Link copied!
Sign in / Sign up
0
Shares

ಗರ್ಭಾವಸ್ಥೆಯಲ್ಲಿ ಅಲೋವೆರಾ ರಸ ಸುರಕ್ಷಿತವೇ? (Is Aloe Vera Juice Safe During Your Pregnancy? in Kannada)

ಮಾತೃತ್ವ ಪ್ರತಿ ಹೆಣ್ಣಿನ ಜೀವನದಲ್ಲಿ ನಿರೀಕ್ಷಿಸುವ ಕ್ಷಣ. ಗರ್ಭಾವಸ್ಥೆಯಲ್ಲಿ, ಸರಿಯಾದ, ಸಮತೋಲಿತ ಆಹಾರದ ಅವಶ್ಯಕತೆ ಹತ್ತುಪಟ್ಟು ಹೆಚ್ಚುತ್ತದೆ. ತಾಯಿ ಮತ್ತು ಮಗುವಿಗೆ ಪ್ರಯೋಜನಕರವಾಗುವ ಸಾಕ್ಷ್ಟು ಹೊಸ ಅಂಶಗಳನ್ನುತಾಯಿಯ ಆಹಾರಕ್ರಮಕ್ಕೆ ಸೇರಿಸಲಾಗುತ್ತದೆ. ಆದರೆ ಎಚ್ಚರವಹಿಸಬೇಕಾದ ಸಂಗತಿ ಎಂದರೆ ಎಲ್ಲಾ ಆರೋಗ್ಯಕರ ಆಹಾರ ಗರ್ಭಾವಸ್ಥೆಯಲ್ಲಿ ಸುರಕ್ಷಿತವಲ್ಲ. ವಾಸ್ತವವಾಗಿ, ಕೆಲವು ಪೌಷ್ಟಿಕ ಆಹಾರ ಉತ್ಪನ್ನಗಳು ಗರ್ಭಾವಸ್ಥೆಯಲ್ಲಿ ಒಳಿತಿಗಿಂತ ಕೆಡಕನ್ನು ಮಾಡುತ್ತವೆ. ಅದಕ್ಕೆ ಸೂಕ್ತ ಉದಾಹರಣೆ ಅಲೋವೆರಾ ಸಸ್ಯ. ಗರ್ಭಾವಸ್ಥೆಯಲ್ಲಿ ಅಲೋವೆರಾ ರಸವನ್ನು ಸೇವಿಸುವುದರ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಷ್ಟೆ ಅಲ್ಲದೇ, ವೈದ್ಯರ ಸಲಹೆಯ ಅಗತ್ಯತೆಯೂ ಇದೆ. 

ಪರಿವಿಡಿ:

೧. ಅಲೋವೆರಾ ಬಗ್ಗೆ ಕೆಲವು ವಿಷಯಗಳು ( A little about aloe vera in Kannada)

೨. ಅಲೋವೆರಾ ರಸದ ಕೆಲವು ಪ್ರಯೋಜನಗಳು (Some of the benefits of drinking aloe vera juice in Kannada)

೩. ಅಲೋವೆರಾ ಅಡ್ಡಪರಿಣಾಮಗಳು  - ಯಾವುದಾದರೂ ಇದೆಯೇ? (Aloe vera side effects - does it have any? in Kannada)

೪. ಗರ್ಭಾವಸ್ಥೆಯಲ್ಲಿ ಅಲೋವೆರಾ ರಸದ ಉಪಯೋಗಗಳು (Uses of aloe vera juice during pregnancy in Kannada)

೫. ಗರ್ಭಾವಸ್ಥೆಯಲ್ಲಿ ಗರ್ಭಿಣಿಯರು ಅಲೋವೆರಾ ರಸವನ್ನು ಕುಡಿಯಬೇಕೆ? (Should women drink aloe vera juice during pregnancy? in Kannada)

೧. ಅಲೋವೆರಾ ಬಗ್ಗೆ ಕೆಲವು ವಿಷಯಗಳು ( A little about aloe vera in Kannada):

ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರು ಅಲೋವೆರಾ ಸಸ್ಯದಿಂದ ಔಷಧೀಯ ಉಪಯೋಗಗಳಿಗಾಗಿ ಜೆಲ್ ಅನ್ನು ಹಿಂದಿ ತೆಗೆಯುತ್ತಿದ್ದರು. ಅಲೋವೆರಾ ಜೆಲ್ ಅನ್ನು ಹಲವಾರು ಚರ್ಮದ ಪಾಲನೆಗಾಗಿ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಚೊಕ್ಕವಾಗಿ ಹೇಳಬೇಕೆಂದರೆ, ತಿರುಳಿರುವ ಎಲೆಗಳಾದ ಅಲೋವೆರಾ ಪೌಷ್ಟಿಕವಾಗಿದ್ದು, ಫೈಬರ್ ಅಂಶವನ್ನೂ ಹೊಂದಿದೆ. 

ಅಲೋವೆರಾ ರಸ ಹೊಟ್ಟೆ ನೋವು ಮತ್ತು ಕರುಳಿಗೆ ಸಂಬಂಧಿತ ತೊಂದರೆಗಳಿಗೆ ಮನೆಮದ್ದಾಗಿದೆ. ಅಲೋವೆರಾ ಜೆಲ್ ಅನ್ನು ಅಲೆಯೋವೇರಾ ಎಲೆಗಳಿಂದ ಮೊಗೆದು ತೆಗೆಯಬೇಕು. ಈ ಜೆಲ್ ಅನ್ನು ಮೃದುವಾಗಿ, ತೆಳುವಾಗುವವರೆಗೂ ಅರೆಯಬೇಕು. ದೇಹದ ಹಾರ್ಮೋನ್ ಗಳನ್ನು ಸಮತೋಲನಗೊಳಿಸುವ ಗುಣದಿಂದಾಗಿ ಅಲೋವೆರಾ ರಸ ಹಂಗಸರ ಮುಟ್ಟಿನ ಸಮಸ್ಯೆಗೆ ನಾಂದಿ ಹಾಣುತ್ತದೆ. 

[Back To Top]

೨. ಅಲೋವೆರಾ ರಸದ ಕೆಲವು ಪ್ರಯೋಜನಗಳು (Some of the benefits of drinking aloe vera juice in Kannada):

ಸಾಮಾನ್ಯವಾಗಿ, ಶುದ್ಧ, ಬಣ್ಣರಹಿತ, ಕಡಿಮೆ ಅಂತ್ರಕ್ವಿನೋನ್ ವುಳ್ಳ ಅಲೋವೆರಾ ರಸವನ್ನು ಸೇವಿಸುವುದರಿಂದ ದೇಹದ ಮೇಲೆ ಹಲವಾರು ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅದರಲ್ಲಿ ಕೆಲವು ಅರೋಗ್ಯ ಪ್ರಯೋಜನಗಳನ್ನು ಕೆಳಗೆ ನೀಡಿದ್ದೇವೆ:

೧. ದೇಹದ ಕ್ಷಾರೀಯತೆಯನ್ನು ಹೆಚ್ಚಿಸುತ್ತದೆ: ಅಲೋವೆರಾ ದೇಹದ pH ಹೆಚ್ಚಿಸಿ, ತನ್ನ ಕ್ಷಾರೀಯತೆಯ ಗುಣದಿಂದ ದೇಹದ ಹೆಚ್ಚಿನ ಆಮ್ಲೀಯತೆಯನ್ನು ಕಡಿಮೆಗೊಳಿಸುತ್ತದೆ. 

೨. ಪುನರ್ಜಲೀಕರಣ:ಅಲೋವೆರಾ ನೀರನ್ನು ಹೊಂದಿರುವ ಸಸ್ಯ. ಹಾಗಾಗಿ, ಅಲೋವೆರಾ ರಸವನ್ನು ನಿಯಮಿತವಾಗಿ (ವಿಶೇಷವಾಗಿ ಬೇಸಿಗೆಯಲ್ಲಿ) ಸೇವಿಸುವುದರಿಂದ ಅದು ನಿಮ್ಮ ದೇಹವನ್ನು ಪುನರ್ಜಲೀಕರಣಗೊಳಿಸುತ್ತದೆ. ನಿಮ್ಮ ದೇಹ ಪುನರ್ಜಲೀಕರಣಗೊಂಡ ನಂತರ ಅದು ನಿಮ್ಮ ದೇಹದಲ್ಲಿರುವ ವಿಷ ಮತ್ತು ಕಲ್ಮಶಗಳನ್ನು ತೆಗೆದುಹಾಕುತ್ತದೆ. ಅಲೋವೆರಾ ರಸ ಪೌಷ್ಟಿಕತೆ ಇಂದ ತುಂಬಿದ್ದು, ದೇಹದ ಎಲ್ಲಾ ಭಾಗಗಳ ಸೂಕ್ತ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. 

೩. ಯಕೃತ್ತುವಿಗೆ ಸಹಾಯ ಮಾಡುತ್ತದೆ: ಯಾಕೆಯುಟ್ಟು ನಿಮ್ಮ ದೇಹವನ್ನು ನಿರ್ವೀಷೀಗೊಳಿಸುವಲ್ಲಿ ಪ್ರಮುಖ ಪಾತ್ರ್ ನಿರ್ವಹಿಸುತ್ತದೆ. ಅಲೋವೆರಾ ರಸ ನಿಮ್ಮ ಯಕೃತ್ತು ಆರೋಗ್ಯಕರವಾಗಿ ಮತ್ತು ಸೂಕ್ತವಾದ ರೀತಿಯಲ್ಲಿ ಕಾರ್ಯನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ. ಅಲೋವೆರಾದಲ್ಲಿರುವ ಫಿಟೊನ್ಯೂಟ್ರಿಯೆಂಟ್ಸ್ ನಿಮ್ಮ ಯಕೃತ್ತುವಿಗೆ ಸಹಾಯ ಮಾಡಿ, ನಿಮ್ಮ ಒಟ್ಟಾರೆ ದೇಹಕ್ಕೆ ಉಪಯೋಗಕಾರೋಯಾಗುತ್ತದೆ. 

೪. ಮಲಬದ್ಧತೆಯನ್ನು ನಿವಾರಿಸುತ್ತದೆ: ಅಲೋವೆರಾ ಸಸ್ಯದಲ್ಲಿ ಹೆಚ್ಚಿನ ಫೈಬರ್ ಅಂಶವಿದ್ದು, ಅಲೋವೆರಾ ರಸ ಮಲಬದ್ಧತೆಯ ವಿರುದ್ಧ ಸೂಕ್ತ ಪ್ರಬಲ ಔಷಧಿಯಾಗಿದೆ. ಅಲೋವೆರಾ ನಿಮ್ಮ ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳಿಗೆ ಸಹಾಯ ಮಾಡಿ, ನಿಮ್ಮ ಜೀರ್ಣಕ್ರಿಯೆ ಸರಾಗವಾಗಿ ಸಾಗುವಂತೆ ಮಾಡುತ್ತದೆ. 

೫. ಚರ್ಮವನ್ನು ಶುಚಿಗೊಳಿಸುತ್ತದೆ: ನಿಮ್ಮ ಚರ್ಮ ಸೌಂದರ್ಯ ಕಾಪಾಡುವಲ್ಲಿ ಅಲೋವೆರಾ ಜೆಲ್ ಒಂದು ಪ್ರಬಲವಾದ ಸಾಮಗ್ರಿ. ಅಲೋವೆರಾದಲ್ಲಿರುವ ವಿಟಮಿನ್ ನಿಮ್ಮ ಚರ್ಮವನ್ನು ಯಾವುದೇ ರೀತಿಯ ಹಾನಿಕಾರಕ ಸೂರ್ಯನ UV ಕಿರಣಗಳಿಂದ ರಕ್ಷಿಸುತ್ತದೆ. ಅದರೊಂದಿಗೆ ಅಲೋವೆರಾ ನಿಮ್ಮ ಮುಖದ ಚರ್ಮದ ಮೇಲೆ ಸುಕ್ಕಿನ ರಚನೆಯನ್ನೂ ತಡೆಗಟ್ಟುತ್ತದೆ. 

೬. ಎದೆಯುರಿಯನ್ನು ತಡೆಗಟ್ಟುತ್ತದೆ: ಅಲೋವೆರಾ ರಸದ ಅರೋಗ್ಯ ಪ್ರಯೋಜನಗಳಲ್ಲಿ ಒಂದು ಎದೆಯುರಿಯ ಪರಿಣಾಮಗಳಿಂದ ಮುಕ್ತಿ ದೊರಕಿಸುವುದು. ಅಲೋವೆರಾ ಜೆಲ್ ನ ಕ್ಷಾರೀಯತೆ ಗುಣ ನಿಮ್ಮ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಆಮ್ಲಗಳನ್ನು ಕಡಿಮೆಗೊಳಿಸುತ್ತದೆ. ಇದರಿಂದಾಗಿ ಅಲೋವೆರಾ ರಸ ಹೊಟ್ಟೆಯಲ್ಲಿನ ಹುಣ್ಣು ಬೆಳೆಯುವುದನ್ನು ತಡೆಗಟ್ಟುತ್ತದೆ. 

೭. ಜೀರ್ಣಕ್ರಿಯೆಯ ಲಾಭಗಳು:

 ಅಲೋವೆರಾ ಜೆಲ್ ನಲ್ಲಿರುವ ಕಿಣ್ವಗಲಿ ನಿಮ್ಮ ದೇಹದ ಜೀರ್ಣಕ್ರಿಯೆಯಲ್ಲಿ ಭಾಗವಹಿಸಿ ಸಕ್ಕರೆ ಮತ್ತು ಕೊಬ್ಬುಗಳನ್ನು ಒಡೆಯಲು ಸಹಾಯ ಮಾಡುತ್ತದೆ. ಇದರಿಂದಾಗಿ ಅಲೋವೆರಾ ಜೆಲ್ ನಿಮ್ಮ ದೇಹ ತಾನು ಸೇವಿಸಿರುವ ಎಲ್ಲಾ ಆಹಾರದಿಂದ ಪೌಷ್ಟಿಕತೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಇದರಿಂದಾಗಿ, ನಿಮ್ಮ ಒಟ್ಟಾರೆ ದೇಹದ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ 

ಅಲೋವೆರಾ ರಸದ ಈ ರೀತಿಯ ಗುಣದಿಂದಾಗಿ, ಅದನ್ನು ಔಷಧಿಗಳು ಮತ್ತು ಚರ್ಮ ಸೌಂದರ್ಯ ವರ್ಧಕ ಉತ್ಪನ್ನಗಳಲ್ಲಿ ಸಕ್ರಿಯ ಅಂಶವಾಗಿ ಬಳಸಲಾಗುತ್ತದೆ. ಅದರೊಂದಿಗೆ, ಅಲೋವೆರಾವನ್ನು ಹಲವಾರು ಬಗೆಯ ಮನೆಮದ್ದುಗಳಲ್ಲಿಯೂ ಉಪಯೋಗಿಸಬಹುದು. ಅಲೋವೆರಾ ಜೆಲ್ ಅನ್ನು ಸುಂದರವಾಗ ಚರ್ಮಕ್ಕೆ ಮತ್ತು ಕೂದಲಿಗಾಗಿ ಫೇಸ್ ಮಾಸ್ಕ್, ಹೇರ್ ಮಾಸ್ಕ್ ಆಗಿ ಉಪಯೋಗಿಸಬಹುದು. ಅಲೋವೆರಾವನ್ನು ಟೀ ಮತ್ತು ಇತರ ಪಾನೀಯಗಳಲ್ಲಿಯೂ ಬಳಸಬಹುದು. ಇದರಿಂದಾಗಿ ನಿಮ್ಮ ದೇಹದ ಚಯಾಪಚಯ ಕ್ರಿಯೆಯಲ್ಲಿ ಅಲೋವೆರಾ ರಸ ಕಾರ್ಯನಿರ್ವಹಿಸುತ್ತದೆ. ಆದರೆ, ಅಲೋವೆರಾ ಸಹ ಕೆಲವು ಅಡ್ಡಪರಿಣಾಮಗಳನ್ನು ಬೀರಬಹುದು. 

[Back To Top]

೩. ಅಲೋವೆರಾ ಅಡ್ಡಪರಿಣಾಮಗಳು - ಯಾವುದಾದರೂ ಇದೆಯೇ? (Aloe vera side effects - does it have any? in Kannada)

ಅಲೋವೆರಾಯಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ ಎಂದು ಭಾವಿಸಿದ್ದರೂ, ಸತ್ಯವೆಂದರೆ ಇದರಿಂದಲೂ ಹಲವಾರು ಅಡ್ಡಪರಿಣಾಮಗಲುಂಟು. ಅದರಲ್ಲಿಯೂ, ಅಲೋವೆರಾ ರಸ ಬಣ್ಣಗಳನ್ನು ಹೊಂದಿದ್ದು, ಕಲ್ಮಶಗೊಂಡಿದ್ದರೆ, ಹೆಚ್ಚಿನ ಅಡ್ಡಪರಿಣಾಮಗಳನ್ನು ಹೊಂದಿರುತ್ತದೆ. ಅಂತಹ ಕೆಲವು ತೊಂದರೆಗಳ ಪಟ್ಟಿ ಇಲ್ಲಿದೆ:

* ಬೇಧಿ 

* ಸ್ನಾಯುಗಳ ಸೆಳೆತ

* ಕೋಲನ್ ಅಡೆನೊಮಾ 

* ಕೋಲನ್ ಕ್ಯಾನ್ಸರ್

ಆಲೋವೆರಾದ ಇನ್ನಿತರ ಅಡ್ಡಪರಿಣಾಮಗಳು ಇಂತಿವೆ: 

* ಕೆಲವರು ಅಲೋವೆರಾ ಜೆಲ್ ಕಾರಣದಿಂದಾಗಿ ಅಲರ್ಜಿಗಳನ್ನು ಅನುಭವಿಸುತ್ತಾರೆ. ಇದರಿಂದಾಗಿ, ರೆಡ್-ನೆಸ್, ನೆವೆ ಉಂಟಾಗುವುದು, ಚರ್ಮದಲ್ಲಿ ಉರಿತ ಉಂಟಾಗುವುದು ಆಗಬಹುದು. 

* ಅಲೋವೆರಾ ರಸದ ಹಾನಿಕಾರಕ ಅಡ್ಡಪರಿಣಾಮವೆಂದರೆ ಅದನ್ನು ಅಧಿಕವಾಗಿ ಸೇವಿಸಿದಾಗ ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆಗೊಳಿಸುತ್ತದೆ.  

* ಅಲೋವೆರ್ ರಸದ ಇನ್ನೊಂದು ಅಡ್ಡಪರಿಣಾಮವೆಂದರೆ ಅದು ನಿಮ್ಮ ದೇಹದ ಪೊಟ್ಯಾಸಿಯಂ ಅಂಶವನ್ನು ಕಡಿಮೆಗೊಳಿಸುತ್ತದೆ. ಇದರಿಂದಾಗಿ ಅನಿಯಮಿತ ಹೃದಯ ಬಡಿತ, ಸುಸ್ತು ಮತ್ತು ಆಯಾಸ ಉಂಟಾಗಬಹುದು. 

[Back To Top]

೪. ಗರ್ಭಾವಸ್ಥೆಯಲ್ಲಿ ಅಲೋವೆರಾ ರಸದ ಉಪಯೋಗಗಳು (Uses of aloe vera juice during pregnancy in Kannada):

ಮೊದಲೆ ತಿಳಿಸಿರುವಂತೆ, ಅಲೋವೆರಾ ರಸದ ಲಾಭಗಳು ಹಲವಾರು. ಅದು ಗರ್ಭಾವಸ್ಥೆಯಲ್ಲಿ ಗರ್ಭಿಣಿಯರಿಗೆ ಅವಶ್ಯಕತೆಯಿರುವ ಪೌಷ್ಟಿಕತೆಯನ್ನು ನೀಡುವುದಷ್ಟೇ ಅಲ್ಲದೇ, ಹಲವಾರು ಅರೋಗ್ಯ ಪ್ರಯೋಜನಗಳನ್ನು ಮಾಡುತ್ತದೆ. ಅವುಗಳ ವಿವಿರ ಇಲ್ಲಿದೆ:

* ಅಲೋವೆರಾ ರಸದಲ್ಲಿ ಹೆಚ್ಚಿನ ಮಟ್ಟದ ವಿಟಮಿನ್ ಮತ್ತು ಮಿನರಲ್ ಗಳಿದ್ದು, ಅದನ್ನು ಗರ್ಭಾವಸ್ಥೆಯಲ್ಲಿ ಪೂರಕವಾಗಿ ಸೇವಿಸಬಹುದು. 

* ಗರ್ಭಾವಸ್ಥೆಯಲ್ಲಿ ಅಲೋವೆರಾ ರಸದ ಇನ್ನೊಂದು ಲಾಭವೆಂದರೆ ಅದನ್ನು ನಿಮ್ಮ ಹೊಟ್ಟೆಯ ಲೈನಿಂಗ್ ಗೆ ಹಿತವಾದ ಭಾವನೆ ನೀಡುವ, ಗರ್ಭಾವಸ್ಥೆಯಲ್ಲಿ ಉಂಟಾಗುವ ವಾಕರಿಕೆ, ಮಾರ್ನಿಂಗ್ ಸಿಕ್ಕ್ನೆಸ್ಸ್ ಅನ್ನು ಕಡಿಮೆಗೊಳಿಸುವ ಅಂಶವಾಗಿ ಉಪಯೋಗಿಸಬಹುದು. 

* ಅಲೋ ವೆರಾ ರಸವು ಗರ್ಭಾವಸ್ಥೆಯಲ್ಲಿ ರಕ್ತ ಕ್ಯಾಪಿಲರಿಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ.

* ಅಲೋವೆರಾ ರಸ ಜೀರ್ಣಾಂಗವ್ಯೂಹದ ಉರಿಯೂತಕ್ಕೆ ಒಳಗಾಗಿರುವ ಅಂಡಾಂಶಗಳಿಗೆ ಸಹಾಯ ಮಾಡಿ, ಮಲದ ಸುಲಭ ಚಲನೆಯಲ್ಲಿ ಸಹಾಯ ಮಾಡುತ್ತದೆ. 

ಅಲೋ ವೆರಾ ರಸವು ಜೀರ್ಣಾಂಗವ್ಯೂಹದ ಉರಿಯೂತ ಅಂಗಾಂಶಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಸುಲಭವಾಗಿ ಕರುಳಿನ ಚಲನೆಯನ್ನು ಒದಗಿಸುತ್ತದೆ.

[Back To Top]

೫. ಗರ್ಭಾವಸ್ಥೆಯಲ್ಲಿ ಗರ್ಭಿಣಿಯರು ಅಲೋವೆರಾ ರಸವನ್ನು ಕುಡಿಯಬೇಕೆ? (Should women drink aloe vera juice during pregnancy? in Kannada)

ಅಲೋ ವೆರಾದ ರಸದ ಹಲವಾರು ಅರೋಗ್ಯ ಪ್ರಯೋಜನಗಳ ಹೊರತಾಗಿಯೂ ವೈದ್ಯರು ಇದರ ವಿರುದ್ಧವಾಗಿ ನಿಮ್ಮ ತಿಳಿಹೇಳಬಹುದು. ಅದಕ್ಕೆ ಕಾರಣ ಅಲೋವೆರಾದಲ್ಲಿರುವ ಕೆಲವು ಅಂಶಗಳಿ ನಿಮ್ಮ ದೇಹದ ಒಟ್ಟಾರೆ ಆರೋಗ್ಯಕ್ಕೆ ಮತ್ತು ನಿಮ್ಮ ಮಗುವಿನ ಆರೋಗ್ಯಕ್ಕೆ ಅಲೆಯೋವೇರದ ಬಗ್ಗೆ ಸರಿಯಾದ ತಿಳಿವಳಿಕೆ ಹೊಂದದೇ ಸೇವಿಸಿದರೆ  ತೊಂದರೆಯುಂಟು ಮಾಡಬಹುದು. 

ಅಲೋ ವೆರಾ ಜೆಲ್ ಅಕಾಲಿಕ ಗರ್ಭಾಶಯದ ಕುಗ್ಗುವಿಕೆಯನ್ನು ಉಂಟುಮಾಡುತ್ತದೆ. ಇದು ಗರ್ಭಾವಸ್ಥೆಯಲ್ಲಿ ಹಾನಿಕಾರಕ. ಅಲೋವೆರಾ ಅಡ್ಡಪರಿಣಾಮಗಳಲ್ಲಿ ಒಂದು, ದೇಹದ ಸಕ್ಕರೆ ಮಟ್ಟವನ್ನು ಕಡಿಮೆಗೊಳಿಸುವ ಗುಣ. ಇದರಿಂದ ಗರ್ಭಾವಸ್ಥೆಯಲ್ಲಿ ಹಲವಾರು ಅರೋಗ್ಯ ತೊಂದರೆಗಲುಂಟಾಗಬಹುದು. 

ಸಸ್ಯದ ಲ್ಯಾಟೆಕ್ಸ್ ಅಂಶದ ಕಾರಣದಿಂದಾಗಿ ಅಲೋ ವೆರಾ ಜೆಲ್ ಅನ್ನು ಸೇವಿಸುವುದಕ್ಕೆ ವಿರುದ್ಧವಾಗಿ ಸ್ತನ್ಯಪಾನ ಮಾಡಿಸುವ ತಾಯಂದಿರಿಗೆ ಸಲಹೆ ನೀಡಲಾಗುತ್ತದೆ. ಅಲೋವೆರಾ ಜೆಲ್ ದಲ್ಲಿರುವ ಲೇಟೆಕ್ಸ್ ಅಂಶ ಎದೆಹಾಲಿನ ಮೂಲಕ ನಿಮ್ಮ ಮಗುವನ್ನು ತಲಪುವ ಸಾಧ್ಯತೆಯಿರುತ್ತದೆ. ಇದರಿಂದಾಗಿ ಇನ್ನೂ ಸಂಪೂರ್ಣವಾಗಿ ಬೆಳೆಯದ ನಿಮ್ಮ ಮಗುವಿನ ಜೀರ್ಣಾಂಗಗಳು, ನಿಮ್ಮ ಮಗುವಿನಲ್ಲಿ ಕಿರಿಕಿರಿ ಉಂಟು ಮಾಡಿ, ನಿಮ್ಮ ಮಗುವಿನ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. 

ಕೊನೆಯದಾಗಿ ಹೇಳಬೇಕೆಂದರೆ, ಅಲೋವೆರಾ ರಸದ ಲಾಭಗಳು ಹಲವಾರು. ಆದರೆ ಗರ್ಭಿಣಿಯರು ಇದನ್ನು ಸೇವಿಸುವ ಮುನ್ನ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಗರ್ಭಾವಸ್ಥೆಯಲ್ಲಿ ಯಾವುದೇ ಕಾರಣಕ್ಕೂ ಅಲೋವೆರಾ ಜೆಲ್ ಅಥವಾ ರಸದ ಸೇವನೆ ಅತಿರೇಖಕ್ಕೆ ಹೋಗಬಾರದು. ಹಾಗಾಗಿ, ನಿಮ್ಮ ವೈದ್ಯರ ಸಲಹೆ ಮೊದಲು ಪಡೆದು, ನಂತರ ಇದರ ಕುರಿತಾಗಿ ನಿಶ್ಚಯಿಸುವುದು ಒಳಿತು. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon