Link copied!
Sign in / Sign up
5
Shares

ಜಗತ್ತಿನಾದ್ಯಂತ ದಂಪತಿಗಳು ಸಾಮಾನ್ಯವಾಗಿ ಎಷ್ಟು ಬಾರಿ ಸೆಕ್ಸ್ ಅಲ್ಲಿ ತೊಡಗಿಕೊಳ್ಳುತ್ತಾರೆ

ಇದೊಂದು ಕುತೂಹಲಕಾರಿ ಪ್ರಶ್ನೆಯಾಗಿದ್ದು, ಇದಕ್ಕೆ ಉತ್ತರವು ನಿಮ್ಮನ್ನು ಚಕಿತಗೊಳಿಸಬಹುದು. ಸರಾಸರಿ ಮದುವೆಯಾಗಿರುವ ಜೋಡಿಗಳು ತಮ್ಮನ್ನ ಎಷ್ಟು ವಿರಳವಾಗಿ ಅಥವಾ ಎಷ್ಟು ಸಾಮಾನ್ಯವಾಗಿ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುತ್ತಾರೆ?

ಚಿಕ್ಕದಾಗಿ ಹೇಳಬೇಕೆಂದರೆ ನೀವು ಈ ಪ್ರಶ್ನೆಯನ್ನ ಯಾರಿಗೆ ಕೇಳುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತ ಆಗಿರುತ್ತದೆ.

ಮದುವೆಯಾದ ಜೋಡಿಗಳು ಎಷ್ಟು ಬಾರಿ ಸಂಭೋಗ ನಡೆಸುತ್ತಾರೆ?

ಇದಕ್ಕೆಂದು ಎಷ್ಟೊಂದು ಸಮೀಕ್ಷೆಗಳು ಮತ್ತು ಮತದಾನಗಳು ನಡೆದಿವೆ ಹಾಗು ಅವೆಲ್ಲವೂ ವಿಭಿನ್ನ ಅಂಕಿ ಅಂಶಗಳನ್ನ ಹೊರಹಾಕಿದ್ದಾರೆ.

೧) ನ್ಯೂಸ್ ವೀಕ್  ಮ್ಯಾಗಜಿನ್ ಅವರು ನಡೆಸಿದ ಮತದಾನದಲ್ಲಿ ಅವರಿಗೆ ತಿಳಿದು ಬಂದದ್ದು ಏನೆಂದರೆ ದಂಪತಿಗಳು ಸರಾಸರಿಯಲ್ಲಿ ವರ್ಷಕ್ಕೆ 68.5 ಬಾರಿ ಅಥವಾ ವಾರಕ್ಕೆ ಒಂದಕ್ಕಿಂತ ಸ್ವಲ್ಪ ಹೆಚ್ಚಿನ ಬಾರಿ ಸಂಭೋಗದಲ್ಲಿ ತೊಡಗಿಕೊಳ್ಳುತ್ತಾರೆ ಎಂದು. ಅಲ್ಲದೆ ಮದುವೆ ಆಗದೆ ಇರುವವರಿಗಿಂತ ಮದುವೆ ಆದವರು ವರ್ಷದಲ್ಲಿ ಸುಮಾರು 6.9 ಬಾರಿ ಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ.

೨) ಯೂನಿವರ್ಸಿಟಿ ಆಫ್ ಚಿಕಾಗೊ ನಡೆಸಿದ “ದಿ ಸೋಶಿಯಲ್ ಆರ್ಗನೈಸೇಷನ್ ಆಫ್ ಸೆಕ್ಷುಯಾಲಿಟಿ” ಎಂಬ ಅಧ್ಯಯನದಲ್ಲಿ ತಿಳಿದು ಬಂದಿದ್ದು ಶೇಕಡಾ 32ರಷ್ಟು ಮದುವೆಯಾದ ಜೋಡಿಗಳು ವಾರದಲ್ಲಿ ಎರಡು ಅಥವಾ ಮೂರು ಬಾರಿ ಸಂಭೋಗದಲ್ಲಿ ತೊಡಗಿಕೊಳ್ಳುತ್ತಾರೆ ಎಂದು.

೩) ಇನ್ನೊಂದು ಅಧ್ಯಯನ, ಈ ಬಾರಿ ಸ್ನಾತಕೋತ್ತರ ಪದವೀಧರ ಡೇವಿಡ್ ಸ್ನಾರ್ಕ್ ಅವರು ೨೦೦೦೦ ಜೋಡಿಗಳ ಬಗ್ಗೆ ಮಾಹಿತಿ ಕಲೆಹಾಕಿದ್ದು, ಇದರಿಂದ ತಿಳಿದು ಬಂದಿದ್ದು ಏನು ಅಂದರೆ ಶೇಕಡಾ 26 ರಷ್ಟು ಜೋಡಿಗಳು ಮಾತ್ರ ವಾರಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಸಂಭೋಗದಲ್ಲಿ ತೊಡಗಿಕೊಳ್ಳುತ್ತಾರೆ ಅಷ್ಟೇ.

ಎಷ್ಟು ಅಂದರೆ “ಸಹಜ”?

ಹಾಗಾದರೆ, ಜೋಡಿಗಳು ಎಷ್ಟು ಬಾರಿ ಸೆಕ್ಸ್ ಅಲ್ಲಿ ತೊಡಗಿಕೊಳ್ಳುತ್ತವೆ. ನೀವು ಮೇಲೆ ನೋಡಿದ ಹಾಗೆ, ನಿಖರವಾಗಿ ಇಷ್ಟು ಎಂದು ಹೇಳಲು ಆಗುವುದಿಲ್ಲ. ಈ ಅಂಕಿ ಅಂಶಗಳಲ್ಲಿಯೇ ಎಷ್ಟೊಂದು ಅಭಿಪ್ರಾಯಭೇದ ಇರುವುದನ್ನ ನೋಡಿದರೆ ತಿಳಿಯುತ್ತದೆ ಇಲ್ಲಿ “ಸಹಜ” ಅನ್ನುವುದು ಇಲ್ಲ ಎಂದು. ಬಹಳಷ್ಟು ಅಧ್ಯಯನಗಳು, ಸಮೀಕ್ಷೆಗಳು ಹಾಗು ಚಿಕಿತ್ಸಕರು ಹೇಳುವ ಪ್ರಕಾರ ಇದು ಜೋಡಿಯ ಮೇಲೆ ಅವಲಂಬಿತ ಆಗಿರುತ್ತದೆ ಎಂದೆನ್ನುವರು.

ಪ್ರತಿ ವ್ಯಕ್ತಿಯ ಲೈಂಗಿಕ ಆಸಕ್ತಿ ಬೇರೇ ಆಗಿರುತ್ತದೆ, ಪ್ರತಿಯೊಂದು ದಂಪತಿಯ ನಡುವಿನ ಬಂಧ ಬೇರೇ ಆಗಿರುತ್ತದೆ ಹಾಗು ದೈನಂದಿನ ಜೀವನಗಳು ಬೇರೇ ಆಗಿರುತ್ತವೆ. ಬಹಳಷ್ಟು ಅಂಶಗಳು ಇದರ ಪರಿಣಾಮ ಬೀರುವ ಕಾರಣ, “ಸಹಜ” ಎಷ್ಟು ಎನ್ನುವುದು ತಿಳಿಯುವುದು ತುಂಬಾನೇ ಕಷ್ಟ. ಕೇಳಬೇಕಾಗಿರುವ ಪ್ರಶ್ನೆ ಅಂದರೆ ನಿಮಗೆ ಹಾಗು ನಿಮ್ಮ ಸಂಗಾತಿಗೆ ಎಷ್ಟು ಸೆಕ್ಸ್ ಸಹಜ ಎಂದು?

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon