Link copied!
Sign in / Sign up
0
Shares

ಎದೆಹಾಲು ನೀಡುತ್ತಿರುವಾಗಲೇ ಗರ್ಭಿಣಿಯಾಗಿ ಎದೆಹಾಲಿನ ಕೊರತೆ ಉಂಟಾದರೆ ಏನು ಮಾಡಬೇಕು?

ನೀವು ಈಗಾಗಲೇ ಒಂದು ಮಗುವಿಗೆ ತಾಯಿ ಆಗಿದ್ದು, ಈಗ ಇನ್ನೊಂದು ಮಗುವನ್ನ ಗರ್ಭದಲ್ಲಿ ಹೊತ್ತಿದ್ದರೆ, ನಿಮಗೆ ಅಭಿನಂದನೆಗಳು. ನಿಮ್ಮ ಮನೆಗೆ ಇನ್ನೊಂದು ಸದಸ್ಯ/ಸದಸ್ಯೆ ಆಗಮನ ಆಗುತ್ತಿದೆ. ಆದರೆ ಬಹಳಷ್ಟು ಅಮ್ಮಂದಿರು ಗರ್ಭಿಣಿ ಆಗಿರುವಾಗ ತಮ್ಮ ಎದೆಹಾಲು ಕಡಿಮೆ ಆಗುತ್ತದೆ ಎಂದು ಹೇಳುತ್ತಾರೆ. ಅವರು ಏನೇ ಪ್ರಯತ್ನ ಮಾಡಿದರೂ, ಗರ್ಭಧಾರಣೆ ಸಮಯದಲ್ಲಿ ಎದೆಹಾಲು ಕಡಿಮೆ ಆಗೇ ಆಗುತ್ತದೆ. ಒಂದು ವೇಳೆ ನೀವು ನಿಮ್ಮ ಎದೆಹಾಲಿನ ಪ್ರಮಾಣವನ್ನು ನೈಸರ್ಗಿಕವಗ್ಗಿ ಹೆಚ್ಚಿಸಿಕೊಳ್ಳಲು ದಾರಿ ಹುಡುಕುತ್ತಿದ್ದರೆ, ಒಂದು ವಿಷಯ ನೆನಪಲ್ಲಿ ಇಡಬೇಕು. ಅದೇನೆಂದರೆ ನಮ್ಮ ಮಾನವ ಜೀವಶಾಸ್ತ್ರವು ಯಾವುದೇ ದಾರಿಗೂ ಗ್ಯಾರಂಟಿ ಕೊಡುವುದಿಲ್ಲ.


ಬಹುತೇಕ ಅಮ್ಮಂದಿರಲ್ಲಿ ಎದೆಹಾಲು ಕಡಿಮೆ ಆಗುತ್ತದೆ ಮತ್ತು ಅವರ ಹೊಟ್ಟೆಯಲ್ಲಿನ ಮಗುವು ಹೊರಬರುವವರೆಗೂ ಕಾಯುವುದನ್ನು ಬಿಟ್ಟು ಬೇರೆ ಏನು ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ. ಕೆಲವು ಹೆಂಗಸರಲ್ಲಿ ಗರ್ಭಿಣಿ ಆಗಿದೆ ತಕ್ಷಣವೇ ಎದೆಹಾಲು ಕಡಿಮೆ ಆಗುತ್ತದೆ. ಇನ್ನೂ ಕೆಲವರಲ್ಲಿ ಗರ್ಭಧಾರಣೆಯ 12 ವಾರದವರೆಗೆ ಎದೆಹಾಲು ಕಡಿಮೆ ಆಗುವುದು ಗೋಚರಿಸುವುದಿಲ್ಲ. ಆದರೆ ಗರ್ಭಧಾರಣೆಯ 20ನೇ ವಾರದಷ್ಟರಲ್ಲಿ, ಬಹುತೇಕ ಎಲ್ಲಾ ಹೆಂಗಸರು ತಮ್ಮ ಎದೆಹಾಲಿನ ಪ್ರಮಾಣದಲ್ಲಿ ಇಳಿಕೆಯನ್ನ ಕಾಣುತ್ತಾರೆ. ಸುಮಾರು 70% ಅಷ್ಟು ತಾಯಂದಿರು ತಮ್ಮ ಎದೆಹಾಲಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ಆಗುತ್ತದೆ ಎಂದು ಹೇಳುತ್ತಾರೆ!


ಎದೆಹಾಲು ಕಡಿಮೆ ಆಗಲು ಕಾರಣ


ನಿಮ್ಮ ಪ್ರೆಗ್ನನ್ಸಿ ಸಮಯದಲ್ಲಿ, ಪ್ರೊಜೆಸ್ಟರಾನ್ ಮತ್ತು ಈಸ್ಟ್ರೋಜೆನ್ (ಮದಜನಕ) ಪ್ರಮಾಣ ಹೆಚ್ಚಿರುತ್ತದೆ. ಆದರೆ, ಅದೇ ನೀವು ಎದೆಹಾಲು ನೀಡುತ್ತಿರುವಾಗ ಈ ಎರೆಡು ಹಾರ್ಮೋನುಗಳು ಕಡಿಮೆ ಇರುತ್ತವೆ. ಹೀಗಾಗಿ ನೀವು ಎದೆಹಾಲು ಕುಡಿಸುತ್ತಿರುವಾಗಲೇ ಗರ್ಭಿಣಿ ಆದರೆ, ನಿಮ್ಮ ದೇಹವು ಗರ್ಭಧಾರಣೆಗೆ ಹೆಚ್ಚು ಮಹತ್ವ ಕೊಡುತ್ತದೆ. ಆಗ ನಿಮ್ಮ ದೇಹದಲ್ಲಿ ಮೇಲೆ ಹೇಳಿರುವ ಎರಡು ಹಾರ್ಮೋನುಗಳು ಹೆಚ್ಚಾಗುತ್ತವೆ. ಆಗ ಅನಿವಾರ್ಯವಾಗಿ ನಿಮ್ಮ ಎದೆಹಾಲು ಕಡಿಮೆ ಆಗುತ್ತದೆ.


ಇದನ್ನು ನಿಭಾಯಿಸುವುದು ಹೇಗೆ?


ಇಂತಹದ್ದನ್ನು ಮಾಡಿದರೆ ಸಾಕು, ಎದೆಹಾಲು ಜಾಸ್ತಿ ಆಗುತ್ತದೆ ಎಂದು ಹೇಳಲು ಯಾವುದೇ ವಿಧಾನ ಇಲ್ಲ. ಕೆಲವರು ಎದೆಹಾಲು ಹೆಚ್ಚಿಸುವ ಸಪ್ಲಿಮೆಂಟ್ ಸೇವಿಸುತ್ತಾರೆ, ಆದರೆ ಅದು ಪ್ರೆಗ್ನನ್ಸಿ ವೇಳೆ ಸುರಕ್ಷಿತವಲ್ಲ. ನೀವು ಮಾಡಬಹುದಾದ ಒಂದು ಕೆಲಸ ಎಂದರೆ, ಅದು ಮಗುವು ತಾನಾಗಿಯೇ ಹೊಟ್ಟೆ ಹಸಿವೆಂದು ನಿಮಗೆ ಸೂಚನೆ ನೀಡಿದಾಗ ಹಾಲುಣಿಸುವುದು. ಆದರೆ ಇದನ್ನು ನಿಮ್ಮ ಡಾಕ್ಟರ್ ಓಕೆ ಎಂದಮೇಲೆ ಮಾಡಿ.

ಇದಲ್ಲದೆ ನೀವು ಮಗುವಿಗೆ ಫಾರ್ಮುಲಾ ಹಾಲನ್ನು ಕೂಡ ನೀಡಬಹುದು. ಬಹಳಷ್ಟು ಅಮ್ಮಂದಿರು ಅಗಸೇ ಬೀಜ ಸೇವನೆಯು ಎದೆಹಾಲನ್ನು ಹೆಚ್ಚಿಸಿದೆ ಎಂದು ಕೂಡ ತಿಳಿಸಿದ್ದಾರೆ, ಹೀಗಾಗಿ ನೀವು ಕೂಡ ಇದನ್ನು ಒಮ್ಮೆ ಪ್ರಯತ್ನಿಸಬಹುದು. ಇದರೊಂದಿಗೆ ಕೆಲವರು ಓಟ್ಸ್ ಅನ್ನು ಸೇವಿಸುವುದರಿಂದಲೂ ಎದೆಹಾಲು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.


ನೆನಪಲ್ಲಿಡಬೇಕಾದ ವಿಷಯಗಳು


ಹೌದು, ಪ್ರೆಗ್ನನ್ಸಿ ವೇಳೆ ನಿಮ್ಮ ಎದೆಹಾಲಿನ ಪ್ರಮಾಣ ಕಡಿಮೆ ಆಗುತ್ತದೆ. ಆದರೆ, ಅದು ನಿಂತೇ ಹೋಗುವುದಿಲ್ಲ. ಕಷ್ಟವಾದರೂ, ಬಹುತೇಕ ತಾಯಂದಿರು ತಮ್ಮ ಪ್ರೆಗ್ನನ್ಸಿ ಸಮಯದಲ್ಲಿ ಮಗುವಿಗೆ ಬೇಕಾದಷ್ಟು ಹಾಲನ್ನು ಒದಗಿಸಲು ಶಕ್ತರಾಗಿರುತ್ತಾರೆ. ಇಷ್ಟಲ್ಲದೆ ನಿಮ್ಮ ಪ್ರೆಗ್ನನ್ಸಿಯ 16ನೇ ವಾರದಲ್ಲಿ ನಿಮ್ಮ ದೇಹವು ನಿಮ್ಮ ಹೊಟ್ಟೆಯಲ್ಲಿರುವ ಮಗುವಿಗೆ ಕಾಲೊಸ್ಟ್ರಮ್ ಅನ್ನು ತಯಾರಿಸುತ್ತದೆ. ಇದರಲ್ಲಿ ಲಾಕ್ಸಟೀವ್ ಗುಣಗಳು ಇರುವುದರಿಂದ ನಿಮ್ಮ ಮೊದಲನೇ ಮಗುವಿಗೆ ಇದರಿಂದ ಸ್ವಲ್ಪ ಬೇಧಿ ರೀತಿಯ ಮಲ ಉಂಟಾಗಬಹುದು. ಅದರ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳಬೇಡಿ.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon