Link copied!
Sign in / Sign up
16
Shares

ನಿಮ್ಮ ಗಂಡು ಮಗು ಎಷ್ಟು ವಯಸ್ಸಿಗೆ ಎಷ್ಟು ಎತ್ತರ, ತೂಕ ಹೊಂದಬೇಕು ಎಂಬುದರ ಚಾರ್ಟ್

ನಮಗೆ ಗೊತ್ತು ಒಬ್ಬ ಉತ್ತಮ ತಾಯಿಯಾಗಿ ನೀವು ನಿಮ್ಮ ಮಗುವಿನ ಬಗ್ಗೆ ಹೆಚ್ಚು ಕಾಳಜಿವಹಿಸುವಿರಿ ಎಂದು, ಆದರೆ ನಿಮ್ಮ ಮಗುವಿನ ಬೆಳವಣಿಗೆಯ ಬಗ್ಗೆ ನಿಮಗೆ ಸರಿಯಾಗಿ ಯಾರು ತಿಳಿಸದೇ ಇರಬಹುದು. ಚಿಂತಿಸದಿರಿ ನಿಮ್ಮ ಮಗುವಿನ ವಯಸ್ಸಿಗೆ ಅನುಗುಣವಾಗಿ ಅವನ ಎತ್ತರ ತೂಕ ಎಷ್ಟಿರಬೇಕು ಎಂಬುದನ್ನು ನೀವು ಇಲ್ಲಿ ತಿಳಿದಿಕೊಳ್ಳಬಹುದು.

ಮಗುವಿನ ಬೆಳವಣಿಗೆಯನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಬಹುದು

೧.ಎತ್ತರ

೨.ತೂಕ

೩. ಕೂದಲು ಬೆಳೆಯುವುದು, ಹಲ್ಲು ಹುಟ್ಟುವುದು, ನಡೆಯುವುದನ್ನು ಕಲಿಯುವುದು, ಮಾತನಾಡುವುದು ಮುಂತಾದವುಗಳು

೪.ಪ್ರೌಢಾವಸ್ಥೆ ತಲುಪುವುದು

ಪ್ರಾರಂಭದಲ್ಲಿ ವೈದ್ಯರುಗಳು ಮುಖ್ಯವಾಗಿ ಪರಿಗಣಿಸುವುದು ಮಗುವಿನ ಎತ್ತರ ಮತ್ತು ತೂಕವನ್ನು. ಇದು ಮಗುವಿನ ಜೀನ್ ಮೇಲೆ ಹೆಚ್ಚು ಅವಲಂಭಿತವಾಗಿರುತ್ತದೆ. ಮಗುವಿನ ತೂಕ ಮತ್ತು ಎತ್ತರವನ್ನು ಗಮನಿಸುವುದು ತುಂಬಾ ಮುಖ್ಯವಾದುದ್ದು. ಮಗುವಿನ ತೂಕವು ಮಗುವು ಆಹಾರವನ್ನು ಅರಗಿಸಿಕೊಳ್ಳುವುದೇ ಮತ್ತು ಆಹಾರದಲ್ಲಿನ ಪೌಷ್ಟಿಕಾಂಶಗಳನ್ನು ತನ್ನಲ್ಲಿ ಸೇರ್ಪಡೆ ಮಾಡಿಕೊಳ್ಳುತ್ತಿದಿಯೇ ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

ಒಂದು ಮಗುವು ಮತ್ತೊಂದು ಮಗುವಿಗಿಂತ ಭಿನ್ನವಾಗಿರುವುದರಿಂದ ನಿಖರವಾಗಿ ಎತ್ತರ ಮತ್ತು ತೂಕವನ್ನು ತಿಳಿಸುವುದು ಕಷ್ಟ. ಮತ್ತು ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ಇದು ಬೇರೆ ಬೇರೆ ಆಗಿರುತ್ತದೆ. ಇಲ್ಲಿ ನೀಡಿರುವ ಟೇಬಲ್ ವಿಶ್ವ ಅರೋಗ್ಯ ಸಂಸ್ಥೆ ನೀಡಿರುವ ಸಾಮಾನ್ಯ ಕೋಷ್ಟಕವಾಗಿದೆ.


ತಿಂಗಳು

ಎತ್ತರ (ಸೆಂಟಿ ಮೀಟರ್ ಗಳಲ್ಲಿ cm)

ತೂಕ (kg)

0

46.3 - 53.4

2.5 - 4.0

1

51.1 - 58.4

3.4 - 5.2

2

54.7 - 62.2

4.3 - 6.7

3

57.6 - 65.3

5.1 - 7.5

4

60.0 - 67.8

5.6 - 8.2

5

61.9 - 69.8

6.1 - 8.7

6

63.3 - 71.6

6.4 - 9.1

7

65.1 - 73.3

6.7 - 10.2

8

66.5 - 74.6

7.0 - 10.5

9

67.7 - 76.2

7.3 - 10.9

10

69.0 - 77.6

7.5 - 11.2

11

70.2 - 78.9

7.4 - 11.5

12

71.3 - 80.2

7.8 - 11.8

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon