Link copied!
Sign in / Sign up
11
Shares

ಗರ್ಭಾವಸ್ಥೆಯಲ್ಲಿ ಚಿಕನ್ ಸೇವನೆ ಸುರಕ್ಷಿತವೇ? (Is It Safe To Eat Chicken During Pregnancy? in Kannada)

ಗರ್ಭಾವಸ್ಥೆಯಲ್ಲಿ ಚಿಕನ್ ನಿಂದ ದೂರವಿರಲು ನಿಮಗೆ ಅನೇಕರು ಸಲಹೆ ನೀಡಿರಬಹುದು. 

ಮುಂದಿನ ಬಾರಿ ಅವರು ಹಾಗೆ ಹೇಳಿದಾಗ ಗರ್ಭಾವಸ್ಥೆಯ ಆಹಾರ ಪದ್ದತಿಯ ಬಗೆ ಅವರಿಗೆ ತಿಳಿಸಿ, ಅವರಲ್ಲಿರುವ ಮೂಢನಂಬಿಕೆಯನ್ನು ಪರಿಹರಿಸಿ. ಅವರಿಗೆ ಗರ್ಭಿಣಿಯ ದೇಹದ ಅಗತ್ಯತೆಗಳ ಬಗ್ಗೆ ವಿವರಿಸಿ. ಗರ್ಭಿಣಿಯರ ದೇಹದ ಜಿಂಕ್ ಅಗತ್ಯತೆ ಗರ್ಭಾವಸ್ಥೆಯಲ್ಲಿ ಹೆಚ್ಚುತ್ತದೆ. ಹಾಗಾಗಿ, ಚಿಕನ್ ಸೇವಿಸುವುದರಿಂದ ಅದು ನಿಮ್ಮ ದೇಹಕ್ಕೆ ಐರನ್ ಮತ್ತು ಇತರ ಅಗತ್ಯವಿರುವ ಖನಿಜಗಳನ್ನು ನೀಡುತ್ತದೆ. 

ಬೇರೆ ರೀತಿಯಲ್ಲಿ ಇದನ್ನು ವಿವರಿಸಬೇಕೆಂದರೆ, "ಗರ್ಭಾವಸ್ಥೆಯಲ್ಲಿ ಚಿಕನ್ ಸೇವಿಸಬಹುದೇ?" ಎನ್ನುವ ಪ್ರಶ್ನೆಗೆ ಉತ್ತರ "ಹೌದು!"

ಆದರೆ, ಅದು ಸಂಪೂರ್ಣವಾಗಿ ನಿಮ್ಮ ಗರ್ಭಾವಸ್ಥೆಯ ಕಡುಬಯಕೆ ಮತ್ತು ನಿಮ್ಮ ದೇಹದ ಸಹಿಸಿಕೊಳ್ಳುವಿಕೆಯ ಮೇಲೆ ಅವಲಂಬಿತ. 

ಪರಿವಿಡಿ: 

೧. ಗರ್ಭಾವಸ್ಥೆಯಲ್ಲಿ ಚಿಕನ್ ಏಕೆ ಸೇವಿಸಬೇಕು? (Why Must You Eat Chicken During Pregnancy? in Kannada)

೨. ಗರ್ಭಾವಸ್ಥೆಯಲ್ಲಿ ಯಾವುದನ್ನು ಸೇವಿಸಬಾರದು? (What NOT To Eat During Pregnancy? in Kannada)

೩. ಗರ್ಭಾವಸ್ಥೆಯಲ್ಲಿ ಚಿಕನ್ ಸೇವಿಸುವುದರ ಲಾಭಗಳು (What Are The Benefits Of Having Chicken During Pregnancy? in Kannada)

೪. ನಿರ್ಣಯ (Conclusion in Kannada)

೧. ಗರ್ಭಾವಸ್ಥೆಯಲ್ಲಿ ಚಿಕನ್ ಏಕೆ ಸೇವಿಸಬೇಕು? (Why Must You Eat Chicken During Pregnancy? in Kannada)

ಬೇರೆ ಎಲ್ಲಾ ಬಗೆಯ ಪ್ರೋಟೀನ್ ಗಳಲ್ಲಿ, ಚಿಕನ್ ಅತೀ ಕಡಿಮೆ ಕೊಬ್ಬಿನ ಅಂಶ ಮತ್ತು ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಅಂಶವನ್ನು ಹೊಂದಿದೆ. ಅದರೊಂದಿಗೆ ಇನ್ನೊಂದು ಲಾಭವೆಂದರೆ - ಅದರಲ್ಲಿರುವ ಒಮೇಗಾ ೬ ಮತ್ತು ಒಮೇಗಾ ೩ ಫ್ಯಾಟಿ ಆಸಿಡ್ಸ್. ಚಿಕನ್ ಸೇವಿಸುವಾಗ ಅದರಲ್ಲಿರುವ ಕೊಲೆಸ್ಟರಾಲ್ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯತೆ ಇಲ್ಲ. ಗರ್ಭಾವಸ್ಥೆಯಲ್ಲಿ ಚಿಕನ್ ಸೇವಿಸಲು ಇದು ಸಹ ಒಂದು ಕಾರಣ. ಗರ್ಭಾವಸ್ಥೆಯಲ್ಲಿ ಅನೇಕರು ತಮ್ಮ ದೇಹದ ಚಯಾಪಚಯದ ಪ್ರಕ್ರಿಯೆಯಲ್ಲಿ ಏರುಪೇರನ್ನು ಅನುಭವಿಸುತ್ತಾರೆ. ಚಿಕನ್ ಅದನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಗರ್ಭಿಣಿಯರು ಎಚ್ಚರಿಕೆ ವಹಿಸಬೇಕಾದ ಸಂಗತಿ ಎಂದರೆ, ಚಿಕನ್ ಅನ್ನು ಸೇವಿಸುವಾಗ ಅದು ಚರ್ಮ ರಹಿತವೆಂದು ಖಚಿತ ಪಡಿಸಿಕೊಳ್ಳಿ. 

[Back To Top]

೨. ಗರ್ಭಾವಸ್ಥೆಯಲ್ಲಿ ಯಾವುದನ್ನು ಸೇವಿಸಬಾರದು? (What NOT To Eat During Pregnancy? in Kannada)

ಈ ಲೇಖನವನ್ನು ಓದುವವರಿಗೆ ಗರ್ಭಾವಸ್ಥೆಯಲ್ಲಿ ಯಾವ ಆಹಾರವನ್ನು ಸೇವಿಸದೇ ಇರುವುದು ಸೂಕ್ತ ಮತ್ತು ಯಾವ ಆಹಾರ ಆರೋಗ್ಯಕರ ಎನ್ನುವುದರ ಸಂಪೂರ್ಣ ಚಿತ್ರಣ ದೊರಕುತ್ತದೆ. 

೧. ಸ್ವಾದಿಷ್ಟ ಫ್ರೈಡ್ ಕ್ರಿಸ್ಪಿ ಚಿಕನ್: ಇದು ಖಡಾಖಂಡಿತವಾಗಿ ಒಳ್ಳೆಯದಲ್ಲ! KFC ಯ ಆಹಾರ ನೀತಿಯ ಅನುಸಾರ ಚಿಕನ್ ಗರ್ಭಿಣಿಯರಿಗೆ ಅತ್ಯಂತ ಹಾನಿಕಾರಕ. ಹಾಗಾಗಿ, ಫ್ರಿಎಡ್ನ್ ಕ್ರಿಸ್ಪಿ ಚಿಕನ್ ಅನ್ನು ನಿಮ್ಮ ಗರ್ಭಾವಸ್ಥೆಯ ಆಹಾರ ಪದ್ಧತಿಯಿಂದ ಕಿತ್ತೊಗೆಯುವುದು ಒಳಿತು. 

೨. ಅರ್ಧ ಬೇಯಿಸಿದ ಚಿಕನ್: ಕಚ್ಚಾ ಚಿಕನ್ ನಲ್ಲಿ E.ಕೋಲಿ ಎನ್ನುವ ಬ್ಯಾಕ್ಟೀರಿಯಾ ಇರುತ್ತದೆ. ಚಿಕನ್ ಅನ್ನು ಅರೆಬರೆ ಬೇಯಿಸಿದಲ್ಲಿ, ಈ ಬ್ಯಾಕ್ಟೀರಿಯಾ ಬದುಕುಳಿದು, ನೀವು ಈ ಆಹಾರವನ್ನು ಸೇವಿಸಿದಾಗ ಅದು ನಿಮ್ಮ ದೇಹವನ್ನು ಪ್ರವೇಶಿಸುತ್ತದೆ. ಅದರಿಂದ ಅರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ, ಗರ್ಭಾವಸ್ಥೆಯಲ್ಲಿ ಎಚ್ಚರಿಕೆ ವಹಿಸಿ. ಯಾವುದೇ ಬಗೆಯ ಪ್ರಾಣಿಗಳ ಮಾಂಸ ಗರ್ಭಾವಸ್ಥೆಯಲ್ಲಿ ಒಳ್ಳೆಯದಲ್ಲ. 

೩. ಆರೋಗ್ಯಕರ ಘನೀಕೃತ ಚಿಕನ್ ಸಲಾಡ್: ಇದು ಸಾಮಾನ್ಯವಾಗಿ ಬೇರೆ ಎಲ್ಲಾ ಚಿಕನ್ ಆಹಾರಗಳಿಗಿಂತ ಆರೋಗ್ಯಕರ ಆಹಾರ ಎಂದು ಪರಿಗಣಿಸಿದರೂ, ಗರ್ಭಾವಸ್ಥೆಯಲ್ಲಿ ಘನೀಕರಿಸಿದ ಆಹಾರದಿಂದ ದೂರವಿರುವುದು ಒಳಿತು. ಅದಕ್ಕೆ ಕಾರಣ ಘನೀಕರಿಸಿದ ಚಿಕನ್ ನ ಪರಿಷ್ಕರಿಸಿದ ಬಗೆ. ಈ ಆಹಾರ ತಾಜಾ ಅಲ್ಲದೇ ಇರುವುದರಿಂದ ಗರ್ಭಾವಸ್ಥೆಯಲ್ಲಿ ಈ ಆಹಾರವನ್ನು ಸೇವಿಸಬಾರದು. 

೪. ಗರ್ಭಾವಸ್ಥೆಯಲ್ಲಿ ಬಿರಿಯಾನಿ: ನಿಮಗೆ ಮುಘಲೈ ಆಹಾರವಾದ ಬಿರಿಯಾನಿ ಪ್ರಿಯವಾಗಿದ್ದರೆ, ಸಹಜವಾಗಿಯೇ ಗರ್ಭಾವಸ್ಥೆಯಲ್ಲಿ ಈ ಆಹಾರವನ್ನು ನಿಮ್ಮ ದೇಹ ಬಯಸುತ್ತದೆ. ಆದರೆ ಬಿರಿಯಾನಿಯನ್ನು ಸೇವಿಸುವ ಮುನ್ನ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಬೇಕು. ಅವುಗಳ ಪಟ್ಟಿ ಇಲ್ಲಿದೆ:

* ಮಸಾಲೆರಹಿತ ಬಿರಿಯಾನಿ: ಮಸಾಲೆಯುಕ್ತ ಬಿರಿಯಾನಿಯನ್ನು ನಿಮ್ಮ ದೇಹ ಬಯಸುವುದು ಸಾಮಾನ್ಯವಾದರೂ, ಮಸಾಲೆ ಅಂಶ ನಿಮ್ಮಲ್ಲಿ ಎದೆಯುರಿ, ವಾಕರಿಕೆ ಉಂಟುಮಾಡಬಹುದು. ಗರ್ಭಾವಸ್ಥೆಯಲ್ಲಿ ಸಹಜವಾಗಿ ಯಾರೂ ಇದನ್ನು ಅನುಭವಿಸಲು ಬಯಸುವುದಿಲ್ಲ. ಅಲ್ಲವೇ? 

* ಆರೋಗ್ಯಕ ಬಿರಿಯಾನಿ ಎಂದರೆ ನೀವು ಮನೆಯಲ್ಲಿ ತಯಾರಿಸಿದ ಬಿರಿಯಾನಿ. ಆದರೆ ನೀವು ಹೋಟೆಲ್ ಗಳಿಗೆ ಹೋಗಿ ತಿನ್ನಲು ಬಯಸಿದರೆ, ಹೋಟೆಲಿನ ಅಡುಗೆಭಟ್ಟನ ಬಳಿ ನೀವು ತಿನ್ನುವ ಚಿಕನ್ ಗೆ ಟೆಂಡರೈಸರ್ ಸೇರಿಸಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಟೆಂಡರೈಸರ್ ಮಾಂಸ ವೇಗವಾಗಿ ಬೇಯಲು ಸಹಾಯ ಮಾಡಿದರೂ, ಗರ್ಭಾವಸ್ಥೆಯಲ್ಲಿ ಇದರಿಂದ ನೀವು ದೂರವಿರುವುದು ಒಳಿತು. ಅದು ಹಾನಿಕಾರಕ ರಾಸಾಯನಿಕ ಇದ್ದಂತೆ. 

೫. ಮಸಾಲೆಭರಿತ ತಂದೂರಿ ಚಿಕನ್: ಇದು ಮಾಂಸ ಪ್ರಿಯರಿಗೆ ಸಂತೋಷ ಉಂಟು ಮಾಡುವ ಮತ್ತೊಂದು ಆಕರ್ಷಕ ಭಾರತೀಯ ಆಹಾರ. ಆದರೆ ಇದರಲ್ಲಿ ಅತೀ ಹೆಚ್ಚಿನ ಮಟ್ಟದ ಮಾಂಸದ ಟೆಂಡರೈಸರ್ ಬಳಸಲಾಗುತ್ತದೆ. ಹಾಗಾಗಿ ಸೇವವು ಹೆಚ್ಚಿನ ಕಾಳಜಿವಹಿಸಿ, ಕೇವಲ ನಂಬಿಕಸ್ಥ ಹೋಟೆಲ್ ಗಳಿಂದ ಈ ಆಹಾರವನ್ನು ಸೇವಿಸಬೇಕು. ನೀವು ತಿನ್ನುತ್ತಿರುವ ಚಿಕನ್ ನಲ್ಲಿ ಆರೆಂಜ್ ಬಣ್ಣದ ಹುಲಿ ರೂವಾಹಿಯ ತಂದೂರಿ ಚಿಕನ್ ಕಂಡಬಂದರೆ, ಗರ್ಭಾವಸ್ಥೆಯಲ್ಲಿ ಯಾವುದೇ ಕಾರಣಕ್ಕೂ ಸೇವಿಸಬೇಡಿ. 

[Back To Top]

೩. ಗರ್ಭಾವಸ್ಥೆಯಲ್ಲಿ ಚಿಕನ್ ಸೇವಿಸುವುದರ ಲಾಭಗಳು (What Are The Benefits Of Having Chicken During Pregnancy? in Kannada):

ಗರ್ಭಾವಸ್ಥೆಯಲ್ಲಿ ಚಿಕನ್ ಸೇವನೆ ಶ್ಲಾಘನೀಯ ಆಯ್ಕೆ. ಗರ್ಭಾವಸ್ಥೆಯಲ್ಲಿ ಈ ಆರೋಗ್ಯಕರ ಆಹಾರದ ಸೇವನೆಯಿಂದ ಆಗುವ ಲಾಭಗಳು ಇಲ್ಲಿವೆ:

* ವಿಟಮಿನ್ ಬಿ೩ - ಕೋಳಿಮಾಂಸದನಂತಹ ಲೀನ್ ಮಾಂಸ ನಿಯಾಸಿನ್ (ವಿಟಮಿನ್ ಬಿ೩ ಎಂದು ಕರೆಯಲ್ಪಡುವ) ಅನ್ನು ಹೆಚ್ಚಿನ ಮಟ್ಟದಲ್ಲಿ ಹೊಂದಿದೆ. ಅದು ನಿಮ್ಮ ಹೊಟ್ಟೆಯಲ್ಲಿರುವ ಭ್ರೂಣದ ಮೆದುಳಿನ ಬೆಳವಣಿಗೆಗೆ ಸಹಕಾರಿ. 

* ಅಮೈನೊ ಆಸಿಡ್ ನಿಧಿ: ಚಿಕನ್ ನಲ್ಲಿ ಅಗತ್ಯವಿರುವ ಎಲ್ಲಾ ಅಮೈನೊ ಆಸಿಡ್ಸ್ ಗಳಿದ್ದು, ಅವುಗಳು ಗರ್ಭಾವಸ್ಥೆಯಲ್ಲಿ ಅತ್ಯಂತ ಆರೋಗ್ಯಕರ. ಅಮೈನೊ ಆಸಿಡ್ ಗಳು ನಿಮ್ಮ ಮಾಂಸಖಂಡಗಳನ್ನು ಬಲಿಷ್ಠಗೊಳಿಸುತ್ತದೆ. 

* ತೂಕ ನಿಯಂತ್ರಣ: ಚಿಕನ್ ನ ಚರ್ಮ ತೆಗೆದರೆ, ಅದರಲ್ಲಿರುವ ಕೊಬ್ಬಿನ ಅಂಶ ಬಹುತೇಕ ಕಡಿಮೆಗೊಳ್ಳುತ್ತದೆ. ಇಂತಹ ಆಹಾರವನ್ನು ಗರ್ಭಾವಸ್ಥೆಯಲ್ಲಿ ಸೇವಿಸುವುದು ಅತ್ಯಂತ ಆರೋಗ್ಯಕರ ಮತ್ತು ಇದರಲ್ಲಿ ಹಲವಾರು ಪೌಷ್ಟಿಕಾಂಶಗಳಿವೆ. 

* ೧ ಕಪ್ ಚಿಕನ್ ಪ್ರತಿದಿನ: ನಿಮ್ಮ ಗರ್ಭಾವಸ್ಥೆಯ ಆಹಾರ ಪದ್ಧತಿಯಲ್ಲಿ ಪ್ರತಿ ದಿನ ಒಂದು ಬಟ್ಟಲು ಬೇಯಿಸಿದ ಚಿಕನ್ ಸೇರಿಸುವುದು ಒಳಿತು. ಅದು ನಿಮ್ಮ ದೇಹದ ಪ್ರೋಟೀನ್ಸ್ ಅಗತ್ಯತೆಗಳನ್ನು ನೀಗಿಸುತ್ತದೆ. 

* ಕೊಲೆಸ್ಟರಾಲ್ ಇರುವುದಿಲ್ಲ: ಗರ್ಭಣಿಯರು ತಮ್ಮ ಆಹಾರ ಪದ್ಧತಿಯಲ್ಲಿ ಚಿಕನ್ ಪ್ರತಿನಿತ್ಯ ಸೇವಿಸಿದರೂ, ಅವರು ಯಾವುದೇ ಬಗೆಯ ಕೊಲೆಸ್ಟರಾಲ್ ತೊಂದರೆಗಳಿಂದ ಬಳಲುವುದಿಲ್ಲ. ಇದರಿಂದಾಗಿ ಚಿಕನ್ ಗರ್ಭಾವಸ್ಥೆಯಲ್ಲಿ ಸುರಕ್ಷಿತವಷ್ಟೇ ಅಲ್ಲದೇ, ನಿಮ್ಮ ದೇಹ ಮತ್ತು ನಿಮ್ಮ ಮಗುವನ್ನು ಪೋಷಿಸುತ್ತದೆ. 

* ಚಿಕನ್ ಯಕೃತ್ತು: ಚಿಕನ್ ಯಕೃತ್ತು ಆರೋಗ್ಯಕರವಷ್ಟೇ ಅಲ್ಲದೇ, ನಿಮ್ಮ ಮಗುವಿನ ಮೆದುಳಿನ ಬೆಳವಣಿಗೆಯಲ್ಲಿ ಸಹಾಯ ಮಾಡಿ, ಮೆದುಳನ್ನು ಚುರುಕುಗೊಳಿಸುತ್ತದೆ. 

* ನರದ ಕೊಳವೆಗಳನ್ನು ಸಂರಕ್ಷಿಸುತ್ತದೆ: ಚಿಕನ್ ನಲ್ಲಿರುವ ಫೋಲೇಟ್ ಅಂಶವು ನಿಮ್ಮ ಮಗುವಿನ ನಾರದ ಕೊಳವೆಗಳನ್ನು ಯಾವುದೇ ರೀತಿಯ ತೊಂದರೆಗಳಿಂದ ರಕ್ಷಿಸುತ್ತದೆ. ಗರ್ಭಾವಸ್ಥೆಯಲ್ಲಿ ಚಿಕನ್ ಸೇವಿಸಲು ಇದು ಸಹ ಒಂದು ಮುಖ್ಯ ಕಾರಣ.

* ಕಳೆ ತುಂಬುತ್ತದೆ: ಚಿಕನ್ ನಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಇ ಯ ಆಂಟಿಆಕ್ಸಿಡೆಂಟ್ ಗುಣದಿಂದಆಗಿ ನಿಮ್ಮ ದೇಹವನ್ನು ಪುನಸ್ಚೈತನ್ಯಗೊಳಿಸುತ್ತದೆ. ಇದು ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. 

* ಐರನ್ ಮತ್ತು ಜಿಂಕ್ ಮೂಲ: ಶಿಫಾರಸ್ಸು ಮಾಡಿದ ಚಿಕನ್ ಪ್ರಮಾಣವನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು. ಐರನ್ ಮತ್ತು ಜಿಂಕ್ ನಿಮ್ಮ ದೇಹದಲ್ಲಿ ಹೊಸ ಜೀವಕೋಶಗಳ ರಚನೆಯಲ್ಲಿ ಸಹಾಯ ಮಾಡಿ, ನಿಮ್ಮ ಒಟ್ಟಾರೆ ಒಳಿತನ್ನು ಪೋಷಿಸುತ್ತದೆ.

* ದೀರ್ಘ ಕಾಲದ ಕಾಯಿಲೆಗಳಿಂದ ಸಂರಕ್ಷಣೆ: ಚಿಕನ್ ಹೆಚ್ಚಿನ ಪೌಷ್ಟಿಕಾಂಶಗಳು ಮತ್ತು ಖನಿಜಗಳನ್ನು ಹೊಂದಿದ್ದು, ಗರ್ಭಾವಸ್ಥೆಯಲ್ಲಿ ಇದನ್ನು ಸೇವಿಸುವುದರಿಂದ ನಿಮ್ಮ ಹೊಟ್ಟೆಯಲ್ಲಿರುವ ಭ್ರೂಣವನ್ನು ಯಾವುದೇ ರೀತಿಯ ಮಾರಕ ಅರೋಗ್ಯ ಸಮಸ್ಯೆಗಳಿಂದ ಸಂರಕ್ಷಣೆ ನೀಡುತ್ತದೆ. 

[Back To Top]

೪. ನಿರ್ಣಯ (Conclusion in Kannada)

ನೀವು ಆರೋಗ್ಯಕರ ಆಹಾರವನ್ನು ಮನೆಯಲ್ಲಿಯೇ ತಾಯಾರಿಸುವ ಹಾಗಿದ್ದರೆ, ಚಿಕನ್ ಸೇವಿಸುವುದನ್ನು ಯಾವುದೇ ಕಾರಣಕ್ಕೂ ತಡೆಯಬೇಕಿಲ್ಲ. ಆವಿಯಾಡಿಸಿದ ಚಿಕನ್ ಗರ್ಭಾವಸ್ಥೆಯಲ್ಲಿ ಅತ್ಯಂತ ಆರೋಗ್ಯಕರ ಆಹಾರ. ಹಾಗೆಯೆ, ಮನೆಯಲ್ಲಿ ತಯಾರಿಸಿದ ಬಿರಿಯಾನಿ ಸಹ. 

ನೀವು ಈಗಲೂ ಸಹ ಚಿಕನ್ ಸೇವನೆ ಸುರಕ್ಷಿತವೇ ಎಂದು ಯೋಚಿಸುತ್ತಿದ್ದರೇ - ಮುಜುಗರ ಪಡದೇ, ನಿಮ್ಮ ನಾಲಿಗೆಯ ಕಿರುಚೀಲಗಳನ್ನು ಚಿಕನ್ ಸೇವಿಸುವದರೊಂದಿಗೆ ಸಮಾಧಾನಿಸಿ, ನಿಮ್ಮ ಜೀವನದ ವಿಶೇಷ ಘಟ್ಟವನ್ನು ಅನುಭವಿಸಿ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon