ಪತಿ ತಾಯಿಯರು ಮಗುವಿನ ಎತ್ತರದ ಬಗ್ಗೆ ಚಿಂತಿತರಾಗಿರುವರು. ಎತ್ತರವು, ಸುಂದರ ವ್ಯಕ್ತಿತ್ವಕ್ಕೆ ಮೆರುಗು ನೀಡುವುದರಿಂದ ಮಗುವಿನ ಬೆಳವಣಿಗೆಗೆ ಕಾರಣವಾಗುವ ಪ್ರತಿಯೊಂದು ಚಟುವಟಿಕೆಗಳ ಹಿಂದೆಯೇ ತಾಯಿಯರು ಪಲಾಯನ ಮಾಡುತ್ತಿರುತ್ತಾರೆ. ವ್ಯಾಯಾಮ ಹಾಗೂ ಕಸರತ್ತುಗಳು ಮಾತ್ರವಲ್ಲದೆ, ಪೋಷಕ ಭರಿತ,ಆರೋಗ್ಯಕರ ಹಾಗೂ ಸಮತೋಲನ ಆಹಾರಾಭ್ಯಾಸಗಳು ಮಗುವಿನ ಬೆಳವಣಿಗೆ ಹಾಗೂ ಎತ್ತರದಲ್ಲಿ ಅದರದ್ದೇ ಆದ ಪಾತ್ರ ನಿರ್ವಹಿಸುತ್ತದೆ. ಆದ ಕಾರಣ ಪ್ರೋಟೀನ್, ವಿಟಮಿನ್ ,ಮಿನರಲ್ಸ್ ಮತ್ತು ಕಾರ್ಬೋ ಹೈಡ್ರೇಟ್ ಭರಿತವಾದ ಪೋಷಕ ಆಹಾರಗಳನ್ನು ಮಕ್ಕಳಿಗೆ ನೀಡಲು ಪೋಷಕರು ಶ್ರಮಿಸಬೇಕು. ನಿಮಗೆ ಸಹಾಯವಾಗುವಂತಹ ಕೆಲವು ಆಹಾರಗಳ ಪಟ್ಟಿ ಕೆಳಗೆ ನೀಡಲಾಗಿದೆ.
೧.ಹಾಲು
ಕ್ಯಾಲ್ಸಿಯಮ್ ಮತ್ತು ಪ್ರೊಟೀನ್ ಪೂರಕವಾದ ಹಾಲಿನ ಸೇವನೆಯಿಂದ ಎಲುಬುಗಳು ಬಲಯುತವಾಗುವುದು. ಬೆಳವಣಿಗೆಗೆ ಕಾರಣವಾದ ಕ್ಯಾಲ್ಷಿಯಂಗಳು ಹಾಲಿನ ಸೇವನೆಯಿಂದ ಮಗುವಿಗೆ ಲಭಿಸುವುದು. ಕೆಂಪು ರಕ್ತಕಣಗಳ ಉತ್ಪಾದನೆಗೆ ಕೂಡಾ ಕಾರಣವಾದ ಕ್ಯಾಲ್ಸಿಯಂ ಹಾಲಿನಲ್ಲಿ ಅಡಕವಾಗಿರುವುದರಿಂದ, ಮಗುವನ್ನು ಆರೋಗ್ಯಯುತವಾಗಿರಿಸುವುದು. ಬಿಳಿರಕ್ತ ಕಣಗಳನ್ನು ಉತ್ಪಾದಿಸುವುದರಿಂದ ರೋಗ ಪ್ರತಿರೋಧಕ ಶಕ್ತಿಯೂ ಅಭಿವೃಧ್ಧಿಗೊಳ್ಳುವುದು.
೨.ಒಣ ಹಣ್ಣುಗಳು
ಚಳಿಗಾಲದಲ್ಲಿ ಮಕ್ಕಳಿಗೆ ನೀಡಬಹುದಾದ ಒಣಗಿದ ಹಣ್ಣುಗಳು ಮಕ್ಕಳ ಎತ್ತರಕ್ಕೆ ಕಾರಣವಾದ ಬೆಳವಣಿಗೆಯ ಹಾರ್ಮೋನುಗಳ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಆದರೆ,ಹೆಚ್ಚಾದ ಒಣಗಿದ ಹಣ್ಣುಗಳ ಸೇವನೆಯು ಉದರ ಸಂಬಂಧಿತ ರೋಗಗಳಿಗೆ ಕಾರಣವಾಗಬಹುದು.
೩.ಹಣ್ಣು ಹಾಗೂ ತರಕಾರಿಗಳು
ಎಲ್ಲರಿಗೂ ತಿಳಿದಿರುವ ಆದರೆ ಯಾರೂ ತಲೆಗೆಡಿಸಿಕೊಳ್ಳದ ಹಣ್ಣುಗಳ ಹಾಗೂ ತರಕಾರಿಗಳ ಸೇವನೆಯಿಂದ ಮಕ್ಕಳ ಶಾರೀರಿಕ ಬೆಳವಣಿಗೆಗೆ ಅಗತ್ಯವಾದ ಹೆಚ್ಚು ಕಡಿಮೆ ಎಲ್ಲಾ ರೀತಿಯ ಪೋಷಕಾಂಶಗಳು ಲಭ್ಯವಾಗುತ್ತದೆ. ಆದಕಾರಣ ಮಕ್ಕಳು ಎಷ್ಟೊಂದು ನಕಾರ ತೋರಿದರೂ, ಹಣ್ಣುಗಳು ಹಾಗೂ ತರಕಾರಿಗಳ ಸೇವಿಸುವಂತೆ ಮಾಡುವುದು ಪಾಲಕರ ಆದ್ಯ ಕರ್ತವ್ಯ.
೪.ಮೊಟ್ಟೆಗಳು
ಹೇರಳ ಪ್ರೋಟಿನ್ ಭರಿತವಾಗಿರುವ ಮೊಟ್ಟೆಯು, ಮೆದುಳಿನ ಬೆಳವಣಿಗೆಗೆ ಅತಿ ಅಗತ್ಯವಾದ ವಿಟಾಮಿನ್ ಬಿ ೧೨ನ್ನು ಕೂಡ ಒಳಗೊಂಡಿದೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುವ ಮೊಟ್ಟೆಯ ಸೇವನೆಯಿಂದ ಶಾರೀರಿಕ ಬೆಳವಣಿಗೆ ಅಭಿವೃದ್ಧಿಗೊಳ್ಳುವುದು ಆದ ಕಾರಣ ಮಗುವಿನ ಶೀಘ್ರ ಬೆಳವಣಿಗೆಗಾಗಿ ದಿನವೂ ಮೊಟ್ಟೆಯೊಂದನ್ನು ನೀಡಿರಿ.
೫.ಧಾನ್ಯಗಳು
ಮಕ್ಕಳ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುವಕ್ಯಾಲ್ಸಿಯಮ್, ಕಬ್ಬಿಣ, ಮೆಗ್ನಿಷಿಯಂ ಮತ್ತು ಸೆಲೆನಿಯಂಗಳನ್ನೊಳಗೊಂಡ ಧಾನ್ಯಗಳ ಸೇವನೆಯಿಂದ ಚೈತನ್ಯವು ಲಭಿಸುವುದು.
ಗೋಧಿ,ರಾಗಿ ಮತ್ತು ಓಟ್ ಮೀಲ್ ಗಳು ಬೆಳವಣಿಗೆಯ ಹಾರ್ಮೋನ್ಗಳ ಸ್ರವಿಕೆಯನ್ನು ಹೆಚ್ಚಿಸುವುದರಿಂದ ಮಕ್ಕಳು ಬೇಗನೆ ಉದ್ದವಾಗಿ ಬೆಳೆಯುವರು.
೬.ಮೊಸರು
ಮಕ್ಕಳ ಬೆಳವಣಿಗೆಗೆ ಅತಿ ಅಗತ್ಯವಾದ ವಿಟಾಮಿನ್ ಡಿ ಮತ್ತು ಕ್ಯಾಲ್ಸಿಯಮ್ ನಿಂದ ಕೂಡಿದ ಎಲ್ಲಾ ಹಾಲಿನ ಉತ್ಪನ್ನಗಳು ಬೆಳವಣಿಗೆಗೆ ಸಹಾಯವಾಗುವ ಘಟಕಗಳನ್ನು ಒಳಗೊಂಡಿದೆ. ಹಾಗಾಗಿ ಮಕ್ಕಳು ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ಸೇವಿಸುವಂತೆ ಪ್ರೋತ್ಸಾಹಿಸಬೇಕು.
