Link copied!
Sign in / Sign up
2
Shares

ನಿಮ್ಮ ಮದಜನಕ (ಈಸ್ಟ್ರೋಜೆನ್) ಹೆಚ್ಚಿಸಿ ನಿಮ್ಮ ಸ್ತನಗಳ ಗಾತ್ರ ಹೆಚ್ಚಿಸುವ 7 ಆಹಾರಗಳು

ನಾವು ವಿಧಿ ಇಲ್ಲದೆ ಈಸ್ಟ್ರೋಜೆನ್ ಅಥವಾ ಮದಜನಕವನ್ನು ಕೃತಕವಾಗಿ ತಯಾರಿಸಿದ ವಸ್ತುಗಳಾದ ಸೌಂದರ್ಯವರ್ಧಕಗಳು, ಡಿಟರ್ಜೆಂಟ್, ಪೆಟ್ರೋಲ್ ಉತ್ಪನ್ನಗಳು, ಪೀಠೋಪಕರಣಗಳು ಅಥವಾ ರಾಸಾಯನಿಕ ಗೊಬ್ಬರ, ಕೀಟನಾಶಕಗಳು ಬಳಸಿ ಬೆಳೆಸಿದ ಗಿಡಗಳಿಂದ ಪಡೆದುಕೊಳ್ಳುತ್ತೇವೆ. ಇದಲ್ಲದೆ, ನಮಗೆ ನಾವು ದಿನನಿತ್ಯ ಸೇವಿಸುವ ನೈಸರ್ಗಿಕ ಆಹಾರದಿಂದಲೂ ನಮಗೆ ಆರೋಗ್ಯಕರ, ಉಪಯುಕ್ತ ಈಸ್ಟ್ರೋಜೆನ್ ಲಭಿಸುತ್ತದೆ. ಸ್ತನಗಳ ಬೆಳವಣಿಗೆಯಲ್ಲಿ, ಲೈಂಗಿಕ ಆರೋಗ್ಯದಲ್ಲಿ, ರೋಗ ನಿವಾರಣೆಯಲ್ಲಿ ಮುಖ್ಯ ಪಾತ್ರ ವಹಿಸುವುದೇ ಈ ಈಸ್ಟ್ರೋಜೆನ್. ಇಂತಹ ಈಸ್ಟ್ರೋಜೆನ್ ಅನ್ನು ನೈಸರ್ಗಿಕವಾಗಿ ನೀಡುವ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ :

೧. ಅಗಸೆ ಬೀಜ

ಅಗಸೆಬೀಜ ಅಥವಾ ಅಗಸೆ ಕಾಳುಗಳು ನಿಜವಾಗಿಯೂ ತುಂಬಾನೇ ಆರೋಗ್ಯಕರ ಆಹಾರ. ಈಸ್ಟ್ರೋಜೆನ್ ಹೆಚ್ಚಿರುವ ಆಹಾರಗಳ ಪಟ್ಟಿಯಲ್ಲಿ ಅಗಸೆ ಬೀಜಕ್ಕೆ ಅಗ್ರಸ್ಥಾನ. 100 ಗ್ರಾಂ ಅಷ್ಟು ಅಗಸೆಬೀಜದಲ್ಲಿ 379 ಮೈಕ್ರೋಗ್ರಾಂ ಅಷ್ಟು ಈಸ್ಟ್ರೋಜೆನ್ ಇದ್ದರೆ, ಕಲ್ಲಂಗಡಿ ಅಂತಹ ಪದಾರ್ಥಗಲ್ಲಿ ಕೇವಲ 2.7 ಮೈಕ್ರೋಗ್ರಾಂ ಅಷ್ಟು ಇರುತ್ತದೆ.


೨. ಮಾಂಸಾಹಾರ ಮತ್ತು ಇತರೆ ಪ್ರಾಣಿ ಉತ್ಪನ್ನಗಳು

ಅಗಸೆ ಬೀಜದ ನಂತರದ ಸ್ಥಾನದಲ್ಲಿ ಇರುವುದು ಮಾಂಸಾಹಾರ ಮತ್ತು ಇತರೆ ಪ್ರಾಣಿಗಳ ಉತ್ಪನ್ನಗಳು. ಉದಾಹರಣೆಗೆ ಮಟನ್ ಮತ್ತು ಹಾಲು. 100 ಗ್ರಾಂ ಅಷ್ಟು ಹಸುವಿನ ಹಾಲಿನಲ್ಲಿ 1.2 ಮೈಕ್ರೋಗ್ರಾಮ್ ಅಷ್ಟು ಮದಜನಕ ಇರುತ್ತದೆ.


೩. ಒಣಹಣ್ಣುಗಳು

ಒಣಗನ್ನುಗಳು ಫೈಟೋಈಸ್ಟ್ರೋಜೆನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದು ಇದು ನಿಮ್ಮ ದೇಹದಲ್ಲಿ ಈಸ್ಟ್ರೋಜೆನ್ ರೀತಿಯಲ್ಲೇ ಕೆಲಸ ಮಾಡುತ್ತದೆ. ಇದು ನಿಮ್ಮ ದೇಹದಲ್ಲಿನ ಈಸ್ಟ್ರೋಜೆನ್ ಕೊರತೆಯನ್ನು ನೀಗಿಸುತ್ತದೆ ಅಥವಾ ನಿಮ್ಮಲ್ಲಿ ಈಸ್ಟ್ರೋಜೆನ್ ಕೊರತೆ ಇಲ್ಲವೆಂದರೆ, ಈಸ್ಟ್ರೋಜೆನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಫೈಟೋಈಸ್ಟ್ರೋಜೆನ್ ಹೆಚ್ಚಿರುವ ಒಣಹಣ್ಣುಗಳು ಎಂದರೆ ಅವು ಒಣದ್ರಾಕ್ಷಿ, ಖರೂಜುರ ಮತ್ತು ಜಲದುರ ಹಣ್ಣು.


೪. ಎಳ್ಳು

ಎಳ್ಳು ಅಪಾರ ಪ್ರಮಾಣದ ಫೈಟೋಈಸ್ಟ್ರೋಜೆನ್ ಹೊಂದಿದ್ದು, ಇದರ ಎಣ್ಣೆಯನ್ನು ಅಡುಗೆಗೆ ಬಳಸುವ ಮೂಲಕ ನಾವು ದಿನನಿತ್ಯ ಈಸ್ಟ್ರೋಜೆನ್ ಲಭಿಸಿಕೊಳ್ಳಬಹುದು.


೫. ಚನ್ನಾ ಕಾಳುಗಳು

ಈ ಕಾಳುಗಳು ಕೇವಲ ಈಸ್ಟ್ರೋಜೆನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವುದು ಮಾತ್ರ ಅಲ್ಲದೆ, ಇವುಗಳು ಪೋಷಕಾಂಶಗಳ ಒಳ್ಳೆಯ ಮೂಲ ಮತ್ತು ಆರೋಗ್ಯಕರ ನಾರಿನಾಂಶದ ಮೂಲ ಕೂಡ ಆಗಿವೆ.


೬. ಬೀನ್ಸ್

ಬೀನ್ಸ್ ಕಾಳುಗಳು ಹೆಂಗಸರ ಹಾರ್ಮೋನುಗಳ ಅತ್ಯಂತ ಒಳ್ಳೆಯ ಮೂಲ. ಇವುಗಳಲ್ಲಿ ನಾರಿನಂಶ ತುಂಬಾ ಹೆಚ್ಚಿದ್ದು, ಇವು ದೇಹದಲ್ಲಿನ ಕೊಬ್ಬಿನಂಶವನ್ನು ಕೂಡ ಇಳಿಸುತ್ತವೆ. ಇಷ್ಟಲ್ಲದೆ ಬೀನ್ಸ್ ಅಲ್ಲಿ ಹೆಚ್ಚಿನ ಪ್ರಮಾಣದ ಫೈಟೋಈಸ್ಟ್ರೋಜೆನ್ ಕೂಡ ಇರುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon