ಗರ್ಭಾವಸ್ಥೆಯಲ್ಲಿ ಮಸಾಲೆಯುಕ್ತ ಆಹಾರ: ನಿಮಗೆ ಮತ್ತು ನಿಮ್ಮ ಮಗುವಿಗೆ ಇದು ಸುರಕ್ಷಿತವೇ? (Spicy Food During Pregnancy: Is It Safe For You And The Baby? in Kannada)
ಗರ್ಭಾವಸ್ಥೆ ಪ್ರತಿ ಹೆಣ್ಣಿನ ಜೀವನದ ಅತ್ಯಮೂಲ್ಯ ಗಳಿಗೆ. ಈ ಅವಧಿ ಕೇವಲ ನೀವು ಹೆಚ್ಚಿನ ನಿರೀಕ್ಷೆಯೊಂದಿಗೆ ಅನುಭವಿಸುವ ಸುಂದರ ರೂಪಾಂತರವಷ್ಟೇ ಅಲ್ಲದೆ, ಹೆಚ್ಚಿನ ಕಾಲಜಿ ಹಾಗೂ ಜಾಗರೂಕತೆಯನ್ನು ವಹಿಸಬೇಕಾದ ಸಮಯ. ಆದರೆ, ಯಾರಾದರೂ ಗರ್ಭಾವಸ್ಥೆಯಲ್ಲಿ ಉಂಟಾಗುವ ಮೂಡ್ ನ ಬದಲಾವಣೆ ಅಥವಾ ಹಠಾತ್ತಾಗಿ ಉಂಟಾಗುವ ಹೊಟ್ಟೆ ಹಸಿವನ್ನು ಯಾರಾದರೂ ನಿರ್ಲಕ್ಷಿಸಲಾಗಬಹುದೇ?
ಮಸಾಲೆಯುಕ್ತ ಆಹಾರವನ್ನು ಯಾರೂ ತಾನೇ ಇಷ್ಟ ಪಡುವುದಿಲ್ಲ? ಭಾರತೀಯ ಮಸಾಲೆಗಳ ವಾಸನೆ ಎಂಥವರಿಗಾದರೂ ಹೊಟ್ಟೆ ಹಸಿಯುವಂತೆ ಮಾಡುತ್ತದೆ. ಹಾಗಾಗಿ, ಹಠಾತ್ತಾಗಿ ಹೊಟ್ಟೆ ಹಸಿಯುವುದು ಮತ್ತು ಮಸಾಲೆಯುಕ್ತ ಆಹಾರ ಸೇವಿಸಬೇಕೆಂಬ ಆಸೆ ಹುಟ್ಟುವುದು ಅಸ್ವಾಭಾವಿಕವೇನೂ ಅಲ್ಲ. ಆದರೆ, ಸಹಜವಾನ್ ಪ್ರತಿಯೊಬ್ಬರಿಗೂ ಇದರ ಕುರಿತಾಗಿ ಕೆಅಲ್ವು ಪ್ರಶ್ನೆಗಳು ಕಾಡುವುದು ಸಹಜ - ಮಸಾಲೆಯುಕ್ತ ಆಹಾರ ಗರ್ಭಾವಸ್ಥೆಯಲ್ಲಿ ಸುರಕ್ಷಿತವೇ? ಅದು ನನ್ನ ಮಗುವಿಗೆ ಹಾನಿ ಉಂಟು ಮಾಡಬಹುದೇ? ಬಹುಶಃ ಮಸಾಲೆಯುಕ್ತ ಆಹಾರವನ್ನು ಗರ್ಭಾವಸ್ಥೆಯಲ್ಲಿ ಸೇವಿಸುವುದು ಒಳ್ಳೆಯ ವಿಚಾರ ಅಲ್ಲವೇನೋ?
ಪರಿವಿಡಿ:
೧. ನೀವು ಕೇಳುವ ಕಟ್ಟುಕತೆಗಳು (Myths That You Might Hear in Kannada)
೭. ನಿರ್ಣಯ (Conclusion in Kannada)
ಗರ್ಭಾವಸ್ಥೆಯಲ್ಲಿ ಮಸಾಲೆಯುಕ್ತ ಆಹಾರ ತಿನ್ನದಿರುವುದು ಸೂಕ್ತ ಎನ್ನುವ ವಿಚಾರ ಕೇಳಿ, ನೀವು ದುಃಖತಪ್ತರಾಗಿ ಮಸಾಲೆಯುಕ್ತ ಆಹಾರದ ಕುರಿತಾಗಿ ನಿಮಗಿರುವ ಕಡುಬಯಕೆಗಳನ್ನು ನಿಯಂತ್ರಿಸುವ ಮುನ್ನ, ಮಸಾಲೆಯುಕ್ತ ಆಹಾರದಿಂದಾಗುವ ಪರಿಣಾಮಗಳ ಬಗ್ಗೆ ಮೊದಲು ತಿಳಿದುಕೊಳ್ಳುವುದು ಒಳ್ಳೆಯದಲ್ಲವೇ? ಅದು ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆಯೇ?
ತಿಳಿದುಕೊಳ್ಳಲು ಈ ಲೇಖನ ಓದಿ.
೧. ನೀವು ಕೇಳುವ ಕಟ್ಟುಕತೆಗಳು (Myths That You Might Hear in Kannada):

ಗರ್ಭಾವಸ್ಥೆಯಲ್ಲಿ ನಿಮಗಿಂತ ಅನುಭವ ಹೆಚ್ಚಿರಬಹುದು ಎನ್ನಿಸುವ ನಿಮ್ಮ ಸ್ನೇಹಿತರು, ಬಂಧುಗಳು, ನೆರೆಯವರು ಗರ್ಭಾವಸ್ಥೆಯಲ್ಲಿ ನಿಮಗೆ ಯಾವ ಆಹಾರ ಒಳ್ಳೆಯದು, ಯಾವುದು ಕೆಟ್ಟದ್ದು ಎನ್ನುವುದರ ಬಗ್ಗೆ ಉಪದೇಶಿಸಲು ಬರಬಹುದು. ಗರ್ಭಾವಸ್ಥೆಯಲ್ಲಿ ಮಸಾಲೆಯುಕ್ತ ಆಹಾರವನ್ನು ತಿನ್ನುವುದನ್ನು ಸಂಪೂರ್ಣವಾಗಿ ನಿರಾಕರಿಸುವ ಜನರನ್ನು ಸಹ ನೀವು ಕಾಣಬಹುದು.
ಗರ್ಭಾವಸ್ಥೆಯಲ್ಲಿ ಮಸಾಲೆಯುಕ್ತ ಆಹಾರ ಸೇವಿಸುವ ಬಗ್ಗೆ ಕಾಡುವ ಹಲವಾರು ಕಟ್ಟುಕತೆಗಳಲ್ಲಿ ಕೆಲವು ಇಲ್ಲಿವೆ:
* ಗರ್ಭಾವಸ್ಥೆಯ ಪ್ರಥಮ ತ್ರೈಮಾಸಿಕದಲ್ಲಿ ಮಸಾಲೆಯುಕ್ತ ಆಹಾರ ಸೇವಿಸಿದರೆ, ಅದು ನಿಮ್ಮ ಹಾಗೂ ನಿಮ್ಮ ಮಗುವಿನ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.
* ಅನೇಕ ಗರ್ಭಿಣಿಯರು ಮಸಾಲೆಯುಕ್ತ ಆಹಾರ ಸೇವನೆಯಿಂದ ಗರ್ಭಪಾತವನ್ನು ಅನುಭವಿಸುತ್ತಾರೆ. ಹಾಗಾಗಿ, ಮಸಾಲೆಯುಕ್ತ ಆಹಾರವನ್ನು ಯಾವುದೇ ಕಾರಣಕ್ಕೂ ತಿನ್ನದೇ ಇರುವುದು ಸೂಕ್ತ.
* ಮಸಾಲೆಯುಕ್ತ ಆಹಾರ ಸೇವನೆಯಿಂದ ಮಗುವಿನ ಅಕಾಲಿಕ ಜನನವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಅದನ್ನು ಸೇವಿಸದೇ ಇರುವುದು ಒಳಿತು.
* ಮಸಾಲೆಯುಕ್ತ ಆಹಾರ ಸೇವನೆಯಿಂದ ಮಗು ಹುಟ್ಟಿದ ತಕ್ಷಣದಿಂದಲೇ ಅರೋಗ್ಯ ತೊಂದರೆಗಳಿಂದ ಬಳಲುವಂತಾಗಬಹುದು.
ಆದರೆ, ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ - ಕಟ್ಟುಕತೆಗಳು ಕೇವಲ ಕಟ್ಟುಕತೆಗಳಷ್ಟೇ. ಅದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ಸಾಕ್ಷ್ಯಾಧಾರಗಳಿರುವುದಿಲ್ಲ.
೨. ನೀವು ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ ಏನು ಆಗಬಹುದು (What Might Happen If You Eat Spicy Food? in Kannada):

ಗರ್ಭಾವಸ್ಥೆಯಲ್ಲಿ ಮಸಾಲೆಯುಕ್ತ ಆಹಾರ ಸೇವಿಸದೇ ಇರುವುದು ಸೂಕ್ತ ಎನ್ನಲು ಕಾರಣ ಅತಿಯಾಗಿ ಮಸಾಲೆಯುಕ್ತ ಆಹಾರ ಸೇವಿಸಿದರೆ ಅದು ಉಂಟು ಮಾಡಬಹುದಾದ ದೈಹಿಕ ಅನಾನುಕೂಲಗಳು. ಗರ್ಭಾವಸ್ಥೆಯಲ್ಲಿ ಮಸಾಲೆಯುಕ್ತ ಆಹಾರ ಸೇವನೆಯಿಂದ ಉಂಟಾಗಬಹುದಾದ ಸಂಭವನೀಯ ಅಡ್ಡಪರಿಣಾಮಗಳ ವಿವಿರ ಇಲ್ಲಿದೆ.
* ಜೀರ್ಣಕ್ರಿಯೆಯಲ್ಲಿ ತೊಂದರೆ: ಗರ್ಭಿಣಿಯರಲ್ಲಿ ಎದೆ ಉರಿತ, ಅಸಿಡಿಟಿ ಉಂಟಾಗುವುದು ಸಾಮಾನ್ಯ. ಅತಿಯಾಗಿ ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ ಅದು ಎದೆಯುರಿಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
* ಮಾರ್ನಿಂಗ್ ಸಿಕ್ಕ್ನೆಸ್ಸ್: ಗರ್ಭಾವಸ್ಥೆಯ ಮೊದಲ ಹಂತದಲ್ಲಿ, ಹಾರ್ಮೋನ್ ಬದಲಾವಣೆ ಆಗುತ್ತದೆ. ಇದರಿಂದ ಮನಃಸ್ಥಿತಿಯಲ್ಲಿ ಏರುಪೇರು, ಮಾರ್ನಿಂಗ್ ಸಿಕ್ಕ್ನೆಸ್ಸ್ (ವಾಕರಿಕೆ) ಉಂಟಾಗುತ್ತದೆ. ಗರ್ಭಾವಸ್ಥೆಯಲ್ಲಿ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಈ ಮಾರ್ನಿಂಗ್ ಸಿಕ್ಕ್ನೆಸ್ಸ್ ಅಥವಾ ವಾಕರಿಕೆ ದುಪ್ಪಟ್ಟಾಗಬಹುದು.
೩. ಗರ್ಭಾವಸ್ಥೆಯ ಮೊದಲ ಹಂತದಲ್ಲಿ ಮಸಾಲೆಯುಕ್ತ ಆಹಾರವನ್ನು ಶಿಫಾರಸ್ಸು ಮಾಡಲಾಗುತ್ತದೆಯೇ? (Is Spicy Food Recommended During The Initial Stages Of Pregnancy? in Kannada)

ಗರ್ಭಾವಸ್ಥೆಯ ಮೊದಲ ತ್ರೈಮಾಸಿಕ ಅತ್ಯಂತ ನಾಜೂಕ್ಕಾದ ಪ್ರಮುಖ ಹಂತ. ಹೆಚ್ಚಾನುಹೆಚ್ಚು ಅಪಘಾತಗಳು ಇದೆ ಸಮಯದಲ್ಲಿ ಸಂಭವಿಸುತ್ತವೆ. ಇದೇ ಕಾರಣದಿಂದಾಗಿ, ಅನೇಕರು ಮೊದಲ ತ್ರೈಮಾಸಿಕದಲ್ಲಿ ಮಸಾಲೆಯುಕ್ತ ಆಹಾರವನ್ನು ಸಂಪೂರ್ಣವಾಗಿ ತಡೆಗಟ್ಟಬೇಕು ಎಂದು ಭಾವಿಸುತ್ತಾರೆ.
ಆದರೆ ವಾಸ್ತವದಲ್ಲಿ, ಮಸಾಲೆಯುಕ್ತ ಆಹಾರ ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ಮಗುವಿನ ಮೇಲೆ ಯಾವುದೇ ಬಗೆಯ ಪರಿಣಾಮವನ್ನು ಬೀರುವುದಿಲ್ಲ. ಅದರೊಂದಿಗೆ, ಗರ್ಭಾವಸ್ಥೆಯಲ್ಲಿ ಮಸಾಲೆಯುಕ್ತ ಆಹಾರ ಸೇವಿಸುವುದು ಸಂಪೂರ್ಣವಾಗಿ ಸುರಕ್ಷಿತ. ಆದರೆ ಪರಿಗಣನೆಗೆ ತೆಗೆದುಕೊಳ್ಳಬೇಕಾದ ಸಂಗತಿ ಎಂದರೆ ಈ ಮಸಾಲೆಯುಕ್ತ ಆಹಾರ ನಿಮ್ಮ ದೇಹಕ್ಕೆ ಅನಾನುಕೂಲ ಉಂಟು ಮಾಡುತ್ತದೆಯೇ ಎಂದು. ನೀವು ಈ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳುವಿರಾದರೆ, ಈ ಬಗೆಯ ಆಹಾರವನ್ನು ಸೇವಿಸುವುದರಿಂದ ಯಾವುದೇ ರೀತಿಯ ತೊಂದರೆ ಇಲ್ಲ.
೪. ನೀವು ತಿನ್ನುವ ಮಸಾಲೆಯುಕ್ತ ಆಹಾರದ ಪ್ರಮಾಣಕ್ಕೆ ಮಿತಿ ಇದೆಯೇ? (Is There A Limit To The Amount Of Spicy Food That You Eat? in Kannada)

ನಿಮಗೆ ಈಗಾಗಲೇ ಗರ್ಭಾವಸ್ಥೆಯಲ್ಲಿ ಮಸಾಲೆಯುಕ್ತ ಆಹಾರ ಸೇವನೆ ಬಗ್ಗೆ ಇರುವ ಕಟ್ಟುಕತೆಗಳ ಬಗ್ಗೆ ತಿಳಿಸಲಾಗಿದೆ. ಇಗೆ ಮುಂದೆ ಕಾಡುವ ಪ್ರಶ್ನೆ - ಗರ್ಭಾವಸ್ಥೆಯಲ್ಲಿ ಎಷ್ಟು ಮಸಾಲೆಯುಕ್ತ ಆಹಾರವನ್ನು ಸೇವಿಸಬೇಕು? ಅದಕ್ಕೆ ಮಿತಿ ಇದೆಯೇ?
ಈ ಪ್ರಶ್ನೆಗೆ ಯಾವುದೇ ಬಗೆಯ ಖಚಿತ ಉತ್ತರವಿಲ್ಲ.
ಎಷ್ಟು ಮಸಾಲೆಯುಕ್ತ ಆಹಾರವನ್ನು ನೀವು ಸಲೀಸಾಗಿ ಜೀರ್ಣಿಸಿಕೊಳ್ಳಬಹುದು ಎನ್ನುವುದು ನಿಮ್ಮ ಅರೋಗ್ಯ ಸ್ಥಿತಿ ಮತ್ತು ನಿಮ್ಮ ವೈಯಕ್ತಿಕ ಪ್ರವೃತ್ತಿಗಳ ಮೇಲೆ ಅವಲಂಬಿತವಾಗಿದೆ. ನೀವು ಯಾವುದೇ ಬಗೆಯ ಅನಾನುಕೂಲವನ್ನು ಅಥವಾ ದೇಹದಲ್ಲಿ ಕಿರಿಕಿರಿಯನ್ನು ಅನುಭವಿಸದೇ ಇದ್ದರೆ, ನೀವು ಗರ್ಭಾವಸ್ಥೆಯಲ್ಲಿ ಮಸಾಲೆಯುಕ್ತ ಆಹಾರದ ಸೇವನೆ ಬಗ್ಗೆ ಚಿಂತಿಸಬೇಕಿಲ್ಲ.
ಆದರೂ, ಮಸಾಲೆಯುಕ್ತ ಆಹಾರದ ಸೇವನೆ ಮಿತವಾಗಿರಲಿ. ಮತ್ತು ಹೊರಗಿನ ಮಸಾಲೆಯುಕ್ತ ಆಹಾರವನ್ನು ಸೇವಿಸದೇ ಇರುವುದು ಸೂಕ್ತ. ನೀವು ತಾಜಾ ಮಸಾಲೆಗಳನ್ನು ಮಾರುಕಟ್ಟೆಯಿಂದ ಕೊಂಡು ತಂದ, ಅದನ್ನು ಮನೆಯಲ್ಲಿಯೇ ಅರೆದು, ಮಸಾಲೆ ತಯಾರಿಸುವುದು ಒಳಿತು.
೫. ಯಾವುದೇ ಅಸ್ವಸ್ಥತೆ ಉಂಟುಮಾಡದಿರುವ ಮಸಾಲೆಗಳನ್ನು ಖರೀದಿಸಲು ಅತ್ಯುತ್ತಮ ಮಾರ್ಗ (The Best Way To Buy Spices That Cause No Discomfort in Kannada):

ಗರ್ಭಾವಸ್ಥೆಯಲ್ಲಿ ಸುರಕ್ಷಿತವಾದ ಮಸಾಲೆಯುಕ್ತ ಆಹಾರ ಸೇವಿಸಲು ಮಾರುಕಟ್ಟೆಯಿಂದ ಮಸಾಲಗಳನ್ನು ಕೊಳ್ಳುವಾಗ ಈ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
* ಮಾರಿಕಟ್ಟೆಯಲ್ಲಿ ಪ್ಯಾಕ್ ಮಾಡದೇ ಇರುವ, ಸಡೀಲವಾಗಿ ಮಾರಾಟವಾಗುವ ಮಸಾಲೆಗಳಿಂದ ದೂರವಿರಿ. ವುಗಳು ಕಲ್ಮಶಗಳನ್ನು ಹೊಂದಿರಬಹುದು.
* ಯಾವಾಗಲೂ ತಾಜಾ ಹಾಗೂ ಹೆಸರುವಾಸಿಯಾಗಿರುವ ಬ್ರಾಂಡ್ ನ ಮಾಸಾಲೆಗಳನ್ನು ಖರೀದಿಸಿ. ಇವುಗಳೇ ನಿಮ್ಮ ಆರೋಗ್ಯಕ್ಕೆ ಸುರಕ್ಷಿತ.
* ಮಸಾಲೆ ಪ್ಯಾಕ್ ಗಳನ್ನೂ ಖರೀದಿಸುವ ಮುನ್ನ, ಪ್ಯಾಕ್ ಅನ್ನು ಸರಿಯಾಗಿ ಪರೀಕ್ಷಿಸಿ ಮತ್ತು ಅದರ ಮೇಲಿರುವ "ಬೆಸ್ಟ್ ಬಿಫೋರ್" ದಿನಾಂಕವನ್ನು ತಪ್ಪದೆ ನೋಡಿ.
* ಮನೆಯಲ್ಲಿಯೇ ತಾಜಾ ಮಸಾಲೆಗಳನ್ನು ತಂದು ಮಸಾಲೆಪುಡಿ ತಯಾರಿಸುವುದು ಒಳ್ಳೆಯದು. ಇದು ಆರೋಗ್ಯಕರ ಹಾಗೂ ವಾಸನೆಭರಿತವಾಗಿರುತ್ತದೆ. ಹಾಗಾಗಿ, ಈ ಪುಡಿಯನ್ನು ಸ್ವಲ್ಪ ಉಪಯೋಗಿಸಿದರೂ, ಅದು ನಿಮ್ಮನ್ನು ಸಂತುಷ್ಟರಾಗಿಸುತ್ತದೆ.
೬. ನಿಮ್ಮ ಪ್ರೆಗ್ನೆನ್ಸಿ ಡಯಟ್ನಲ್ಲಿ ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇರಿಸುವುದು ಹೇಗೆ? (How To Include Spicy Food Items In Your Pregnancy Diet? in Kannada)

ಮಸಾಲೆಯುಕ್ತ ಆಹಾರದ ಕುರಿತಾದ ನಿಮ್ಮ ಕಡುಬಯಕೆಯನ್ನು ನಿಯಂತ್ರಿಸಲು ಕಷ್ಟವಾದರೆ, ನೀವು ಅದರ ಕುರಿತಾಗಿ ಕೆಲವು ಸಲಹೆಗಳನ್ನು ಪಾಲಿಸುವುದು ಒಳಿತು. ಗರ್ಭಾವಸ್ಥೆಯಲ್ಲಿನ ಈ ಕಡುಬಯಕೆಯನ್ನು ಸಂತೈಸಿಸಲು ಕೆಲವು ಸಲಹೆಗಳು ಇಲ್ಲಿವೆ.
* ಹೊರಗಿನ ಆಹಾರ ಸೇವಿಸದೇ ಇರುವುದು ಒಳಿತು: ಮಸಾಲೆಯುಕ್ತ ಆಹಾರವನ್ನು ತಿನ್ನುವ ಬಯಕೆ ಇದ್ದಾರೆ, ಅವುಗಳನ್ನು ಮನೆಯಲ್ಲಿಯೇ ತಯಾರಿಸಿ, ಸವಿಯಿರಿ. ಮನೆಯಲ್ಲಿ ಆಹಾರ ತಯಾರಿಸುವಾಗ ಮಸಾಲೆಗಳ ಗುಣಮಟ್ಟ ಮತ್ತು ಪ್ರಮಾಣವನ್ನು ನಿಯಂತ್ರಿಸಬಹುದು. ಹೊರಗೆ ತಿನ್ನುವುದನ್ನು ಆದಷ್ಟು ತಪ್ಪಿಸುವುದು ಒಳಿತು.
* ಮಸಾಲೆಯುಕ್ತ ಆಹಾರವನ್ನು ಒಂದು ಸಲ ತಿನ್ನುವುದು ಒಳಿತು: ನಿಮ್ಮ ಕಡುಬಯಕೆಯನ್ನಿ ಸಂತೈಸಿಸಲು, ಗರ್ಭಾವಸ್ಥೆಯಲ್ಲಿ ಮಸಾಲೆಯುಕ್ತ ಆಹಾರವನ್ನು ದಿಂಡದಲ್ಲಿ ಒಂದು ಬಾರಿ ಸವಿಯುವುದು ಒಳಿತು.
* ಸೌಮ್ಯವಾದ ಮಸಾಲೆಗಳನ್ನು ಬಳಸಿ: ಭಾರತೀಯ ತಿನಿಸುಗಳ ಹೊರತಾಗಿ, ಮೆಕ್ಸಿಕನ್ ಅಥವಾ ಇಟಾಲಿಯನ್ ಆಹಾರವನ್ನು ಪ್ರಯತ್ನಿಸಿ. ಇದರಲ್ಲಿ ಜಾಲಪೆನೊಸ್, ಹೆರ್ಬ್ಸ್, ಒರೆಗಾನೊ ಇರುತ್ತವೆ. ಅವುಗಳು ವಾಸನೆಭರಿತವಲ್ಲದಿದ್ದರೂ, ಸೌಮ್ಯ ಸ್ವಾಭಾವವನ್ನು ಹೊಂದಿರುತ್ತವೆ. ಹಾಗಾಗಿ, ನೀವು ಒಂದೇ ಸಾಲಕ್ಕೆ ಹೆಚ್ಚಿನ ಮಸಾಲೆಗಳನ್ನು ತಿನ್ನುವುದನ್ನು ಇವುಗಳು ತಡೆಗಟ್ಟುತ್ತವೆ.
* ಉಪ್ಪಿನಕಾಯಿಯನ್ನು ಸೇರಿಸಿಕೊಳ್ಳಿ: ಕಡಿಮೆ ಮಸಾಲಭರಿತ ಉಪ್ಪಿನಕಾಯಿಗಳು ಭಾರತೀಯ ಆಹಾರಗಳ ಜೊತೆ ಉತ್ತಮ ರುಚಿ ನೀಡುತ್ತದೆ. ಇವುಗಳು ನಿಮ್ಮ ಬಯಕೆಯನ್ನೂ ನಿವಾರಿಸುತ್ತದೆ.
೭. ನಿರ್ಣಯ (Conclusion in Kannada)
ಗರ್ಭಾವಸ್ಥೆಯ ನಾಜೂಕಾದ ಅವಧಿ. ಇದನ್ನು ಪ್ರೀತಿಯಿಂದ ಸೂಕ್ಷ್ಮವಾಗಿ ನಿಭಾಯಿಸಬೇಕು. ಅಡರೊಂದಿಗೆ, ಈ ಅವಧಿಯಲ್ಲಿ ನೀವು ಸೇವಿಸುವ ಆಹಾರದ ಬಗ್ಗೆಯೂ ನಿಗಾ ವಹಿಸಬೇಕು. ಏಕೆಂದರೆ ನೀವು ಸೇವಿಸುವ ಆಹಾರ ನಿಮ್ಮ ದೇಹಕ್ಕೆ ಶಕ್ತಿ ನೀಡಿ, ನಿಮ್ಮ ಮಗುವಿಗೆ ಪೌಷ್ಟಿಕತೆಯನ್ನು ನೀಡುತ್ತದೆ. ಮಸಾಲೆಯುಕ್ತ ಆಹಾರ ಸುರಕ್ಷಿತವಾದ್ದರಿಂದ ಗರ್ಭಾವಸ್ಥೆಯಲ್ಲಿ ಈ ಆಹಾರ ಸೇವಿಸುವುದರಿಂದ ಯಾವುದೇ ಬಗೆಯ ಹಾನಿ ಉಂಟಾಗುವುದಿಲ್ಲ.