Link copied!
Sign in / Sign up
18
Shares

ಎಷ್ಟು ತಿಂಗಳ, ಎಷ್ಟು ವರ್ಷದ ಮಗುವಿಗೆ ಎಷ್ಟು ನಿದ್ದೆ ಬೇಕು : ಫುಲ್ ಡೀಟೇಲ್ಸ್

ಹೊಸದಾಗಿ ತಂದೆ-ತಾಯಿ ಆದ ದಂಪತಿಗಳಿಗೆ ಕಾಡುವ ಅತಿಮುಖ್ಯ ಪ್ರಶ್ನೆಗಳಲ್ಲಿ ಒಂದು ಎಂದರೆ ಅದು ಅವರ ಮಗುವಿಗೆ ರಾತ್ರಿಯಿಡೀ ಎಷ್ಟು ನಿದ್ದೆ ಬೇಕು ಎಂಬುದು. ಪೋಷಕರು ಮಗುವಿಗೆ ಮಲಗಲು ಎಂದೇ ನಿಗದಿತ ಸಮಯ ಮತ್ತು ವಾಡಿಕೆಗಳನ್ನ ಅಭ್ಯಾಸ ಮಾಡಿಸಲು ಪ್ರಯತ್ನಿಸುತ್ತಾರೆ, ಆದರೆ ಆಗಷ್ಟೇ ಹುಟ್ಟಿರುವ ಮಕ್ಕಳಿಗೆ ಆ ರೀತಿ ವೇಳಾಪಟ್ಟಿ ಪಾಲಿಸಲು ಆಗುವುದಿಲ್ಲ. ನವಜಾತ ಶಿಶುಗಳು ರಾತ್ರಿ ಹೊತ್ತು ಕಡಿಮೆ ಸಮಯ ಮಲಗಿ, ಬೆಳಗ್ಗೆ ಸಮಯದಲ್ಲಿ ಹೆಚ್ಚು ಮಲಗಬಹುದು ಅಥವಾ ಇದರ ವಿರುದ್ಧವಾಗಿಯೂ ಆಗಬಹುದು.

ಪೋಷಕರು ತಮ್ಮ ಮಗುವಿನ ಬೆಳಗಿನ ಮತ್ತು ರಾತ್ರಿಯ ಮಲಗುವ ಮುನ್ನದ ವಾಡಿಕೆಗಳನ್ನ ಕನ್ಫ್ಯೂಸ್ ಮಾಡಿಕೊಳ್ಳಬಹುದು. ಆದರೆ, ನೀವು ನೆನಪಲ್ಲಿ ಇಡಬೇಕಾದ ಒಂದು ವಿಷಯ ಎಂದರೆ, ಮಗುವಿಗೆ ಎಷ್ಟು ನಿದ್ದೆ ಬೇಕು ಎನ್ನುವುದು ಸಂಪೂರ್ಣವಾಗಿ  ಮಗುವಿನ ದೈನಂದಿನ ಚಟುವಟಿಕೆಗಳು ಮತ್ತು ವೇಳಾಪಟ್ಟಿಯ ಮೇಲೆ ಆಧಾರಿತ ಆಗಿರುತ್ತದೆ ಎಂಬುದು. ಒಂದು ವೇಳೆ ನಿಮ್ಮ ಮಗುವು ಬೆಳಗಿನ ಸಮಯದಲ್ಲಿ ಹೆಚ್ಚು ಆಕ್ಟಿವ್ ಆಗಿ ಇದ್ದರೆ, ಅದಕ್ಕೆ ರಾತ್ರಿ ಸಮಯದಲ್ಲಿ ನಿದ್ದೆ ಬೇಕಾಗುತ್ತದೆ ಮತ್ತು ಒಂದು ವೇಳೆ ಅದು ರಾತ್ರಿಯೆಲ್ಲ ಎದ್ದು, ಆಟ ಆಡುತ್ತದೆ ಎಂದರೆ ಅದಕ್ಕೆ ಬೆಳಗಿನ ಸಮಯದಲ್ಲಿ ನಿದ್ದೆ ಬೇಕಾಗುತ್ತದೆ. ಒಂದು ವೇಳೆ ಇನ್ನೂ ನಿಮ್ಮ ತಲೆಯಲ್ಲಿ ಮಗುವಿನ ನಿದ್ದೆಯ ಬಗ್ಗೆ ಪ್ರಶ್ನೆಗಳು ಇದ್ದರೆ, ಕೆಳಗೆ ನಾವು ನಿಮಗೆ ಹೆಚ್ಚು ಮಾಹಿತಿ ನೀಡುತ್ತೇವೆ ಓದಿ.


ನವಜಾತ ಶಿಶು - 4 ತಿಂಗಳ ಮಗು


ಮೊದಲ ದಿನಗಳಲ್ಲಿ ಮಗುವಿಗೆ ಸರಾಸರಿ ದಿನಕ್ಕೆ 16-18 ಗಂಟೆಗಳಷ್ಟು ನಿದ್ದೆ ಬೇಕಾಗುತ್ತದೆ. ಇದು ತುಂಬಾ ಹೆಚ್ಚಿನ ಸಮಯ ಅನಿಸಬಹುದು, ಆದರೆ ಮಗುವಿಗೆ ಇನ್ನೂ ಹಗಲು ಮತ್ತು ಇರುಳಿನ ನಡುವಿನ ವ್ಯತ್ಯಾಸ ಗೊತ್ತಾಗದ ಕಾರಣ, ಅದು ಸುಮಾರು ಅರ್ಧಧಷ್ಟು ಸಮಯ ಬೆಳಗಿನ ಸಮಯದಲ್ಲಿ ಮಲಗಿದರೆ, ಅರ್ಧಕ್ಕಿಂತ ಹೆಚ್ಚು ಸಮಯದಷ್ಟು ರಾತ್ರಿ ಮಲಗುತ್ತವೆ. ಕೆಲವು ಸಮಯ ಮಗುವಿಗೆ ಸುಸ್ತಾದಾಗ, ಅವುಗಳು ಮಧ್ಯಾಹ್ನ ಸಹ ಮಲಗಬಹುದು. ಬೆಳೆಯುತ್ತಾ, ಮಕ್ಕಳು ಸರಿಯಾದ ಸಮಯಕ್ಕೆ ಮಲಗುವುದನ್ನ ರೂಡಿಸಿಕೊಳ್ಳುತ್ತಾರೆ.


4-12 ತಿಂಗಳ ಮಗು


ಒಂದು ವೇಳೆ ನೀವೇನಾದರೂ ನಿಮ್ಮ ಮಗುವು ನಾಲ್ಕು ತಿಂಗಳು ತುಂಬಿದ ನಂತರ ಅಚ್ಚುಕಟ್ಟಾಗಿ, ಸರಿಯಾದ ಸಮಯಕ್ಕೆ, ನಮ್ಮಂತೆಯೇ ನಿದ್ದೆ ಮಾಡುವುದನ್ನ ಕಲಿತು ಬಿಡುತ್ತದೆ ಎಂದು ಮಾತ್ರ ಅಂದುಕೊಳ್ಳಬೇಡಿ. ಪ್ರತಿಯೊಬ್ಬರ ದೇಹದೊಳಗೆ ಒಂದು ನೈಸರ್ಗಿಕವಾದ ಆಂತರಿಕ ಗಡಿಯಾರ ಇರುತ್ತದೆ. ಈ ಗಡಿಯಾರವೇ ನಮಗೆ ರಾತ್ರಿಯಾದೊಡನೆ ನಿದ್ದೆ ತರಿಸುವುದು, ಮಧ್ಯಾಹ್ನ ಆದೊಡನೆ ಹೊಟ್ಟೆ ಹಸಿಯುವಂತೆ ಮಾಡುವುದು ಮತ್ತು ಇತರೆ ಕೆಲಸಗಳನ್ನ ಮಾಡುವುದು. ಮಗುವಿನ ದೇಹದ ಆಂತರಿಕ ಗಡಿಯಾರವು ಮಗುವಿಗೆ ನಾಲ್ಕು ತಿಂಗಳು ತುಂಬಿದಾಗ ಕಾರ್ಯನಿರ್ವಹಿಸಲು ಶುರು ಮಾಡುತ್ತದೆ. ಹೀಗಾಗಿ ನಾಲ್ಕು ತಿಂಗಳ ನಂತರ ನಿಮ್ಮ ಮಗುವು ಕೇವಲ 13-14 ಗಂಟೆಗಳಷ್ಟೇ ನಿದ್ದೆ ಮಾಡುವುದು. ಅಷ್ಟೇ ಅಲ್ಲದೆ ನಿಮ್ಮ ಮಗುವು ಯಾವ ಸಮಯದಲ್ಲಿ ಮಲಗುತ್ತಿತ್ತು ಎನ್ನುವುದು ಕೂಡ ಬದಲಾಗುತ್ತದೆ. ನಿಮ್ಮ ಮಗುವು ಈಗ ರಾತ್ರಿ ಹೊತ್ತು 8-9 ಗಂಟೆಗಳ ಕಾಲ ನಿದ್ರೆ ಮಾಡಿದರೆ, ಬೆಳಗಿನ ಸಮಯದಲ್ಲಿ ಕೇವಲ 2-3 ಗಂಟೆಗಳಷ್ಟೇ ನಿದ್ದೆ ಮಾಡುತ್ತದೆ.


1-2 ವರ್ಷದ ಮಗು


ನಿಮ್ಮ ಮಗುವಿಗೆ 1-2 ವರ್ಷ ವಯಸ್ಸು ಆದಂತೆ ನಿಮ್ಮ ಮಗುವು ಹೆಜ್ಜೆಯನ್ನಿಡುವುದು ಕಲಿಯಲು ಶುರು ಮಾಡುತ್ತದೆ, ಆದರೆ ಅದರ ನಿದ್ರಾಕ್ರಮವು ದಿಢೀರನೆ ಬದಲಾಗಿ ಬಿಡುತ್ತದೆ ಎಂದುಕೊಳ್ಳಬೇಡಿ. ಈ ವಯಸ್ಸಿನ ಮಕ್ಕಳಿಗೆ ದಿನಕ್ಕೆ ಕನಿಷ್ಠಪಕ್ಷ 12-13 ಗಂಟೆಗಳ ನಿದ್ದೆ ಬೇಕಾಗುತ್ತದೆ. ಆದರೆ ಇದು ಚಿಕ್ಕ ಚಿಕ್ಕ ಅವಧಿಯ ನಿದ್ರೆ ಒಳಗೊಂಡಿರುತ್ತದೆ. ನೀವು ನಿಮ್ಮ ಮಗುವು ರಾತ್ರಿ ಸಮಯದಲ್ಲಿ 11 ಗಂಟೆಗಳ ಕಾಲ ಮಲಗುವುದು ಮತ್ತು ಬೆಳಗಿನ ಸಮಯದಲ್ಲಿ 2-3 ಗಂಟೆಗಳ ಕಾಲ ಮಲಗುವುದನ್ನು ಕಾಣಬಹುದು.


3-5 ವರ್ಷದ ಮಗು


3-5 ನೇ ವರ್ಷದಲ್ಲಿ ನಿಮ್ಮ ಮಗುವಿನ ನಿದ್ರಾಕ್ರಮದಲ್ಲಿ ಉಂಟಾಗುವ ಬದಲಾವಣೆಗಳು ನಿಮ್ಮ ಮಗುವು ಶಾಂತವಾಗಿ ನಿದ್ರಿಸುವಂತೆ ಮಾಡುತ್ತವೆ. ಈ ಸಮಯದಲ್ಲಿ ಮಕ್ಕಳು ರಾತ್ರಿ ಸಮಯದಲ್ಲಿ 10-11 ಗಂಟೆಗಳ ಕಾಲ ಮಲಗಿದರೆ, ಬೆಳಗಿನ ಸಮಯ 1-2 ಗಂಟೆಗಳಷ್ಟೇ ನಿದ್ರಿಸುವರು. ಅವರು ಪ್ರತಿದಿನ ಬೆಳಕು ಇರುವ ಸಮಯದಲ್ಲಿ ಮಲಗಲೇ ಬೇಕೆಂದೇನಿಲ್ಲ. ಆದರೆ, ಸುಸ್ತಾದರೆ ಅವರು ಮಧ್ಯಾಹ್ನದ ಸಮಯ ಸ್ವಲ್ಪ ನಿದ್ದೆ ಮಾಡಬಹುದು. ಈ ಸಮಯದಲ್ಲಿ ನಿಮ್ಮ ಮಗುವು ಹೇಳಿದೊಡನೆ ನಿದ್ದೆ ಮಾಡುವುದಿಲ್ಲ. ಹೀಗಾಗಿ ನೀವು ಅವರಿಗೆ ಕಥೆ, ಜೋಗುಳ ಹೇಳುವುದು ಮತ್ತು ತೂಗುವುದು, ತಟ್ಟುವುದನ್ನ ಮಾಡಿ ಮಲಗಿಸಬೇಕು.


6-12 ವರ್ಷದ ಮಗು


ಈಗ ನಿಮ್ಮ ಮಗುವಿಗೆ ಬಾಯಿ ಮಾತಿನಲ್ಲಿ ನಿದ್ರಾಕ್ರಮದ ಬಗ್ಗೆ ಮತ್ತು ಮಲಗುವ ವೇಳಾಪಟ್ಟಿಯ ಬಗ್ಗೆ ಹೇಳಿ, ಅರ್ಥ ಆಗುವಂತೆ ಮಾಡಬಹುದು. ಹೀಗಾಗಿ ನಿಮ್ಮ ಮಗುವು ನಿದ್ರೆಯ ಬಗ್ಗೆ ಸರಿಯಾದ ನಿರ್ಣಯಗಳನ್ನ ತೆಗೆದುಕೊಳ್ಳುವಷ್ಟು ಬುದ್ದಿ ಬೆಳೆಸಿಕೊಳ್ಳುತ್ತದೆ. ಆದರೆ ಅವರು ಶಾಲೆಗೆ ಹೋಗಬೇಕಿರುವ ಕಾರಣ ಮತ್ತು ಇತರೆ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕಾದ ಕಾರಣದಿಂದ, ಅವರು ಮೊದಲಿನಂತೆ ದಿನವೆಲ್ಲಾ ನಿದ್ದೆ ಮಾಡಲು ಆಗುವುದಿಲ್ಲ. ಈ ಸಮಯದಲ್ಲಿ ಪೋಷಕರಿಂದ ಬೇರೆ ಮಲಗಬೇಕಾದ ಭಯದಿಂದ, ಮೊಬೈಲ್ ಅಥವಾ ಇನ್ನಿತರೇ ಇಲೆಕ್ಟ್ರಾನಿಕ್ ಉಪಕರಣಗಳ ಬಳಕೆಯಿಂದ ನಿದ್ರಾಹೀನತೆಯನ್ನು ಕೂಡ ಅನುಭವಿಸುವ ಸಾಧ್ಯತೆ ಇರುತ್ತದೆ. ಆದರೆ, ನಿಮ್ಮ ಮಗುವಿಗೆ ಕನಿಷ್ಠಪಕ್ಷ ದಿನಕ್ಕೆ 9 ಗಂಟೆಗಳಷ್ಟು ಆದರೂ ನಿದ್ರೆ ಮಾಡಿಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ.

ಅವರು ನಿದ್ದೆ ಮಾಡಲು ಏನು ಬೇಕೆಂಬುದು ನೀವು ಒಮ್ಮೆತಿಳಿದುಕೊಂಡರೆ, ಅವರನ್ನು ನಿದ್ದೆಗೆ ಜಾರಿಸುವುದು ನಿಮಗೆ ಕಷ್ಟದ ಕೆಲಸವೇ ಆಗುವುದಿಲ್ಲ. ನೀವು ಒತ್ತಾಯಪೂರ್ವಕವಾಗಿ ನಿಮ್ಮ ಮಗುವಿಗೆ ಇಂತದ್ದೇ ಸಮಯಕ್ಕೆ ಮಲಗುವಂತೆ ಅಭ್ಯಾಸ ಮಾಡಿಸಲು ಪರದಾಡಬೇಡಿ. ಎಲ್ಲವೂ ತಾನಾಗಿಯೇ ಸರಿಯಾಗುತ್ತದೆ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon