Link copied!
Sign in / Sign up
7
Shares

ಗರ್ಭ ಧರಿಸುವ ಯೋಚನೆಯಲ್ಲಿದ್ದರೆ ಈ ವಿಷಯಗಳು ನಿಮ್ಮ ಗಮನಕ್ಕೆ..

ಈಗ ನೀವು ಮದುವೆಯಾಗಿ ಮಗು ಮಾಡಿಕೊಳ್ಳುವ ಯೋಚನೆಯಲ್ಲಿದ್ದರೆ ಈ ಲೇಖನ ನಿಮಗಾಗಿ. ಅಥವಾ ನೀವು ಹಲವು ದಿನಗಳಿಂದ ಮಕ್ಕಳು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಏನು ಮಾಡಬೇಕು, ಏನು ಮಾಡಬಾರದೆಂದು ಈ ಕೆಳಗೆ ಹೇಳಲಾಗಿದೆ. ಇದರಿಂದ ಬೇಗ ಗರ್ಭಿಣಿಯಾಗುವ ಎಲ್ಲ ಸಾಧ್ಯತೆಗಳಿವೆ..

1 ತೂಕದ ಕಡೆ ಗಮನಕೊಡಿ..

ನೀವು ಗರ್ಭಿಣಿಯಾಗಬೇಕೆಂದು ಅನ್ನಿಸಿದ ತಕ್ಷಣ ನೀವು ಇದನ್ನು ಮಾಡಿ. ಯಾಕೆಂದರೆ ಹೆಚ್ಚು ತೂಕ ಜಾಸ್ತಿ ಇದ್ದರೆ ಫಲವತ್ತತೆ ಕಡಿಮೆಯಾಗುವ ಸಾಧ್ಯತೆ ಹೆಚ್ಚು. ಫ್ಯಾಟ್ ಸೆಲ್ಸ್ ಗಳು ಈಸ್ಟ್ರೋಜೆನ್ ಅನ್ನು ಶೇಖರಿಸುತ್ತವೆ ಅದರಿಂದ ಕೆಲವರು ಅತೀ ತೂಕವಿದ್ದ ಮಹಿಳೆಯರು ಗರ್ಭಧರಿಸಲು ಕಷ್ಟಪಡುತ್ತಾರೆ ಎಂದು ದ್ರ್. ಆಲಿಸನ್ ಹಿಲ್ ಹೇಳುತ್ತಾರೆ.

 ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡಿ..

ನಿಮ್ಮ ರಕ್ತದಲ್ಲಿನ ಸಕ್ಕರೆ, ರಕ್ತದೊತ್ತಡ ಮತ್ತು ದೇಹದ ತೂಕವನ್ನು ನಿಯಂತ್ರಿಸಲು ವ್ಯಾಯಾಮ ಸಹಾಯ ಮಾಡುತ್ತದೆ, ಇವುಗಳು ಕೂಡ ಗರ್ಭಿಣಿಯಾಗಲು ನಿಮ್ಮ ಸಾಮರ್ಥ್ಯಕ್ಕೆ ಸಂಬಂಧಿಸಿವೆ ಎಂದು ಡಾ. ಹಿಲ್ ಹೇಳುತ್ತಾರೆ. ಮಗುವಿಗೆ ಪ್ರಯತ್ನಿಸುತ್ತಿರುವ ಎಲ್ಲ ಆರೋಗ್ಯವಂತ ರೋಗಿಗಳಿಗೆ ನಿಯಮಿತವಾದ ವ್ಯಾಯಾಮವನ್ನು ಅವರು ಶಿಫಾರಸು ಮಾಡುತ್ತಾರೆ. ಅಂದರೆ ಕನಿಷ್ಠ 30 ನಿಮಿಷ ಪ್ರತಿ ದಿನ ವ್ಯಾಯಾಮ ಮಾಡಿ.

ನಿಮ್ಮ  ಋತು ಚಕ್ರವನ್ನು ತಿಳಿಯಿರಿ.


ನೀವು ಗರ್ಭಿಣಿಯಾಗಲು ಪ್ರತೀ ತಿಂಗಳಿಗೊಮ್ಮೆ ಐದು ರಿಂದ ಏಳು ದಿನ ಒಳ್ಳೆಯ ಸಮಯ ಇರುತ್ತದೆ. ನಿಯಮಿತ ಮುಟ್ಟಿನ ಚಕ್ರಗಳನ್ನು ಹೊಂದಿರುವ ಮಹಿಳೆಯರು (28 ರಿಂದ 32 ದಿನಗಳವರೆಗೆ), ಈ ಸಮಯವು  ದಿನ 14 ಅಥವಾ 15 ರ ಸುಮಾರಿಗೆ ನೀವು ಹೆಚ್ಚು ಫಲವತ್ತಾಗಿರುವಿರಿ. ಆದರೆ ನೀವು ಅನಿಯಮಿತವಾಗಿ ಮುಟ್ಟಾಗುತ್ತಿದ್ದರೆ ನೀವು ನಿಮ್ಮ ಫಲವತ್ತತೆಯ ಸಮಯವನ್ನು ತಿಳಿದು ಅದರಂತೆ ಸಂಭೋಗ ಮಾಡಬಹುದು. ಅಂಡೋತ್ಪತ್ತಿ  ಕಿಟ್ ಅನ್ನು ಬಳಸಬಹುದು ಅಥವಾ ಆನ್ ಲೈನ್ ನಲ್ಲಿ ದೊರೆಯುವ ಆಪ್ ಗಳನ್ನೂ ಬಳಸಿ ನಿಮ್ಮ ಫಲವತ್ತತೆಯ ದಿನವನ್ನು ತಿಳಿಯಬಹುದು.

ಒತ್ತಡ ಕಡಿಮೆ ಮಾಡಿಕೊಳ್ಳಿ

ನೀವು ಪ್ರತಿ ಬಾರಿ ಸಂಭೋಗಕ್ಕೆ ತೊಡಗುವಾಗ ಒತ್ತಡರಹಿತವಾಗಿರಬೇಕು. ನೀವು ಆಗಲೇ ಗರ್ಭಧರಿಸಲು ನಿರ್ಧರಿಸಿ ಅದು ಸಾಧ್ಯವಾಗದೆ ಇದ್ದಲ್ಲಿ ನೀವು ಆ ಭಯವನ್ನು ಮನಸ್ಸಿನಿಂದ ತೆಗೆದುಹಾಕಿ ಸಂಭೋಗ ನಡೆಸಬೇಕು. ನೀವು ದಿನವೂ ಒಳ್ಳೆಯ ನಿದ್ದೆಯನ್ನು ಮಾಡಿ ಚಟುವಟಿಕೆ ಇಂದಿರಬೇಕು. ಇದರಿಂದ  ದೇಹದಲ್ಲಿ ಸಕಾಲಕ್ಕೆ ಹಾರ್ಮೋನ್ಸ್ ಬಿಡುಗಡೆ ಹೊಂದಿ ಋಣಾತ್ಮಕ ಪ್ರಭಾವ ಬೀರುತ್ತದೆ. ದೇಹದ ಆರೋಗ್ಯದ ಜೊತೆಗೆ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಕೋಪ ನಿಯಂತ್ರಿಸಬೇಕು, ಸೋಮಾರಿತನವನ್ನು ಬಿಡಬೇಕು.

ಒಳ್ಳೆಯ ಆಹಾರ ಸೇವನೆ ಅಗತ್ಯ.

ನೀವು ಗರ್ಭಧರಿಸಲು ನಿರ್ದರಿಸದನಂತರ ನಿಮ್ಮ ಡಯಟ್ ಪ್ಲಾನ್ ಅನ್ನು ಬದಲಿಸಿ ಕೊಲ್ಲಿ. ಒಳ್ಳೆಯ ಪ್ರೋಟೀನ್ ಯುಕ್ತ ಆಹಾರವನ್ನು ಸೇವಿಸಿ, ಹಸಿ ತರಕಾರಿಗಳು, ಹಣ್ಣು- ಹಾಲು, ಮೀನು ಇಂತಹ ಪ್ರೊಟೀನ್ ಹೆಚ್ಚಾಗಿರುವ ಆಹಾರವನ್ನುಸೇವಿಸಿ. ಇದಲ್ಲದೆ ಮುಖ್ಯವಾಗಿ ಪ್ರತಿ ದಿನವೂ ಕನಿಷ್ಠ 6  ಲೋಟ ಕುಡಿಯಿರಿ.

ಈ ಮೇಲೀನಕ್ರಮಗಳನ್ನು ಪಾಲಿಸಿದರೆ ನೀವು ಗರ್ಭವತಿಯಾಗುವ ಚಾನ್ಸಸ್ ಹೆಚ್ಚಾಗುವುದು.




Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon