Link copied!
Sign in / Sign up
4
Shares

ಗರ್ಭಾವಸ್ಥೆಯಲ್ಲಿ ಖರ್ಜುರದಿಂದಾಗುವ ೮ ಆರೋಗ್ಯಕರ ಲಾಭಗಳು (8 Important Benefits Of Dates During Pregnancy in Kannada)

ಎಲ್ಲಾ ಗರ್ಭಿಣಿಯರು ನಿಮ್ಮ ಮಗುವನ್ನು ಈ ಜಗತ್ತಿಗೆ ಸ್ವಾಗತಿಸಲು ತಯಾರಿದ್ದೀರಾ? ಖರ್ಜೂರ ಹಣ್ಣು ನೀವು ಗರ್ಭಾವಸ್ಥೆಯಲ್ಲಿ ಸೇವಿಸಲೇ ಬೇಕಾದ ಹಣ್ಣು. ಇದು ನಿಮ್ಮ ಗರ್ಭವಾಸ್ಥೆಯ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಗರ್ಭಾವಸ್ಥೆಯಲ್ಲಿ ಖರ್ಜೂರ ಹಣ್ಣಿನಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಅವುಗಳು ಪ್ರೋಟೀನ್ಸ್, ನಾರಿನಂಶ ಮತ್ತು ಹಲವು ವಿಟಮಿನ್ ಗಳ ಸಮೃದ್ಧ ಮೂಲಗಳಾಗಿವೆ. ಅದರೊಂದಿಗೆ ಖರ್ಜೂರ ಹಣ್ಣಿನಲ್ಲಿ ಕೊಬ್ಬಿನಂಶ ಕಡಿಮೆ ಇದೆ. 

ಖರ್ಜೂರದ ಹಲವು ಪ್ರಯೋಜನಗಳಿಗೆ ಕಾರಣ ಅದರಲ್ಲಿರುವ ಕರಗುವ ಮತ್ತು ಕರಗದ ನಾರಿನಂಶ. ಇದು ನಿಮ್ಮ ಜೀರ್ಣಾಂಗವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಖರ್ಜೂರದಲ್ಲಿ ನೈಸರ್ಗಿಕ ಸಕ್ಕರೆ ಸಾಕಷ್ಟಿದೆ. ಅವುಗಳಲ್ಲಿ ಪೊಟ್ಯಾಸಿಯಂ ಅಂಶ ಹೆಚ್ಚಿದ್ದು, ಸೋಡಿಯಂ ಅಂಶ ಕಡಿಮೆ ಇದೆ. ಇದರಿಂದಾಗಿ ನರಮಂಡಲವನ್ನು ನಿಯಂತ್ರಿಸುತ್ತದೆ. ಹಾಗಾಗಿ, ಈ ಹಣ್ಣನ್ನು ನಿಮ್ಮ ಗರ್ಭಾವಸ್ಥೆಯ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುವು ಸೂಕ್ತ. 

ಪರಿವಿಡಿ:

೧. ಖರ್ಜೂರ ಹಣ್ಣು ಎಂದರೇನು? (What is Date Fruit in Kannada)

೨. ಖರ್ಜೂರ ಹಣ್ಣಿನ ೮ ಅರೋಗ್ಯ ಪ್ರಯೋಜನಗಳು (8 Health Benefits of Date Fruit in Kannada)

೩. ಅಧಿಕ ಖರ್ಜೂರ ಸೇವನೆಯಿಂದ ಆಗುವ ಅಡ್ಡಪರಿಣಾಮಗಳು (Side Effects of Excess Dates in Kannada)

೪. ನಿರ್ಣಯ (Conclusion in Kannada)

೧. ಖರ್ಜೂರ ಹಣ್ಣು ಎಂದರೇನು? (What is Date Fruit in Kannada)

ಗರ್ಭಾವಸ್ಥೆಯಲ್ಲಿ ಖರ್ಜೂರ ಹಣ್ಣು ಸೇವಿಸುವುದು ತಾಯಿ ಮತ್ತು ಮಗುವಿಗೆ ಸುರಕ್ಷಿತವಷ್ಟೇ ಅಲ್ಲದೆ, ಆರೋಗ್ಯಕರ ಕೂಡಾ. ಖರ್ಜೂರ ಹಣ್ಣಿನಲ್ಲಿರುವ ಸಕ್ಕರೆ ಅಂಶ, ಫ್ರಕ್ಟೋಸ್, ತಕ್ಷಣವೇ ಒಡೆದು, ರಕ್ತದ ಸಕ್ಕರೆ ಮಟ್ಟ ಬದಲಾಗದಂತೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಗರ್ಭಾವಸ್ಥೆಯಲ್ಲಿ ಖರ್ಜೂರ ಸೇವಿಸುವುದರಿಂದ, ಖರ್ಜೂರ ವಿರೇಚಕವಾಗಿ ವರ್ತಿಸಿ, ಗರ್ಭಾಶಯದ ಸೋಂಕೋಚನಗಳನ್ನು ವೃದ್ಧಿಸಿ, ಪ್ರಸವದ ಸಮಯವನ್ನು ಕಡಿಮೆಗೊಳಿಸುತ್ತದೆ. ಸಂಶೋಧನೆಗಳೂ ಇದನ್ನು ಒಪ್ಪಿಕೊಳ್ಳುತ್ತವೆ. 

[Back To Top]

೨. ಖರ್ಜೂರ ಹಣ್ಣಿನ ೮ ಅರೋಗ್ಯ ಪ್ರಯೋಜನಗಳು (8 Health Benefits of Date Fruit in Kannada):

೧. ಸಾಕಷ್ಟು ಸಕ್ಕರೆ ಅಂಶ: ನಿಮಗೆ ತಿಳಿದಿರುವಂತೆ ದೇಹ ಸಕ್ಕರೆ ಅಂಶವನ್ನು ನಿರಾಯಾಸವಾಗಿ ಹೀರಿಕೊಳ್ಳುತ್ತದೆ. ಖರ್ಜೂರ ಹಣ್ಣಿನಲ್ಲಿರುವ ಸಕ್ಕರೆ ಅಂಶ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ಅಗತ್ಯವಿರುವಷ್ಟು ಗ್ಲುಕೋಸ್ ಅಂಶವನ್ನು ನೀಡುತ್ತದೆ. ಈ ಹಣ್ಣಿನಲ್ಲಿರುವ ಅಧಿಕವಾದ ಫ್ರಕ್ಟೋಸ್ ಅಂಶ ತಾಯಿಗೆ ತ್ವರಿತ ಶಕ್ತಿ ನೀಡುತ್ತದೆ. 

೨. ಖರ್ಜೂರ ಹಣ್ಣು - ಮಲಬದ್ಧತೆಯ ಔಷಧಿ: ಖರ್ಜೂರ ಹಣ್ಣಿನಲ್ಲಿ ಹೆಚ್ಚಿನ ನಾರಿನಂಶವಿದೆ. ನಾರಿನಂಶ ಸಹಜವಾದ ನೀರನ್ನು ಹೀರುವಿಕೆಗಳು. ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಇದರಿಂದಾಗಿ ಮಲಬದ್ಧತೆಯಂತಹ ತೊಂದರೆಯನ್ನು ನಿವಾರಿಸುತ್ತದೆ. ಖರ್ಜೂರದಲ್ಲಿರುವ ನಾರಿನಂಶ ಗರ್ಭಾವಸ್ಥೆಯಲ್ಲಿ ಉಂಟಾಗಬಹುದಾದಂತಹ ಮಧುಮೇಹವನ್ನು ತಡೆಗಟ್ಟುತ್ತದೆ. ಹಾಗಾಗಿ ಈ ಹಣ್ಣನ್ನು ಗರ್ಭಾವಸ್ಥೆಯ ಆಹಾರದಲ್ಲಿ ಸೇರಿಸುವುದು ಸೂಕ್ತ. 

೩. ಫೋಲೇಟ್ ನ ಅಸ್ಥಿತ್ವ: ಖರ್ಜೂರದಲ್ಲಿರುವ ಫೋಲೇಟ್ ಅಥವಾ ಫೋಲಿಕ್ ಆಸಿಡ್ ಹೊಸ ಜೀವಕೋಶಗಳ ರಚನೆಗೆ ಸಹಾಯ ಮಾಡಿ, ಅನೀಮಿಯಾ ತಡೆಗಟ್ಟುತ್ತದೆ. ಇದು ನಿಮ್ಮ ಮಗುವಿನ ಮೆದುಳು ಮತ್ತು ಬೆನ್ನು ಹುರಿಯನ್ನು ತೊಂದರೆಗೀಡುಮಾಡುವ ಜನ್ಮ ದೋಷಗಳನ್ನೂ ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿರುವ ಫೋಲೇಟ್ ನಿಮ್ಮ ಮಗುವಿನ ಬೆನ್ನು ಹುರಿ ಸರಿಯಾಗಿ ಬೆಳೆಯುವಂತೆ ಮಾಡಿ, ನರಗಳ ಕೊಳವೆಗೆ ಸಂಬಂಧಿತ ಎಲ್ಲಾ ಅರೋಗ್ಯ ತೊಂದರೆಗಳನ್ನು ನಿಷೇಧಿಸುತ್ತದೆ. 

೪. ಖರ್ಜೂರ ಹಣ್ಣು ವಿಟಮಿನ್ ಕೆ ಯ ನೈಸರ್ಗಿಕ ಮೂಲ: ರಕ್ತ ಹೆಪ್ಪುಗಟ್ಟುವಿಕೆ ಮತ್ತು ಮೂಳೆಗಳನ್ನು ಬಲಿಷ್ಠಗೊಳಿಸುವಲ್ಲಿ ವಿಟಮಿನ್ ಕೆ ಪಾತ್ರ ನಿರ್ವಹಿಸುತ್ತದೆ. ಶಿಶುಗಳು ಸಾಮಾನ್ಯವಾಗಿ ಕಡಿಮೆ ಮಟ್ಟದ ವಿಟಮಿನ್ ಕೆ ಹೊಂದಿರುತ್ತವೆ. ಹಾಗಾಗಿ, ಗರ್ಭಾವಸ್ಥೆಯಲ್ಲಿ ತಾಯೊಯಲ್ಲಿ ವಿಟಮಿನ್ ಕೆ ಹೆಚ್ಚಿರುವುದು ಅಗತ್ಯ. ಶಿಶುವಿನಲ್ಲಿ ವಿಟಮಿನ್ ಕೆ ಕೊರತೆಯುಂಟಾದರೆ ಅದು ಅತ್ಯಂತ ಅಪಾಯಕಾರಿಯಾಗಬಹುದು. ಅದರಿಂದರಕ್ತ ಹೆಪ್ಪುಗಟ್ಟುವಿಕೆಯಂತಹ ತೊಂದರೆಗಳು ಉಂಟಾಗಬಹುದು. ವಿಟಮಿನ್ ಕೆ ಮಗುವಿನ ಮೂಳೆಯ ಬೆಳವಣಿಗೆಗೂ ಸಹಾಯ ಮಾಡುತ್ತದೆ. 

೫. ರೋಗನಿರೋಧಕ ಶಕ್ತಿಗೆ ಖರ್ಜೂರ ಹಣ್ಣು: ಚಯಾಪಚಯ ಕ್ರಿಯೆಯಲ್ಲಿ ಕಬ್ಬಿನಾಂಶದ ಪಾತ್ರ ಪ್ರಮುಖವಾಗಿದೆ. ಈ ಕಬ್ಬಿನಾಂಶ ಖರ್ಜೂರ ಹಣ್ಣಿನಲ್ಲಿ ಸಾಕಷ್ಟದೆ. ಗ್ಲೋಬಿನ್ ಅಣುಗಳೊಂದಿಗೆ, ಕಬ್ಬಿನಾಂಶ ಆಮ್ಲಜನಕ ಎಲ್ಲಾ ಜೀವಕೋಶಗಳಿಗೆ ತಲುಪುವಂತೆ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಇದು ವಿಶಷವಾಗಿ ಮುಖ್ಯ. ಏಕೆಂದರೆ ಕಬ್ಬಿಣ ಮೈಯೊಗ್ಲೊಬಿನ್, ಕಾಲಜನ್ ಮತ್ತು ಇತರ ಕಿಣ್ವಗಳ ಮುಖ್ಯ ಭಾಗವಾಗಿದೆ. ಇದು ಮಕ್ಕಳಲ್ಲಿ ಅನಿಮಿಯಾ ತಡೆಗಟ್ಟಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

೬. ಉತ್ತಮ ಹೀರಿಕೊಳ್ಳುವಿಕೆ: ಖರ್ಜೂರ ಹಣ್ಣಿನ ಹಲವು ಉತ್ತಮ ಗುಣಗಳಲ್ಲಿ ಪೊಟ್ಯಾಸಿಯಂ ಮಟ್ಟ ಕೂಡಾ ಒಂದು. ಪೊಟ್ಯಾಸಿಯಂ ದೇಹದ ಪ್ರಮುಖ ಎಲೆಕ್ಟ್ರೋಲೈಟ್ಸ್ ಗಳಲ್ಲಿ ಒಂದು. ಇದು ರಕ್ತದೊತ್ತಡವನ್ನು ನಿಭಾಯಿಸುವಲ್ಲಿ ಸಹಾಯ ಮಾಡುತ್ತದೆ. ಗರ್ಭಧಾರಣೆಯ ಸಮಯದಲ್ಲಿ ದೇಹದ ನೀರಿನ ಮಟ್ಟವನ್ನು ನಿಭಾಯಿಸುವಲ್ಲಿಯೂ ಸಹಾಯ ಮಾಡುತ್ತದೆ. ಅದರೊಂದಿಗೆ ಹೃದಯ ಬಡಿತ ನಿಯಂತ್ರಿಸಿ, ಜೀರ್ಣಾಂಗ ಮತ್ತು ಸ್ನಾಯುವಿನ ಕಾರ್ಯನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ಫ್ಯಾರ್ಭಾವಸ್ಥೆಯಲ್ಲಿ ಸಾಕಷ್ಟು ಪೊಟ್ಯಾಸಿಯಂ ಅಂಶವನ್ನು ಸೇವಿಸುವುದರಿಂದ ಗರ್ಭಿಣಿಯರ ನರಗಳು ಮತ್ತು ಸ್ನಾಯುವಿನ ಕಾರ್ಯನಿರ್ವಹಣೆ ಸೂಕ್ತ ಬಗೆಯಲ್ಲಿಯಾಗುತ್ತದೆ. ಪೊಟ್ಯಾಸಿಯಂ ಕೊರತೆಯುಂಟಾದಲ್ಲಿ, ನಿಮ್ಮ ಮೂತ್ರಪಿಂಡಕ್ಕೆ ತೊಂದರೆಯುಂಟಾಗಿ, ಸಾವಿಗೂ ಕಾರಣವಾಗಬಹುದು.

೭ ಖರ್ಜೂರ ಹಣ್ಣಿನ ಮೆಗ್ನೀಷಿಯಂ: ಖರ್ಜೂರ ಹಣ್ಣಿನಿಂದ ನಿಮ್ಮ ದೇಹ ಪಡೆದಿರುವ ಮೆಗ್ನೀಷಿಯಂ ಅಂಶ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಂ ಅಯಾನ್ ಗಳನ್ನು ಸಾಗಿಸುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ಸ್ನಾಯು ಸಂಕೋಚನಳಿಗೆ ಸಹಾಯ ಮಾಡಿ, ಹೃದಯ ಬಡಿತವನ್ನು ನಿಯಂತ್ರಿಸುತ್ತದೆ. ಇದು ಹಲ್ಲು ಮತ್ತು ಮೂಳೆಗಳ ರಚನೆಯಲ್ಲಿಯೂ ಹಾಗಿಯಾಗುತ್ತದೆ. ಅದರೊಂದಿಗೆ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. 

೮. ಖರ್ಜೂರ ಹಣ್ಣಿನ ಮೂಲಕ ಪ್ರೋಟೀನ್: ಖರ್ಜೂರ ಹಣ್ಣು ನಿಮ್ಮ ದೇಹದ ಬೆಳವಣಿಗೆಗೆ ಅಗತ್ಯವಿರುವ ಪ್ರೋಟೀನ್ಸ್ ಗಳನ್ನು ನೀಡುತ್ತದೆ. ಅಮೈನೊ ಆಮ್ಲಗಳು ಮಗುವಿನಲ್ಲಿ ಸಂಭವಿಸಬಹುದಾದ ಅನುವಂಶಿಕ ದೋಷಗಳನ್ನು ತಡೆಗಟ್ಟುವೆ. ಇಂತಹ ಲಾಭಗಳು ಗರ್ಭಾವಸ್ಥೆಯಲ್ಲಿ ಹಲವಾರು. ಹಾಗಾಗಿ, ಗರ್ಭಿಣಿಯರ ಆಹಾರ ಪದ್ಧತಿಯಲ್ಲಿ ಖರ್ಜೂರ ಸೇರಿಸುವುದು ಉಪಯುಕ್ತ. 

[Back To Top]

. ಅಧಿಕ ಖರ್ಜೂರ ಸೇವನೆಯಿಂದ ಆಗುವ ಅಡ್ಡಪರಿಣಾಮಗಳು (Side Effects of Excess Dates in Kannada):

ಇಲ್ಲಿಯವರೆಗೆ ಯಾವುದೇ ಸಂಶೋಧನೆಗಳು ಖರ್ಜೂರ ಗರ್ಭಿಣಿಯರಿಗೆ ಅಸುರಕ್ಷಿತ ಎಂದು ಸಾಬೀತು ಪಡಿಸಲಾಗಿಲ್ಲ. ಅಗತ್ಯವಾಗಿ ಗರ್ಭಾವಸ್ಥೆಯ ಮೊದಲು ಮೂರೂ ತಿಂಗಳು ಮತ್ತು ಕೊನೆಯ ಮೂರೂ ತಿಂಗಳು ಖರ್ಜೂರ ಸೇವಿಸಿವುದು ನಿಮ್ಮ ಹಾಗೂ ನಿಮ್ಮ ಮಗುವಿನ ಆರೋಗ್ಯಕ್ಕೆ ಒಳಿತು. ಆದರೆ, ಅದೇ ಅಧಿಕವಾದರೆ ನೀವು ಕೆಳಗಿರುವ ಅಡ್ಡಪರಿಣಾಮಗಳನ್ನು ಎದುರಿಸಬೇಕಾಗಬಹುದು. 

೧. ಅಧಿಕ ತೂಕ

೨. ಗರ್ಭಾವಸ್ಥೆಯಲ್ಲಿ ಮಧುಮೇಹ ಉಂಟಾಗುವ ಸಾಧ್ಯತೆ 

೩. ರಕ್ತದ ಸಕ್ಕರೆ ಮಟ್ಟ ಹೆಚ್ಚುವಿಕೆ

೪. ಹಲ್ಲಿನ ಕೊಳೆತ 

[Back To Top]

೪. ನಿರ್ಣಯ (Conclusion in Kannada):

ಖರ್ಜೂರ ಹಣ್ಣಿನಲ್ಲಿ ಪೌಷ್ಟಿಕಾಂಶಗಳಿದ್ದು, ಅದನ್ನು ಸೇವಿಸುವುದು ಅತಿ ಸುಲಭ. ಕೆಲವು ಹಣ್ಣುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ. ತಲತಲಾಂತರದಿಂದಲೂ ಗರ್ಭಾವಸ್ಥೆಯಲ್ಲಿ ಸೇವಿಸಬಹುದಾದ ಹಣ್ಣುಗಳಲ್ಲಿ ಖರ್ಜೂರ ಕೂಡಾ ಒಂದು. ಪ್ರಸವ ವೇದನೆ ಕಡಿಮೆಗೊಳಿಸಲು ಹಲವು ದಾರಿಗಳಿವೆ. ಖರ್ಜೂರ ತಿನ್ನುವುದು ಸಹ ಒಂದು. ನೀವು ಗರ್ಭಿಣಿಯಾಗಿದ್ದರೆ, ನಿಮ್ಮ ಆಹಾರದಲ್ಲಿ ಖರ್ಜೂರ ಹಣ್ಣನ್ನು ಸೇರಿಸಲು ಯೋಚಿಸುತ್ತದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಇದರ ಕುರಿತಾಗಿ ಚರ್ಚಿಸಿ. ತಾಜಾ ಖರ್ಜೂರ ಹಣ್ಣನ್ನು ಸೇವಿಸುವುದು ಸೂಕ್ತ. 

ತಪ್ಪದೆ ಖರ್ಜೂರವನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ, ಅದರ ಅರೋಗ್ಯ ಲಾಭಗಳನ್ನು ಅನುಭವಿಸಿ. ಏಕೆಂದರೆ ಈ ಅರೋಗ್ಯ ಲಾಭಗಳನ್ನು ಬೇರೆ ಯಾವುದರಿಂದಲೂ ಭರಿಸಲಾಗದು. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon