Link copied!
Sign in / Sign up
16
Shares

ಈ ಅದ್ಭುತ ಫೋಟೋಗಳಲ್ಲಿ ನೋಡಿ ಆಸ್ಪತ್ರೆಯ ಬಾಗಿಲಿನಲ್ಲಿ ಗಂಡನಿಂದಲೇ ಹೆಂಡತಿಯ ಹೆರಿಗೆ.!

ಇಲ್ಲಿ ನಾವು ಹೇಳುತ್ತಿರುವುದು ಜೆಸ್ ಹೋಗನ್ ಎಂಬ ಮಹಿಳೆಯ ಬಗ್ಗೆ. ಈಕೆಗೆ ಈಗಾಗಲೇ 6 ಜನ ಮಕ್ಕಳಿದ್ದು, ಹೆರಿಗೆ ಸಮಯದಲ್ಲಿ ಏನು ಅಪೇಕ್ಷಿಸಬೇಕು, ಏನು ಸಿದ್ಧತೆ ಮಾಡಿಕೊಂಡಿರಬೇಕು ಎಂಬುದರ ಬಗ್ಗೆ ಚೆನ್ನಾಗಿಯೇ ತಿಳಿದಿದ್ದಳು. ಆದರೆ ಆಕೆಯ ಹೊಟ್ಟೆಯಲ್ಲಿದ್ದ ಇನ್ನೊಬ್ಬ ಪೋರನ ಆಟವೇ ಬೇರೆಯದ್ದಾಗಿತ್ತು.


ಹೋಗನ್ ಈ ಹಿಂದೆ ಹೆರಿಗೆ ನೋವೆಂದು ಆಸ್ಪತ್ರೆ ಸೇರಿದ್ದಳು, ಆದರೆ ಹೆರಿಗೆ ಪ್ರಕ್ರಿಯೆಯಲ್ಲಿ ಏನು ಮುಂದುವರಿಕೆ ಕಾಣಲಿಲ್ಲದ ಕಾರಣ ಆಕೆಯನ್ನ ವೈದ್ಯರು ವಾಪಾಸ್ ಕಳಿಸಿದ್ದಾರೆ. ಹೋಗನ್ ಈಗಾಗಲೇ ಯಾವುದೇ ತೊಡಕಿಲ್ಲದ ಹೆರಿಗೆ ಪ್ರಕ್ರಿಯೆಗಳಿಗೆ ಒಳಗಾಗಿದ್ದು, ಈ ಬಾರಿಯೂ ಆಕೆಗೆ ಯಾವ ಬಾಹ್ಯ ಪ್ರಚೋದನೆ ಅಥವಾ ಔಷಧಿಗಳ ಸಹಾಯ ಇಲ್ಲದೆ, ನೈಸರ್ಗಿಕವಾಗಿಯೇ ಹೆರಿಗೆ ಪ್ರಕ್ರಿಯೆ ಆಗಬೇಕು ಎಂಬ ಬಯಕೆ ಇತ್ತು. ಹೀಗಾಗಿ ಆಕೆ ವೈದ್ಯರು ಕಳೆದ ಬಾರಿ ಹೇಳಿದೊಡನೆ ಆಸ್ಪತ್ರೆಯಿಂದ ಮನೆಗೆ ತೆರಳಿ ಸಂಕೋಚನಗಳು ತಾವಾಗಿಯೇ, ಸ್ವಾಭಾವಿಕವಾಗಿ ಉಂಟಾಗಲು ಕಾಯುತ್ತಿದ್ದಳು.


ನಾಲ್ಕು ದಿನಗಳ ನಂತರ ಅವುಗಳು ಕಾಣಿಸಿಕೊಳ್ಳಲು ಶುರುವಾದವು. ಅದು ತಡರಾತ್ರಿ ಹೋಗನ್ ಮತ್ತು ಆಕೆಯ ಪತಿ ನಿದ್ದೆ ಮಾಡುತ್ತಿರುವ ಸಮಯದಲ್ಲಿ. ಆಕೆಯ ನೋವನ್ನ ನೋಡಲಾಗದೆ ಆಕೆಗೆ ಶೂ ಅಥವಾ ಚಪ್ಪಲಿಯೂ ತೊಡಿಸದೆ ಆಕೆಯನ್ನ ಆಸ್ಪತ್ರೆಗೆ ಕೊಂಡೊಯ್ಯಲು ಆಕೆಯ ಪತಿ ಅವಳನ್ನ ಕಾರಿನಲ್ಲಿ ಕೂರಿಸಿದ. ಹೋಗನಿಗೆ ಕಾರ್ ಅಲ್ಲಿಯೇ ಮಗು ಆಚೆ ಬರುವಂತೆ ಅನುಭವವಾಗಿದೆ. ಆದರೆ, ಛಲಬಿಡದ ಆಕೆಯ ಪತಿ, ಟ್ರಾಫಿಕ್ ಸಿಗ್ನಲ್ಲುಗಳನ್ನ ಜಂಪ್ ಮಾಡಿ, ಹೇಗೋ ಬೇಗ ಆಸ್ಪತ್ರೆಗೆ ಕರೆತಂದನು.

ಹೇಗೋ ನೋವಿನಲ್ಲೇ ಆಕೆ ಕಾರ್ ಇಂದ ಆಚೆ ಇಳಿದು, ಆಸ್ಪತ್ರೆ ಕಡೆಗೆ ಬಂದಳು. ಅವಳನ್ನ ಆಕೆಯ ಗಂಡ ಹಿಡಿದುಕೊಂಡಿದ್ದನು. ಆಸ್ಪತ್ರೆಯ ಮೊದಲೆರೆಡು ಬಾಗಿಲುಗಳು ಆಟೋಮ್ಯಾಟಿಕ್ ಆಗಿದ್ದ ಕಾರಣ, ಈಕೆ ಬಂದೊಡನೆ ತೆರೆದುಕೊಂಡವು. ಇದು ಆಕೆಗೆ ಎಷ್ಟೋ ಸಹಾಯವಾಯಿತು. ಆದರೆ ಒಳಗೆ ಕಾಲಿಡುತ್ತಿದ್ದೋಡನೆ ಆಕೆಗೆ ತನ್ನ ಮಗುವು ಹೊರಬರುತ್ತಿದೆ ಈಗ ಎಂದು ಗೊತ್ತಾಯಿತು. ಆಗ ಆಕೆ ತನ್ನ ಪ್ಯಾಂಟ್ ಅನ್ನು ಬಿಚ್ಚಿದ್ದಾಳೆ. ಮಗುವು ಅಷ್ಟೊತ್ತಿಗಾಗಲೇ ತುದಿಯಲ್ಲಿತ್ತು. ಆ ಸಮಯದಲ್ಲಿ ಹೋಗನ್ ಕೆಳಗಡೆ ಮುಟ್ಟಿ ನೋಡಿಕೊಂಡರೆ, ಅಲ್ಲಿ ಮಗುವಿನ ತಲೆಯು ಆಗಲೇ ಹೊರಬಂದಿರುವುದು ಗೊತ್ತಾಯಿತು.  


ಅಲ್ಲೇ ಪಕ್ಕದಲ್ಲಿದ್ದ ನರ್ಸ್ ಗಳು ಈಕೆಯನ್ನು ನೋಡಿ, ಅಲ್ಲೇ ಒಂದು ಬದಿಯಲ್ಲಿ ಮಲಗಿಸಿದರು. ನರ್ಸ್ ಮತ್ತು ಹೋಗನ್ ಪತಿ ಮಗುವಿನ ತಲೆಯನ್ನು ನಾಜೂಕಾಗಿ ಹಿಡಿದುಕೊಂಡು, ಹೋಗನ್ ಅನ್ನು ನೆಲದ ಮೇಲೆ ಮಲಗಿಸಿದರು. ಆಗ ಹೋಗನ್ ಆಕೆಯ ಪತಿಗೆ ಮಗುವು ಆಚೆ ಬರುತ್ತಿದೆ ಎಂದು ಮತ್ತು ಅದನ್ನು ಹಿಡಿದುಕೊಳ್ಳುವಂತೆ ಕೂಗಾಡುತ್ತಾ ಹೇಳಿದಳು. ಆಗ ಆಕೆಯ ಪತಿ ಅವಳು ಹೇಳಿದಂತೆ ಮಗುವನ್ನ ಹಿಡಿದನು. ಹೇಗೋ ಯಾವುದೇ ತೊಂದರೆ ಇಲ್ಲದೆ ಹೋಗನ್ ದೇಹವು ಮಗುವನ್ನ ಸರಾಗವಾಗಿ ಹೊರಹಾಕಿದೆ.


ಈ ಸಮಯದಲ್ಲಿ ವೈದ್ಯರಿಗೂ ಹೆಚ್ಚೇನು ಮಾಡಲು ಆಗುವುದಿಲ್ಲ. ಆದರೆ ಸಮಯಕ್ಕೆ ಸರಿಯಾಗಿ ಹೇಗೋ ಎಲ್ಲಾ ಸರಿಯಾಗಿ ನಡೆದದ್ದು ಅವರಿಗೂ ಖುಷಿ ನೀಡಿದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon