Link copied!
Sign in / Sign up
2
Shares

ಗಣೇಶನಿಗೆ ಅತ್ಯಂತ ಪ್ರಿಯವಾದ 5 ತಿನಿಸುಗಳು

ಗಣೇಶನು ಜ್ಞಾನ, ಯಶಸ್ಸು ಹಾಗು ಒಲವಿನ ದೇವರೆಂದೇ ಪ್ರಸಿದ್ದಿ. ಹೀಗಾಗಿ ಗಣೇಶನನ್ನು ಪೂಜಿಸುವ ಜನರು ಏನಾದರು ಹೊಸ ಕಾರ್ಯಕ್ಕೆ ಕೈ ಹಾಕುವ ಮುನ್ನ ಗಣೇಶನ ಆಶೀರ್ವಾದವನ್ನು ಪಡೆದೇ ಪಡೆಯುತ್ತಾರೆ. ಗಣೇಶನ ಶಕ್ತಿ ಹಾಗು ಮಹಿಮೆಯನ್ನ ನಂಬುವ ಜನರು ಅವನನ್ನ ಒಲಿಸಿಕೊಳ್ಳಲು ಮತ್ತು ತಮ್ಮ ಜೀವನಗಳಲ್ಲಿ ಸಕಾರಾತ್ಮಕ ಶಕ್ತಿ ತುಂಬುವಂತೆ ಮಾಡಿಸಿಕೊಳ್ಳಲು ಗಣೇಶನಿಗೆ ವಿಧವಾದ ತಿಂಡಿ ತಿನಿಸುಗಳನ್ನ ನೀಡುವರು. ಈ ವರ್ಷದ ಗಣೇಶ ಹಬ್ಬದಂದು ಗಣೇಶನು ನಿಮ್ಮ ಪ್ರಾರ್ಥನೆಗಳಿಗೆ ಒಲಿದು ನಿಮ್ಮ ಮನೆ ಬೆಳಗಿಸಲು ಅವನಿಗೆ ಇಷ್ಟವಾದ ತಿನಿಸುಗಳನ್ನ ಮಾಡಿ ನೀಡಿ. ಗಣೇಶನಿಗೆ ಪ್ರಿಯವಾದ ೫ ತಿನಿಸುಗಳು ಯಾವು ಅಂದರೆ :

೧. ಮೋದಕ

ಇದರಲ್ಲಿ ಆಶ್ಚರ್ಯ ಪಡುವಂತದ್ದು ಏನು ಇಲ್ಲ. ಪ್ರತಿ ವರ್ಷ ಗಣೇಶನ ಆಗಮನದ ಮುಂಚೆ ಎಲ್ಲಾ ಸ್ವೀಟ್ಸ್ ಅಂಗಡಿಗಳು ಮತ್ತು ಭಕ್ತಾದಿಗಳು ಮೋದಕದ ತಯಾರಿ ಅಲ್ಲಿ ತೊಡಗಿಕೊಳ್ಳುತ್ತಾರೆ. ಮೋದಕದ ಮೇಲಿನ ಈ ಪ್ರೀತಿಗಾಗಿಯೇ ಗಣೇಶನಿಗೆ “ಮೋದಕಪ್ರಿಯ” ಎಂಬ ಹೆಸರು ಬಂದಿದ್ದು. ಹಿಂದೆ ಒಮ್ಮೆ ದೇವ ಮಾನವರು ಶಿವ ಮತ್ತು ಪಾರ್ವತಿಯರನ್ನ ನೋಡಲು ಬಂದಾಗ ಅವರಿಗೆಂದು ಮೋದಕ ತಂದಿದ್ದರು. ಈ ಮೋದಕವನ್ನ ತಾಯಿ ಪಾರ್ವತಿಯು ತನ್ನ ಮಕ್ಕಳಾದ ಗಣೇಶ ಮತ್ತು ಕಾರ್ತಿಕಗೆ ಸಮವಾಗಿ ಹಂಚಿಕೊಂಡು ತಿನ್ನಲು ಹೇಳಿದಳು. ಇದಕ್ಕೆ ಅವರಿಬ್ಬರೂ ಒಪ್ಪಲಿಲ್ಲ. ನಂತರ ಯಾರು ಇಡೀ ಜಗತ್ತನ್ನೇ ಮೊದಲು ಸುತ್ತಿಕೊಂಡು ಬರುತ್ತಾರೋ, ಅವರಿಗೆ ಈ ಮೋದಕ ಎಂದು ಹೇಳಿದಳು. ಮುಂದಿನ ಕಥೆ ನಿಮಗೆ ಗೊತ್ತಿದೆ. ಗಣೇಶನು ಶಿವ ಮತ್ತು ಪಾರ್ವತಿಯನ್ನ ಸುತ್ತಿ ಸ್ಪರ್ಧೆ ಗೆದ್ದನು. ಆಗ ಬಹುಮಾನವಾಗಿ ಸಿಕ್ಕಿದ್ದೇ ಈ ಮೋದಕ. ಈ ಸಮಯದಿಂದ ಮೋದಕವು ಗಣೇಶನಿಗೆ ತುಂಬಾ ಪ್ರಿಯವಾದ ಸಿಹಿ ತಿನಿಸು ಆಯಿತು.

೨. ಬಾಳೆಹಣ್ಣು

ತರಾವರಿ ಹಣ್ಣುಗಳನ್ನ ನಾವು ನೈವೇದ್ಯವಾಗಿ ನೀಡುತ್ತೇವೆ, ಆದರೂ ಆನೆ ತಲೆಯ ಗಣಪನಿಗೆ ಬಾಳೆಹಣ್ಣು ಅಚ್ಚುಮೆಚ್ಚು ಎಂದರೆ ಅದರಲ್ಲಿ ಅಚ್ಚರಿ ಏನಿಲ್ಲ. ಬಹಳ ಕಡೆ ಜನರು ಬಾಳೆಹಣ್ಣಿನ ಹಾರ ಮಾಡಿ ಗಣಪನಿಗೆ ಹಾಕುವರು.

೩. ಮೋತಿಚೂರ್ ಲಡ್ಡು

ಗಣೇಶನ ಬಹುತೇಕ ಎಲ್ಲಾ ವಿಗ್ರಹಗಳಲ್ಲು ನೀವು ಆತನು ಲಡ್ಡುವನ್ನ ಕೈಯಲ್ಲಿ ಇಟ್ಟುಕೊಂಡಿರುವುದನ್ನ ನೋಡಬಹುದು. ಇದರಲ್ಲೇ ನೀವು ಗಣೇಶನಿಗೆ ಲಡ್ಡು ಮೇಲಿನ ಪ್ರೀತಿ ಎಂತದ್ದು ಎಂದು ಕಾಣಬಹುದು. ವಿಧವಿಧವಾದ ಲಡ್ಡುಗಳಲ್ಲಿ ಗಣೇಶನಿಗೆ ತುಂಬಾ ಪ್ರಿಯವಾದ ಲಡ್ಡು ಎಂದರೆ ಕೇಸರಿ ಬಣ್ಣದ ಮೋತಿಚೂರ್ ಲಡ್ಡು. ಇದು ಬಹಳಷ್ಟು ಗಣೇಶನ ಮಂದಿರಗಳಲ್ಲಿ ಪ್ರಸಾದವಾಗಿ ನೀಡಲಾಗುತ್ತದೆ. ಹಬ್ಬದ ದಿನದಂದು ಕೂಡ ಬಹಳಷ್ಟು ಜನರು ಪೂಜೆಯ ಬಳಿಕ ಪ್ರಸಾದವಾಗಿ ನೀಡಲು ಮೋತಿಚೂರ್ ಲಡ್ಡುವನ್ನ ಖರೀದಿಸುವರು.

೪. ಗರಿಕೆ ಹುಲ್ಲು

ಗರಿಕೆ ಹುಲ್ಲಿಗೆ ಗಣೇಶನ ಶಕ್ತಿಯನ್ನ ಆಕರ್ಷಿಸುವ ಮಹಾಶಕ್ತಿ ಇದೆ. 21 ಎಳೆಗಳಿರುವ ಗರಿಕೆ ಹುಲ್ಲನ್ನು ಪವಿತ್ರ ನೀರಿನಲ್ಲಿ ಅದ್ದಿ, ನಂತರ ಅವುಗಳನ್ನು ಗಣೇಶನ ಕಾಲಿನ ಬಳಿ ಇಡುತ್ತಾರೆ. ಪುರಾಣದ ಪ್ರಕಾರ ಗಣೇಶನು ಅನಾಲ್ಸುರ ಎಂಬ ರಾಕ್ಷಸನೊಂದಿಗೆ ಸೆಣೆಸುವಾಗ ಅವನನ್ನ ನುಂಗುವನು. ನಂತರ ಅವನ ಹೊಟ್ಟೆಯಲ್ಲಿ ಉರಿತ ಕಾಣಿಸಿಕೊಳ್ಳುತ್ತದೆ. ಆಗ ಇಂದ್ರ, ವಿಷ್ಣು ಮತ್ತು ಶಿವ ತಮ್ಮ ಶಕ್ತಿಗಳನ್ನೆಲ್ಲಾ ಉಪಯೋಗಿಸಿದರೂ, ಅದನ್ನ ಶಮನ ಮಾಡಲು ಆಗಲಿಲ್ಲ. ನಂತರ ಅಲ್ಲಿಗೆ ಬಂದ ಋಷಿಮುನಿಗಳು ನೀಡಿದ ಗರಿಕೆ ಹುಲ್ಲು ಉರಿತವನ್ನ ಶಮನ ಮಾಡಿತು. ಇದರಿಂದಲೇ ಗಣೇಶನಿಗೆ ಗರಿಕೆ ಹುಲ್ಲು ಎಂದರೆ ಅಷ್ಟೊಂದು ಪ್ರೀತಿ.

೫. ಮಂಡಕ್ಕಿ

ಪುರಾಣದಲ್ಲಿ ಒಂದು ಕಥೆಯಿದೆ. ಶಿವನು ತನ್ನ ಮಗನ ಹೊಟ್ಟೆ ಚಿಕ್ಕದಲ್ಲ ಎಂದು ಕುಬೇರನಿಗೆ ಎಚ್ಚರಿಕೆ ನೀಡಿದರು, ಕುಬೇರನು ಒಂದು ಔತಣಕೂಟಕ್ಕೆ ಗಣೇಶನನ್ನ ಆಹ್ವಾನಿಸುವನು. ಕುಬೇರನು ತನ್ನ ಅಷ್ಟು ಹಣ, ಸಂಪತ್ತನ್ನು ಉಪಯೋಗಿಸಿ ಗಣೇಶನಿಗೆ ತಿನ್ನಲು ಸಾಧ್ಯವಾದಷ್ಟು ಕೊಟ್ಟರೂ, ಗಣಪನಿಗೆ ಸಮಾಧಾನ ಆಗುವುದಿಲ್ಲ. ಆಗ ಶಿವನ ಸಲಹೆಯಂತೆ ಕುಬೇರನು ಗಣೇಶನಿಗೆ ಬಹಳಷ್ಟು ಭಕ್ತಿ ಮತ್ತು ಪ್ರೀತಿಯಿಂದ ಒಂದು ಹಿಡಿಯಷ್ಟು ಮಂಡಕ್ಕಿಯನ್ನ ನೀಡುವನು. ಇದನ್ನ ತಿಂದೊಡನೆ ಗಣೇಶನಿಗೆ ತೃಪ್ತಿ ಎನಿಸಿತು. ಹೀಗಾಗಿ ಗಣೇಶನಿಗೆ ಮಂಡಕ್ಕಿ ಕೂಡ ನೀಡಲಾಗುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon