Link copied!
Sign in / Sign up
2
Shares

ನೀವು ಎಷ್ಟು ಬಾರಿ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುತ್ತೀರಿ ಎಂದು ಇದು ನಿರ್ಧರಿಸುತ್ತದೆ!

ಮದುವೆಯ ಹೊಸತರಲ್ಲಿ ಎಲ್ಲವೂ ಮಾದಕ ಅನಿಸಬಹುದು, ಆದರೆ ಕಾಲಕ್ರಮೇಣ ಬಹುತೇಕ ದಂಪತಿಗಳು ಈ ಭಾವನೆ ಕಳೆದುಕೊಂಡು ತಾವು ಇನ್ನಷ್ಟು ಹೆಚ್ಚು ಸೆಕ್ಸ್ ಅಲ್ಲಿ ತೊಡಗಬೇಕೇ ಎಂದು ಪ್ರಶ್ನಿಸಿಕೊಳ್ಳುತ್ತಾರೆ.


ಈ ಲೈಂಗಿಕ ಆಸಕ್ತಿ ಮತ್ತು ಭಾಗವಹಿಸುವಿಕೆಯು ಬಹುಪಾಲು ನಿಮ್ಮ ವಯಸ್ಸು (ಅಥವಾ ನೀವು ನಿಮ್ಮ ವಯಸ್ಸು ಎಷ್ಟು ಅಂದುಕೊಳ್ಳುವಿರೋ) ಮೇಲೆ ಆಧಾರಿತ ಆಗಿರುತ್ತದೆ ಎಂಬುದು ತಿಳಿದುಬಂದಿದೆ. 2017ರಲ್ಲಿ ಜರ್ನಲ್ ಆಫ್ ಸೆಕ್ಸ್ ರಿಸರ್ಚ್ ಪತ್ರಿಕೆಯಲ್ಲಿ ಪ್ರಕಟಗೊಂಡ ದಿ ಕಿನ್ಸೆ ಇನ್ಸ್ಟಿಟ್ಯೂಟ್ ಅವರ ಅಧ್ಯಯನವು ವಯಸ್ಸು ಸೆಕ್ಸ್ ಅಲ್ಲಿ ನಿಮ್ಮ ಭಾಗವಹಿಸುವಿಕೆ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನ ಪರೀಕ್ಷಿಸಿತು. ಈ ಅಧ್ಯಯನ ನಡೆದದ್ದು ಬರೋಬ್ಬರಿ 10 ವರ್ಷಗಳ ಕಾಲ ಮತ್ತು ಅಧ್ಯಯನದಲ್ಲಿ ಪಾಲ್ಗೊಂಡಿದ್ದವರು 1200 ಮಧ್ಯವಯಸ್ಕರು.


ಈ ಜನರಿಗೆ ಅವರು ಎಷ್ಟು ಬಾರಿ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುತ್ತಾರೆ, ಅದರ ಗುಣಮಟ್ಟ ಮತ್ತು ಸೆಕ್ಸ್ ಅಲ್ಲಿ ಅವರ ಆಸಕ್ತಿ ಎಷ್ಟಿದೆ ಎಂಬ ಪ್ರಶ್ನೆಗಳನ್ನ ಕೇಳಲಾಯಿತು. ಮತ್ತು ಅವರ ವಸ್ತು ನಿಷ್ಠ ವಯಸ್ಸು (ಅಂದರೆ ಅವರ ನಿಜವಾದ ವಯಸ್ಸು ಮತ್ತು ಅವರು ತಮಗೆ ಎಷ್ಟು ವಯಸ್ಸಾಗಿದೆ ಎಂದುಕೊಳ್ಳುವುದರ ನಡುವಿನ ವ್ಯತ್ಯಾಸ) ಕಂಡು ಹಿಡಿಯಲು ಅವರಿಗೆ ಇನ್ನೊಂದು ಪ್ರಶ್ನೆ ಕೇಳಲಾಯಿತು : “ಕೆಲವರು ಅವರ ನಿಜವಾದ ವಯಸ್ಸಿಗಿಂತ ತಾವು ಇನ್ನೂ ಚಿಕ್ಕವರು ಎಂದುಕೊಳ್ಳುತ್ತಾರೆ. ನಿಮಗೆ ನಿಮ್ಮ ವಯಸ್ಸಿನ ಬಗ್ಗೆ ಏನೆನಿಸುತ್ತದೆ? ನಿಮ್ಮ ಲಿಖಿತ ವಯಸ್ಸಿಗಿಂತ ಇನ್ನೂ ಚಿಕ್ಕವರು ಎನಿಸುತ್ತದೋ ಅಥವಾ ದೊಡ್ಡವರು ಅನಿಸುತ್ತದೋ?”


ಈ ಅಧ್ಯಯನದ ಫಲಿತಾಂಶ? ಸೆಕ್ಸ್ ಅಲ್ಲಿ ನಿಮ್ಮ ಭಾಗವಹಿಸುವಿಕೆ ಸಂಪೂರ್ಣವಾಗಿ ನಿಮ್ಮ ಧೋರಣೆ ಮೇಲೆ ಅವಲಂಬಿತವಾಗಿದೆ! ಯಾರೆಲ್ಲಾ ತಮಗೆ ಹೆಚ್ಚು ವಯಸ್ಸಾಗಿದೆ ಎಂದುಕೊಳ್ಳುವರೋ, ಅವರಿಗೆ ಸೆಕ್ಸ್ ಮೇಲೆ ಅಷ್ಟೊಂದು ಆಸಕ್ತಿ ಇರಲಿಲ್ಲ ಮತ್ತು ಅವರ ಪ್ರಕಾರ ಅವರು ಹೊಂದುತ್ತಿದ್ದ ಸೆಕ್ಸ್ ಗುಣಮಟ್ಟ ಕಳಪೆ ಆಗಿತ್ತು.

ಇನ್ನೂ ತರುಣರು ಎಂಬ ಭಾವನೆಯು ನಿಮಗೆ ಮಂಚದಿಂದ ಹೊರಗಡೆಯೂ ತುಂಬಾ ಸಹಕಾರಿ ಆಗುತ್ತದೆ. ತಮ್ಮ ವಯಸ್ಸಿಗಿಂತ ತಮ್ಮನ್ನು ತಾವು ಚಿಕ್ಕವರು ಎಂದುಕೊಳ್ಳುವವರು ಹೆಚ್ಚು ದಿನಗಳ ಕಾಲ ಬದುಕುವರು ಮತ್ತು ಹೆಚ್ಚು ಖುಷಿಯಾಗಿರುವರು ಎಂದು ತಜ್ಞರು ತಿಳಿಸುತ್ತಾರೆ.


ಆದರೆ ಎಷ್ಟು ಬಾರಿ ತೊಡಗಿಸಿಕೊಳ್ಳಬೇಕು ಎಂಬ ಪ್ರಶೆಗೆ ಉತ್ತರ? ಹಿಂದೆ ನಡೆದ ಸಂಶೋಧನೆಗಳಿಂದ ತಿಳಿದು ಬಂದಿದ್ದು ಏನು ಎಂದರೆ - ವಾರದಲ್ಲಿ ಒಮ್ಮೆ ಆದರೂ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಗಳು ಅತಿಹೆಚ್ಚು ಖುಷಿಯಾಗಿರುತ್ತಾರೆ ಎಂಬುದು.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon