Link copied!
Sign in / Sign up
28
Shares

ನಿಮ್ಮ ಪತಿ ಲೈಂಗಿಕ ಕ್ರಿಯೆ ಆದೊಡನೆಯೇ ನಿದ್ದೆಗೆ ಜಾರುತ್ತಾರೆಯೇ? ಕಾರಣ ಇಲ್ಲಿದೆ!

ನೀವು ಈಗ ತಾನೇ ನಿಮ್ಮ ಕ್ರಿಯೆಯನ್ನ ಮುಗಿಸಿದ್ದೀರಾ, ಈಗ ನೀವು ಅಪ್ಪುಗೆಯನ್ನ, ಸ್ವಲ್ಪ ಮುದ್ದು ಮುದ್ದು ಮಾತುಕತೆಯನ್ನ ಬಯಸುತ್ತಿರಬಹುದು. ಆದರೆ ಆ ಕಡೆ ತಿರುಗಿ ನೋಡಿದರೆ, ನಿಮ್ಮ ಪತಿಯು ಆಗಲೇ ಸುಖ ನಿದ್ರೆಗೆ ಜಾರಿದ್ದಾರೆ. ಅದು ಕೂಡ ಕ್ರಿಯೆ ಮುಗಿದು ಇನ್ನೂ ೨ ನಿಮಿಷಗಳ ಒಳಗೆಯೇ. ಇದು ನಿಮ್ಮನ್ನ ಕೆರಳಿಸಬಹುದು, ಆದರೆ ತಪ್ಪು ಅವರದ್ದಲ್ಲ, ಗಂಡಸರು ತಾಯಾರಾಗಿರುವುದೇ ಹಾಗೆ.

ವೈದ್ಯರು ಹೇಳುವ ಪ್ರಕಾರ ಸಂಭೋಗ ನಂತರದ ಪ್ರತಿಕ್ರೆಯಗಳು ಗಂಡಸರು ಮತ್ತು ಹೆಂಗಸರಲ್ಲಿ ಬೇರೇ ಬೇರೆಯಾಗಿರುತ್ತದೆ. ಸ್ಟಾನ್ಫೋರ್ಡ್ ಯೂನಿವರ್ಸಿಟಿಯ ವೈದ್ಯರಾದ ಡಾ|| ಲಿಯಾ ಮಿಲ್ಹೈಸೆರ್ ಅವರು “ಗಂಡಸರು ಲೈಂಗಿಕ ಪರಾಕಾಷ್ಟೆ ಹೊಂದಿದೊಡನೆ ಅವರಿಗೆ ಒಂದೇ ಸಮನೆ ನಿರಾಳ ಭಾವ ಮತ್ತು ಆಯಾಸ ಎರಡು ಭಾಸವಾಗಿ, ನಿದ್ರೆಗೆ ಜಾರುತ್ತಾರೆ” ಎಂದು ಹೇಳುತ್ತಾರೆ. “ಹಾಗೆಂದ ಮಾತ್ರಕ್ಕೆ ಇದು ಅವರ ಲೈಂಗಿಕ ಅನುಭವದ ಪ್ರತಿಪಲನ ಎಂದೋ ಅಥವಾ ಅವರ ಸಂಗಾತಿಯ ಮೇಲಿನ ನಿರಾಸಕ್ತಿ ಎಂದಲ್ಲ. ಇದು ಅವರು ಅವರ ನರಪ್ರೇಕ್ಷಕಗಳು (neurotransmitters) ಹೇಳುತ್ತಿರುವ ಮಾತನ್ನು ಪಾಲಿಸುತ್ತಿರುವುದು ಅಷ್ಟೇ” ಎಂಬ ಮಾತನ್ನು ಅವರು ಹೇಳಿದರು.

ನಮ್ಮಲ್ಲಿ ಕೆಲವು ಹೆಂಗಸರು, ಲೈಂಗಿಕ ಕ್ರಿಯೆ ಮುಗಿದ ಮೇಲೆ ದಿಂಬಿನ ಮೇಲೆ ತಲೆಯೊಡ್ಡಿ ಮಾತಾಡಲು ಇಷ್ಟಪಡುತ್ತೀವಿ. ಯಾಕೆ?

ಏಕೆಂದರೆ ಹೆಣ್ಣಿನ ದೇಹದಲ್ಲಿ ಲೈಂಗಿಕ ಕ್ರಿಯೆ ಆದೊಡನೆ ಆಕ್ಸಿಟೋಸಿನ್ ಗತಿಯು ಹೆಚ್ಚುತ್ತದೆ. ಈ ಆಕ್ಸಿಟೋಸಿನ್ ಹಾರ್ಮೋನ್ ಬಾಂಧವ್ಯದ ಭಾವನೆ ಹುಟ್ಟಿಸುವಂತ ಹಾರ್ಮೋನ್. ಮಗುವಾದಗಲು ದೇಹದಲ್ಲಿ ಬಿಡುಗಡೆ ಹೊಂದುವ ಹಾರ್ಮೋನ್ ಇದೇ. ಹೀಗಾಗಿ ಈ ಸಮಯದಲ್ಲಿ ಹೆಂಗಸರು ಅಪ್ಪಿಕೊಳ್ಳಲು, ಹತ್ತಿರವೆನಿಸುವ ಭಾವ ಮೂಡಿಸಲು ಹಪಹಪಿಸುತ್ತಾರೆ.

ಇಷ್ಟೇ ಅಲ್ಲದೆ, ಲೈಂಗಿಕ ಕ್ರಿಯೆಯನ್ನ ಅನುಭವಿಸುವುದರಲ್ಲಿ ಹೆಂಗಸರು ಮತ್ತು ಗಂಡಸರು ನಡುವಲ್ಲಿ ಮತ್ತಷ್ಟು ವ್ಯತ್ಯಾಸಗಳಿವೆ. ಒಮ್ಮೆ ಮೂಡಿಗೆ ಬಂದ ಮೇಲೆ, ಗಂಡಸರು ಮತ್ತು ಹೆಂಗಸರು ಬೇರೇ ಬೇರೇ ರೀತಿಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವರು. ಇದರ ಅರ್ಥ, ಹೆಂಗಸರಿಗೆ ತಮ್ಮ ಮೇಲೆ ಹೊರಜೀವನದಲ್ಲಿ ಒತ್ತಡ ಹೇರುತ್ತಿರುವ ವಿಷಯಗಳನ್ನ ಮಂಚದಿಂದ ದೂರ ಇಡುವುದು ಕಷ್ಟ ಆಗುತ್ತದೆ. ಇವರಿಗೆ ಗಂಡಸರ ರೀತಿ ಮಂಚದ ಮೇಲೆ ಏರುವಾಗ ತಮ್ಮ ತಲೆಯಿಂದ ಎಲ್ಲವನ್ನು ತೆಗೆದು ಹಾಕುವುದು ಸುಲಭವಾಗಿ ಮಾಡಲಾಗುವುದಿಲ್ಲ.

ಈ ಎಲ್ಲಾ ವ್ಯತ್ಯಾಸಗಳು ವಿಕಾಸಾತ್ಮಕ ಅಂದರೆ ಎವಲ್ಯೂಶಿನರಿ ಆಗಿ ಬಂದಿರುವುದು ಎಂದು ವೈದ್ಯರು ಹೇಳುತ್ತಾರೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon