Link copied!
Sign in / Sign up
1
Shares

ಗರ್ಭಾವಸ್ಥೆಯಲ್ಲಿ ಜೇನುತುಪ್ಪ ಸೇವನೆ ಸುರಕ್ಷಿತವೇ? (Is Honey Safe For Consumption During Pregnancy? in Kannada)

ಸಿಹಿಯಾದ, ರುಚಿಯಾದ ಜೇನುತುಪ್ಪ ಒಂದು ಸಂತೋಷಕರ ಸಂವೇದನಾ ಅನುಭವವನ್ನು ನೀಡುತ್ತದೆ. ಸಂಸ್ಕರಿಸಿದ ಸಕ್ಕರೆಯ ಉತ್ತಮ ಪರ್ಯಾಯವಾಗಿದ್ದು, ಹಲವಾರು ಅರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಇದರಲ್ಲಿ ಹಲವು ಬಗೆಯ ವಿಟಮಿನ್ಸ್, ಮಿನರಲ್ಸ್, ಆಂಟಿಆಕ್ಸಿಡೆಂಟ್ಸ್, ಅಮೈನೊ ಆಮ್ಲಗಳು ಮತ್ತು ಇತರ ಕಿಣ್ವಗಳಿವೆ. ಆಹಾರ ಮತ್ತು ಔಷಧಿಗಳಲ್ಲಿ ಜೇನುತುಪ್ಪದ ಬಳಕೆಯ ಬಗ್ಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಗರ್ಭಾವಸ್ಥೆಯಲ್ಲಿ ಜೇನುತುಪ್ಪ ಎಷ್ಟು ಸುರಕ್ಷಿತ? ಗರ್ಭಾವಸ್ಥೆಯಲ್ಲಿ ಜೇನುತುಪ್ಪ ಎಷ್ಟು ಲಾಭದಾಯಕ?ಗರ್ಭಾವಸ್ಥೆಯಲ್ಲಿ ಜೇನುತುಪ್ಪ ತಿನ್ನಬಹುದಾದ ಆಹಾರವೇ ಅಥವಾ ಅಲ್ಲವೇ ಎಂದು ನಿಶ್ಚಯಿಸಲು ನಿಮಗೆ ತಿಳಿದಿರಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ. 

ಪರಿವಿಡಿ:

೧. ಜೇನುತುಪ್ಪ - ಏನಿದು? (Honey - what is it? in Kannada)

೨. ಜೇನುತುಪ್ಪದ ಗುಣಲಕ್ಷಣ (Properties of honey in Kannada)

೩. ಗರ್ಭಾವಸ್ಥೆಯಲ್ಲಿ ಜೇನುತುಪ್ಪ - ಸುರಕ್ಷಿತವೇ? (Honey during pregnancy - Is it safe? in Kannada)

೪. ಗರ್ಭವಾಸ್ಥೆಯಲ್ಲಿ ಎಷ್ಟು ಜೇನುತುಪ್ಪವನ್ನು ಸೇವಿಸಬಹುದು (How much honey during pregnancy is recommended? in Kannada)

೫. ಗರ್ಭಾವಸ್ಥೆಯಲ್ಲಿ ಜೇನುತುಪ್ಪದ ಲಾಭಗಳು (Benefits of honey during pregnancy in Kannada)

೬. ಗರ್ಭಾವಸ್ಥೆಯಲ್ಲಿ ಜೇನುತುಪ್ಪದ ಸಂಭವನೀಯ ಅಡ್ಡಪರಿಣಾಮಗಳು (Possible side effects of honey during pregnancy in Kannada)

೧. ಜೇನುತುಪ್ಪ - ಏನಿದು? (Honey - what is it? in Kannada)

ಜೇನುಹುಳಗಳು ಹೂವಿನಿಂದ ಪಡೆದ ಮಕರಂದವನ್ನು ಸುವರ್ಣ ಬಣ್ಣದ, ಸಿಹಿಯಾದ, ಜಿಗುಟಾದ ದ್ರವವನ್ನಾಗಿಸುತ್ತವೆ. ಇದನ್ನು ಜೇನುತುಪ್ಪ ಎಂದು ಕರೆಯಲಾಗುತ್ತದೆ. ಬಣ್ಣವನ್ನು ಆಧರಿಸಿ, ಜೇನುತುಪ್ಪವನ್ನು ವರ್ಗೀಕರಿಸಲಾಗಿದೆ. ಶುದ್ಧವಾದ, ಸುವರ್ಣ ಬಣ್ಣದ ಜೇನುತುಪ್ಪ ಮಾರುಕಟ್ಟೆಯಲ್ಲಿ ಗಾಢ ಬಣ್ಣದ ಜೇನುತುಪ್ಪಕ್ಕಿಂತ ದುಬಾರಿಯಾಗಿ . ಜೇನುತುಪ್ಪದ ರುಚಿ ಸಹ ಜೇನುಹುಳಗಳು ಯಾವ ಬಗೆಯ ಹೂವುಗಳಿಂದ ಮಕರಂದವನ್ನು ಹೀರಿಕೊಂಡಿವೆ ಎನ್ನುವುದರ ಮೇಲೆ ಅವಲಂಬಿಸಿದೆ. 

ಜೇನುತುಪ್ಪ ಕಚ್ಚಾ ಅಥವಾ ಸಂಸ್ಕರಿಸಿದ ರೂಪದಲ್ಲಿರಬಹುದು. ಕಚ್ಚಾ ಜೇನುತುಪ್ಪ ನೇರವಾಗಿ ಜೇನುಗೂಡಿನಿಂದ ಪಡೆದಿದ್ದು, ಅದರಲ್ಲಿ ಕಲ್ಮಶವಿರಬಹುದು. ಉದಾಹರೆಣೆಗೆ ಶಿಲಿಂಧ್ರಗಳು, ವ್ಯಾಕ್ಸ್ ಮತ್ತು ಪರಾಗಗಳು. ಸಂಸ್ಕರಿಸಿದ ಜೇನುತುಪ್ಪದಲ್ಲಿ ಯಾವುದೇ ಬಗೆಯ ಕಲ್ಮಶಗಳಿರುವುದಿಲ್ಲ.  

[Back To Top]

೨. ಜೇನುತುಪ್ಪದ ಗುಣಲಕ್ಷಣಗಳು (Properties of honey in Kannada):

USDA (ಯುನೈಟೆಡ್ ಸ್ಟೇಟ್ಸ್ ಆಫ್ ಅಗ್ರಿಕಲ್ಚರ್) ಅನುಸಾರ, ಒಂದು ಚಮಚ ಜೇನುತುಪ್ಪದಲ್ಲಿ ಕೆಳಗೆ ನೀಡಿರುವ ಪೌಷ್ಠಿಕತೆಯನ್ನು ಹೊಂದಿರುತ್ತದೆ:

೬೪ ಕ್ಯಾಲೋರಿ 

೧೭.೩ ಗ್ರಾಂ ಸಕ್ಕರೆ 

೦ ಗ್ರಾಂ ಫೈಬರ್ 

೦ ಗ್ರಾಂ ಕೊಬ್ಬು 

ಪ್ರೋಟೀನ್ ಇಲ್ಲ 

ಜೇನುತುಪ್ಪದಲ್ಲಿರುವ ಸಕ್ಕರೆಗ್ಲುಕೋಸ್ ಮತ್ತು ಫ್ರಕ್ಟೋಸ್ ತರಹದ ಮೋನೊಸ್ಯಾಕರೈಡ್ಸ್. 

ಜೇನುತುಪ್ಪ ಐರನ್, ಕ್ಯಾಲ್ಸಿಯಂ, ಫೋಫತೇ, ಸೋಡಿಯಂ ಕ್ಲೋರೈಡ್, ಪೊಟ್ಯಾಸಿಯಂ, ಮೆಗ್ನೀಷಿಯಂ ಗಳಂತಹ ಮಿನರಲ್ ಗಳನ್ನು ಹೊಂದಿದೆ. ಇವುಗಳು ಮಾನವ ದೇಹವನ್ನಿ ಸೂಕ್ತ ರೀತಿಯಲ್ಲಿ ನಿಭಾಯಿಸುವಲ್ಲಿ ಸಹಾಯ್ ಮಾಡುತ್ತವೆ. 

ಬೀಸೋರ್ಸ್ ಅನುಸಾರ, ಜೇನುತುಪ್ಪದ ಬದಿನೋಟ ಕೆಳಗೆ ನೀಡಿರುವಂತೆ ಇರುತ್ತದೆ:

೩೮.೨% ಫ್ರಕ್ಟೋಸ್ 

೩೧.೩% ಗ್ಲುಕೋಸ್ 

೭.೧% ಮಾಲ್ಟೋಸ್ 

೧.೩% ಸುಕ್ರೋಸ್ 

೧೭.೨% ನೀರು 

೧.೫% ಮೇಲ್ಮಟ್ಟದ ಸಕ್ಕರೆ 

೦.೨% ಬೂದಿ

೨.೩% ಇತರ ಪದಾರ್ಥಗಳು

ಜೇನುತುಪ್ಪ ಆಮ್ಲೀಯತೆಯನ್ನು ಹೊಂದಿದ್ದಿ, ಅದು ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಗಟ್ಟುತ್ತದೆ. ಅದರೊಂದಿಗೆ, ಜೇನುತುಪ್ಪದಲ್ಲಿರುವ ಆಂಟಿಆಕ್ಸಿಡೆಂಟ್ಸ್ ಗಳು ರೋಗಗಳನ್ನು ಉಂಟುಮಾಡಬಹುದಾದ ಫ್ರೀ ರಾಡಿಕಲ್ ಗಳನ್ನು  ತೊಡೆದುಹಾಕುತ್ತದೆ. 

[Back To Top]

೩. ಗರ್ಭಾವಸ್ಥೆಯಲ್ಲಿ ಜೇನುತುಪ್ಪ - ಸುರಕ್ಷಿತವೇ? (Honey during pregnancy - Is it safe? in Kannada)

ಗರ್ಭಾವಸ್ಥೆಯಲ್ಲಿ ಎಂಥಹ ನಿರಾತಂಕ ಜೀವಿ ಸಹ ತಾನು ತಿನ್ನುವ ಆಹಾರಗಳ ಬಗ್ಗೆ ನಿಗಾವಹಿಸುತ್ತಾನೆ. ಪ್ರತಿ ತಾಯಿಗೆ ತನ್ನ ಮಗುವಿನ ಸುಕ್ಷೇಮದ ಬಗ್ಗೆ ಕಾಳಜಿ ಇರುವುದು ಸಹಜ. ಹಾಗಾಗಿ, ಗರ್ಭಾವಸ್ಥೆಯಲ್ಲಿ ಯಾವ ಆಹಾರ ಸೇವಿಸಬೇಕು, ಯಾವ ಆಹಾರ ಸೇವಿಸಬಾರದು ಎಂದು ತಿಳಿದುಕೊಳ್ಳುವುದು ಮುಖ್ಯ. ಅಂತಹ ಆಹಾರಗಳಲ್ಲಿ ಜೇನುತುಪ್ಪ ಸಹ ಒಂದು. ಅದು ಗರ್ಭಾವಸ್ಥೆಯಲ್ಲಿ ತಿನ್ನುವ ಆಹಾರಗಳಲ್ಲಿ ಒಂದೇ? ಅಥವಾ ಅಲ್ಲವೇ? ಇಲ್ಲಿದೆ ಅದಕ್ಕೆ ಉತ್ತರ. 

ಜೇನುತುಪ್ಪ ತನ್ನಲ್ಲಿರುವ ಹೈಡ್ರೋಜನ್ ಪೆರಾಕ್ಸೈಡ್ ನ ಕಾರಣದಿಂದಾಗಿ ಆಂಟಿಮೈಕ್ರೋಬಿಯಲ್ ಗುಣವನ್ನು ಹೊಂದಿದೆ. ಇದ್ರಿಂದಾಗಿ ಯಾವುದೇ ಬಗೆಯ ಸೂಕ್ಷ್ಮಜೀವಿಗಳನ್ನು ಜೇನುತುಪ್ಪ ಬೆಳೆಯಲು ಬಿಡುವುದಿಲ್ಲ. ಅದರೊಂದಿಗೆ, ಜೇನುತುಪ್ಪವನ್ನು ಸೇವಿಸುವುದರಿಂದ, ಎಲ್ಲಾ ಬಗೆ ಸೋಂಕುಗಳಿಂದ ಮುಕ್ತಿ ಪಡೆದು, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ, ಗರ್ಭಾವಸ್ಥೆಯಲ್ಲಿ ಜೇನುತುಪ್ಪ ಸೇವಿಸುವುದರಿಂದ ಯಾವುದೇ ಹಾನಿಯಿಲ್ಲ. ಆದರೆ ನಿಮ್ಮ ವೈದ್ಯರು ಇದರ ವಿರುದ್ಧವಾಗಿ ಹೇಳಿದರೆ, ಅವರ ಅಭ್ಪ್ರಾಯವನ್ನು ಪರಿಗಣಿಸವುದು ಉತ್ತಮ. 

ಗರ್ಭಾವಸ್ಥೆಯಲ್ಲಿ ಜೇನುತುಪ್ಪ ಸೇವಿಸುವುದರಿಂದ ಹಲವಾರು ಪ್ರಯೋಜನಗಳಿದ್ದರೂ, ಅದರಿಂದಾಗಬಹುದಾದ ಒಂದು ಸಮಸ್ಯೆ ಬಗ್ಗೆ ಪರಿಗಣಿಸುವುದು ಸೂಕ್ತ - ಬೊಟುಲಿಸ್ಮ್. 

ಬೊಟುಲಿಸ್ಮ್ ವಿರಳವಾದರೂ ಗಂಭೀರ ಅರೋಗ್ಯ ತೊಂದರೆ. ಇದು ಕ್ಲೊಸ್ಟ್ರಿಡಿಯ ಬೀಜಗಳಿಂದ (ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ) ಉಂಟಾಗುತ್ತದೆ. ಜೇನುತುಪ್ಪ ಕಲ್ಮಶಗೊಂಡಿದ್ದರೆ, ಈ ಬೀಜಕಗಳು ಉಪಸ್ಥಿತವಿರಬಹುದು. ಆದರೆ ನಿಮ್ಮ ನೈಸರ್ಗಿಕ ರೋಗನಿರೋಧಕ ಶಕ್ತಿ ಈ ಬೀಜಕಗಳಿಂದ ಉಂಟಾಗಬಹುದಾದ ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಗರ್ಭಾವಸ್ಥೆಯಲ್ಲಿ ಇಂತಹ ಕಲುಷಿತಗೊಂಡಿರುವ ಜೇನುತುಪ್ಪವನ್ನು ಸೇವಿಸಿದರೆ, ಈ ಬೀಜಗಳಿಂದ ನಿಮ್ಮ ಮಗುವಿಗೆ ಯಾವುದೇ ರೀತಿಯ ಹಾನಿಯುಂಟು ಮಾಡಲಾರದು. ಈ ಬೀಜಕಗಳು ನಿಮ್ಮ ದೇಹವನ್ನು ಪ್ರವೇಶಿಸಿದರೂ ದೇಹದ ಅಂಡಾಧಾರಕವನ್ನು ದಾಟಲು ಸಾಧ್ಯವಿಲ್ಲ. ಅಂಡಾಧಾರಕ ನಿಮ್ಮ ಮಗುವನ್ನು ಯಾವುದೇ ರೀತಿಯ ಸಂಭವನೀಯ ಸೋಂಕುಗಳಿಂದ ಕಾಪಾಡುತ್ತದೆ. 

೪. ಗರ್ಭವಾಸ್ಥೆಯಲ್ಲಿ ಎಷ್ಟು ಜೇನುತುಪ್ಪವನ್ನು ಸೇವಿಸಬಹುದು? (How much honey during pregnancy is recommended? in Kannada)

ಮಿತವಾಗಿ ಸೇವಿಸುವ ಎಲ್ಲವೂ ಆರೋಗ್ಯಕರವೇ! ಹಾಗೆಯೆ ಜೇನುತುಪ್ಪ ಸಹ. 

ಜೇನುತುಪ್ಪ ಹೆಚ್ಚಿನ ಮಟ್ಟದ ಸಕ್ಕರೆ ಅಂಶವನ್ನು (ಶೇಖಡಾ ೭೦%) ಹೊಂದಿದೆ. ಮೊದಲೇ ತಿಳಿಸಿರುವಂತೆ, ಅದರಲ್ಲಿ ಫ್ರಕ್ಟೋಸ್, ಗ್ಲುಕೋಸ್, ಮಾಲ್ಟೋಸ್ ಗಳಿವೆ. ಗರ್ಭಾವಸ್ಥೆಯಲ್ಲಿ ನೀವು ಫ್ರಕ್ಟೋಸ್, ಸುಕ್ರೋಸ್ ತರಹದ ಸಕ್ಕರೆ ಪದಾರ್ತಿಗಳಿಂದ ಪಡೆಯುವ ಕ್ಯಾಲೋರಿ ನಿಮ್ಮ ಪ್ರತಿನಿತ್ಯದ ಕ್ಯಾಲೊರಿ ಅಗತ್ಯತೆಯ (ಸರಿಸುಮಾರು ೧೮೦೦ ರಿಂದ ೨೪೦೦ ಕ್ಯಾಲೋರಿಸ್) ಶೇಖಡಾ ೧೦% ದಾಟಬಾರದು. ಹಾಗಾಗಿ, ಗರ್ಭಿಣಿಯರಿಗೆ ಜೇನುತುಪ್ಪ ಸೇವಿಸುವ ಸುರಕ್ಷಿತ ಪದ್ಧತಿಯೆಂದರೆ ಅವರು ಪ್ರತಿನಿತ್ಯ ಸೇವಿಸುವ ಜೇನುತುಪ್ಪವನ್ನು ಚಮಚಗಳಲ್ಲಿ ಅಳೆಯುವುದು. ಸಾಮಾನ್ಯವಾಗಿ, ಗರ್ಭಿಣಿಯರು ಪ್ರತಿನಿತ್ಯ ೨ರಿಂದ ೫ ಚಮಚ ಜೇನುತುಪ್ಪವನ್ನು ಸೇವಿಸಬಹುದು. ಇದರಿಂದ ಜೇನುತುಪ್ಪದಿಂದ ದೊರೆಯುವ ಕ್ಯಾಲೋರಿಗಳು ೧೮೦ ರೊಂದ ೨೦೦ ರ ಒಳಗೆ ಇರುತ್ತದೆ. 

[Back To Top]

೫. ಗರ್ಭಾವಸ್ಥೆಯಲ್ಲಿ ಜೇನುತುಪ್ಪದ ಲಾಭಗಳು (Benefits of honey during pregnancy in Kannada):

ಗರ್ಭಾವಸ್ಥೆಯಲ್ಲಿ ಸೇವಿಸಬಹುದಾದ ಆಹಾರಗಳಲ್ಲಿ ಜೇನುತುಪ್ಪ ಕೂಡ ಒಂದು. ಅದಕ್ಕೆ ಕಾರಣ, ಜೇನುತುಪ್ಪದ ಹಲವಾರು ಅರೋಗ್ಯ ಲಾಭಗಳು. ಅಂತಹ ಲಾಭಗಳ ಮಾಹಿತಿ ಇಲ್ಲಿದೆ. 

* ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ: ಜೇನುತುಪ್ಪದಲ್ಲಿರುವ ಆಂಟಿಆಕ್ಸಿಡೆಂಟ್ಸ್, ಆಂಟಿಬ್ಯಾಕ್ಟೇರಿಯಾಲ್ ಗುಣ ಮತ್ತು ಅದರ ಪೌಷ್ಟಿಕತೆಯ ಕಾರಣದಿಂದ ಅದು ನಿಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅದರಲ್ಲಿಯೂ ಗರ್ಭಾವಸ್ಥೆಯಲ್ಲಿ ಜೇನುತುಪ್ಪ ಅತಿ ಉಪಯುಕ್ತ. 

* ಶೀತದ ವಿರುದ್ಧ ಹೋರಾಡುತ್ತದೆ: ಗರ್ಭಾವಸ್ಥೆಯಲ್ಲಿ ಗರ್ಭಿಣಿಯರು ಅನುಭವಿಸುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು - ಶೀತ. ಅದಕ್ಕೆ ಕಾರಣ ಕುಗ್ಗಿದ ರೋಗನಿರೋಧಕ ಶಕ್ತಿ. ಆದರೆ ಗರ್ಭಾವಸ್ಥೆಯಲ್ಲಿ ಜೇನುತುಪ್ಪದ ಲಾಭದಿಂದ ಇದನ್ನು ಕಡಿಮೆಗೊಳಿಸಬಹುದು. ಮುನ್ನೆಚ್ಚರಿಕೆ ಕ್ರಮವಾಗಿಯೂ ಜೇನುತುಪ್ಪವನ್ನು ಟೀ ಅಥವಾ ಉಗುರುಬೆಚ್ಚಗಿನ ನೀರಿನೊಂದಿಗೆ ಸೇರಿಸಿ ಕುಡಿಯಬಹುದು. 

* ಗಂಟಲು ನೋವು ಮತ್ತು ಕೆಮ್ಮು: ಜೇನುತುಪ್ಪದಲ್ಲಿ ಉರಿಯೂತದ ವಿರೋಧಿ ಗುಣವಿದೆ. ಗರ್ಭಾವಸ್ಥೆಯಲ್ಲಿ ಜೇನುತುಪ್ಪವನ್ನು ಸೇವಿಸುವುದರಿಂದ ಅದು ನಿಮ್ಮ ಗಂಟಲಿಗೆ ಆರಾಮ ನೀಡಿ, ಕೆಮ್ಮಣ್ಣು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತದೆ. 

* ನಿದ್ರಾಹೀನತೆಯಿಂದ ಮುಕ್ತಿ ನೀಡುತ್ತದೆ: ಒತ್ತಡವನ್ನು ಕಡಿಮೆಹೊಲಿಸುವ ಗುಣವನ್ನು ಹೊಂದಿರುವ ಜೇನುತುಪ್ಪ ನಿದ್ರಾಹೀನತೆಯನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಜೇನುತುಪ್ಪವನ್ನು ಸೇವಿಸುವುದರಿಂದ, ಅದು ಒತ್ತಡವನ್ನು ಕಡಿಮೆಗೊಳಿಸಿ, ನಿಮ್ಮ ದೇಹಕ್ಕೆ ಒಳ್ಳೆ ನಿದ್ದೆ ಬರುವಂತೆ ಮಾಡುತ್ತದೆ. 

* ಹುಣ್ಣುಗಳನ್ನು ನಿವಾರಿಸುತ್ತದೆ: ಗರ್ಭಾವಸ್ಥೆಯಲ್ಲಿ ಅಸಿಡಿಟಿ, ಗ್ಯಾಸ್ಟ್ರಿಕ್, ಎದೆಯುರಿ ಸಾಮಾನ್ಯವಾಗಿ ಕಾಡುವ ಅರೋಗ್ಯ ತೊಂದರೆ. ಜೇನುತುಪ್ಪವನ್ನು ಗರ್ಭಾವಸ್ಥ್ಯಾಲ್ಲಿ ನಿಯಮಿತವಾಗಿ ಸೇವಿಸುವುದರಿಂದ ಈ ತೊಂದರೆಗಳಿಂದ ಉಂಟಾಗುವ ಹುಣ್ಣನ್ನು ವೇಗವಾಗಿ ನಿವಾರಿಸಲು ಸಹಾಯ ಮಾಡುತ್ತದೆ. 

* ಅಲರ್ಜಿಗಳನ್ನು ತಡೆಗಟ್ಟುತ್ತದೆ: ಜೇನುತುಪ್ಪವನ್ನು ನಿಯಮಿತವಾಗಿ ಸೇವಿಸುವುದರಿಂದ ಅಲರ್ಜಿಗಳ ವಿರುದ್ಧ ನಿಮ್ಮ ದೇಹ ಪ್ರತಿರೋಧ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತದೆ. ಅದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. 

* ಆರೋಗ್ಯಕರ ನೆತ್ತಿ: ಜೇನುತುಪ್ಪದ ಆಂಟಿಬ್ಯಾಕ್ಟೀರಿಯಲ್ ಮತ್ತು ಅಂಟಿಫುನ್ಗಲ್ ಗುಣದಿಂದಾಗಿ ಅದು ತೆರೆದ ಗಾಯ ಮತ್ತು ನೆತ್ತಿಯನ್ನು ಚಿಕಿತ್ಸಿಸುವಲ್ಲಿ ಸಹಾಯ ಮಾಡುತ್ತದೆ. ಜೇನುತುಪ್ಪ ಮತ್ತು ಬೆಚ್ಚಗಿನ ನೀರನ್ನು ಕಲಸಿ, ತಲೆಹೊತ್ತಾಗಿರುವ ಜಾಗಕ್ಕೆ ಲೇಪಿಸಿಕೊಂಡರೆ, ಅದು ತಲೆಹೊಟ್ಟು ನಿವಾರಿಸುವುದರೊಂದಿಗೆ ನೆವೆಭರಿತ ನೆತ್ತಿಯನ್ನೂ ನಿವಾರಿಸುತ್ತದೆ. 

* ಔಷಧೀಯ ಗುಣಗಳು: ಜೇನುತುಪ್ಪದ ಔಷಧೀಯ ಗುಣಗಳು ಜೇನುತುಪ್ಪದ ಬಗೆಯ ಮೇಲೆ ಅವಲಂಬಿತವಾಗಿದೆ. ಜೇನುತುಪ್ಪವನ್ನು ಯಾವುದೇ ರೀತಿಯ ಗಾಯ ಮತ್ತು ಇತರೆ ಅರೋಗ್ಯ ತೊಂದರೆಗಳನ್ನು ಚಿಕಿತ್ಸಿಸುವಲ್ಲಿ ಸಹಾಯ ಮಾಡುತ್ತದೆ. 

[Back To Top]

೬. ಗರ್ಭಾವಸ್ಥೆಯಲ್ಲಿ ಜೇನುತುಪ್ಪದ ಸಂಭವನೀಯ ಅಡ್ಡಪರಿಣಾಮಗಳು (Possible side effects of honey during pregnancy in Kannada):

ಗರ್ಭಾವಸ್ಥೆಯಲ್ಲಿ ಜೇನುತುಪ್ಪವನ್ನು ಸೇವಿಸುವುದು ಸುರಕ್ಷಿತವಾದರೂ, ಇತರ ಆಹಾರಗಳ ರೀತಿಯಲ್ಲಿಯೇ, ಇದಕ್ಕೂ ಸಹ ವಿನಾಯಿತಿ ಇದೆ. 

೧. ಜೆಸ್ಟೇಷನಲ್ ಡಯಾಬಿಟಿಸ್ ಅಥವಾ ಗರ್ಭಾವಸ್ಥೆಯ ಮಧುಮೇಹ: 

ಗರ್ಭಾವಸ್ಥೆಯ ಮಧುಮೇಹ ಎನ್ನುವ ಅರೋಗ್ಯ ಸಮಸ್ಯೆಯಲ್ಲಿ ಸಕ್ಕರೆ ಮಟ್ಟ ಕೇವಲ ಗರ್ಭಾವಸ್ಥೆಯಲ್ಲಿ ಹೆಚ್ಚುತ್ತದೆ. ಮಗುವಿನ ಜನನದ ನಂತರ ಇದು ಕ್ರಮೇಣ ಮೋಡಲ್ ಸ್ಥಿತಿಗೆ ಬರುತ್ತದೆ. ಕೆಲವ್ರು ಈ ತೊಂದರೆಯನ್ನು ಗರ್ಭಾವಸ್ಥೆಯಲ್ಲಿ ಬೆಳೆಸಿಕೊಳ್ಳಬಹುದು. ಇದರಿಂದಾಗಿ ಅವರ ರಕ್ತದ ಸಕ್ಕರೆ ಮಟ್ಟವನ್ನು ಆಗಾಗ ಪರೀಕ್ಷಿಸಬೇಕಾಗುತ್ತದೆ. ಅಂತಹ ಪರಿಸ್ಥಿತಯಲಿ ಇದು ಹಾನಿಕಾರಕವಾಗಿದ್ದು, ಜೇನುತುಪ್ಪ ಗರ್ಭಿಣಿಯರು ಸೇವಿಸದೇ ಇರಬೇಕಾದ ಆಹಾರಗಳ ಪಟ್ಟಿಯಲ್ಲಿ ಸೇರುತ್ತದೆ. ಟೈಪ್ ೨ ಮಧುಮೇಹದಿಂದ ಬಳಲುತ್ತಿರುವವರು ಸಹ ಜೇನುತುಪ್ಪವನ್ನು ಸೇವಿಸಬಾರದು. 

೨. ಜೇನುತುಪ್ಪದ ಅಲರ್ಜಿ: ಜೇನುತುಪ್ಪದಿಂದ ಅಲರ್ಜಿ ಉಂಟಾಗುವುದು ವಿರಳವಾದರೂ, ಅಧಿಕವಾಗಿ ಜೇನುತುಪ್ಪ ಸೇವಿಸುವುದರಿಂದ ಹೊಟ್ಟೆ ನೋವು, ಬೇಧಿ, ಹೊಟ್ಟೆಯಲ್ಲಿ ಕಿರಿಕಿರಿ ಉಂಟಾಗಬಹುದು. ಅಂತಹ ತೊಂದರೆಗಳನ್ನು ತಡೆಗಟ್ಟಲು, ಶುದ್ಧ ಜೇನುತುಪ್ಪವನ್ನು ಸೇವಿಸುವುದು ಒಳಿತು. 

ಜೇನುತುಪ್ಪ ಸಕ್ಕರೆಗೆ ಅತ್ಯುತ್ತಮ ಪರ್ಯಾಯ. ಇದರಿಂದ ಗರ್ಭಾವಸ್ಥೆಯಲ್ಲಿ ಅಧಿಕವಾದ ಅರೋಗ್ಯ ಪ್ರಯೋಜನಗಳಿವೆ. ಆದರೆ ಇತರ ಎಲ್ಲಾ ಆಹಾರಗಳಂತೆ, ಗರ್ಭಾವಸ್ಥೆಯಲ್ಲಿ ಜೇನುತುಪ್ಪದ ಅಡ್ಡಪರಿಣಾಮಗಳೂ ಉಂಟಾಗಬಹುದು. ಅಗತ್ಯವಾಗಿ, ಜೇನುತುಪ್ಪವನ್ನು ನಿಮ್ಮ ಆಹಾರಗಳಲ್ಲಿ ಸೇರಿಸಬಹುದಾದರೂ, ನಿಮಗೆ ಯಾವುದೇ ಬಗೆಯ ಅನುಮಾನವಿದ್ದಲ್ಲಿ, ನಿಮ್ಮ ವೈದ್ಯರ ಬಳಿ ವಿಚಾರಿಸಿ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon