Link copied!
Sign in / Sign up
18
Shares

ಗಂಡ-ಹೆಂಡತಿ ತಬ್ಬಿಕೊಂಡಿರುವ ಈ ಫೋಟೋ, ಇಂಟರ್ನೆಟ್ ಅಲ್ಲಿ ಜನರನ್ನ ಹುಚ್ಚರನ್ನಾಗಿಸುತ್ತಿದೆ!

ನಿಮ್ಮ ತಲೆ ಗಿರ ಗಿರ ತಿರುಗುವಂತೆ ಮಾಡುವ ಒಂದು ಫೋಟೋವನ್ನು ನಾವು ತೋರಿಸುತ್ತೇವೆ! ಇದು ಒಂದು ಆಪ್ಟಿಕಲ್ ಇಲ್ಲ್ಯೂಷನ್ ಆಗಿದ್ದು, ಈ ಫೋಟೋ ವಿಶ್ವದೆಲ್ಲೆಡೆ ಜನರನ್ನ ಹುಚ್ಚರನ್ನಾಗಿಸುತ್ತದೆ. ಇದನ್ನ ಒಂದು ಬಾರಿ ಅಲ್ಲ, ಎರಡು ಬಾರಿ ಅಲ್ಲ, ಮೂರು ಬಾರಿ ನೋಡಿದರೂ ನೀವು ನಿಮ್ಮ ತಲೆಯನ್ನ ಕೆರೆದುಕೊಳ್ಳುತ್ತೀರಿ!

ಈ ಫೋಟೋ ಈಗಾಗಲೇ ಕೆಲವು ವರ್ಷಗಳ ಹಿಂದೆ ಅಂತರ್ಜಾಲದಲ್ಲಿ ಹರಿದಾಡುತ್ತಿತ್ತು. ಆದರೆ, ಈಗ ಈ ಫೋಟೋ ಪುನಃ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರು ಈ ಫೋಟೋವನ್ನ ಅರ್ಥ ಮಾಡಿಕೊಳ್ಳಲು ಪರದಾಡುತ್ತಿದ್ದಾರೆ. ಇದನ್ನ ರೆಡ್ಡಿಟ್ ಫೋರಮ್ ಅಲ್ಲಿ ಬ್ಲಡ್_ರೀಪರ್ ಎಂಬ ಖಾತೆಯು ಅಪ್ಲೋಡ್ ಮಾಡಿದ ನಂತರ ಸುಮಾರು 18 ಲಕ್ಷ ಜನ ಇದನ್ನ ವೀಕ್ಷಿಸಿದ್ದಾರೆ. ಇದನ್ನ ಜನರೆಲ್ಲರೂ ತಮ್ಮ ಖಾತೆಯಲ್ಲಿ ಹಂಚಿಕೊಂಡು ಇತರರಿಗೆ ಉತ್ತರ ಕಂಡು ಹಿಡಿಯಲು ಕೇಳುತ್ತಿದ್ದಾರೆ.

ಈ ಫೋಟೋ ನೋಡಿ. ಇದರಲ್ಲಿ ಏನು ತಪ್ಪಿಲ್ಲ ಎಂದು ಅನಿಸಿತೇ? ಹಾಗಿದ್ದರೆ ಇನ್ನೊಮ್ಮೆ ನೋಡಿ! ಸುಳಿವು ಸಿಗಲಿಲ್ಲವೇ? ಅವರ ಕಾಲುಗಳನ್ನ ನೋಡಿ. ಇಲ್ಲಿ ಕ್ಯಾಮೆರಾಗೆ ಬೆನ್ನು ಮಾಡಿ ನಿಂತಿರುವುದು ಪತಿಯೋ ಅಥವಾ ಹೆಂಡತಿಯೋ? ಹಾಗಿದ್ದರೆ, ಅವರ ಕಾಲುಗಳು ವಿರುದ್ಧ ಬದಿಯಲ್ಲಿ ಇರುವುದು ಏಕೆ? ಈ ಫೋಟೋ ಸರಿಯಾಗಿ ಗಮನಿಸಿ, ನಿಮಗೂ ಉತ್ತರ ಸಿಗುತ್ತದೆ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon