Link copied!
Sign in / Sign up
2
Shares

ಗರ್ಭಧಾರಣೆಯ ಬಗೆಗಿನ 5 ರೋಚಕ ಸತ್ಯಗಳು


ಇಂದು ನಾವು ಗರ್ಭಾವಸ್ಥೆಯ ಬಗ್ಗೆ ನಿಮಗೆ ಕಚಗುಳಿಯಿಡುವಂತಹ ಐದು ವಿನೋದ ಸಂಗತಿಗಳನ್ನು ಸಂಗ್ರಹಿಸಿದ್ದೇವೆ. ಗರ್ಭಧಾರಣೆಯ ಒಳ ಪ್ರಪಂಚ ಅಂತಿಮವಾಗಿ ಇಲ್ಲಿ ಬಿಚ್ಚಿಡಲಾಗಿದೆ !

1 ತಾಯಿಯರ ಹೊಳಪು ಗರ್ಭಿಣಿ ಮಹಿಳೆಯರ ಮುಖದ ಮೇಲೆ ಹೊಳಪು ನೋಡಿದ ನೀವು ಅಸೂಯೆ ಪಟ್ಟಿದ್ದೀರಾ? “ನಾವು ಮಾತ್ರ ಯಾಕೆ ಈ ತರದ ನೂರು ವ್ಯಾಟ್ ಹೊಳಪನ್ನು ಹೊಂದಿಲ್ಲ?”- ಎಂದು ನೀವು ಬೇಜಾರು ಮಾಡಿಕೊಂಡಿದ್ದೀರಾ ? ಗರ್ಭಿಣಿ ಮಹಿಳೆಯರ ದೇಹದಲ್ಲಿನ ರಕ್ತದ ಪ್ರಮಾಣವು 50% ದಷ್ಟು ಹೆಚ್ಚಾಗಿ

ಚರ್ಮವು ವಜ್ರದಂತೆ ಹೊಳೆಯುವ ಹಾಗೆ ಮಾಡುತ್ತದೆ.ಗ್ರಂಥಿಗಳ ಚಟುವಟಿಕೆಗಳು ತೀವ್ರಗೊಂಡು, ಗರ್ಭಿಣಿ ಮಹಿಳೆಯನ್ನು ದೇವ ಲೋಕದ ಅಪ್ಸರೆಯಂತೆ ಮಾರ್ಪಡಿಸುತ್ತದೆ.

2 ಪಾಂಡಾದ ಸಹೋದರಿಹೌದು..!. ಗರ್ಭಧಾರಣೆಯ ಅಂತಿಮ ತಿಂಗಳಲ್ಲಿ ನಿಮ್ಮ ಗರ್ಭಾಶಯವು ಅದರ ಸಾಮಾನ್ಯ ಗಾತ್ರಕ್ಕಿಂತ 500 ಪಟ್ಟು ಹೆಚ್ಚಾಗುತ್ತದೆ. ನೀವು ದುಂಡುಮುಖಿಯಾಗುತ್ತೀರಿ ಮತ್ತು ಶರೀರ ತೂಕವು ಹೆಚ್ಚಾಗುವ ಕಾರಣ, ನಿಮ್ಮ ಮೊದಲಿನ ಉಡುಪುಗಳನ್ನು ವಾರ್ಡ್ರೋಬ್ನಿಂದ ಎಸೆಯುತ್ತೀರಿ.

ನಾನು ನಿಮಗೆ ಹೆದರಿಸಿದೆನಾ...? ಚಿಂತಿಸಬೇಡಿ ! ಪ್ರಸವ ಸಮಯದಲ್ಲಿ ಸಂಗ್ರಹವಾಗುವ ಕೊಬ್ಬು ಶರೀರಕ್ಕೆ ಹಾನಿಕರವಲ್ಲ. ಇದು ಶಾಶ್ವತವಾಗಿ ಉಳಿಯುವುದಿಲ್ಲ, ಅದು ಕೇವಲ ಚಬ್. ನೆನಪಿಡಿ, “ಕೇವಲ ಒಂದೇ ದಿನದಲ್ಲಿ ರೋಮ್ ನಗರವನ್ನು ಕಟ್ಟಲಾಗಿಲ್ಲ.”, ಹೆಂಗಸರಿಗೆ ತನ್ನ ಮೊದಲ ಸುಂದರಾಕೃತಿಯನ್ನು ಮರಳಿ ಪಡೆಯಲು ಸಮಯ ತೆಗೆದುಕೊಳ್ಳುತ್ತದೆ, ಪ್ರಯತ್ನ ಪಡಬೇಕಾಗುತ್ತದೆ, ತಾಳ್ಮೆ ಬೇಕಾಗುತ್ತದೆ

3 ಮಗುವು ವಿಸರ್ಜಿಸಿದ ಮೂತ್ರ ಎಲ್ಲಿಗೆ ಹೋಗುತ್ತದೆ ? 

ಕೇಳ‍ಲು ವಿಲಕ್ಷಣವಾಗಿ ತೋರುತ್ತದೆಯಾದರೂ, ನಿಮ್ಮ ಮಗು ಗರ್ಭಾಶಯದಲ್ಲಿ ಮೂತ್ರಿಸುವುದಂತೂ ನಿಜ. ನಂತರ ಅವರು ಅದನ್ನು ಮತ್ತೆ ಕುಡಿಯುತ್ತಾರೆ. ಕುಡಿದುದನ್ನು ಪುನಃ ವಿಸರ್ಜಿಸುತ್ತಿರುತ್ತಾರೆ.ವಾಸ್ತವವಾಗಿ ಗರ್ಭಾಶಯದಲ್ಲಿರುವ ಆಮ್ನಿಯೋಟಿಕ್ ದ್ರವವನ್ನು ಶಿಶುಗಳು ಸೇವಿಸುವುದರಿಂದ ಈ ರೀತಿ ಸಂಭವಿಸುತ್ತದೆ. ನಿಮ್ಮ ಮಗುವಿಗೆ ತನ್ನ ಸ್ವಂತ ಮೂತ್ರ ಕುಡಿಯುವ ಮೂಲಕ ಯಾವುದೇ ಹಾನಿ ಉಂಟಾಗುವುದಿಲ್ಲ. ಸಾಮಾನ್ಯವಾಗಿ ಈ ವಿದ್ಯಮಾನವು ಸುಮಾರು 10 ವಾರಗಳ ಬೆಳವಣಿಗೆಯ ನಂತರ ಸಂಭವಿಸುತ್ತದೆ. ಮಗುವಿನ ಪೂರ್ಣಾವಧಿಯ ಹೊತ್ತಿಗೆ, ಅವನ ಸುತ್ತ ಆವರಿಸಿರುವ ಆಮ್ನಿಯೋಟಿಕ್ ದ್ರವದ ಸುಮಾರು

100% ನಷ್ಟು ವಾಸ್ತವವಾಗಿ ಮೂತ್ರವಾಗಿದೆ. ಗರ್ಭಾಶಯದಲ್ಲಿ ನಿಮ್ಮ ಮಗುವಿನ ಅತ್ಯುತ್ತಮ ಆರೋಗ್ಯಕರವಾಗಿಟ್ಟುಕೊಂಡ ರಹಸ್ಯವು ಹೀಗಿದೆ.

4 ಚುರುಕಾದ ವಾಸನಾ ಗ್ರಂಥಿಗಳು

ಗರ್ಭಿಣಿಯರ ನಾಸಿಕವು ಬಹಳ ಚುರುಕಾಗಿರುತ್ತವೆ. ಯಾವುದೇ ರೀತಿಯ ವಾಸನೆಯನ್ನು ಕೂಡಾ ಗ್ರಹಿಸುವ ಸಾಮರ್ಥ್ಯವನ್ನು ಆರ್ಜಿಸಿಕೊಂಡಿರುತ್ತವೆ.ಅಮ್ಮಂದಿರು, ಮಗುವಿಗೆ ಮತ್ತು ತಾಯಿಗೆ ಅಪಾಯಕಾರಿಯಾದ ಯಾವುದಾದರೂ ವಿಷಾಹಾರವನ್ನು ಸೇವಿಸುವುದನ್ನು ತಪ್ಪಿಸಲು ಇದು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಧೂಮಪಾನ, ಸಿಗರೆಟ್ ಮತ್ತು

ಮದ್ಯಸಾರಗಳಂತಹ ಪದಾರ್ಥಗಳಿಂದ ಗರ್ಭಿಣಿಯರನ್ನು ದೂರವಿರಿಸುತ್ತದೆ. ವಾಸನೆಯತ್ತ ಗರ್ಭಿಣಿಯರು ನಿರ್ದಿಷ್ಟವಾಗಿ ಗಮನ ಹರಿಸುವುದರಿಂದ, ಅಷ್ಟೊಂದು ಉತ್ತಮವಾಗಿಲ್ಲದ ಯಾವುದನ್ನಾದರೂ ತಾಯಿಯರಿಂದ ದೂರವಿರಿಸುತ್ತದೆ. ಮುಂದಿನ ಬಾರಿ, ವಾಸನೆಯನ್ನು ಆಘ್ರಾಣಿಸುವ ಮೂಲಕ ಇದ್ದ ಜಾಗಲ್ಲಿಂದ ಓಡಿಹೋಗಲು ಬಯಸಿದರೆ,ನಿಮ್ಮ ಸ್ವಯಂಚಾಲಿತ ಸಂವೇದನಾ ಸಿಬ್ಬಂದಿ ಪೂರ್ಣ ರಕ್ಷಣೆಗಾಗಿ ತಯಾರಾಗಿದ್ದಾನೆ ಎಂದು ತಿಳಿದುಕೊಳ್ಳಿ.

5 ಬದಲಾಗುವ ಪಾದ‍ದ ರಚನೆಗಳು

ನಿಮ್ಮ ದೇಹದ ಲಿಗಾಮೆಂಟುಗಳು ವಿಶ್ರಾಂತಿಯನ್ನು ಬಯಸುವುದರಿಂದಲೂ, ಹೆಚ್ಚಾದ ಶರೀರ ಭಾರದಿಂದ ಪಾದಗಳ ಮೇಲೆ ಒತ್ತಡ ಬೀಳುವುದರಿಂದಲೂ ಪಾದಗಳ ಆಕಾರದಲ್ಲಿ ಬದಲಾವಣೆಯುಂಟಾಗುತ್ತದೆ. ನೀವು ಜನನ ಪ್ರಕ್ರಿಯೆಗೆ ಹತ್ತಿರ ಬಂದಂತೆಯೇ, ನಿಮ್ಮ ದೇಹವು ಅದರ ಲಿಗಾಮೆಂಟುಗಳ ಬಿಗಿತವನ್ನು ಸಡಿಲ ಮಾಡಲು ಪ್ರಾರಂಭಿಸುತ್ತದೆ ಮತ್ತು ನಿಮ್ಮ ಪಾದಗಳು ತಮ್ಮ ಆಕಾರವನ್ನು ಕಳೆದುಕೊಳ್ಳುತ್ತವೆ. ಮರುದಿನ ಬೆಳಿಗ್ಗೆ ನೀವು ಏಳುವ ನೀವು, ನಿಮ್ಮ ಪಾದಗಳನ್ನು ನೋಡಿ ಭಯಪಡಬೇಡಿ. ನೀವು ಮಗುವಿನ ಜನನವಾಗುತ್ತಿದ್ದಂತೆಯೇ ಪಾದಗಳು ತನ್ನ ಆಕಾರವನ್ನು ಮರಳಿ ಪಡೆಯುವುದು.

ನಿಮ್ಮ ಗರ್ಭಕಾಲದ ಅಭಿನಂದನೆಗಳು !!

• • •

ಓದಿದ್ದಕ್ಕೆ ಧನ್ಯವಾದಗಳು. ಅದ್ಭುತ ಆಫರ್‍ಗಳನ್ನು ತರಲು ನಾವು ಫ್ಲಿಪ್‍ಕಾರ್ಟ್‍ನೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ. ಪ್ರತಿ ಫ್ಲಿಪ್‍ಕಾರ್ಟ್ ಖರೀದಿಯಲ್ಲಿ ಕ್ಯಾಶ್ ಬ್ಯಾಕ್ ಗಳಿಸಿ. ಉತ್ಪನ್ನಗಳನ್ನು ಬ್ರೌಸ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon