Link copied!
Sign in / Sign up
1
Shares

ಗರ್ಭಾವಸ್ಥೆಯಲ್ಲಿ ಕಾಫಿ: ಇದು ನಿಮ್ಮ ಮಗುವಿಗೆ ಹಾನಿಕಾರಕವೆ? (Coffee During Pregnancy: Is It Harmful For Your Baby? in Kannada)

ನೀವು ತಾಯಿಯಾಗುತ್ತಿದ್ದರೆ ಬಹಳಷ್ಟು ಕಟ್ಟುಪಾಡುಗಳನ್ನು ಆಹಾರದ ಸೇವನೆಯ ವಿಷಯದಲ್ಲಿ ನೀವು ಪಾಲಿಸಬೇಕಾದೀತು. ಆರೋಗ್ಯಕರ ಮಗುವನ್ನು ಪಡೆಯುವುದಕ್ಕಾಗಿ, ಗರ್ಭಿಣಿಯರು ಸಾಮಾನ್ಯವಾಗಿ ತಮ್ಮ ಜೀವನಶೈಲಿ ಮತ್ತು ದೈನಂದಿನ ಆಹಾರ ಪದ್ಧತಿಯನ್ನು ಬದಲಿಸಬೇಕಾಗಬಹುದು. ನೀವು ಕಾಫಿ ಪ್ರೀಯರಾಗಿದ್ದರೆ ಅಥವಾ ಕಾಫಿ ವ್ಯಸನಿಯಾಗಿದ್ದರೆ, ಗರ್ಭಾವಸ್ಥೆಯಲ್ಲಿ ಕಾಫಿ ಸುರಕ್ಷಿತವೇ ಎನ್ನುವ ಪ್ರಶ್ನೆ ಕಾಡುವುದು ಸಹಜ. ಇದರೊಂದಿಗೆ ನಿಮ್ಮ ಬಂಧುಮಿತ್ರರಿಂದ ಸಾಕಷ್ಟು ಬುದ್ಧಿಮಾತುಗಳೂ ಕೇಳಿಬರಬಹುದು. ಆದರೆ, ಎಲ್ಲರ ಮಾತುಗಳನ್ನು ನಂಬುವ ಬದಲಿಗೆ, ನಿಮ್ಮದೇ ಆದ ಸ್ವಲ್ಪ ಸಂಶೋಧನೆಯನ್ನು ಮಾಡಿ ಅಥವಾ ನಿಮ್ಮ ವೈದ್ಯರ ಬಳಿ ಸಲಹೆ ಪಡಿಯಿರಿ. ನೀವು ಕಾಫಿ ಸುರಕ್ಷಿತ ಎಂದು ನಂಬಿದರೂ, ಎಷ್ಟು ಪ್ರಮಾಣದಲ್ಲಿ ಕಾಫಿ ಕುಡಿಯಬಹುದು ಎನ್ನುವುದರ ಅಂದಾಜು ನಿಮಗಿದೆಯೇ? ಕಾಫಿ ಸುರಕ್ಷಿತವಲ್ಲದಿದ್ದರೆ, ಅದಕ್ಕೆ ಪರ್ಯಾಯವಾಗಿ ಯಾವ ಪಾನೀಯ ಕುಡಿಯಬಹುದು ಎಂಬುದರ ಬಗ್ಗೆ ಯೋಚಿಸಿದ್ದೀರಾ? ಕಾಫಿ ಅಡ್ಡಪರಿಣಾಮಗಳು ಯಾವುವು ಎಂದು ನಿಮಗೆ ತಿಳಿದಿದೆಯೇ? ನೀವು ಇದರ ಬಗ್ಗೆ ಆಳವಾಗಿ ಯೋಚಿಸುತ್ತಿದ್ದೀರಾ ಎಂದು ನಮಗೆ ತಿಳಿದಿದೆ. ಯೋಚಿಸಬೇಡಿ. ಈ ಲೇಖನದಲ್ಲಿ ನಿಮಗೆ ಅಗತ್ಯವಿರುವ ಎಲ್ಲ ವಿಷಯಗಳನ್ನು ವಿವರಿಸಲಾಗಿದೆ. 

ಪರಿವಿಡಿ:

೧. ಗರ್ಭಾವಸ್ಥೆಯಲ್ಲಿ ಕಾಫಿ ಏಕೆ ಸುರಕ್ಷಿತವಲ್ಲ? (Why Is It Not Safe To Consume Coffee While You Are Pregnant? in Kannada)

೨. ಗರ್ಭಾವಸ್ಥೆಯಲ್ಲಿ ಕಾಫಿ ಕುಡಿಯುವುದರ ಅಡ್ಡಪರಿಣಾಮಗಳು (Side Effects Of Drinking Coffee During Pregnancy in Kannada)

೩.  ಗರ್ಭಾವಸ್ಥೆಯಲ್ಲಿ ಎಷ್ಟು ಕಾಫಿ ಕುಡಿಯುವುದು ಸುರಕ್ಷಿತ? (How Much Coffee Should Be Taken During Pregnancy? in Kannada)

೪. ಕಾಫಿಗೆ ಕಡಿಮೆ ಪ್ರತಿಕೂಲದ ಪರ್ಯಾಯವಿದೆಯೇ? (Does Coffee Have Any Less Adverse Alternate? in Kannada)

೧. ಗರ್ಭಾವಸ್ಥೆಯಲ್ಲಿ ಕಾಫಿ ಏಕೆ ಸುರಕ್ಷಿತವಲ್ಲ? (Why Is It Not Safe To Consume Coffee While You Are Pregnant? in Kannada):

ಗರ್ಭಾವಸ್ಥೆಯಲ್ಲಿ ಅತಿಯಾದ ಕಾಫಿ ಸೇವನೆ, ವಿಶೇಷವಾಗಿ ಬ್ಲಾಕ್ ಕಾಫಿ ಸೇವನೆ, ನಿಮ್ಮ ದೇಹದಲ್ಲಿನ ಕೆಫೀನ್ ಅಂಶವನ್ನು ಮತ್ತು ಪಾಲಿಫೀನಾಲ್ಸ್ ಗಳನ್ನು ಹೆಚ್ಚಿಸುತ್ತದೆ. ಹಾಗಾಗಿ, ಕಾಫಿ ಅಡ್ಡಪರಿಣಾಮಗಳಿಗೆ  ಕಾರಣವಾಗುತ್ತದೆ.

* ಗರ್ಭಾವಸ್ಥೆಯಲ್ಲಿ ನಿಮ್ಮ ದೇಹದಲ್ಲಿರುವ ಕೆಫೀನ್ ವಿಘಟನೆಯಾಗಲು ಹೆಚ್ಚಿನ ಸಮಯವನ್ನು  ತೆಗೆದುಕೊಳ್ಳುತ್ತದೆ. ಹಾಗಾಗಿ ಈ ಕೆಫೀನ್ ಅಂಶ ನಿಮ್ಮ ಹೊಟ್ಟೆಯಲ್ಲಿರುವ ನಿಮ್ಮ ಮಗುವನ್ನು ತಲುಪುವ ಸಾಧ್ಯತೆ  ಹೆಚ್ಚು.

* ನಿಮ್ಮ ಮಗುವನ್ನು ನಿಮ್ಮ ದೇಹದಲ್ಲಿರುವ ಕೆಫೀನ್ ಜರಾಯು ಮೂಲಕ  ತಲುಪುತ್ತದೆ.

* ಹೀಗೆ ನಿಮ್ಮ ಮಗುವಿನ ದೇಹದೊಳಗೆ ಹೋಗುವ ಕೆಫೀನ್ ನಿಮ್ಮ ಮಗುವಿನ ಬೆಳವಣಿಗೆಯನ್ನು  ವಿಳಂಬಗೊಳಿಸುತ್ತದೆ.

[Back To Top]

೨. ಗರ್ಭಾವಸ್ಥೆಯಲ್ಲಿ ಕಾಫಿ ಕುಡಿಯುವುದರ ಅಡ್ಡಪರಿಣಾಮಗಳು (Side Effects Of Drinking Coffee During Pregnancy in Kannada):

ಗರ್ಭಾವಸ್ಥೆಯಲ್ಲಿ ಪ್ರತಿ ದಿನ ಬೆಳಿಗ್ಗೆ ಒಂದು ಕಪ್ ಕಾಫಿ ಕುಡಿಯುವುದು ನಿರುಪದ್ರವವೆನ್ನಿಸಿದರೂ, ಅದರೊಂದಿಗೆ ಕೆಲವು ಸಂಭವನೀಯ ತೊಂದರೆಗಳಿವೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಕಾಫಿ ಇಂದ ದೂರವಿರುವುದೇ ಸೂಕ್ತ. ಕಾಫಿ ಗರ್ಭಾವಸ್ಥೆಯಲ್ಲಿ ಸುರಕ್ಷಿತವಲ್ಲ. ಅದು  ತಾಯಿಯ ಆರೋಗ್ಯಕ್ಕಷ್ಟೇ ಅಲ್ಲದೆ ಮಗುವಿನ ಆರೋಗ್ಯಕ್ಕೂ ಹಾನಿ ಉಂಟು ಮಾಡಬಹುದು. ಮಗುವಿನ ಜನನದ ನಂತರವೂ ಕಾಫಿ ಕುಡಿಯುವುದನ್ನು ಕಡಿಮೆಗೊಳಿಸುವುದು ಸೂಕ್ತ. 

೧. ಗರ್ಭಪಾತ: ಗರ್ಭಿಣಿಯರು ಪ್ರತಿದಿನ ೨ ಕಪ್ ಕಾಫಿ ಕುಡಿದರೆ, ಅದು ಗರ್ಭಪಾತವನ್ನುಂಟು ಮಾಡಬಹುದು. ಹಾಗಾಗಿ, ಗರ್ಭಾವಸ್ಥೆಯ ಮೊದಲ ಮೂರು ತಿಂಗಳು ಕಾಫಿ ಇಂದ ದೂರವಿರುವುದು ಒಳಿತು. 

೨. ಹೃದಯರಕ್ತನಾಳದ ತೊಂದರೆಗಳು: ಕೆಫೀನ್ ಅಂಶದಿಂದ ನಿಮ್ಮ ಹೊಟ್ಟೆಯಲ್ಲಿರುವ ಮಗುವಿನ ಹೃದಯದ ಬಡಿತ ಏರುಪೇರಾಗಬಹುದು. 

೩. ಬೆಳವಣಿಗೆಯಲ್ಲಿ ಅಸಮಾನ್ಯತೆ: ನಿಮ್ಮ ಮಗುವಿನ ಮೆದುಳಿನ ಬೆಳವಣಿಗೆಗೆ ನಿಮ್ಮ ದೇಹದಲ್ಲಿರುವ ಕೆಫೀನ್ ಅಂಶ ಅಡ್ಡಿಯುಂಟು ಮಾಡಬಹುದು. ಇದರಿಂದಾಗಿ ನಿಮ್ಮ ಮಗುವಿನಲ್ಲಿ ಕುಂಠಿತ ಬೆಳವಣಿಗೆ ಕಾಣಬಹುದು. 

೪. ರಕ್ತಹೀನತೆ: ಕೆಫಿನ್ ಅಂಶ ದೇಹನಿಮ್ಮ ದೇಹದ ಕೊಬ್ಬಿನಂಶವನ್ನು ಹೀರುವ ಸಾಮರ್ಥ್ಯವನ್ನು ಕುಂದಿಸುತ್ತದೆ. ಇದರಿಂದಾಗಿ ರಕ್ತಹೀನತೆ ಯಂತಹ ತೊಂದರೆಗಳು ತಲೆದೂರಬಹುದು. 

೫. ಕ್ಯಾನ್ಸರ್ ಉಂಟುಮಾಡಬಹುದು: ನಿಮ್ಮ ದೇಹದಲ್ಲಿ ಕೆಫೀನ್ ಅಂಶ ಜಾಸ್ತಿಯಿದ್ದರೆ, ಅದು ನಿಮ್ಮ ಮಗುವಿನಲ್ಲಿ ಕ್ಯಾನ್ಸರ್ ರೋಗಳನ್ನು ಉಂಟುಮಾಡಬಹುದು. 

೬. ಮಗುವಿನ ತೂಕ ಕಡಿಮೆಯಾಗುವುದು: ಗರ್ಭಾವಸ್ಥೆಯಲ್ಲಿ ಅತಿಯಾದ ಕಫ್ಇನೆ ಸೇವನೆ ಇಂದ ನಿಮ್ಮ ಮಗುವಿನ ಜನನದ ತೂಕ ಕಡಿಮೆ ಇರಬಹುದು. ಇದರಿಂದ ಹಲವಾರು ರೋಗಗಳು ನಿಮ್ಮ ಮಗುವಿಗೆ ಕಾಡಬಹುದು. 

೭. ದೀರ್ಘ ಗರ್ಭಾವಸ್ಥೆಯ ಅವಧಿ: ಕೆಫೀನ್ ಸೇವನೆಯಿಂದ ನಿಮ್ಮ ಗರ್ಹಾವಸ್ಥೆಯ ಅವಧಿ ದೀರ್ಘವಾಗಬಹುದು. 

೮. ನಿದ್ದೆಯಲ್ಲಿ ಅಡಚಣೆ: ನಿಮ್ಮ ನಿದ್ದೆ ಮಾದರಿಯಲ್ಲಿ ಕೆಫೀನ್ ಅಡಚಣೆಯುಂಟು ಮಾಡಬಹುದು. ಇದರಿಂದಾಗಿ ನೀವು ಪ್ರಕ್ಷುಬ್ಧರಾಗಿ, ಗರ್ಭಾವಸ್ಥೆಯಲ್ಲಿ ನಿಮ್ಮ ಆರೋಗ್ಯಕ್ಕೆ ತೊಂದರೆಯಾಗಬಹುದು. 

೯. ನಿರ್ಜಲೀಕರಣ: ಅತಿಯಾದ ಕಾಫಿ ಸೇವನೆಯಿಂದ ಇಮ್ಮ ದೇಹ ನಿರ್ಜಲೀಕರಣಗೊಳ್ಳಬಹುದು. ನಿಮ್ಮ ದೇಹದಲ್ಲಿರುವ ಕೆಫಿನ್ ಪದೇ ಪದೇ ಮೂತ್ರ ವಿಸರ್ಜನೆ ಮಾಡಲು ಪ್ರೇರೇಪಿಸುತ್ತದೆ. 

೧೦. ಕಬ್ಬಿನಾಂಶ ಹೀರಿಕೊಳ್ಳುವುದು ಕಡಿಮೆಯಾಗುತ್ತದೆ: ಗರ್ಭಿಣಿಯರು ತಮ್ಮ ದೇಹ ತಾವು ತಿನ್ನುವ ಆಹಾರದಿಂದ ಎಲ್ಲ ಕಬ್ಬಿಣಂಶವನ್ನು ಹೀರಿಕೊಳ್ಳುವ ಬಗ್ಗೆ ಕಾಳಜಿ ವಹಿಸಬೇಕು. ಆದರೆ ಹಅತಿಯಾದ ಕಾಫಿ ಸೇವನೆ ಈ ಪ್ರಕ್ರೀಯೆಗೆ ತೊಂದರೆ ಉಂಟುಮಾಡಬಹುದು. 

[Back To Top]

೩. ಗರ್ಭಾವಸ್ಥೆಯಲ್ಲಿ ಎಷ್ಟು ಕಾಫಿ ಕುಡಿಯುವುದು ಸುರಕ್ಷಿತ? (How Much Coffee Should Be Taken During Pregnancy? in Kannada)

ಗರ್ಭಾವಸ್ಥೆಯಲ್ಲಿ ಕಾಫಿ ಸೇವನೆಯನ್ನು ಪ್ರತಿದಿನಕ್ಕೆ ೨೦೦ ಮಿಲಿಗ್ರಾಮ್ ಗೆ ಸೀಮಿತಗೊಳಿಸಿದರೆ, ಆರೋಗ್ಯಕ್ಕೆ ಯಾವುದೇ ಹಾಯಾನಿ ಇಲ್ಲ. ಕಾಫಿಯಲ್ಲಿರುವ ಕ್ಯಾಲೋರಿಗಳ ಸೇವನೆ ಕಡಿಮೆಗೊಳ್ಳುತ್ತದೆ. 

* ಹಾಗಾಗಿ ನೀವು ಪ್ರತಿನಿತ್ಯ ೨ ಕಪ್ ಕಾಫಿಯನ್ನು ಗರ್ಭಾವಸ್ಥೆಯಲ್ಲಿ ಸೇವಿಸಬಹುದು. 

* ಕಾಫಿಯಿಂದ ಆಗಬಹುದಾದ ಅಡ್ಡಪರಿಣಾಮಗಳನ್ನು ತಡೆಗಟ್ಟಲು, ಪ್ರತಿ ನಿತ್ಯ ೨೦೦ ಮಿಲಿಗ್ರಾಮ್ ಕಾಫಿಯನ್ನು ಅಳೆದು ಬಳಸುವುದು ಸೂಕ್ತ. 

* ನೀವು ಇನ್ಸ್ಟಂಟ್, ಫಿಲ್ಟರ್ಡ್, ಡೆಕಾಫ್ ಕಾಫಿ ಮತ್ತು ಬ್ರೀವ್ಡ್ ಕಾಫಿ ಯಂತಹ ವಿವಿಧ ಬಗೆಗಳ ಕಾಫಿಯನ್ನು ಸೇವಿಸಬಹುದು. ಆದರೆ ಅವುಗಳ ಪ್ರಮಾಣವನ್ನು ಸರಿಯಾಗಿ ಅಳೆದು ಬಳಸುವುದು ಗರ್ಭಾವಸ್ಥೆಯಲ್ಲಿ ಅಥವಾ ಪ್ರಸವದ ನಂತರ ಆಗಬಹುದಾದ ತೊಂದರೆಯನ್ನು ತಡೆಗಟ್ಟುತ್ತವೆ.

[Back To Top]

೪. ಕಾಫಿಗೆ ಕಡಿಮೆ ಪ್ರತಿಕೂಲದ ಪರ್ಯಾಯವಿದೆಯೇ? (Does Coffee Have Any Less Adverse Alternate? in Kannada):

ಗರ್ಭಾವಸ್ಥೆಯಲ್ಲಿ ನೀವು ಕಾಫಿ ಅಥವಾ ಡೆಕಾಫ್ ಕಾಫಿ  ಸೇವಿಸುತ್ತಿದ್ದರೆ, ನಿಮ್ಮ ದೇಹವನ್ನು ಪುನರ್ಜಲೀಕರಿಸಲು ಅಗತ್ಯವಿರುವಷ್ಟು ನೀರನ್ನು ಸೇವಿಸುವುದು ಅಗತ್ಯ. 

* ಗರ್ಭಾವಸ್ಥೆಯಲ್ಲಿ ನೀವು ಕಾಫಿ ಕುಡಿಯಲು ಬಯಸಿದರೆ, ಕೆಫೆ ಲ್ಯಾಟೆ ಸೇವಿಸಿ. ಇದರಲ್ಲಿರುವ ಹಾಲು ನಿಮ್ಮ ದೇಹಕ್ಕೆ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಗಳನ್ನೂ ನೀಡುತ್ತದೆ. ಇದು ಬ್ಲಾಕ್ ಕಾಫಿ ಇಂದ ಆಗಬಹುದಾದ ಅಡ್ಡಪರಿಣಾಮಗಳನ್ನೂ ತಪ್ಪಿಸುತ್ತದೆ. 

* ನಿಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಗಳು ದೊರೆಯಬೇಕೆಂದು ನೀವು ಬಯಸಿದ್ದರೆ, ನಿಮ್ಮ ದಿನನಿತ್ಯ ಆಹಾರದಲ್ಲಿ ಹಾಲಿನ ಪದಾರ್ಥಗಳೊಂದಿಗೆ, ಹಾಲನ್ನು ಸೇರಿಸುವುದು ಉತ್ತಮ. 

* ಬೇಸಿಗೆ ಕಾಲದಲ್ಲಿ ಲಸ್ಸಿ ಕುಡಿಯುವುದರಿಂದ ನಿಮ್ಮ ದೇಹಕ್ಕೆ ತಂಪಾದ ಪರಿಣಾಮವನ್ನು ಬೀರುತ್ತದೆ. 

* ಕಾಫಿಗೆ ಪರ್ಯಾಯವಾಗಿ ಮನೆಯಲ್ಲಿಯೇ ತಯಾರಿಸಿದ ಹಣ್ಣಿನ ರಸ ಸೇವಿಸುವುದರಿಂದ ನಿಮ್ಮ ದೇಹಕ್ಕೆ ವಿಟಮಿನ್ ಸಿ ಮತ್ತು ಆಂಟಿಓಕ್ಸಿಡಾಂಟ್ಸ್ ಗಳು ದೊರಕುತ್ತವೆ. 

* ಕಾಫಿ ವ್ಯಸನವನ್ನು ತಪ್ಪಿಸಲು ಹರ್ಬಲ್ ಟೀ ಸೇವಿಸುವುದನ್ನು ಅಭ್ಯಸಿಸುವುದು ಉತ್ತಮ. 

ಗರ್ಭಾವಸ್ಥೆಯಲ್ಲಿ ವಾಕರಿಕೆ, ವಾಂತಿ ಯಂತಹ ಸಮಸ್ಯೆಗಳು ಕಾಡುತ್ತಿದ್ದರೆ, ಒಂದು ಕಪ್ ಮಿಂಟ್ ಟೀ ಅಥವಾ ಶುಂಠಿ ಚಹಾ ಸೇವಿಸುವುದು ಉತ್ತಮ. ರಾಸ್ಪ್-ಬೆರಿ ಚಹಾ ಪ್ರಸವದ ಸಮಯದಲ್ಲಿ ಸಂಕೋಚನಗಳನ್ನು ಹೆಚ್ಚಿಸುತ್ತದೆ. 

ಇವೆಲ್ಲ ಕಾರಣಗಳಿಂದಾಗಿ, ಗರ್ಭಾವಸ್ಥೆಯಲ್ಲಿ ಕಾಫಿ ಸೇವಿಸದಿರುವುದು ಉತ್ತಮ. ಇದರ ಬಗ್ಗೆ ಅನುಮಾನವಿದ್ದಲ್ಲಿ ಯಾವುದೇ ಸಂಕೋಚವಿಲ್ಲದೇ ನಿಮ್ಮ ವೈದ್ಯರ ಬಳಿ ವಿಚಾರಿಸಿ. 

 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon