Link copied!
Sign in / Sign up
3
Shares

ಗಣೇಶ ಚತುರ್ಥಿ ಪೂಜೆಗಳು : ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ

ಗಣೇಶ ಚತುರ್ಥಿಯು ಹಿಂದು ಪಂಚಾಂಗ ಅಥವಾ ಪುರಾಣದ ಪ್ರಕಾರ ಅತ್ಯಂತ ಮಂಗಳಕರ/ಶುಭಕರ ದಿನ. ಅತಿ ಹೆಚ್ಚು ಜನರು ಇಷ್ಟ ಪಡುವ ದೇವರು ಗಣಪತಿ. ಜ್ಞಾನದ ಅಧಿಪತಿ ವಿಜ್ಞಾರ್ಥ. ಎಲ್ಲರ ಸರ್ವ ಕಷ್ಟಗಳನ್ನು ನಿವಾರಿಸುವವ ವಿಜ್ಞ ನಿವಾರಕ. ಅದಕ್ಕಾಗಿ ಎಲ್ಲರ ದೇವರುಗಳಲ್ಲಿ ಮೊದಲ ಪೂಜೆ ಪಡೆಯುವ ಪ್ರಥಮ ಪೂಜಿತ.

೧೧ ದಿನಗಳ ಗಣೇಶ ಚತುರ್ಥಿ, ಜ್ಯೋತಿಷ್ಯ ಪರಿಹಾರಗಳನ್ನು, ಗ್ರಹಗಳ ದುಷ್ಪಾರಿಣಾಮಗಳನ್ನು, ಅಥವಾ ಜೀವನದಲ್ಲಿ ಕಷ್ಟ ಅನುಭವಿಸುತ್ತಿರುವವರು ತಮ್ಮ ಸರ್ವ ಕಷ್ಟ ನಿವಾರಣೆ ಮಾಡಿಕೊಳ್ಳಲು ಇದು ಸೂಕ್ತ ಸಮಯ.

ಈ ದಿನದಲ್ಲಿ ನೀವು ದೋಷ ನಿವಾರಣೆಗೆ ಅಥವಾ ಪರಿಹಾರಕ್ಕಾಗಿ ಮಾಡಬಹುದಾದ ಕೆಲವು ಸಲಹೆಗಳು ಮತ್ತು ಪರಿಹಾರಗಳು

ಅಸಾಧಾರಣ/ಅಸ್ಥಿರ ವೃತ್ತಿಜೀವನ

ನಿಮ್ಮ ವೃತ್ತಿಜೀವನ ಅಸ್ಥಿರವಾಗಿದ್ದರೆ ಅಥವಾ ನೀವು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಯಾವುದೇ ತೊಂದರೆಗಳನ್ನು ಎದುರಿಸುತ್ತಿದ್ದರೆ ಈ ಪರಿಹಾರವನ್ನು ಒಮ್ಮೆ ಪ್ರಯತ್ನಿಸಿ. ಶಕ್ತಿಶಾಲಿ ಅಶ್ವಗಂಧದ ಬೇರನ್ನು ತಂದು ಅಥವಾ ಗಣೇಶ ಪಠಣ ಮಾಡುವ ಮೂಲಕ ಅದಕ್ಕೆ ನೀವೇ ಶಕ್ತಿಯನ್ನು ತುಂಬಿರಿ, ನಂತರ ಅದನ್ನು ಒಂದು ಬಿಳಿ ಅರಿಶಿಣದ ಬಟ್ಟೆಗೆ ಬೂದು ಬಣ್ಣದ ದಾರದಿಂದ ಕಟ್ಟಿ ಕತ್ತಿಗೆ ಕಟ್ಟಿಕೊಳ್ಳಿ. ಇದನ್ನು ಗಣೇಶ ಚತುರ್ಥಿ ದಿವಸ ಮಾಡಿ.

ಸಾಲದ ಸಮಸ್ಯೆ

ಈ ಪರಿಹಾರ ಯಾರು ಅತಿಯಾಗಿ ಸಾಲ ಮಾಡಿಕೊಂಡು ಅದನ್ನು ಅವರಿಗೆ ಮರುಪಾವತಿ ಮಾಡಲಾಗದೆ ಒದ್ದಾಡುತ್ತಿರುತ್ತಾರೋ ಅವರಿಗೆ. ಒಂದು ಸ್ಫಟಿಕ ಗಣೇಶನನ್ನು ಸ್ಥಾಪಿಸಿ, ಅದಕ್ಕೆ ಪ್ರತಿದಿನವೂ ಹಾಲಿನಿಂದ ಅಭಿಷೇಕ ಮಾಡಿ. ಗರಿಕೆಯನ್ನು ಸಮರ್ಪಣೆ ಮಾಡಿ ನಿಮ್ಮ ಕಷ್ಟ ನಿವಾರಿಸುವಂತೆ ಬೇಡಿಕೊಳ್ಳಿ.

ವಿವಾಹ ದೋಷ

ಒತ್ತಡ, ಸಂಘರ್ಷ ಅಥವಾ ಜಗಳ ನಿಮ್ಮ ವಿವಾಹಕ್ಕೆ ಅಡ್ಡಿಪಡಿಸುತ್ತಿದ್ದರೆ, ಅದನ್ನು ನಿವಾರಿಸಿಕೊಳ್ಳಲು ಗಣೇಶ ಚತುರ್ಥಿ ಒಂದು ಒಳ್ಳೆಯ ಸಮಯ. ೫ ಎಳೆಗಳಿರುವ ಸಂಪೂರ್ಣ ೨೧ ಗರಿಕೆಯನ್ನು ಗಣೇಶನಿಗೆ ಸಮರ್ಪಣೆ ಮಾಡಿ(ಒಂದು ಬಾರಿಗೆ ಎರಡು ಗರಿಕೆಯನ್ನು ಮೊದಲ ಹತ್ತು ಸಲ ಹಾಕಿ ನಂತರ ಕೊನೆಯ ಗರಿಕೆಯನ್ನು ಗಣೇಶನಿಗೆ ಸಮರ್ಪಿಸಿ). ಇದನ್ನು ಮಾಡಬೇಕಾದರೆ ಈ ಮಂತ್ರವನ್ನು ಹೇಳುತ್ತೀರಿ(ಜಪಿಸಿ) - “ಓಂ ಏಕದಂತಾಯ ವಿಧ್ಮಹೇ ವಕ್ರತುಂಡಾಯ ಧೀಮಹೀ | ತನ್ನೋ ದಂತಿ ಪ್ರಚೋದಯಾತ್ ||”

ಶಿಕ್ಷಣದಲ್ಲಿ ತೊಂದರೆ

ಇದು ವಿಶೇಷವಾಗಿ ವಿಧ್ಯಾರ್ಥಿಗಳಿಗೆ. ನಿಮಗೆ ಓದುವುದರಲ್ಲಿ ಏಕಾಗ್ರತೆ ಕಡಿಮೆ ಇದ್ದರೆ, ಈ ಮಂತ್ರವನ್ನು ಪಠಿಸಿ - “ಓಂ ವಿಜ್ಞೇಶ್ವರಾಯೇ ನಮಃ” ಕನಿಷ್ಠ ೧೦೮ ಬಾರಿ ಗಣೇಶ ಚತುರ್ಥಿಯ ೧೧ ದಿನ. ಇದರ ಜೊತೆಗೆ “ಓಂ ಗಮ್ ಗಣಪತೆಯೇ ನಮಃ” ಮಂತ್ರವನ್ನು ಜಪಿಸುವುದರಿಂದ ನಿಮ್ಮ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಗಟ್ಟಿಯಾಗಿ ಇದನ್ನು ಹೇಳಿ ಕಂಪನಗಳನ್ನು ಅನುಭವಿಸಿ.

ಕೇತು ದೋಷ

ಕೇತು ದೋಷವನ್ನು ಎದುರಿಸುತ್ತಿರುವವರಿಗೆ ಈ ಪರಿಹಾರ, ನೀವು ಪೂಜಿಸುವ ಸ್ಥಳದಲ್ಲಿ ಶ್ವೇತ ಗಣಪತಿಯನ್ನು ಪ್ರತಿಷ್ಠಾಪಿಸಿ. ಅರಿಶಿಣ ಮತ್ತು ನೀರಿನ ಮಿಶ್ರಣದಿಂದ ಗಣಪತಿಗೆ ಸಂಪೂರ್ಣ ಹಚ್ಚಿರಿ, ಮತ್ತು ೧೦೮ ಬಾರಿ ಈ ಮಂತ್ರವನ್ನು ಪಠಿಸಿ - ಓಂ ವಕ್ರತುಂಡಾಯ ಹಮ್, ಓಂ ಶ್ರೀ ಗಣೇಶಾಯ ನಮಃ”

ಕಾಳ ಸರ್ಪ ದೋಷ

ಬೊಂದಿ ಲಾಡುವಿನಿಂದ ಗಣಪತಿಗೆ ನೈವೈಧ್ಯ ಮಾಡಿ, ಈ ಮಂತ್ರವನ್ನು ಪಠಿಸಿ - “ಓಂ ಗಣಪತಿಯೇ ನಮಃ” ೧೦೮ ಬಾರಿ ಗಣೇಶ ಚತುರ್ಥಿ ದಿನದಿಂದ ಪ್ರತಿದಿನ ಈ ಮಂತ್ರವನ್ನು ಪಠಿಸಿ.

ಮಂಗಳ ದೋಷ

ನಿಮ್ಮ ಜ್ಯೋತಿಷ್ಯದಲ್ಲಿ ಮಂಗಳನ ದೋಷವಿದ್ದರೆ ಇದನ್ನು ಮಾಡಿ, ನೀವು ಪೂಜೆ ಮಾಡುವ ಸ್ಥಳದಲ್ಲಿ ಕೇಸರಿ ಗಣಪನನ್ನು ಸ್ಥಾಪಿಸಿ, ಪ್ರತಿದಿನ ಅದಕ್ಕೆ ಪೂಜೆ ಮಾಡಿ. “ಓಂ ಶ್ರೀ ಗಣೇಶಾಯೇ ನಮಃ” ಮಂತ್ರವನ್ನು ಪ್ರತಿದಿನ ೨೧ ಅಥವಾ ೫೧ ಅಥವಾ ೧೦೮ ಬಾರಿ ಪಠಿಸುವುದು.

ಅರೋಗ್ಯ ಸಮಸ್ಯೆ

ದೀರ್ಘಕಾಲದಿಂದ ನಿಮ್ಮ ಮನೆಯಲ್ಲಿ ಯಾರಾದರೂ ಅರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಗಣೇಶ ಚತುರ್ಥಿ ದಿನ ಗಣಪನಿಗೆ ಜನಿವಾರವನ್ನು ಹಾಕಿ, ಅದರ ಮಾರನೇ ದಿನ ಅರೋಗ್ಯ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗೆ ಅದನ್ನು ಹಾಕಿಕೊಳ್ಳಲು ನೀಡಿ. ಇದರಿಂದ ವ್ಯಕ್ತಿಯು ಬೇಗನೆ ಚೇತರಿಸಿಕೊಳ್ಳುತ್ತ್ತಾರೆ.

ವಿರೋಧಿ/ದ್ವೇಷಿಸುವವರಿಂದ ಅಪಾಯವನ್ನು ತಪ್ಪಿಸಿಕ್ಕೊಳ್ಳಲು

“ಓಂ ಗಮ್ ಗಣಪತೆಯೇ ನಮಃ ಶತ್ರುಹ ಉಚ್ಚಾಟನಮ್ ಕುರು ಕುರು ಸ್ವಾಹಾ” ಮಂತ್ರವನ್ನು ಗಣೇಶ ಚತುರ್ಥಿಯ ೧೧ ದಿನ ೧೦೮ ಬಾರಿ ಜಪಿಸುವುದರಿಂದ ನಿಮ್ಮ ವಿರೋಧಿಗಳಿಂದ ರಕ್ಷಣೆ ಪಡೆಯಲು ಅಥವಾ ಆಗುವ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು.

ಸಲಹೆ : ಅನೇಕ ಜನರು ತಮ್ಮ ಮನೆಯ ಪ್ರವೇಶ ದ್ವಾರದ ಬಾಗಿಲಿನ ಮೇಲೆ ಗಣೇಶನ ವಿಗ್ರಹ ಅಥವಾ ಮೂರ್ತಿಯನ್ನು ಇಟ್ಟಿರುತ್ತಾರೆ. ಗಣೇಶ ಮೂರ್ತಿ ಅಥವಾ ವಿಗ್ರಹದ ಬದಲು ಗಣೇಶ ಯಂತ್ರವನ್ನು ಇರಿಸಲು ಸಲಹಿಸುತ್ತೇವೆ.

ಲಂಬೋಧರ ಗಣೇಶನಿಗೆ ಪ್ರತಿದಿನ ಕೆಂಪು ಬಣ್ಣದ ಹೂಗಳನ್ನು ನೀಡುವುದರಿಂದ ವ್ಯಕ್ತಿಯ ಕೋಪವನ್ನು ತನ್ನ ನಿಯಂತ್ರಣದಲ್ಲಿರಿಸಿಕೊಳ್ಳಲು ಸಹಾಯವಾಗುತ್ತದೆ. ಇದು ಯಾರು ಬೇಗನೆ ಸಣ್ಣ ವಿಷಯಕ್ಕೂ ಕೋಪಿಸಿಕೊಳ್ಳುತ್ತಾರೆ ಅವರು ಇದನ್ನು ಮಾಡುವುದರಿಂದ ಅವರ ಕೋಪ ಕಡಿಮೆಯಾಗುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon