸಿದ ಕೆಲವೇ ಕ್ಷಣಗಳಲ್ಲಿ ದೇಹದಲ್ಲಿ ವಿಪರೀತ ಉಷ್ಣದ ಭಾವ ಉಂಟಾಗುವುದು ಸಹಜ. ಶುಂಠಿ ಜೀರ್ಣಕ್ರಿಯೆಗೆ ಉತ್ತಮವಾಗಿದ್ದು, ದೇಹದಲ್ಲಿರುವ ವಿಷಾದ ಅಂಶವನ್ನು ಸುಲಭವಾಗಿ ಒಡೆಯುತ್ತದೆ. ಗರ್ಭಾವಸ್ಥೆಯಲ್ಲಿ ಸಹ ಶುಂಠಿ ರಸವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯಲ್ಲಿ ಅತ್ಯಂತ ಉಪಕಾರಿಯಾಗುತ್ತದೆ. 

೭. ಶುಂಠಿ ಮೆದುಳಿನ ಕಾರ್ಯ ರೀತಿಯನ್ನು ವೃದ್ಧಿಸುತ್ತದೆ:

ಆಕ್ಸಿಡೇಟಿವ್ ಒತ್ತಡ ಮತ್ತು ತೀವ್ರವಾದ ಉರಿಯೂತ ನಿಮ್ಮ ಮೆದುಳಿನ ಮೇಲೆ ಸಾಕಷ್ಟು ಒತ್ತಡವನ್ನು ಉಂಟು ಮಾಡಬಹುದು. ಇದರ ಕಾರಣದಿಂದಾಗಿ ಅಲ್ಜಿಮರ್ಸ್ ರೋಗ ಕೂಡಾ ಉಂಟಾಗಬಹುದು. ಶುಂಠಿ ರಸದಲ್ಲಿರುವ ಉರಿಯೂತದ ವಿರೋಧಿ ಲಕ್ಷಣ ಮತ್ತು ಆಂಟಿಆಕ್ಸಿಡೆಂಟ್ಸ್ ಗಳು ನಿಮ್ಮ ಮೆದುಳಿನ ಸೂಕ್ತ ಕಾರ್ಯನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. 

೮. ಶುಂಠಿ ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಸಹಾಯ ಮಾಡುತ್ತದೆ:

ಶುಂಠಿಯ ಜಿಂಜೆರೋಲ್ ಅತ್ಯುನ್ನತವಾದ ಜೈವಿಕವಾಗಿ ಸಕ್ರಿಯವಾಗಿರುವ ಪದಾರ್ಥ. ಅದು ಸೋಂಕುಗಳನ್ನು ತಡೆಗಟ್ಟುತ್ತದೆ. ಶುಂಠಿ ಈ ಪ್ರಮುಖ ಅರೋಗ್ಯ ಲಾಭದಿಂದಾಗಿಯೇ ಇದನ್ನು ಆಯುರ್ವೇದದ ಔಷಧಿಗಳಲ್ಲಿ ಒಂದು ಸಾಮಗ್ರಿಯಾಗಿ ಬಳಸಲಾಗುತ್ತದೆ. 

೮. ಶುಂಠಿ ಮೂತ್ರಪಿಂಡದ ಕಲ್ಲುಗಳನ್ನು ನಿವಾರಿಸುತ್ತದೆ:

ಶುಂಠಿ ರಸದೊಂದಿಗೆ ನಿಂಬೆ ಸೇರಿಸುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ನಿವಾರಿಸಬಹುದು. ಶುಂಠಿ ರಸವನ್ನು ಪ್ರತಿರಾತ್ರಿ ಸೇವಿಸುವುದರಿಂದ, ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ತಡೆಗಟ್ಟಬಹುದು. ನಿಂಬ ರಸ ಮತ್ತು ಶುಂಠಿ ರಸ ಮೂತ್ರದಲ್ಲಿರುವ ಸಿಟ್ರೇಟ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಕ್ಯಾಲ್ಸಿಯಂ ಕಲ್ಲುಗಳನ್ನು ಒಡೆಯುವಲ್ಲಿ ಮತ್ತು ಮೂತ್ರಪಿಂಡದೊಳಗೆ ಅದರ ರಚನೆಯನ್ನು ತಡೆಗಟ್ಟುವಲ್ಲಿ, ಸಹಾಯ ಮಾಡುತ್ತದೆ. 

೯. ಶುಂಠಿ ರಕ್ತ ಸಂಚಲನವನ್ನು ಸುಧಾರಿಸುತ್ತದೆ:

ಶುಂಠಿ ರಸದಲ್ಲಿರುವ ವಿಟಮಿನ್ಸ್, ಮಿನರಲ್ಸ್ ಮತ್ತು ಅಮೈನೊ ಆಮ್ಲಗಳು ನಿಮ್ಮ ದೇಹಸ್ಥಿತಿಯನ್ನು ಸುಧಾರಿಸಿ, ನಿಮ್ಮ ದೇಹದ ರಕ್ತ ಸಂಚಲನವನ್ನು ಮೊದಲ ಸ್ಥಿತಿಗೆ ತರುತ್ತದೆ. 

ಕೆಟ್ಟ ರೀತಿಯ ರಕ್ತ ಸಂಚಲನದಿಂದ ಹೃದಯ ರಕ್ತನಾಳಗಳಿಗೆ ಸಂಬಂಧಿತ ರೋಗಗಳು ಉಂಟಾಗಿ, ಸಾವಿಗೆ ಕಾರಣವಾಗಬಹುದು. ಆದರೆ ಶುಂಠಿ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ, ಅದು ನಿಮ್ಮ ದೇಹದಲ್ಲಿ ಕೊಬ್ಬು ಸಂಗ್ರಹಿಸದಂತೆ ಮತ್ತು ಅಪಧಮನಿಗಳಲ್ಲಿ ಶೇಖರಿಸುವುದನ್ನು ತಡೆಗಟ್ಟುತ್ತದೆ. ಇದರಿಂದ ಹೃದಯಾಘಾತವನ್ನು ತಡೆಗಟ್ಟಬಹುದು. 

[Back To Top]

೪. ಶುಂಠಿ ರಸದ ಅಡ್ಡಪರಿಣಾಮಗಳು (Side Effects Of Ginger Juice in Kannada):

ಶುಂಠಿ ಸಾರ್ವಕಾಲಿಕ ಅರೋಗ್ಯಕರ ರಸಗಳಲ್ಲಿ ಒಂದಾಗಿದೆ. ಅದು ಅತೀ ಕಡಿಮೆ ಅಡ್ಡಪರಿಣಾಮಗಳನ್ನು ಹೊಂದಿದೆ. ಆದರೆ ಕೆಲವರಲ್ಲಿ ಶುಂಠಿ ರಸ ಕೆಲವುಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ಉದಾಹರೆಣೆಗೆ ಹೊಟ್ಟೆ ಉರಿ, ಬೇಧಿ, ಹೊಟ್ಟೆ ಅಸಮಾಧಾನ. ಈ ರೀತಿಯ ಸಮಸ್ಯೆ ನಿಮಗೆ ಎದುರಾದರೆ ಶುಂಠಿ ರಸವನ್ನು ಸೇವಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯುವುದು ಒಳಿತು. 

ಶುಂಠಿಯನ್ನು ಮಿತವಾಗಿ ಸೇವಿಸಿದರೆ, ಅದು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿರುವುದುಇಲ್ಲ. ಆದರೆ ಪ್ರತಿ ಮಾನವನ ದೇಹ ವಿಭಿನ್ನವಾಗಿರುತ್ತದೆ. ಹಾಗೆಯೆ ಅದರ ಹೊಂದಿಕೊಳ್ಳುವ ಗುಣ ಸಹ. ಶುಂಠಿ ರಸವನ್ನು ಚರ್ಮಕ್ಕೆ ಹಚ್ಚಿದರೂ ಸುರಕ್ಷಿತವಾಗಿರುತ್ತದೆ. ಆದರೆ ಸೂಕ್ಷ್ಮ ಚರ್ಮ ಹೊಂದಿರುವ ಕೆಲವರಲ್ಲಿ ಇದು ಕಿರಿಕಿರಿ ಉಂಟುಮಾಡಬಹುದು. 

ಶುಂಠಿಯ ಅಡ್ಡಪರಿಣಾಮಗಳಲ್ಲಿ ಒಂದು - ಮುಟ್ಟಿನ ರಕ್ತಸ್ರಾವ ಹೆಚ್ಚಿಸುವುದು. ಹಾಗಾಗಿ ಮುಟ್ಟಿನ ಸಮಯದಲ್ಲಿ ಇದನ್ನು ಸೇವಿಸದೇ ಇರುವುದು ಒಳಿತು. ನೀವು ಈಗಾಗಲೇ ರಕ್ತದ ಸಕ್ಕರೆ ಮಟ್ಟವನ್ನು ತಡೆಗಟ್ಟುವ ಔಷಧಿ ತೆಗೆದುಕೊಳ್ಳುತ್ತಿದ್ದರೆ, ಶುಂಠಿ ರಸವನ್ನು ಸೇವಿಸುವ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಏಕೆಂದರೆ ಶುಂಠಿ ರಸ ಕೂಡ ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದರಿಂದ, ಅದು ನಿಮ್ಮ ದೇಹಕ್ಕೆ ಲಾಭವಾಗದೇ ಅಡ್ಡಪರಿಣಾಮವಾಗಿ ಬೀರಬಹುದು. 

[Back To Top]

೫. ನಿರ್ಣಯ (Conclusion in Kannada):

ಶುಂಠಿ ಭಾರತೀಯ ಮಸಾಲೆಗಳಲ್ಲಿ ಒಂದಾಗಿದ್ದು, ಅದ್ಭುತ ಮೂಲಿಕೆ ಮತ್ತು ಅತ್ಯುತ್ತಮ ನೈಸರ್ಗಿಕ ಮನೆಮದ್ದಾಗಿದೆ. ಶುಂಠಿ ಅರೋಗ್ಯ ಸ್ವಾದಿಷ್ಟ ರುಚಿಯನ್ನು ತರುವುದಷ್ಟೇ ಅಲ್ಲದೇ ನಮ್ಮ ಆರೋಗ್ಯಕ್ಕೂ ವಿವಿಧ ರೀತಿಯಲ್ಲಿ ಸಹಾಯ ಮಾಡಿದೆ. ಶುಂಠಿ ರಸ ಅರೋಗ್ಯ ಪ್ರಯೋಜನಗಳು ಪ್ರಮುಖವಾಗಿದೆ. ಗರ್ಭಾವಸ್ಥೆಯಲ್ಲಿ ಸಹ ಬಹು ಉಪಯೋಗಕಾರಿ ಪಾನೀಯವಾಗಿದೆ. 

ನಿಮ್ಮ ದಿನನಿತ್ಯದ ಆಹಾರದಲ್ಲಿ ಶುಂಠಿ ರಸವನ್ನು ಸೇರಿಸಿ, ಅದರಿಂದಾಗುವ ನಿಮ್ಮ ಆರೋಗ್ಯದ ಗಮನಾರ್ಹ ಬದಲಾವಣೆಗಳನ್ನು ಗಮನಿಸಿ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon