Link copied!
Sign in / Sign up
3
Shares

ಗರ್ಭಾವಸ್ಥೆಯಲ್ಲಿ ಗೋಡಂಬಿ ಸೇವಿಸುವುದು ಸುರಕ್ಷಿತವೇ? (Is It Safe To Eat Cashew Nuts During Pregnancy in Kannada)

ಗರ್ಭಾವಸ್ಥೆಯಲ್ಲಿ ತಂದೆ-ತಾಯಿಯಾಗಲಿರುವ ಜೋಡಿಗೆ ಸಹಜವಾಗಿ ಸಾಕ್ಷ್ಟು ಪ್ರಶ್ನೆಗಳು ಕಾಡುತ್ತವೆ. ಪ್ರಾಯಶಃ ಆ ಪ್ರಶ್ನೆಗಳು ಗರ್ಭಾವಸ್ಥೆಯ ಆಹಾರ ಮತ್ತು ಯಾವ್ ಆಹಾರ ಮಗುವಿಗೆ ಉತ್ತಮ ಎನ್ನುವುದರ ಬಗ್ಗೆ ಇರುತ್ತದೆ. ಗರ್ಭಾವಸ್ಥೆಯಲ್ಲಿ ಹಲವಾರು ಬಗೆಯ ಆಹಾರವನ್ನು ಸೇವಿಸದೇ ಇರಲು ವೈದ್ಯರು ಸೂಚಿಸುತ್ತಾರೆ. ಗೋಡಂಬಿಯಂತಹ ಬೀಜಗಳು ಪೌಷ್ಠಿಕತೆಯಿಂದ ಕೂಡಿದ್ದರೂ, ಗರ್ಭಾವಸ್ಥೆಯಲ್ಲಿ ಅವುಗಳ ಸೇವನೆ ತಾಯಿ ಮತ್ತು ಮಗುವಿಗೆ ಒಳಿತೇ, ಕೆಡಕೇ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಕಂಡುಕೊಳ್ಳಬೇಕು. 

ಈ ಪ್ರಶ್ನೆಗೆ ಸುಲಭವಾದ ಉತ್ತರವೆಂದರೆ - ಹೌದು, ಗೋಡಂಬಿ ತಾಯಿ ಆರೋಗ್ಯಕ್ಕೆ ಸಂಪೂರ್ಣವಾಗಿ ಸುರಕ್ಷಿತ. ಅದರೊಂದಿಗೆ ಗೋಡಂಬಿ ಪೌಷ್ಠಿಕತೆಯಿಂದಲೂ ಕೂಡಿದೆ. ಇದು ನಿಮ್ಮ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ನೀವು ಗೋಡಂಬಿಗಳ ಸೇವನೆಯಿಂದ ಯಾವುದೇ ಬಗೆಯ ಅಲ್ಲರ್ಜಿಯಿಂದ ಬಳಲುವುದಿಲ್ಲ ಎಂದಾದಲ್ಲಿ, ಗೋಡಂಬಿಯನ್ನು ನಿಶ್ಚಿಂತೆಯಿಂದ ನಿಮ್ಮ ಗರ್ಭಾವಸ್ಥೆಯ ಆಹಾರದಲ್ಲಿ ಸೇರಿಸಿ.

ಪರಿವಿಡಿ:

೧. ಗರ್ಭಾವಸ್ಥೆಯಲ್ಲಿ ಗೋಡಂಬಿಯ ಪ್ರಯೋಜನಗಳು (Benefits of cashew nuts during the pregnancy period in Kannada)

೨. ಗೋಡಂಬಿಯ ಪೌಷ್ಟಿಕ ಮೌಲ್ಯ (Nutritional values of Cashew nuts in Kannada)

೩. ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಗೋಡಂಬಿಯನ್ನು ಹೇಗೆ ಸೇರಿಸಬೇಕು? (How you can add Cashew nuts to your everyday diet in Kannada)

೪. ಗೋಡಂಬಿ ಸೇವನೆಯಿಂದ ಆಗಬಹುದಾದ ಅಡ್ಡಪರಿಣಾಮಗಳು (Possible side effects of consuming cashew nuts in Kannada)

* ಅಲ್ಲೆರ್ಜಿಗಳು (Allergies in Kannada)

* ಸಂಭವನೀಯ ತೂಕ ಗಳಿಕೆ (Possible weight gain in Kannada)

* ರಕ್ತದೊತ್ತಡ ಹೆಚ್ಚುವಿಕೆ (Might increase your blood pressure in Kannada)

* ಮೂತ್ರಪಿಂಡದಲ್ಲಿ ಕಲ್ಲುಗಳು ಮತ್ತು ಪಿತ್ತಕೋಶದ ಕಲ್ಲಿನ ಸಮಸ್ಯೆ (Kidney stone and gall stone issues in Kannada)

೫. ಗೋಡಂಬಿ ಸೇವಿಸಲು ವಹಿಸಬಹುದಾದ ಮುನ್ನೆಚ್ಚರಿಕೆ (Precautionary measures while eating cashews in Kannada)

೬. ನಿರ್ಣಯ (Conclusion in Kannada)

೧. ಗರ್ಭಾವಸ್ಥೆಯಲ್ಲಿ ಗೋಡಂಬಿಯ ಪ್ರಯೋಜನಗಳು (Benefits of cashew nuts during the pregnancy period in Kannada)

ನೀವು ನಂಬುತ್ತೀರೋ, ಇಲ್ಲವೋ ಆದರೆ ಗೋಡಂಬಿಯಿಂದ ನಿಮಗೆ ಮತ್ತು ನಿಮ್ಮ ಮಗುವಿಗೆ ಹಲವಾರು ಪ್ರಯೋಜನಗಳಿರುವುದಂತೂ ಸತ್ಯ. ಅಂತಹ ಕೆಲವು ಪ್ರಯೋಜನಗಳ ಪಟ್ಟಿಯನ್ನು ಕೆಳಗೆ ನೀಡಿದ್ದೇವೆ:

೧. ಗೋಡಂಬಿಗಳು ನಾರಿನಾಂಶದಲ್ಲಿ ಹೆಚ್ಚಿದ್ದು, ಗರ್ಭಾವಸ್ಥೆಯಲ್ಲಿ ಕಾಡುವ ಸಾಮಾನ್ಯ ಸಮಸ್ಯೆಯಾದ ಮಲಬದ್ಧತೆ ಸಮಸ್ಯೆಯನ್ನು ನಿಯಂತ್ರಿಸಿ, ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. 

೨. ಗೋಡಂಬಿಯಲ್ಲಿ ಪ್ರೋಟೀನ್, ಕೊಬ್ಬಿನಂಶ ಹೆಚ್ಚಿದ್ದು, ತೂಕ ಗಳಿಸಲು ಬಯಸುವ ಗರ್ಭಿಣಿಯರಿಗೆ ಸಹಾಯ ಮಾಡುತ್ತದೆ. 

೩. ಗೋಡಂಬಿಯಲ್ಲಿರುವ ಕ್ಯಾಲ್ಸಿಯಂ ನಿಮ್ಮ ಹಾಗೂ ನಿಮ್ಮ ಮಗುವಿನ ಹಲ್ಲು ಮತ್ತು ಮೂಳೆಗಳನ್ನು ಬಲಿಷ್ಠಗೊಳಿಸುತ್ತದೆ. 

೪. ಗೋಡಂಬಿ ಸೇವಿಸುವುದರಿಂದ ನಿಮ್ಮ ಹೊಟ್ಟೆಯಲ್ಲಿರುವ ಭ್ರೂಣಕ್ಕೆ ಯಾವುದೇ ಬಗೆಯ ಸೋಂಕು ತಗಲದಂತೆ ಕಾಪಾಡಬಹುದು. 

೫. ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ತಲೆನೋವು, ನರಗಳ ನೋವಿನಂತಹ ಸಮಸ್ಯೆಗಳಿಂದ ಬಳಲುವುದು ಸಾಮಾನ್ಯ. ಗೋಡಂಬಿಯಲ್ಲಿರುವ ಮೆಗ್ನೀಷಿಯಂ ಈ ಲಕ್ಷಣಗಳನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತದೆ. 

೬. ವಿಟಮಿನ್ ಕೆ ಹೊಂದಿರುವ ಗೋಡಂಬಿ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ, ನಿಮ್ಮ ಮಗುವಿನ ರಕ್ತಸ್ರಾವದ ತೊಂದರೆಗಳನ್ನು ತಡೆಗಟ್ಟುವಲ್ಲಿ ಭಾಗಿಯಾಗುತ್ತದೆ. 

೭. ಗೋಡಂಬಿಯಲ್ಲಿರುವ ಐರನ್ ಅಂಶ ಸುಸ್ತು, ಅನಿಮಿಯಾ ಗಳನ್ನು ತಡೆಗಟ್ಟಿ, ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವಲ್ಲಿ ನಿಮ್ಮ ದೇಹಕ್ಕೆ ಸಹಾಯ ಮಾಡುತ್ತದೆ. 

೮. ಗೋಡಂಬಿಯಲ್ಲಿರುವ ಪೋಷಕಾಂಶ, ಫೋಲಿಕ್ ಆಮ್ಲ, ಜನನದಿಂದಲೇ ನಿಮ್ಮ ಮಗುವಿಗೆ ಕಾಡುವ ಅರೋಗ್ಯ ಸಮಸ್ಯೆಗಳನ್ನು ದೂರವಿಡುತ್ತದೆ. 

೯. ಗೋಡಂಬಿಯಲ್ಲಿರುವ ಕಾಪರ್ ಭ್ರೂಣದಲ್ಲಿರುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವಲ್ಲಿ ಸಹಾಯ ಮಾಡುತ್ತದೆ. 

೧೦. ಗೋಡಂಬಿ ರಕ್ತದ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ. 

ಗೋಡಂಬಿಯ ಈ ಎಲ್ಲ ಅರೋಗ್ಯ ಪ್ರಯೋಜನಗಳನ್ನು ಪರಿಗಣಿಸುವುದರೊಂದಿಗೆ, ಅದರಲ್ಲಿ ಕ್ಯಾಲೋರಿ ಅಂಶವೂ ಹೆಚ್ಚಿದೆ. ನೀವು ಗೋಡಂಬಿಯನ್ನು ಅಧಿಕವಾಗಿ ಸೇವಿಸಿದರೆ, ಇದರಿಂದಾಗಿ ನಿಮ್ಮಲ್ಲಿ ಹೆಚ್ಚಿನ ತೂಕ ಗಳಿಕೆಯಾಗುವ ಸಾಧ್ಯತೆ ಇರುತ್ತದೆ. 

[Back To Top]

೨. ಗೋಡಂಬಿಯ ಪೌಷ್ಟಿಕ ಮೌಲ್ಯ (Nutritional values of Cashew nuts in Kannada):

ಪ್ರತಿ ೧೦೦ ಗ್ರಾಂ ಗೋಡಂಬಿಯಲ್ಲಿ ಕೆಳಗೆ ಕೊಟ್ಟಿರುವ ಪೌಷ್ಟಿಕತೆ ಇರುತ್ತದೆ. 

* ಮೆಗ್ನೀಷಿಯಂ - ೨೯೧ ಮಿಲಿಗ್ರಾಮ್ 

* ಪೊಟ್ಯಾಸಿಯಂ - ೬೬೦ ಮಿಲಿಗ್ರಾಮ್

* ಫಾಸ್ಫರಸ್ - ೫೯೩ ಮಿಲಿಗ್ರಾಮ್

* ಜಿಂಕ್ - ೫.೭೮ ಮಿಲಿಗ್ರಾಮ್

* ಕ್ಯಾಲ್ಸಿಯಂ - ೩೭ ಮಿಲಿಗ್ರಾಮ್

* ಐರನ್ - ೬.೬೮ ಮಿಲಿಗ್ರಾಮ್

* ಫೋಲೇಟ್ - ೨೫ mcg

* ವಿಟಮಿನ್ ಕೆ - ೩೪.೧ mcg

* ಕಾಪರ್ - ೨.೧೯೫ ಮಿಲಿಗ್ರಾಮ್

* ಕಾರ್ಬೋಹೈಡ್ರೇಟ್ - ೩೦.೧೯ ಗ್ರಾಂ 

* ಡೈಟರಿ ಫೈಬರ್ - ೩.೩ ಗ್ರಾಂ  

* ಪ್ರೋಟೀನ್ - ೧೮.೨೨ ಗ್ರಾಂ 

* ಕೊಬ್ಬು - ೪೩.೮೫ ಗ್ರಾಂ 

* ಸ್ಯಾಚುರೇಟೆಡ್ ಕೊಬ್ಬು - ೭.೭೮೩ ಗ್ರಾಂ 

೩. ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಗೋಡಂಬಿಯನ್ನು ಹೇಗೆ ಸೇರಿಸಬೇಕು? (How you can add Cashew nuts to your everyday diet in Kannada)

ನಿಮ್ಮ ಪ್ರತಿದಿನದ ಆಹಾರದಲ್ಲಿ ಗೋಡಂಬಿಯನ್ನು ಸೇರಿಸಲು ವಿವಿಧ ಬಗೆಗಳಿವೆ. ಅವುಗಳಲ್ಲಿ ಕೆಲವು ಇಲ್ಲಿವೆ. 

೧. ಸ್ಮೂತಿ ಅಥವಾ ಮಿಲ್ಕ್-ಶೇಕ್ ಗಳಲ್ಲಿ ಗೋಡಂಬಿಯನ್ನು ಸೇರಿಸಬಹುದು. ಇದು ಕೇವಲ ಆರೋಗ್ಯಕರವಷ್ಟೇ ಅಲ್ಲದೇ, ನೀವು ಕುದಿಯುತ್ತಿರುವ ಪಾನೀಯವನ್ನು ಸ್ವಾದೀಷ್ಟಗೊಳಿಸುತ್ತದೆ. 

೨. ಮೂಸ್ಲಿ ಅಥವಾ ಸಿರಿಯಲ್ ಅಥವಾ ಬೇಯಿಸಿದ ತರಕಾರಿಗಳು - ಅಂತಹ ನಿಮ್ಮ ಬೆಳಗಿನ ತಿಂಡಿಯ ಜೊತೆ ಗೋಡಂಬಿಯನ್ನು ಸೇರಿಸಿದರೆ, ಅದು ನಿಮ್ಮ ಆಹಾರಕ್ಕೆ ಕ್ರಂಚಿನೆಸ್ ನೀಡುತ್ತದೆ. 

೩. ನೀವು ಸಿಹಿ ತಿನಿಸುಗಳನ್ನು ಬಯಸುವವರಾಗಿದ್ದರೆ, ಗೋಡಂಬಿಯನ್ನು ನಿಮ್ಮ ನೆಚ್ಚಿನ ಕೇಕ್, ವಾಫ್ಲ್ಸ್, ಬ್ರೌನಿ ಅಥವಾ ಭಾರತೀಯ ಸಿಹಿ ತಿಂಡಿಗಳ ಮೇಲೆ ಗೋಡಂಬಿಯನ್ನು ಸೇರಿಸಬಹುದು.  

೪. ನೀವು ಗೋಡಂಬಿಯನ್ನು ಖರ್ಜೂರ, ದಾಲ್ಚಿನ್ನಿ ಜೊತೆ ಸೇರಿಸಿ ಗೋಡಂಬಿಯ ಯೋಗರ್ಟ್ ತಯಾರಿಸಬಹುದು. 

೫. ತಾಜಾ ಹಣ್ಣುಗಳ ಜೊತೆ ಗೋಡಂಬಿಯನ್ನು ಸೇರಿಸಿ ಸೇವಿಸಬಹುದು. 

೬. ಗೋಡಂಬಿಯನ್ನು ಅರೆದರೆ ಗೋಡಂಬಿಯ ಬೆಣ್ಣೆ ದೊರಕುತ್ತದೆ. ಅದನ್ನು ತರಕಾರಿಗಳು ಮತ್ತು ಹಣ್ಣುಗಳ ಜೊತೆ ತಿನ್ನಬಹುದು. 

೭. ಯಾವುದೇ ಸಲಾಡ್, ಗೋಡಂಬಿಯೊಂದಿಗೆ ರುಚಿಸುತ್ತದೆ. ಹಾಗಾಗಿ ರುಚಿಯಿಲ್ಲದ ಸಲಾಡ್ ಜೊತೆಗೆ ಗೋಡಂಬಿಗಳನ್ನು ಸೇರಿಸಿ ಸೇವಿಸಿರಿ. 

೯. ನೀವು ತಯಾರೋಸುವ ಪಲಾವ್, ಬಿರಿಯಾನಿಗಳ ಜೊತೆ ಗೋಡಂಬಿಯನ್ನು ಸೇರಿಸಿ ಸವಿಯಬಹುದು. 

ಇವುಗಳ ಸ್ವಾದಿಷ್ಟ ರೀತಿಯಲ್ಲಿ ಗೋಡಂಬಿಗಳನ್ನು ಸವೆಯುವ ಬಗೆ. 

[Back To Top]

೪. ಗೋಡಂಬಿ ಸೇವನೆಯಿಂದ ಆಗಬಹುದಾದ ಅಡ್ಡಪರಿಣಾಮಗಳು (Possible side effects of consuming cashew nuts in Kannada):

ಗೋಡಂಬಿಗಳಿಂದ ಹಲವಾರು ಪ್ರಯೋಜನಗಳಿದ್ದರೂ, ಅದು ನಿಮ್ಮ ದೇಹಕ್ಕೆ ಒಗ್ಗದೇ ಹೋದರೆ, ಅದರಿಂದ ಕೆಲವು ಅಡ್ಡಪರಿಣಾಮಗಲುಂಟಾಗುವ ಸಾಧ್ಯತೆ ಇದೆ. ಅವುಗಳಲ್ಲಿ ಕೆಲವು ಇಲ್ಲಿವೆ:

* ಅಲ್ಲೆರ್ಜಿಗಳು (Allergies in Kannada)

ಗೋಡಂಬಿಯಲ್ಲಿರುವ ಉರುಷಿಯೋಲ್ ಎನ್ನುವ ಅಂಶದಿಂದ ನಿಮ್ಮ ಚರ್ಮದಲ್ಲಿ ದದ್ದುಗಳು, ಉರಿತ, ನಾವೇ ಉಂಟಾಗಬಹುದು. 

* ಸಂಭವನೀಯ ತೂಕ ಗಳಿಕೆ (Possible weight gain in Kannada)

ಗೋಡಂಬಿಗಳಲ್ಲಿ ಹೆಚ್ಚಿನ ಮಟ್ಟದ ಕ್ಯಾಲೋರಿಗಳಿರುವುದರಿಂದ ಅವುಗಳು ಅಧಿಕ ಸೇವನೆ ನಿಮ್ಮಲ್ಲಿನ ತೂಕ ಗಳಿಕೆಗೆ ಕಾರಣವಾಗಬಹುದು. 

* ರಕ್ತದೊತ್ತಡ ಹೆಚ್ಚುವಿಕೆ (Might increase your blood pressure in Kannada)

ಉಪ್ಪು ಸೇರಿಸಿದ ಗೋಡಂಬಿಗಳನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿನ ಸೋಡಿಯಂ ಅಂಶ ಹೆಚ್ಚಾಗಿ ನಿಮ್ಮ ಅಪಧಮನಿಗಳ ಮೇಲೆ ಪ್ರಭಾವ ಬೀರಿ, ನಿಮ್ಮ ಹೃದಯರಕ್ತನಾಳಗಳಿಗೆ ತೊಂದರೆ ಉಂಟಾಗಬಹುದು. 

* ಮೂತ್ರಪಿಂಡದಲ್ಲಿ ಕಲ್ಲುಗಳು ಮತ್ತು ಪಿತ್ತಕೋಶದ ಕಲ್ಲಿನ ಸಮಸ್ಯೆ (Kidney stone and gall stone issues in Kannada)

ಗೋಡಂಬಿಯಲ್ಲಿ ಓಕ್ಸಲೇಟ್ ಎನ್ನುವ ಅಂಶ ಹೆಚ್ಚಾಗಿದ್ದು, ನಿಮ್ಮ ದೇಹದ ದ್ರವದಲ್ಲಿ ಹೀರಿಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಮೂತ್ರಪಿಂಡದ ಕಲ್ಲು ಅಥವಾ ಪಿತ್ತಕೋಶದಲ್ಲಿ ಕಲ್ಲುಗಳು ಉಂಟಾಗಬಹುದು. 

[Back To Top]

೫. ಗೋಡಂಬಿ ಸೇವಿಸಲು ವಹಿಸಬಹುದಾದ ಮುನ್ನೆಚ್ಚರಿಕೆ (Precautionary measures while eating cashews in Kannada)

ಕೆಳಗೆ ನೀಡಿರುವ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸುವುದರಿಂದ ಗೋಡಂಬಿಗಳಿಂದ ಆಗಬಹುದಾದ ಅಪಾಯಕಾರಿ ಅಡ್ಡಪರಿಣಾಮಗಳನ್ನು ತಪ್ಪಿಸಬಹುದು. ಅದರೊಂದಿಗೆ ಗೋಡಂಬಿಯ ಅರೋಗ್ಯ ಪ್ರಯೋಜನಗಳನ್ನು ಅನುಭವಿಸಬಹುದು. 

೧. ಉಪ್ಪು ಸೇರಿಸಿದ ಅಥವಾ ಮಸಾಲೆ ಸೇರಿಸಿದ ಗೋಡಂಬಿ ಸೇವಿಸುವುದಕ್ಕಿಂತ, ಏನೂ ಸೇರಿಸಿರದ ಗೋಡಂಬಿ ಸೇವಿಸುವುದು ಸೂಕ್ತ. ಅವುಗಳಲ್ಲಿ ಸೋಡಿಯಂ ಅಂಶ ಹೆಚ್ಚಿದ್ದು, ನಿಮ್ಮ ದೇಹಕ್ಕೆ ಕೆಡಕನ್ನುಂಟು ಮಾಡಬಹುದು. 

೨. ನಿಮ್ಮ ದೇಹ ಗೋಡಂಬಿಯಿಂದ ಅಲರ್ಜಿ ಉಂಟಾಗುವ ಗುಣಲಕ್ಷಣಗಳನ್ನು (ಉದಾಹರೆಣೆಗೆ ಸೀನು, ಕೆಮ್ಮು, ಚರ್ಮದ ಮೇಲೆ ದದ್ದು, ಚರ್ಮದ ಉರಿತ, ಅಜೀರ್ಣ) ತೋರಿದರೆ, ಗೋಡಂಬಿಯ ಸೇವನೆ ಕಡಿಮೆಗೊಳಿಸುವುದು ಉತ್ತಮ. 

ಅಂತಹ ಪರಿಸ್ಥಿತಿಯಲ್ಲಿ ಗೋಡಂಬಿಯಿರುವ ಆಹಾರವನ್ನು ಸೇವಿಸದೇ ಇರುವುದು ಉತ್ತಮ. ಗೋಡಂಬಿಗಳಿರುವ ಕೆಲವು ಆಹಾರಗಳು ಇಂತಿವೆ: 

* ಮಿಶ್ರಿತ ಬೀಜಗಳು

* ಗೋಡಂಬಿಯ ಬೆಣ್ಣೆ 

* ಚಾಕಲೇಟ್ 

* ಪೆಸ್ಟೊ ಸಾಸ್ 

* ತಿನಿಸುಗಳ ಮಿಶ್ರಣ 

* ಏಶಿಯನ್ ಊಟ 

* ಐಸ್ ಕ್ರೀಮ್ 

* ಕೇಕ್ 

* ಸ್ವೀಟ್ಸ್ ಮತ್ತು ಕ್ಯಾಂಡಿ

೩.  ಗರ್ಭಿಣಿಯರು ಸೇವಿಸಬಹುದಾದ ಗೋಡಂಬಿ ಪ್ರಮಾಣ ಪ್ರತಿದಿನದಲ್ಲಿ ಒಂದು ಔನ್ಸ್ ಗಿಂತ ಕಡಿಮೆ. 

೪. ಗೋಡಂಬಿಯನ್ನು ನಿಯಮಿತವಾಗಿ ಸೇವಿಸಲು ಪ್ರಾರಂಭಿಸುವ ಮುನ್ನ ನಿಮ್ಮ ವೈದ್ಯರನ್ನು ಭೇಟಿ ಮಾಡಿ, ಸಲಹೆ ಪಡೆಯಿರಿ. ಅವರಿಗೆ ನಿಮ್ಮ ದೇಹದ ಅಗತ್ಯತೆಗಳ ಬಗ್ಗೆ ಹೆಚ್ಚಿನ ಅರಿವು ಇರುತ್ತದೆ. 

೫. ಸಾವಯವ ಗೋಡಂಬಿ ತಿನ್ನುವುದು ಆರೋಗ್ಯಕರ. ಅವುಗಳು ದುಬಾರಿಯಾದರೂ, ಅವುಗಳ ರುಚಿ ಸ್ವಾದಿಷ್ಟವಾಗಿದ್ದು, ನಿಮ್ಮ ದೇಹಕ್ಕೆ ಪೌಷ್ಟಿಕವಾಗಿರುತ್ತದೆ. 

[Back To Top]

೬. ನಿರ್ಣಯ (Conclusion in Kannada):

ಒಟ್ಟಾರೆ, ಗೋಡಂಬಿ ನಿಮಗೆ ಮತ್ತು ನಿಮ್ಮ ಮಗುವಿಗೆ ಎಲ್ಲಾ ಬಗೆಯ ಪೌಷ್ಟಿಕಾಂಶಗಳನ್ನು ಒದಗಿಸುವ ಗರ್ಭಾವಸ್ಥೆಯ ಆಹಾರ. ಅದನ್ನು ಮಿತಿಯಲ್ಲಿ ಸೇವಿಸದರೆ, ಅವುಗಳ ಪೌಷ್ಟಿಕತೆಯ ಕಾರಣದಿಂದ ನಿಮ್ಮ ಮಗುವಿನ ಬೆಳವಣಿಗೆಗೆ ಸಹಾಯವಾಗುತ್ತದೆ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon