Link copied!
Sign in / Sign up
0
Shares

ಗರ್ಭಾವಸ್ಥೆಯಲ್ಲಿ ಕಚ್ಚಾ ಈರುಳ್ಳಿ ಸೇವನೆ ಸುರಕ್ಷಿತವೇ? (Is It Safe To Eat Raw Onions During Pregnancy? In Kannada)

ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಈರುಳ್ಳಿ (ಕಚ್ಚಾ ರೂಪದಲ್ಲಿ ಅಥವಾ ಬೇಯಿಸಿದ ರೂಪದಲ್ಲಿ) ಸೇವಿಸುವುದು ಸುಕ್ಷಿತವೇ? ಅಥವಾ ಅಪಾಯಕಾರಿಯೇ? ಎನ್ನುವ ಪ್ರಶ್ನೆ ಕಾಡುವುದು ಸಹಜ. ನಿಮ್ಮ ಪ್ರಶ್ನೆಗಳನ್ನು ಉತ್ತರಿಸಿ, ನಿಮ್ಮಲ್ಲಿರುವ ಅನುಮಾನವನ್ನು ಹೋಗಲಾಡಿಸುವ ಕೆಲಸವನ್ನು ಈ ಲೇಖನ ಮಾಡುತ್ತದೆ. ಈರುಳ್ಳಿ ಪೌಷ್ಟಿಕಾಂಶದ ಸಸ್ಯವಾಗಿದ್ದು, ಶತಶತಮಾನಗಳಿಂದಲೂ ಅಡುಗೆಗೆ ಮಸಾಲೆ ಮತ್ತು ತೀಕ್ಷ್ಣವಾದ ರುಚಿಯನ್ನು ನೀಡುತ್ತಾ ಬಂದಿದೆ. ಈರುಳ್ಳಿಗಳಲ್ಲಿ ಹಲವು ಬಗೆಗೆಗಳು: ಸ್ಪ್ರಿಂಗ್ ಈರುಳ್ಳಿ, ಕೆಂಪು ಈರುಳ್ಳಿ, ಬಿಳಿ ಈರುಳ್ಳಿ, ಹಸಿರು ಈರುಳ್ಳಿ ಮತ್ತು ಲೀಕ್ ಈರುಳ್ಳಿ, ಇತ್ಯಾದಿ. 

ಈರುಳ್ಳಿಯ ಆರೋಗ್ಯ ಪ್ರಯೋಜನಗಳು ಹಲವಾರು - ಗ್ಯಾಸ್ಟ್ರಿಕ್ ಮತ್ತು ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುವುದು, ರಕ್ತದೊತ್ತಡವನ್ನು ನಿಯಂತ್ರಿಸುವುದು, ತೂಕ ನಿರ್ವಹಣೆ, ಇತ್ಯಾದಿ. ಈರುಳ್ಳಿ ಶೀತ ವಾತಾವರಣದಲ್ಲಿ ಶಾಖದ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. 

ಈರುಳ್ಳಿ ತಿನ್ನುವ ಆಸೆ ಇದ್ದು, ಅದರಿಂದ ನಿಮ್ಮ ಮಗುವಿಗೆ ಉಂಟಾಗಬಹುದಾದ ಅಡ್ಡಪರಿಣಾಮಗಳ ಬಗ್ಗೆ ಭಯವಿದೆಯೇ? ಗರ್ಭಿಣಿಯರ ನಾಲಿಗೆಯ ರುಚಿ ಮೊಗ್ಗುಗಳು ಈರುಳ್ಳಿಯ ಬಗ್ಗೆ ಅತಿಯಾದ ಸೆಳೆತವನ್ನು ಉಂಟುಮಾಡುವುದು ಸಹಜ. ನಿಮ್ಮ ಎಲ್ಲಾ ಆತಂಕಗಳನ್ನು ಮತ್ತು ಪ್ರಶ್ನೆಗಳನ್ನು ಉತ್ತರಿಸಲು, ನಾವು ಈ ಲೇಖನದಲ್ಲಿ ಈರುಳ್ಳಿಯ ಅರೋಗ್ಯ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳ ಪಟ್ಟಿಯನ್ನು ಮಾಡಿದ್ದೇವೆ. 

ಪರಿವಿಡಿ:

೧. ಗರ್ಭಿಣಿಯರು ಈರುಳ್ಳಿಯನ್ನು ಸೇವಿಸಬಹುದೇ?  (Can A Mom-To-Be Eat Onions When Pregnant? In Kannada)

೨. ಗರ್ಭಾವಸ್ಥೆಯಲ್ಲಿ ಈರುಳ್ಳಿಯ ಆರೋಗ್ಯ ಪ್ರಯೋಜನಗಳು (Benefits Of Eating Onions During Pregnancy In Kannada)

೩. ಗರ್ಭಾವಸ್ಥೆಯಲ್ಲಿ ಈರುಳ್ಳಿಯ ಅಡ್ಡಪರಿಣಾಮಗಳು (Side Effects Of Eating Onions During Pregnancy In Kannada)

೪. ನಿರ್ಣಯ (Conclusion In Kannda)

೧. ಗರ್ಭಿಣಿಯರು ಈರುಳ್ಳಿಯನ್ನು ಸೇವಿಸಬಹುದೇ? (Can A Mom-To-Be Eat Onions When Pregnant? In Kannada)

ನಿಮ್ಮ ನಾಲಿಗೆಯ ರುಚಿ ಚೀಲಗಳನ್ನು ಈರುಳ್ಳಿ ತೃಪ್ತಿಗೊಳಿಸಬಹುದು. ಅದರ ನೆನಪಿಟ್ಟುಕೊಳ್ಳಬೇಕಾದ ಸಂಗತಿ ಎಂದರೆ ಈರುಳ್ಳಿಯನ್ನು ಅತಿಯಾಗಿ ತಿನ್ನದೇ ಇರುವುದು. ಏಕೆಂದರೆ ಅತಿಯಾದರೆ ಅಮೃತವೂ ವಿಷ. ಈರುಳ್ಳಿ ಅಥವಾ ಫೋಸ್ಫೋರಸ್ ಗೆ ಸಂಬಂಧಿಸಿದ ಯಾವುದಾದರೂ ಅಲರ್ಜಿ ಅಥವಾ ಉಸಿರಾಟದ ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ, ಈರುಳ್ಳಿಯನ್ನು ತ್ಯಜಿಸುವುದು ಒಳಿತು. ಗರ್ಭಾವಸ್ಥೆಯಲ್ಲಿ ಯಾವ ಆಹಾರ ಸೇವನೆ ಉತ್ತಮ ಎನ್ನುವ ಸಂಶಯವಿದ್ದರೆ, ನಿಮ್ಮ ವೈದ್ಯರ ಬಳಿ ಕೇಳುವುದು ಒಳ್ಳೆಯದು. 

[Back To Top]

೨. ಗರ್ಭಾವಸ್ಥೆಯಲ್ಲಿ ಈರುಳ್ಳಿಯ ಆರೋಗ್ಯ ಪ್ರಯೋಜನಗಳು: (Benefits Of Eating Onions During Pregnancy In Kannada)

ಈರುಳ್ಳಿ ನಿಮ್ಮ ಹಾಗೂ ನಿಮ್ಮ ಮಗುವಿನ ಆರೋಗ್ಯಕ್ಕೆ ಅತ್ಯತ್ತಮ. ಅದಕ್ಕೆ ಕಾರಣ ಇಲ್ಲಿದೆ:

೧. ನಿಮ್ಮ ದೇಹವನ್ನು ನಿರ್ವಿಶೀಕರಣಗೊಳಿಸುತ್ತದೆ: ಈರುಳ್ಳಿಯಲ್ಲಿರುವ ಸಿಸ್ಟಿನ್ ಮತ್ತು ಮಿಥಿಯೋನಿನ್ ನಿಮ್ಮ ದೇಹವನ್ನು ನಿರ್ವಿಷೀಕರಣಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಇದರೊಂದಿಗೆ ನಿಮ್ಮ ರಕ್ತದಲ್ಲಿರುವ ಯಾವುದೇ ಹಾನಿಕಾರಕ ಲೋಹಗಳನ್ನು ದೇಹದಿಂದ ಹೊರಹಾಕುತ್ತದೆ. 

೨. ದೇಹದ ತೂಕವನ್ನು ನಿಯಂತ್ರಿಸುತ್ತದೆ: ಈರುಳ್ಳಿಯನ್ನು ನಿಮ್ಮ ಸಲಾಡ್ ಅಥವಾ ಬೇರೆ ಆಹಾರ ಪದಾರ್ಥಗಳಲ್ಲಿ ಸೇರಿಸಬಹುದು. ಏಕೆಂದರೆ ಇದರ್ಲಲಿ ಕಡಿಮೆ ಕ್ಯಾಲೋರಿಗಳಿರುತ್ತವೆ. ಇದೆರಿಂದ ಗರ್ಭಿಣಿಯರ ದೇಹದ ಅನಗತ್ಯ ತೂಕ ಹೆಚ್ಚಳವನ್ನು ನಿಯಂತ್ರಿಸಬಹುದು.

೩. ಗರ್ಭಾವಸ್ಥೆಯ ಜಿಂಜಿವೈಟಿಸ್ ತಡೆಗಟ್ಟಬಹುದು: ಗರ್ಭಾವಸ್ಥೆಯಲ್ಲಿ ಬಾಯಿಗೆ ಸಂಬಂಧಿತ ತೊಂದರೆಗಳು ಕಾಡುವುದು ಸಾಮಾನ್ಯ. ಉದಾಹರೆಣೆಗೆ: ರಕ್ತಸ್ರಾವ ಭರಿತ ಒಸಡುಗಳು, ಕೆಟ್ಟ ಉಸಿರು, ಮುಂತಾದವುಗಳು. ಈರುಳ್ಳಿಯಲ್ಲಿರುವ ಸೂಕ್ಷ್ಮಜೀವಿ-ವಿರೋಧಿ ಗುಣಲಕ್ಷಣಗಳಿಂದ ಇಂತಹ ತೊಂದರೆಗಳನ್ನು ದೂರವಿಡಬಹುದು. 

೪.  ರಕ್ತದೊತ್ತಡವನ್ನು ನಿಯಂತ್ರಿಸಬಹುದು: ಈರುಳ್ಳಿ ಗರ್ಭಾವಸ್ಥೆಯಲ್ಲಿ ರಕ್ತದೊತ್ತಡದ ಕಾರಣದಿಂದ ಉಂಟಾಗಬಹುದಾದಂತಹ ಅರೋಗ್ಯ ತೊಂದರೆಗಳನ್ನು (ಉದಾಹರಣೆಗೆ ಪ್ರಿಎಕ್ಲೆಮ್ಪ್ಸಿಯ, ಗರ್ಭಾವಸ್ಥೆಯ ಮಧುಮೇಹ, ಇತ್ಯಾದಿ). ಈರುಳ್ಳಿಯಲ್ಲಿರುವ ಫೈಟೋನ್ಯೂಟ್ರಿಯೆಂಟ್ಸ್ ರಕ್ತದೊತ್ತಡವನ್ನು ನಿರಂತರಿಸುವಲ್ಲಿ ಸಹಾಯ ಮಾಡುತ್ತದೆ. 

೫. ಗರ್ಭವಾಸ್ಥೆಯಲ್ಲಿ ಉಂಟಾಗಬಹುದಾದ ಗರ್ಭಾವಸ್ಥೆಯ ಮಧುಮೇಹವನ್ನು ತಡೆಯುತ್ತದೆ: ಇನ್ಸುಲಿನ್ ಪ್ರತಿರೋಧದಿಂದ ಉಂಟಾಗಬಹುದಾದಂತಹ ಗರ್ಭಾವಸ್ಥೆಯ ಮಧುಮೇಹವನ್ನು ಈರುಳ್ಳಿ ತಡೆಯುತ್ತದೆ. ಈರುಳ್ಳಿಯಲ್ಲಿರುವ ಕ್ರೋಮಿಯಂ ಗರ್ಭಿಣಿಯರ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಕ್ರೋಮಿಯಂ ದೇಹದ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆಗೊಳಿಸುತ್ತದೆ.

೬. ಮಲಬದ್ಧತೆಯಿಂದ ಮುಕ್ತಿ: ಈರುಳ್ಳಿಯಲ್ಲಿ ಕಡಿಮೆ ಸಲ್ಫರ್ ಅಂಶವಿದ್ದು, ಗರ್ಭಿಣಿಯರಿಗೆ ಸಾಮಾನ್ಯವಾಗಿ ಕಾಡುವ ಮಲಬದ್ಧತೆಯ ತೊಂದರೆಯನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. 

೭. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಈರುಳ್ಳಿಯಲ್ಲಿರುವ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ ಗಳು ತಾಯಿಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ರಕ್ಷಣೆ ನೀಡುತ್ತದೆ. ಹಾಗಾಗಿ, ಗರ್ಭಾವಸ್ಥೆಯಲ್ಲಿ ಕಚ್ಚಾ ಹಾಗೂ ಬೇಯಿಸಿದ ಈರುಳ್ಳಿಯನ್ನು ಅಗತ್ಯ ಮಟ್ಟದಲ್ಲಿ ತಿನ್ನುವುದು ಉತ್ತಮ. 

೮. ಆರೋಗ್ಯಕರ ಚರ್ಮ, ಉಗುರು ಮತ್ತು ಕೂದಲು: ಈರುಳ್ಳಿ ತಿನ್ನುವುದರಿಂದ ಆಗುವ ಅತಿ ಆರೋಗ್ಯಕರ ಪ್ರಯೋಜನಗಳಲ್ಲಿ ಒಂದು ಕಚ್ಚಾ ಈರುಳ್ಳಿ ಸೇವಿಸುವುದು. ಇದರಿಂದ ನಿಮ್ಮ ಚರ್ಮ, ಉಗುರು ಮತ್ತು ಕೇಶ ಆರೋಗ್ಯಕರವಾಗುತ್ತವೆ. ಈರುಳ್ಳಿಯಲ್ಲಿರುವ ವಿಟಮಿನ್ ಎ, ಸಿ, ಮತ್ತು ಇ ನಿಮ್ಮ ಉಗುರುಗಳನ್ನು ಮತ್ತು ಕೂದಲುಗಳನ್ನು ಬಲವಾಗಿಸಿ, ಹೊಳೆಯುವಂತೆ ಮಾಡುತ್ತದೆ. ಈ ವಿಟಮಿನ್ ಗಳು ನಿಮ್ಮ ದೇಹದ ಕಲಾಜನ್ ಅಂಶವನ್ನು ವರ್ಧಿಸಿ, ನಿಮ್ಮ ಚರ್ಮ ಮೃದುವಾಗಿ, ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ. ಈ ಕಲಾಜನ್ ಅಂಶ ಗರ್ಭಿಣಿಯರಲ್ಲಿ ಆಗಬಹುದಾದ ಸ್ಟ್ರೆಚ್ ಮಾರ್ಕ್ಸ್ ಗಳು ಆಗದಂತೆ ಕಾಪಾಡುತ್ತದೆ. 

[Back To Top]

೩. ಗರ್ಭಾವಸ್ಥೆಯಲ್ಲಿ ಈರುಳ್ಳಿಯ ಅಡ್ಡಪರಿಣಾಮಗಳು: (Side Effects Of Eating Onions During Pregnancy In Kannada)

ಗರ್ಭಾವಸ್ಥೆಯಲ್ಲಿ ಈರುಳ್ಳಿಯನ್ನು ತಿನ್ನುವುದು ಆರೋಗ್ಯಕರವಾಗಿದ್ದರೂ, ಈ ಕೆಳಗಿನ ಅಡ್ಡಪರಿಣಾಮಗಳ ಬಗ್ಗೆ ಗಮನವಿರಲಿ: 

೧. ಭೇದಿ: ಇದು ಕಚ್ಚಾ ಈರುಳ್ಳಿ ತಿನ್ನುವುದರ ಒಂದು ಸಾಮಾನ್ಯ  ಅಡ್ಡಪರಿಣಾಮವಾಗಿದೆ. ಈರುಳ್ಳಿ ಹೊಟ್ಟೆಯೂರಿ ಅಥವಾ ಭೇದಿಯನ್ನು ಉಂಟು ಮಾಡಿದರೆ, ಈ ತರಕಾರಿಯನ್ನು ಸೇವಿಸುವುದನ್ನು ನಿಲ್ಲಿಸಿ, ನಿಮ್ಮ ವೈದ್ಯರ ಸಲಹೆ ಪಡಿಯಿರಿ. ಗರ್ಭಾವಸ್ಥೆಯಲ್ಲಿ ಈರುಳ್ಳಿ ಸೇವಿಸುವುದರಿಂದ ದೇಹದ ಶಾಖ ಹೆಚ್ಚಬಹುದು. ಇದರಿಂದ ಅರೋಗ್ಯ ತೊಂದರೆಗಳು ಉಂಟಾಗಬಹುದು. 

೨. ಎದೆಯುರಿತ ಮತ್ತು ಪಿತ್ತೋದ್ರೇಕ: ಈರುಳ್ಳಿಯ ವಾಸನೆ ಮತ್ತು ರುಚಿಯಿಂದ ಗರ್ಭಿಣಿಯರಲ್ಲಿ ಎದೆಯುರಿತ ಮತ್ತು ವಾಂತಿ ಪ್ರಾರಂಭಿಸಬಹುದು. ಈ ರೀತಿಯ ಅನುಭವವಾದರೆ, ಈರುಳ್ಳಿಯನ್ನು ತಿನ್ನದಿರುವುದು ಸೂಕ್ತ. 

೩. ಅಲರ್ಜಿ ಮತ್ತು ಉಸಿರಾಟದ ತೊಂದರೆ: ಈರುಳ್ಳಿಯ ಅಲೆರ್ಜಿಯ ಗುಣಲಕ್ಷಣಗಳು - ಚರ್ಮದ ನವೆ ಮತ್ತು ದದ್ದುಗಳು. ಇದು ಕ್ರಮೇಣ ಉಸಿರಾಟದ ತೊಂದರೆಗಳಾಗಿಯೂ ಪರಿವರ್ತನೆಗೊಳ್ಳಬಹುದು. 

೪. ಲಿಸ್ಟೆರೊಸಿಸ್ ಸೋಂಕು: ಗಿಲ್ ಈರುಳ್ಳಿಯಲ್ಲಿ ಲಿಸ್ಟೀರಿಯಾ ಮೊನೊಸೈಟೊಜೀನ್ಸ್  ಗಳಿದ್ದು, ಇದು ಬಹು ಬೇಗ ಗರ್ಭಿಣಿಯರಲ್ಲಿ ಸೋಂಕನ್ನು ಉಂಟುಮಾಡಬಹುದು. ಗರ್ಭಾವಸ್ಥೆಯಲ್ಲಿ ಈ ಸೋಂಕು ತಾಯಿಗೆ ತಟ್ಟಿದರೆ, ಮಗುವಿಗೂ ತಗಲುವ ಸಾಧ್ಯತೆ ಹೆಚ್ಚು. ಇದರಿಂದ ಅವಧಿಗಿಂತ ಮೊದಲು ಹೆರಿಗೆಯಾಗುವುದು, ಗರ್ಭಪಾತವಾಗುವುದು ಆಗಬಹುದು. ಹಾಗಾಗಿ ಗಿಲ್ ಈರುಳ್ಳಿ ಬದಲಿಗೆ ಬೇರೆ ಬಗೆಯ ಈರುಳ್ಳಿ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಸುರಕ್ಷಿತ. 

[Back To Top]

೫. ನಿರ್ಣಯ: (Conclusion In Kannada)

ಈರುಳ್ಳಿ ದೇಹಕ್ಕೆ ಅಗತ್ಯವಿರುವ ಪೌಷಿಟಕಾಂಶವನ್ನು ನೀಡುತ್ತದೆ. ಇದರಿಂದ ಗರ್ಭಿಣಿಯರಿಗೆ ಹಲವಾರು ಪ್ರಯೋಜನಗಳಿವೆ. ಅದರೊಂದಿಗೆ ಈರುಳ್ಳಿ ನಿಮ್ಮ ನಾಲಿಗೆಯ ಗೂಚಿ ಚೀಲಗಳನ್ನು ಸಂತೃಪ್ತಿಗೊಳಿಸುತ್ತದೆ. ಹಾಗಾಗಿ ನಿಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಈ ತರಕಾರಿಯನ್ನು ತಪ್ಪದೇ ಸೇವಿಸಿ. 

 

 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon