Link copied!
Sign in / Sign up
8
Shares

ಎರಡನೇ ಬಾರಿ ಗರ್ಭಧರಿಸುವುದು - ಚಿಹ್ನೆ ಮತ್ತು ಗುಣಲಕ್ಷಣಗಳು !

ನೀವು ನಿಮ್ಮ ಮುದ್ದು ಕಂದಮ್ಮನಿಗೆ ತಮ್ಮ ಅಥವಾ ತಂಗಿಯನ್ನು ಪರಿಚಯಿಸುವ ಬಗ್ಗೆ ಯೋಚನೆ ಮಾಡುತ್ತಿರುವಿರಾ? ಅದು ಒಳ್ಳೆಯದೇ, ಹಲವರು ಎರಡನೇ ಮಗುವನ್ನು ಪಡೆಯಲು ಇಚ್ಛಿಸುವರು. ಇದರಿಂದ ನಿಮ್ಮ ಮೊದಲ ಮಗವಿಗು ಜೊತೆಯಾಗಿ ಮತ್ತೊಬ್ಬರು ಉತ್ತಮ ಸ್ನೇಹಿತರು ಸಿಕ್ಕಂತೆ ಆಗುತ್ತದೆ.

ನಿಮ್ಮ ಮೊದಲನೇ ಗರ್ಭಾವಸ್ಥೆಯ ಲಕ್ಷಣಗಳೇ ಈಗಲೂ ಇರುವುದು ಆದರೆ ಸ್ವಲ್ಪ ಬದಲಾವಣೆಯನ್ನು ನೀವು ನಿಮ್ಮ ಎರಡನೇ ಗರ್ಭಾವಸ್ಥೆಯಲ್ಲಿ ಕಾಣುವಿರಿ. ಮೊದಲ ಹೆರಿಗೆ ಸಾಮಾನ್ಯವಾಗಿ ಆಗಿದ್ದರು ಹಲವು ಮಹಿಳೆಯರು ತಮ್ಮ ಎರಡನೇ ಗರ್ಭಾವಸ್ಥೆಯನ್ನು ಕೂಡ ಗೊಂದಲ ಮತ್ತು ಭಯದಲ್ಲಿ ಎದುರಿಸುವರು.

ನಿಮ್ಮ ಮೊದಲನೇ ಗರ್ಭಾವಸ್ಥೆಯಲ್ಲಿ ತೋರಿದ ಗಮನ ಮತ್ತು ಕಾಳಜಿಯನ್ನು ನೀವು ಎರಡನೇ ಗರ್ಭಾವಸ್ಥೆಯಲ್ಲಿ ತೋರಿಸಲು ಕಷ್ಟವಾಗುವುದು, ಈ ಸಮಯದಲ್ಲಿ ನೀವು ನಿಮ್ಮ ಮನೆಯ ಸಾಮಾನ್ಯ ಕೆಲಸಗಳೊಂದಿಗೆ ನಿಮ್ಮ ಮೊದಲನೇ ಮಗುವಿನ ಕೆಲಸವನ್ನು ಮಾಡಬೇಕು. ಇದು ನಿಮ್ಮ ಎರಡನೇ ಗರ್ಭಾವಸ್ಥೆಯಲ್ಲಿ ಕಷ್ಟದ ಸಮಯವನ್ನು ಕಳೆಯುವಂತೆ ಮಾಡುವುದು.

ನಿಮ್ಮ ಮೊದಲನೇ ಗರ್ಭಾವಸ್ಥೆಯ ಅನುಭವ ನಿಮ್ಮ ಎರಡನೇ ಗರ್ಭಾವಸ್ಥೆಯ ಪೂರ್ವ ಸೂಚನೆಯನ್ನು ಬೇಗನೆ ತಿಳಿದುಕೊಳ್ಳಲು ಸಹಾಯ ಮಾಡುವುದು. ನೀವು ಎರಡನೇ ಗರ್ಭಾವಸ್ಥೆಗೆ ಪ್ರಯತ್ನಿಸುತ್ತಿದ್ದರೆ, ನಿಮಗೆ ಸಹಾಯ ಆಗುವ ಕೆಲವು ವಿಷಯಗಳು…

೧.ಸ್ತನ ಮೃದುವಾಗುವುದು

ಗರ್ಭಾವಸ್ಥೆಯ ಸಾಮಾನ್ಯ ಗುಣಲಕ್ಷಣ ಎಂದರೆ, ಅದು ಸ್ತನ ಮೃದುವಾಗುವುದು. ನಿಮ್ಮ ಸ್ತನವು ಈ ಸಮಯದಲ್ಲಿ ಮುಟ್ಟಲು ಮೃದುವಾಗಿರುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ನೋವು ಕೂಡ ಕಾಣಿಸಿಕೊಳ್ಳುತ್ತದೆ. ಜೊತೆಗೆ ನಿಮ್ಮ ಸ್ತನದ ತೊಟ್ಟಿನ ರಂಧ್ರದ ಸುತ್ತ ಇರುವ ಜಾಗವು ಗಾಢ ಬಣ್ಣಕ್ಕೆ ತಿರುಗುತ್ತದೆ.

೨.ಆಯಾಸ ಮತ್ತು ದುರ್ಬಲತೆ

ದುರ್ಬಲತೆ ಮತ್ತು ಆಯಾಸ ನೀವು ಗರ್ಭಾವಸ್ಥೆಯಲ್ಲಿ ಅನುಭವಿಸುವ ಮತ್ತೊಂದು ಗುಣಲಕ್ಷಣ. ಎರಡನೇ ಬಾರಿ ಗರ್ಭಿಣಿ ಆದವರಿಗೆ ಹೆಚ್ಚು ಆಯಾಸ ಆದಂತೆ ಅನುಭವ ಆಗುತ್ತದೆ. ಏಕೆಂದರೆ ಮೊದಲಿನಷ್ಟು ವಿಶ್ರಾಂತಿ ತೆಗೆದುಕೊಳ್ಳಲು ಅವರ ಬಳಿ ಕಡಿಮೆ ಸಮಯ ಇರುತ್ತದೆ. ನಿಮ್ಮ ಪತಿ ಮತ್ತು ಕುಟುಂಬದ ಸಹಾಯ ಪಡೆಯುವುದು ಉತ್ತಮ.

೩.ಬೆಳಗ್ಗಿನ ಕಾಯಿಲೆ

ಗರ್ಭಾವಸ್ಥೆಯಲ್ಲಿ ಸಾಮಾನ್ಯವಾದ ಬೆಳಗ್ಗಿನ ಕಾಯಿಲೆಯನ್ನು ನೀವು ನಿಮ್ಮ ಎರಡನೇ ಗರ್ಭಾವಸ್ಥೆಯಲ್ಲು ಕೂಡ ಕಾಣುವಿರಿ. ಈ ಸಮಯದಲ್ಲಿ ನೀವು ವಾಕರಿಕೆ, ತಲೆಸುತ್ತು, ವಾಂತಿ ಮುಂತಾದ ಲಕ್ಷಣಗಳನ್ನು ಎದುರಿಸುವಿರಿ.

೪.ಮತ್ತಿತರ ಲಕ್ಷಣಗಳು

ಮಹಿಳೆಯು ಸೆಳೆತ, ಬಯಕೆ, ಮಲಬದ್ಧತೆ, ಮುಂತಾದ ಇತರ ಗುಣಲಕ್ಷಣಗಳನ್ನು ಕೂಡ ಅನುಭವಿಸುವಳು. ನಿಮ್ಮ ಮೊದಲನೇ ಗರ್ಭಾವಸ್ಥೆಯಲ್ಲಿ ಅನುಭವಿಸಿದ ಲಕ್ಷಣಗಳನ್ನು ನೀವು ನಿಮ್ಮ ಎರಡನೇ ಗರ್ಭಾವಸ್ಥೆಯಲ್ಲಿ ಅನುಭವಿಸುವಿರಿ.

ಎರಡನೇ ಗರ್ಭಾವಸ್ಥೆಯಲ್ಲಿ ನೀವು ಎದುರಿಸುವ ಲಕ್ಷಣಗಳ ಕೆಲವು ಸೂಚನೆಗಳು

೧.ಹೆಚ್ಚು ಆಯಾಸವಾದಂತೆ ಭಾಸವಾಗುವುದು : ಎರಡನೇ ಸಲ ಗರ್ಭಿಣಿ ಆದವರು ಸಾಮಾನ್ಯವಾಗಿ ಹೆಚ್ಚು ಆಯಾಸವನ್ನು ಅನುಭವಿಸುವರು. ಇದಕ್ಕೆ ಕಾರಣ ಅವರ ಮೊದಲ ಮಗುವಿನ ಹೊರೆಯನ್ನು ಮುಗಿಸುವುದರಲ್ಲಿ ಅವರು ಅರ್ಧ ಸುಸ್ತಾಗಿರುತ್ತಾರೆ.

೨.ನಿಮ್ಮ ಸ್ತನವು ಸೋರುವುದು : ಇದು ಒಳ್ಳೆಯದು ಮತ್ತು ಇದು ನೈಸರ್ಗಿಕ ಚಿಹ್ನೆ, ಆದರೆ ಇದು ಕೆಲವು ಗರ್ಭಾವಸ್ಥೆಯಲ್ಲಿ ಮಾತ್ರ ನೀವು ಅನುಭವಿಸಬಹುದು.

೩.ನಿಮ್ಮ ಹೊಟ್ಟೆ ಬೇಗನೆ ದಪ್ಪವಾಗುವುದು : ನಿಮ್ಮ ಗರ್ಭಕೋಶ ನಿಮ್ಮ ಮೊದಲನೇ ಗರ್ಭಾವಸ್ಥೆಯಲ್ಲಿ ಒಗ್ಗಿಕೊಂಡಿರುವುದರಿಂದ, ನೀವು ಗರ್ಭಧರಿಸಿದ ನಂತರ ಬೇಗನೆ ಭ್ರೂಣದ ಚಲನವಲನವನ್ನು ಅನುಭವಿಸುವಿರಿ.

೪.ನೀವು ಮೊದಲಿಗಿಂತ ಕಡಿಮೆ ತೂಕ ಪಡೆಯುವಿರಿ : ನೀವು ನಿಮ್ಮ ಮೊದಲನೇ ಗರ್ಭಾವಸ್ಥೆಯಲ್ಲಿನಷ್ಟು ಗಮನವನ್ನು ನೀಡದ ಕಾರಣ ಅಷ್ಟು ತೂಕವನ್ನು ಪಡೆಯುವುದಿಲ್ಲ.

ಮೊದಲೆರಡು ವಾರದ ಗರ್ಭಾವಸ್ಥೆಯಲ್ಲಿ ಇವುಗಳನ್ನು ನೀವು ಎದುರಿಸಬಹುದು!

೧.ಸ್ವಲ್ಪ ಆಯಾಸ ಮತ್ತು ನಿದ್ರೆಯನ್ನು ನೀವು ಗಮನಿಸಬಹುದು.

೨.ಮೊದಲ ವಾರದಲ್ಲಿ ಸೆಳೆತವನ್ನು ನೀವು ಗಮನಿಸಬಹುದು.

೩.ಹಸಿವು ಹೆಚ್ಚಾಗಬಹುದು.

೪.ಮೂಳೆಗಳ ಸೆಳೆತ, ಸ್ತನ ಊದಿಕೊಳ್ಳುವುದು ಮತ್ತು ತಲೆನೋವನ್ನು ನೀವು ಕಾಣಬಹುದು.

೫.ಬೆನ್ನಿನ ಕೆಳಭಾಗದಲ್ಲಿ ಸ್ವಲ್ಪ ನೋವು ಕಾಣಿಸಿಕೊಳ್ಳಬಹುದು.

೬.ನಿಮ್ಮ ಹೊಟ್ಟೆಯ ಮೇಲೆ ಮಲಗಲು ಸಾಧ್ಯವಾಗದೆ ಇರುವುದು, ಏಕೆಂದರೆ ನೋವು ಕಾಣಿಸಿಕೊಳ್ಳುತ್ತದೆ.

೭.ಮನಸ್ಥಿತಿ ಬದಲಾಗುತ್ತದೆ.

೮.ಮೊಡವೆ ಮತ್ತು ಗುಳ್ಳೆಗಳನ್ನು ಕಾಣಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon