Link copied!
Sign in / Sign up
11
Shares

ನಿಮ್ಮ ಗಂಡನೊಂದಿಗಿನ ಸಂಬಂಧವನ್ನು ಯಾವಾಗಲು ಅನೋನ್ಯವಾಗಿರಿಸಿಕೊಳ್ಳುವುದು ಹೇಗೆ?


ನಿಮ್ಮ ಗಂಡನೊಂದಿಗಿನ ಸಂಬಂಧವನ್ನು ಅನೋನ್ಯವಾಗಿಸಿಕೊಳ್ಳುವುದು ಹೇಗೆ ?

ಮದುವೆಗೆ ಮುನ್ನ ನೀವೊಂದು ಕಡೆ ನಿಮ್ಮ ಸಂಗಾತಿಯೊಂದುಕಡೆ ಇರುತ್ತೀರಿ, ಮನೆಯವರು ನೋಡಿದ ಹುಡುಗನನ್ನು  ಮದುವೆಯಾದರೆ ನಿಮಗೆ ಒಮ್ಮೆಯೂ ಪರಿಚಯವೇ ಇಲ್ಲದ ವ್ಯಕ್ತಿಜೊತೆ ಜೀವನ ಪೂರ್ತಿ ಜೊತೆಯಾಗಿರುವುದು ಹೇಗೆ ಎಂದು ನೀವು ಚಿಂತಿಸುತ್ತಿದ್ದರೆ ಇಲ್ಲಿ ಹೇಗೆ ನಿಮ್ಮ ಸಂಗಾತಿಯ ಜೊತೆ ಒಳ್ಳೆಯ ಬಾಂಧವ್ಯವನ್ನು ಬೆಸೆಯಬಹುದು ಎಂದು ತಿಳಿಸಿದ್ದೇವೆ.

ಮ್ಯಾರೇಜ್ ಆದರೆ ಮದುವೆಯಾದ ಬಳಿಕ ಸಂಬಂಧವನ್ನು ಗಟ್ಟಿಗೊಳಿಸುವುದು ಹೇಗೆ ಎಂದು ತಿಳಿಯಿರಿ.

1.ನಿಮ್ಮ ಉಡುಗೆ ತೊಡುಗೆ ಕಡೆ ಗಮನಕೊಡಿ.

ನೀವು ಹಾಕುವ ಬಟ್ಟೆ ಕೂಡ ನಿಮ್ಮ ವ್ಯಕ್ತಿತ್ವವನ್ನು ತೋರಿಸಬಹುದು. ಮದುವೆಯಾದಮೇಲೆ ನೀವು ಮನೆಕೆಲಸದಲ್ಲಿ ಬ್ಯುಸಿ ಆಗಬಹುದು ಅಥವಾ ಸೌಂದರ್ಯದ ಕಾಪಾಡಿಕೊಳ್ಳುವಬಗ್ಗೆ ಗಮನ ಕೊಡದೆ ಇರಬಹುದು ಆದರೆ ನೀವು ಯಾವತ್ತೂ ಒಂದನ್ನ ನೆನಪಿಟ್ಟುಕೊಳ್ಳಿ, ಯಾವಾಗಲು ಕ್ಲೀನ್ ಆಗಿ ಲವಲವಿಕೆ ಇಂದಿರಲು ಪ್ರಯತ್ನಿಸಿ.

2. ಮದುವೆಯ ನಂತರವೂ ಸ್ನೇಹಿತರನ್ನು ಸಂಪಾದಿಸಿ.

ಸಾಮಾನ್ಯವಾಗಿ ಮದುವೆಯಾನಂತರ ಹೆಣ್ಣಾಗಲಿ ಗಂಡಾಗಲಿ ಮದುವೆಗು ಮುಂಚೆ ಇದ್ದಹಾಗೆ ಸ್ನೇಹಿತರೊಡನೆ ಬೆರೆಯಲು ಸಾಧ್ಯವಾಗುವುದಿಲ್ಲ. ನಿಮ್ಮ ಸ್ನೇಹಿತರನ್ನು ಆಗಾಗ್ಗೆ ಭೇಟಿ ಮಾಡಿ, ನಿಮ್ಮ ಜೀವನದ ಬದಲಾವಣೆ ಗಳನ್ನೂ ಪರಸ್ಪರ ಚರ್ಚಿಸಿ, ಹೇಗೆ ನೀವು ಮಾಡುವುದರಿಂದ ನೀವು ಮದುವೆಯ ನಂತರದ ಜೀವನ ನಿಮಗೆ ಬೋರ್ ಅನಿಸುವುದಿಲ್ಲ. ನಿಮ್ಮ ಸಂಗಾತಿಗೂ ನಿಮ್ಮ ಸ್ನೇಹತರು ಮತ್ತು ಅವರ ಕುಟುಬದವರನ್ನು ಪರಿಚಯಿಸಿ.

3. ಗಂಡನಜೊತೆ ಏನನ್ನು ಮುಚ್ಚಿಡಬೇಡಿ.

ಗಂಡನನ್ನು ಒಬ್ಬ ಸ್ನೇಹಿತನಂತೆ ಕಾಣಿ, ನೀವು ಎಷ್ಟು ಪ್ರೀತಿಸುತ್ತೀರಿ ಎಂದು ಅವರಿಗೆ ಮನವರಿಕೆ ಮಾಡಿ, ನೀವು ತಪ್ಪು ಮಾಡಿದ್ದರು ಅದನ್ನು ಧೈರ್ಯವಾಗೇ ಒಪ್ಪಿಕೊಳ್ಳಿ ಆದರೆ ಮತ್ತೊಮ್ಮೆ ತಪ್ಪು ಆಗದಂತೆ ನಡೆದುಕೊಳ್ಳಿ.

4.ನಿಮ್ಮ ಮಾತಿನಮೇಲೆ ಹಿಡಿತವಿರಲಿ

ನಿಮ್ಮ ಗಂಡನಿಗೆ ಇಷ್ಟವಿಲ್ಲದನ್ನು ಹೇಳಬೇಡಿ, ಸಾಮನ್ಯವಾಗಿ ಗಂಡಸರಿಗೆ ಬೇರೆಯವರ ವಿಷಯಗಳನ್ನು ಯಾವಾಗಲು ಕೇಳಲು ಇಷ್ಟವಿರುವುದಿಲ್ಲ. ನೀವು ಹೆಚ್ಚು ಬೇರೆ ವಿಚಾರಗಳನ್ನು ಮಾತನಾಡಿದರೆ ಅವರಿಗೆ ಇಷ್ಟವಾಗದೇ ಇರಬಹುದು. ಆ ಸಮಯದಲ್ಲಿ ಅವರಿಗೆ ಬೋರ್ ಅನ್ನಿಸಬಹುದು ಹೀಗೆ ಆಗದಂತೆ ನೀವು ನಡೆದುಕೊಳ್ಳಿ. ನಿಮ್ಮ ಗಂಡನಿಗೆ ಖುಷಿಕೊಡುವ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಿ.

5.ಜಗಳವಾದಾಗ ಸುಮ್ಮನೆ ಸೈಲೆಂಟ್ ಆಗಿದ್ದುಬಿಡಿ.

ಮೊದಲು ನಿಮ್ಮ ಮದ್ಯೆ ಏನಾದ್ರು ಚಿಕ್ಕ ವಿಷಯಗಳಿಗೆ ಜಗಳವಾದರೆ ಸುಮ್ಮನೆ ಇದ್ದುಬಿಡಿ, ಚಿಕ್ಕ ವಿಷಯಗಳಿಗೆ ವಾದ ಮಾಡಿ ನಿಮ್ಮ್ಮಿಬರ ಅನ್ನ್ಯೋನ್ಯತೆಯಲ್ಲಿ ಇರುವ ಸಮಯವನ್ನು ಹಾಳುಮಾಡಬೇಡಿ. ಮೊದಲು ಅವರಿಗೆ ಇಷ್ಟವಾಗುವ ರೀತಿಯಲ್ಲೇ ನಡೆದುಕೊಳ್ಳಿ.

6. ಸಂಗಾತಿಗೆ ಏಕಾಂತದಲ್ಲಿರಲು ಸಮಯನೀಡಿ.



ನೀವು ನಿಮ್ಮ ಗಂಡನೊಂದಿಗೆ ಏಕಾಂತದಲ್ಲಿರಲು ಸಮಯನೀಡಿ. ಅವರು ಹೊರಗಿನ ಕೆಲಸದ ಒತ್ತಡದಲ್ಲಿರಬಹುದು ಅದರಿಂದ ಮನೆಯಲ್ಲೇ ವಿಶ್ರಾಂತಿ ಪಡೆಯಲು ಬಯಸುತ್ತಾರೆ. ನೀವು ಆ ಸಮಯದಲ್ಲಿ ಅವರಿಗೆ ಕೆಲಸಗಳನ್ನು ಅಥವಾ ಮನೆಯ ಸಮಸೆಯೆನ್ನು ಹೇಳಿದರೆ ಅವರಿಗೆ ಬೇಸರವಾಗುತ್ತದೆ.

7. ಮನೆಯ ಎಲ್ಲಾ ಸದಸ್ಯರೊಡನೆ ಒಳ್ಳ್ಳೆಯ ಅಭಿಪ್ರಾಯಗಳಿಸಿ.


ನಿಮ್ಮ ಸಂಗಾತಿಯ ಅಪ್ಪ ಅಮ್ಮ ನಿಗೆ ಗೌರವ ನೀಡಿ. ಮೊದಲು ನೀವು ಸಂಗಾತಿಯ ತಂದೆ ತಾಯಿಗೆ ಒಳ್ಳೆಯ ಗೌರವ ನೀಡಿದರೆ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಾಗುತ್ತದೆ. ಏನೇ ಬಿನ್ನಾಬಿಪ್ರಾಯಬಂದರು ಗಂಡನಿಗೆ ತಿಳಿಸಿ.

8. ಅವರೊಂದಿನ ಕ್ಷಣಗಳನ್ನು ರಸಮಯಗೊಳಿಸಲು ಪ್ರಯತ್ನಿಸಿ.

ಮನೆಯಲ್ಲಿ ಇದ್ದಾಗ ನೀವು ಕಳೆಯುವ ಕ್ಷಣಗಳನ್ನು ರಸಮಯವಾಗಿ ಕಳೆಯಲು ಪ್ರಯತ್ನಿಸಿ. ಬೆಡ್ ರೂಮ್ ನಲ್ಲಿ ಮಾತ್ರವಲ್ಲದೆ ಬೇರೆ ಸಮಯದಲ್ಲೂ ಅವರೊಂದಿಗೆ ಲೈಂಗಿಕ ವಿಷಯಗಳನ್ನು ಮುಕ್ತವಾಗಿ ಮಾತನಾಡಿ. 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon