Link copied!
Sign in / Sign up
7
Shares

ಶಿಶ್ನದೊಂದಿಗಿನ 7 ಹೋರಾಟಗಳು !

ಶಿಶ್ನದ ಆರೋಗ್ಯವು ಗಂಡಸಿನ ಆರೋಗ್ಯದ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ. ಶಿಶ್ನದ ಅರೋಗ್ಯ ಅಂದರೆ ಕೇವಲ ನಿಮಿರುವಿಕೆ, ವಿಸರ್ಜನೆ ಮತ್ತು ಜನ್ಮ ನೀಡುವುದಷ್ಟೇ ಅಲ್ಲ. ಶಿಶ್ನದ ತೊಂದರೆಯು ನಿಮ್ಮಲ್ಲಿನ ಯಾವುದೊ ಅಸ್ವಸ್ಥತೆಯ ಮೊದಲ ಗೋಚರ ಲಕ್ಷಣವಾಗಿರಬಹುದು. ಶಿಶ್ನದ ಮೇಲೆ ಪ್ರಭಾವ ಬೀರುವ ಈ ಅಸ್ವಸ್ಥತೆಗಳು ಕೇವಲ ನಿಮಗೆ ದೈಹಿಕವಾಗಿ ಅಷ್ಟೇ ಅಲ್ಲದೆ, ನಿಮ್ಮ ಮಾನಸಿಕ ಸ್ಥೈರ್ಯ ಕುಗ್ಗಿಸಿ, ನಿಮ್ಮ ಸಂಬಂಧಗಳಿಗೆ ಪೆಟ್ಟು ನೀಡಿ, ಜೀವನದ ಇತರೆ ಕ್ಷೇತ್ರಗಳ ಮೇಲೆಯೂ ಕೆಟ್ಟ ಪರಿಣಾಮ ಬೀರಬಹುದು. ಶಿಶ್ನದ ಸಾಮಾನ್ಯ ತೊಂದರೆಗಳು, ಅಸ್ವಸ್ಥತೆಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಿದ್ದೇವೆ ನೋಡಿ.

೧. ಶಿಶ್ನದ ಮೇಲೆ ಗಂಟುಗಳು

ಶಿಶ್ನದ ಮೇಲೆ ಮೊದಲಿನಿಂದಲೂ ಗಂಟುಗಳಿರುವುದು ಸಹಜ. ಆದರೆ ನಿಮ್ಮ ಶಿಶ್ನದ ಮೇಲೆ ಹಿಂದೆಂದೂ ಇರದ ಗಂಟುಗಳು, ಒಂದೇ ಸಮನೆ ಕಾಣಿಸಿಕೊಳ್ಳ ತೊಡಗಿದರೆ, ನೀವು ಎಚ್ಚೆತ್ತುಕೊಳ್ಳಬೇಕು. ಇದಕ್ಕೆ ಕಾರಣ ತೈಲ ಗ್ರಂಥಿಗಳು ಅಥವಾ ಕೂದಲ ಕಿರುಚೀಲಗಳಿಗೆ ಅಡ್ಡಿ ಆಗುವುದು, ಉಡುಪಿನ ಉಜ್ಜುವಿಕೆ, ಅಥವಾ ನೀವು ಬಳಸುವ ಸೋಪ್ ಅಲರ್ಜಿ ಇರಬಹುದು. ಕೆಲವೊಮ್ಮೆ ಈ ಗಂಟುಗಳು ಹರ್ಪಿಸ್ ಅಥವಾ ಹೆಚ್.ಪಿ.ವಿ (HPV) ರೋಗಗಳ ಲಕ್ಷಣವೂ ಆಗಿರಬಹುದು.


೨. ಚಿಕ್ಕ ಗಾತ್ರ

ಕೆಲವೊಮ್ಮೆ ನಿಮಗೆ ಬೇಕಿರುವಷ್ಟು ಗಾತ್ರವನ್ನು ನಿಮ್ಮ ಶಿಶ್ನ ಹೊಂದಿರುವುದಿಲ್ಲ. ಇದಕ್ಕೆ ಕಾರಣಗಳು ಹಲವು ಇರಬಹುದು. ಉದಾಹರಣೆಗೆ ಅನುವಂಶಿಕ ರೂಪಾಂತರಗಳು, ಮೈನೇರುವಿಕೆಯಲ್ಲಿ ವಿಳಂಬ, ಹಾರ್ಮೋನ್ ತೊಂದರೆಗಳು, ಇತರೆ. ಇದಕ್ಕೆ ನೀವು ಆತಂಕ ಪಡುವ ಅವಶ್ಯಕತೆ ಇಲ್ಲ.


೩. ಲೈಂಗಿಕವಾಗಿ ಹರಡುವ ಸೋಂಕುಗಳು (STI)

ಶಿಶ್ನದ ಮೇಲೆ ಪ್ರಭಾವ ಬೀರುವ ಹಲವಾರು ಲೈಂಗಿಕವಾಗಿ ಹರಡುವ ಸೋಂಕುಗಳಿವೆ. ಉದಾಹರಣೆಗೆ ಕ್ಲ್ಯಾಮಿಡಿಯಾ, ಸಿಫಿಲಿಸ್, ಜನನಾಂಗದ ಹರ್ಪಿಸ್, ಮತ್ತು ಗೊನೊರಿಯಾ. ಇವುಗಳ ಸಹಜ ಲಕ್ಷಣಗಳು ಎಂದರೆ ಶಿಶ್ನದಿಂದ ಸೋರಿಕೆ, ಮೂತ್ರವಿಸರ್ಜಿಸುವಾಗ ನೋವು, ಜನನಾಂಗದ ಮೇಲೆ ಬೊಬ್ಬೆಗಳು ಉಂಟಾಗುವುದು.


೪. ಪೇಯ್ರೊನಿ ಕಾಯಿಲೆ

ಪೇಯ್ರೊನಿ ಕಾಯಿಲೆ ಎಂದರೆ ಶಿಶ್ನವು ಬಹಳ ಸೊಟ್ಟವಾಗಿ ಬಾಗಿರುವುದು. ಇದಕ್ಕೆ ಕಾರಣ ಶಿಶ್ನದ ತುದಿಯ ಕೆಳಗಿರುವ ಪ್ಲೇಕ್ಸ್ಸ್ ಎಂಬ ಅಂಗಾಂಶ. ಇದು ಜಗತ್ತಿನ ಸುಮಾರು 3-9% ಅಷ್ಟು ಗಂಡಸರಲ್ಲಿ ಕಾಣಿಸಿಕೊಳ್ಳುವಂತದ್ದು. ಇದು ತುಂಬಾ ವೇಗವಾಗಿ ಬೆಳವಣಿಗೆ ಹೊಂದುತ್ತದೆ. ಇದು ಶಿಶ್ನ ನಿಮಿರಿದಾಗ ನೋವಾಗುವುದಕ್ಕೆ ಮತ್ತು ಕಷ್ಟಕರ ಸಂಭೋಗಕ್ಕೆ ಕಾರಣವಾಗುತ್ತದೆ.


೫. ಶಿಶ್ನದಿಂದ ಹೊರಸೂಸುವಿಕೆ

ನೀವು ಗಮನ ಹರಿಸಬೇಕಾದ ಇನ್ನೊಂದು ಶಿಶ್ನದ ತೊಂದರೆ ಇದೆ. ಒಂದು ವೇಳೆ ನಿಮ್ಮ ಶಿಶ್ನದಿಂದ ದ್ರವ್ಯವು ಸೋರುತ್ತಿರುವುದನ್ನು ನೀವು ಗಮನಿಸಿದರೆ, ಅದು ಮೂತ್ರನಾಳದ ಉರಿಯೂತದಿಂದ. ಇದು ಯುರಿಥ್ರಿಟಿಸ್ ಎಂಬ ಲೈಂಗಿಕ ಅಸ್ವಸ್ಥತೆಗೆ ಕಾರಣವಾಗುತ್ತದೆ.

ಇದು ಉಂಟಾಗಲು ಸಾಮಾನ್ಯವಾದ ಕಾರಣಗಳು ಎಂದರೆ ಅವುಗಳು ಗೊನೊರಿಯಾ, ಕ್ಲ್ಯಾಮಿಡಿಯಾ ಅಂತಹ ಲೈಂಗಿಕವಾಗಿ ಹರಡುವ ಸೋಂಕುಗಳು.

೬. ತುರಿಕೆ

ಜಾಕ್ ಇಚ್ ಅಥವಾ ಚೀಲದ ತುರಿಕೆಯು ಬಹಳಷ್ಟು ಗಂಡಸರನ್ನ ಕಾಡುವ ಒಂದು ತೊಂದರೆ. ಇದರಲ್ಲಿ ಅರ್ಧದಷ್ಟು ಪ್ರಕರಣಗಳಲ್ಲಿ ಕಾರಣವು ಫಂಗಸ್ ಸೋಂಕು ಆಗಿರುತ್ತದೆ ಮತ್ತೆ ಉಳಿದ ಪ್ರಕರಣಗಳಲ್ಲಿ ತೇವಾಂಶ ಅಥವಾ ಬ್ಯಾಕ್ಟೀರಿಯಾ ಸಂಖ್ಯೆಯಲ್ಲಿ ಏರಿಕೆಯು ಕಾರಣ ಆಗಿರುತ್ತವೆ. ನಿಮ್ಮ ಜನಾಂಗದ ಮೇಲೆ ಅಥವಾ ಅದರ ಸುತ್ತಾಮುತ್ತಾ ತುರಿಕೆ, ದುರ್ಗಂಧ, ನೋವು ಮತ್ತು ಪಿಂಕ್ ಅಥವಾ ಕೆಂಪು ಬಣ್ಣದ ರಾಷೆಸ್ ಕಾಣಿಸಿಕೊಂಡರೆ, ಅದು ಜಾಕ್ ಇಚ್.

೭. ಅನೋರ್ಗಾಸ್ಮಿಯಾ

ಕೆಲವೊಂದು ಪ್ರಕರಣಗಳಲಲ್ಲಿ, ಎಷ್ಟೇ ಅಚ್ಚುಕಟ್ಟಾದ ಪ್ರಚೋದನೆ ನೀಡಿದರೂ ಗಂಡಸರು ಲೈಂಗಿಕ ಪರಾಕಾಷ್ಠೆ ಹೊಂದಲು ಸಾಧ್ಯವಾಗುವುದಿಲ್ಲ. ಇದು ಹಾರ್ಮೋನಲ್ ತೊಂದರೆಯ ಲಕ್ಷಣವಿರಬಹುದು, ಅದು ಟೆಸ್ಟಸ್ಟರೋನ್ ಪ್ರಮಾಣ ಕಡಿಮೆ ಇರುವುದು ಆಗಿರಬಹದು ಅಥವಾ ನರಗಳಿಗೆ ಸಮಬಂಧಪಟ್ಟ ಕಣ್ಣುಗಳಿಗೆ ಅಗೋಚರವಾದ ಸಮಸ್ಯೆ ಇರಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon