Link copied!
Sign in / Sign up
10
Shares

ಮಂಚದ ಮೇಲೆ ಗಂಡಸರ ಕ್ಷಮತೆ ಹೆಚ್ಚಿಸಲು 8 ನೈಸರ್ಗಿಕ ದಾರಿಗಳು

ನೀವು ಗಂಡಸರ ಲೈಂಗಿಕ ಕ್ಷಮತೆ ಹೇಗೆ ಹೆಚ್ಚಿಸಬೇಕು ಎಂದು ತಿಳಿಯಬೇಕೆಂದರೆ, ಇದನ್ನು ನೀವು ಓದಲೇ ಬೇಕು. ಇದು ಗಂಡಸರಲ್ಲಿ ಈಗಾಗಲೇ ಇರುವ ತೊಂದರೆಗಳಿಗೆ ಪರಿಹಾರ ಸೂಚಿಸುವುದಲ್ಲದೆ, ತೃಪ್ತಿಕರ ಲೈಂಗಿಕ ಜೀವನ ಹೊಂದಲು ಹೊಸದಾಗಿ ಏನೆಲ್ಲಾ ಮಾಡಬೇಕು ಎಂಬುದನ್ನು ಕೂಡ ತಿಳಿಸುತ್ತದೆ. ಗಂಡಸರ ಶಿಶ್ನವು ಕೆಲಸ ಮಾಡುವುದು ರಕ್ತದೊತ್ತಡದ ಆಧಾರದ ಮೇಲೆ ಎಂಬುದನ್ನು ನೀವು ನೆನಪಲ್ಲಿ ಇಡಬೇಕು. ಇದು ರಕ್ತಸಂಚಾರಣೆ ಸರಿಯಾಗಿ ಆಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಇನ್ನೂ ಸುಲಭವಾಗಿ ಹೇಳಬೇಕೆಂದರೆ, ಹೃದಯದ ಆರೋಗ್ಯಕ್ಕೆ ಏನೆಲ್ಲಾ ಒಳ್ಳೆಯದೋ, ಅದು ಲೈಂಗಿಕ ಆರೋಗ್ಯಕ್ಕೂ ಒಳ್ಳೆಯದು.

ಹಾಗಿದ್ದರೆ ಗಂಡಸರ ಲೈಂಗಿಕ ಕ್ಷಮತೆಯನ್ನು ನೈಸರ್ಗಿಕವಾಗಿ ಹೆಚ್ಚಿಸುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

೧. ಮಾಂಸಾಹಾರ ಮತ್ತು ಇತರೆ ಪದಾರ್ಥಗಳು ಆಹಾರದಲ್ಲಿ ಇರಲಿ

ಮಾಂಸಾಹಾರ ಮತ್ತು ಇಲ್ಲಿ ಹೇಳಿರುವ ಕೆಲವು ಇತರೆ ಪದಾರ್ಥಗಳು ರಕ್ತಸಂಚಾರವನ್ನು ವೃದ್ಧಿಸುತ್ತವೆ.

ವಿಟಮಿನ್ ಬಿ1 :

ಈ ವಿಟಮಿನ್ ನಮ್ಮ ನರಮಂಡಲದಲ್ಲಿ ಸಿಗ್ನಲ್ಲುಗಳು ವೇಗವಾಗಿ ಚಲಿಸುವಂತೆ ಮಾಡುತ್ತದೆ (ಮೆದುಳಿನಿಂದ ಶಿಶ್ನಕ್ಕೆ ಹೋಗುವ ಸಿಗ್ನಲ್ಲುಗಳನ್ನು ಸೇರಿ). ಇದು ಪೋರ್ಕ್, ಬೀನ್ಸ್ ಮತ್ತು ಶೇಂಗಾಬೀಜದಲ್ಲಿ ಹೆಚ್ಚು ಇರುತ್ತದೆ.

ಒಮೇಗಾ-೩ ಕೊಬ್ಬಿನಾಮ್ಲ :

ಇದು ಕೂಡ ರಕ್ತಸಂಚಾರ ವೃದ್ಧಿಸುತ್ತದೆ. ಇದನ್ನು ನೀವು ಟ್ಯೂನ, ಬಟರ್ ಫ್ರೂಟ್, ಬಂಗಡೆ ಮೀನು ಮತ್ತು ಆಲಿವ್ ಆಯಿಲ್ ಅಲ್ಲಿ ಸುಲಭವಾಗಿ ಲಭಿಸಿಕೊಳ್ಳಬಹುದು.

ಮೊಟ್ಟೆಗಳು :

ಮೊಟ್ಟೆಗಳು ಇತರೆ ಬಿ ವಿಟಮಿನ್ಸ್ ಗಳನ್ನ ಪೂರೈಸಿ, ನಿಮ್ಮ ಹಾರ್ಮೋನುಗಳ ತುಲನೆಯನ್ನು ಕಾಪಾಡುತ್ತವೆ. ಇದು ಒತ್ತಡವನ್ನು ಕಡಿಮೆ ಮಾಡಿ ಶಿಶ್ನವು ಸರಿಯಾದ ನಿಮಿರುವಿಕೆ ಹೊಂದಲು ಸಹಾಯ ಮಾಡುತ್ತದೆ.


೨. ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ

ಬಾಳೆಹಣ್ಣು :

ಇದರಲ್ಲಿ ಪೊಟ್ಯಾಸಿಯಂ ಅಂಶ ಬಹಳಷ್ಟಿದ್ದು ಇದು ನಿಮ್ಮ ರಕ್ತದೊತ್ತಡ ನಿಯಂತ್ರಣದಲ್ಲಿ ಇರಿಸಲು ಉಪಕಾರಿ.

ಈರುಳ್ಳಿ ಮತ್ತು ಬೆಳ್ಳುಳ್ಳಿ :

ಇವುಗಳು ನಿಮ್ಮ ರಕ್ತಸಂಚಾರವನ್ನು ವೃದ್ಧಿಸುತ್ತವೆ.

ಮೆಣಸು ಮತ್ತು ಮೆಣಸಿನಕಾಯಿ :

ಇವುಗಳು ಉರಿಯೂತ ಮತ್ತು ಅತೀವ ಒತ್ತಡವನ್ನು ಕಡಿಮೆ ಮಾಡುವುದರಲ್ಲಿ ಬಹಳ ಪರಿಣಾಮಕಾರಿ.


೩. ಸಕ್ರಿಯವಾಗಿರಬೇಕು

ಸಕ್ರಿಯವಾಗಿ - ಅಂದರೆ ಆಕ್ಟಿವ್ ಆಗಿರುವುದು ಗಂಡಸರ ಲೈಂಗಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಸೂಕ್ತ ದಾರಿಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ನಿಮಗೆ ತಿಳಿದಿರುವ ಹಾಗೆ ನಿಮ್ಮ ಅರೋಗ್ಯ ಹೆಚ್ಚಿಸಿಕೊಳ್ಳಲು ನೀವು ಕಾರ್ಡಿಯೋವಾಸ್ಕ್ಯುಲರ್ ವ್ಯಾಯಾಮಗಳನ್ನು ಮಾಡಬೇಕು. ಸೆಕ್ಸ್ ನಿಮ್ಮ ಹೃದಯಬಡಿತವನ್ನು ಏರಿಸಬಹುದು, ಆದರೆ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನಿಮ್ಮ ಲೈಂಗಿಕ ಕ್ಷಮತೆ ಹೆಚ್ಚುತ್ತದೆ. ದಿನಕ್ಕೆ ಕೇವಲ 30 ನಿಮಿಷಗಳಷ್ಟು ಬೆವರಿಳಿಸುವಂತಹ ವ್ಯಾಯಾಮಗಳನ್ನು ಮಾಡಿದರೂ ಸಾಕು, ಅದು ನಿಮ್ಮ ಲೈಂಗಿಕ ಜೀವನದಲ್ಲಿ ಮಾಂತ್ರಿಕ ಬದಲಾವಣೆ ತರುತ್ತದೆ.


೪. ಹೊಸ ಸಂಭೋಗ ಭಂಗಿಗಳನ್ನು ಪ್ರಯತ್ನಿಸಿ

ನೀವು ಇಲ್ಲಿಯವರೆಗೆ ಪ್ರಯತ್ನಿಸದೆ ಇರುವ ಸಂಭೋಗ ಭಂಗಿಗಳನ್ನು ಪ್ರಯತ್ನಿಸುವುದರಿಂದ ಸೆಕ್ಸ್ ಅಲ್ಲಿ ನಿಮ್ಮ ಆಸಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಮಾನಸಿಕವಾಗಿಯೂ ನೀವು ನಿಮ್ಮ ದೇಹವನ್ನು ಪಳಗಿಸಬಹುದು.


೫. ಒತ್ತಡವನ್ನು ಇಳಿಸಿ

ಒತ್ತಡವು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಒತ್ತಡವು ಕೂಡ ನಿಮ್ಮ ರಕ್ತದೊತ್ತಡ ಮತ್ತು ಹೃದಯಬಡಿತ ಹೆಚ್ಚಿಸುತ್ತದೆ, ಆದರೆ ಕೆಟ್ಟ ರೀತಿಯಲ್ಲಿ. ಇವೆರೆಡು ಕೂಡ ನಿಮ್ಮ ಲೈಂಗಿಕ ಆಸಕ್ತಿ ಮತ್ತು ಕ್ಷಮತೆಯನ್ನು ಕಡಿಮೆ ಮಾಡುತ್ತವೆ. ಅಲ್ಲದೆ ಮಾನಸಿಕ ಒತ್ತಡವು ಶಿಶ್ನವು ನಿಮಿರುವಿಕೆ ಹೊಂದದಂತೆ ಮಾಡುತ್ತದೆ. ವ್ಯಾಯಾಮ ಮಾಡುವುದು ಒತ್ತಡ ಹೊರಹಾಕಲಿಕ್ಕೆ ಅತ್ಯುತ್ತಮ ದಾರಿ. ಆದರೆ ಅದರೊಂದಿಗೆ ನೀವು ನಿಮ್ಮ ಸಂಗಾತಿಯೊಡನೆ ಮಾತನಾಡಿದರೆ, ನಿಮ್ಮ ಮನಸ್ಸಿನಲ್ಲಿರುವ ಒತ್ತಡವು ಕಡಿಮೆ ಆಗುವುದು.


೬. ಸೂರ್ಯನ ಬಿಸಿಲಿಗೆ ತೆರೆದುಕೊಳ್ಳಬೇಕು

ಲೈಂಗಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಇನ್ನೊಂದು ಒಳ್ಳೆಯ ದಾರಿ ಎಂದರೆ ಅದು ಸೂರ್ಯನ ಬೆಳಕಿಗೆ ಹೆಚ್ಚು ತೆರೆದುಕೊಳ್ಳುವುದು. ಸೂರ್ಯನ ಬೆಳಕು ದೇಹದಲ್ಲಿ ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪತ್ತಿಯನ್ನು ತಡೆಯಲು ಸಹಾಯ ಮಾಡುತ್ತದೆ. ಈ ಹಾರ್ಮೋನ್ ಕಡಿಮೆ ಇದ್ದಷ್ಟು ನಿಮ್ಮ ಲೈಂಗಿಕ ಆಸಕ್ತಿ ಹೆಚ್ಚಿರುತ್ತದೆ. ಹೀಗಾಗಿ ಹೊರಗಡೆ ಬಂದು ಸೂರ್ಯನ ಬೆಳಕಿಗೆ ತೆರೆದುಕೊಳ್ಳುವುದು ನಿಮ್ಮ ಲೈಂಗಿಕ ಕ್ಷಮತೆ ಹೆಚ್ಚಿಸುತ್ತದೆ. ಮುಖ್ಯವಾಗಿ, ಚಳಿಗಾಲದಲ್ಲಿ ಈ ಹಾರ್ಮೋನ್ ಹೆಚ್ಚು ಉತ್ಪತ್ತಿಯಾಗುವ ಕಾರಣ ನೀವು ಹೆಚ್ಚು ತೆರೆದುಕೊಳ್ಳಬೇಕು.


೭. ದಂಪತಿ ಪರಸ್ಪರ ಮಾತನಾಡಬೇಕು

ಸೆಕ್ಸ್ ಎನ್ನುವುದು ಒನ್-ವೇ ರಸ್ತೆ ಅಲ್ಲ. ಸಂಗಾತಿಯ ಮಾತುಗಳನ್ನು, ಅವರ ಆದ್ಯತೆಗಳನ್ನು ಆಲಿಸುವುದು ಕೇವಲ ಇಬ್ಬರಿಗೂ ಸೆಕ್ಸ್ ಅನ್ನು ಹೆಚ್ಚು ಸುಖಕರ ಮಾಡುವುದಷ್ಟೇ ಅಲ್ಲದೆ, ನೀವು ನಿಮಗೆ ಬೇಕಿರುವಷ್ಟು ಸಮಯ ತೆಗೆದುಕೊಂಡು ಹೆಚ್ಚು ಹೊತ್ತು ಅವರಿಗೆ ಸುಖ ನೀಡುವಂತೆಯೂ ಮಾಡುತ್ತದೆ.


೮. ಹಸ್ತಮೈಥುನ

ನೀವು ಮಂಚದ ಮೇಲೆ ಹೆಚ್ಚು ಕ್ಷಮತೆ ತೋರಿಸಬೇಕೆಂದರೆ ಅದಕ್ಕೆ ಸ್ವಲ್ಪ ಅಭ್ಯಾಸ ಬೇಕು. ಸಂಭೋಗವು ಸೆಕ್ಸ್ ಮಾಡಲಿಕ್ಕೆ ಅತ್ಯುತ್ತಮ ದಾರಿ ಆಗಿದ್ದರು, ಹಸ್ತಮೈಥುನವು ನೀವು ಸೆಕ್ಸ್ ಅಲ್ಲಿ ಹೆಚ್ಚು ಕ್ಷಮತೆ ಪ್ರದರ್ಶಿಸಲು ಸಹಾಯ ಮಾಡುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon