Link copied!
Sign in / Sign up
28
Shares

ಅಮ್ಮನಾದ ಮೊದಲ ವರ್ಷಕ್ಕಿಂತ, ಎರಡನೇ ವರ್ಷ ಹೆಚ್ಚು ಕಷ್ಟಕರ ಎಂಬುದಕ್ಕೆ 6 ಕಾರಣಗಳು

ತಾಯ್ತನದ ಮೊದಲ ವರ್ಷ ನಿಜಕ್ಕೂ ಕಷ್ಟಕರ. ಮಗುವನ್ನು ಬರಮಾಡಿಕೊಳ್ಳುವುದು ನಿಮ್ಮ ದೇಹಕ್ಕೆ, ಮನಸ್ಸಿಗೆ, ಸಂಬಂಧಗಳಿಗೆ ಮತ್ತು ನಿಮ್ಮ ಹಣಕಾಸಿನ ವ್ಯವಹಾರಕ್ಕೆ ದೊಡ್ಡ ಶಾಕ್ ನೀಡುತ್ತದೆ. ನೀವು ಮಗುವನ್ನು ಬರಮಾಡಿಕೊಳ್ಳಲು ಮತ್ತು ಸಾಕಲು ನೀವು ಎಷ್ಟೇ ತಯಾರಿ ಹೊಂದಿದ್ದರು ಅದು ಸಾಲದು. ಯಾವ ಸಲಹೆ ಇರಲಿ, ಕಥೆ ಇರಲಿ, ದಂತಕಥೆ ಇರಲಿ, ಏನೇ ಇದ್ದರೂ ನೀವು ಸಂಪೂರ್ಣವಾಗಿ ಎಲ್ಲವನ್ನೂ ನಿಭಾಯಿಸುವಂತೆ ತಯಾರಿ ಮಾಡಿಕೊಳ್ಳಲು ಆಗುವುದಿಲ್ಲ.

ನೀವು ಈ ಜೀವನಕ್ಕೆ ಮೆಲ್ಲನೆ ಹೊಂದಿಕೊಳ್ಳಲು ಶುರು ಮಾಡಿಕೊಳ್ಳುತ್ತೀರಾ. ಒಂದು ವರ್ಷದವರೆಗೆ ಕಷ್ಟ ಅನಿಸಬಹುದು, ಆಮೇಲೆ ಅಭ್ಯಾಸ ಆಗಿ ಬಿಡುತ್ತದೆ ಎಂದು ನೀವು ಭಾವಿಸಬಹುದು. ಆದರೆ ವಾಸ್ತವದಲ್ಲಿ, ಎರಡನೇ ವರ್ಷದ ತಾಯ್ತನವೇ ಮೊದಲ ವರ್ಷಕ್ಕಿಂತ ಹೆಚ್ಚು ಕಷ್ಟಕರ. ಇದಕ್ಕೆ ಕಾರಣಗಳು ಏನು ಎಂಬುದನ್ನು ನಾವು ತಿಳಿಸುತ್ತೇವೆ ನೋಡಿ.

೧. ಅವರು ನಡೆಯಲು ಶುರು ಮಾಡುತ್ತಾರೆ

ನಿಮ್ಮ ಮಗುವು ಮೊದಲ ಹೆಜ್ಜೆ ಇಡುವುದನ್ನು ನೋಡಲು ನೀವು ಎಷ್ಟೊಂದು ಕಾತುರದಿಂದ ಕಾಯುತ್ತಿದ್ದಿರಿ ಎಂಬುದು ನೆನಪಿದೆಯೇ? ಅಷ್ಟೇ ಅಲ್ಲದೆ, ನಿಮ್ಮ ಮಗುವನ್ನು ಒಂದು ವರ್ಷದವರೆಗೆ ನಿಮ್ಮ ಕೈಯಲ್ಲೇ ಇಟ್ಟುಕೊಂಡು ತಿರುಗಾಡಿದ ಮೇಲೆ, ನಿಮಗೂ ಸ್ವಲ್ಪ ಬಿಡುವು ಬೇಕು ಅನಿಸಬಹುದು.

ಆದರೆ ಈಗ ಮಗುವು ತನ್ನ ಕಾಲ ಮೇಲೆ ತಾನೇ ನಿಲ್ಲುವುದನ್ನ ಕಲಿತಿರುವ ಕಾರಣ, ಅವರು ನಡೆದುಕೊಂಡು, ಓಡಿಕೊಂಡು, ತೆವಳುಕೊಂಡು ಮನೆಯಲ್ಲಾ ಸುತ್ತುತ್ತಾರೆ. ನಿಮಗೆ ಅವರನ್ನ ಹಿಡಿಯುವುದೇ ಒಂದು ಸಾಹಸದ ಕೆಲಸವಾಗುತ್ತದೆ.


೨. ಅವರು “ಬೇಡ” ಎಂದು ಹೇಳಲು ಕಲಿತಿರುತ್ತಾರೆ

ಅದು ಕಾಕತಾಳೀಯವೇ ಅಥವಾ ಅಲ್ಲವೇ ಎಂಬುದು ಗೊತ್ತಿಲ್ಲ. ಆದರೆ ಬಹುತೇಕ ಬಾರಿ ಮಕ್ಕಳು ಅಪ್ಪ, ಅಮ್ಮ ಎಂಬ ಪದಗಳ ನಂತರ ಕಲಿಯುವುದೇ ಬೇಡ ಎಂಬ ಪದವನ್ನು! ಮೊದಲಲ್ಲಿ ಮಕ್ಕಳು ಕನಿಷ್ಠ ಪಕ್ಷ ತಮ್ಮ ತಲೆಯನ್ನು ಅಲ್ಲಾಡಿಸಿ , “ಇಲ್ಲ, ನನಗೆ ಬೇಡ” ಎಂಬುದನ್ನು ಹೇಳುತ್ತಿದ್ದರು. ಆದರೆ ಈಗ ಅವರು ಅದನ್ನು ತಿಳಿಸಲು ಒಂದು ಪದ ಕಲಿತಿದ್ದಾರೆ, ಅದುವೇ “ಬೇಡ”. ಈ ಪದವು ನಿಮಗೆ ಬಹಳಷ್ಟು ಸಂಕಟ ಉಂಟು ಮಾಡುತ್ತದೆ!


೩. ಊಟ ಮಾಡಲು ತಿರಸ್ಕರಿಸುವವರು

ನಿಮ್ಮ ಮಗುವಿಗೆ ನಿಮ್ಮ ಎದೆಯನ್ನೂ ಅಥವಾ ಹಾಲಿನ ಬಾಟಲಿ ಅನ್ನು ಕೊಟ್ಟು ಸುಮ್ಮನಾಗುವುದು ಎಷ್ಟೊಂದು ಸುಲಭ ಅನಿಸುವುದು ಇವಾಗ. ಎದೆಹಾಲು ಕೊಡುವುದು ಕೂಡ ಯಾವಾಗಲೂ ಸುಲಭ ಇತ್ತು ಎಂದು ಹೇಳಲು ಆಗುವುದಿಲ್ಲವಾದರೂ, “ಅಯ್ಯೋ ದೇವ್ರೇ, ದಯವಿಟ್ಟು ನನ್ನ ಮಗು ಇದನ್ನ ತಿನ್ನೋ ಹಾಗೆ ಮಾಡಪ್ಪಾ” ಎಂದು ಪ್ರತಿಸಲ ಬೇಡಿಕೊಳ್ಳುವುದಕ್ಕಿಂತ ಸುಲಭವಂತೂ ಇತ್ತು.


೪. ಹಠ ಹಿಡಿಯಲು ಶುರು ಮಾಡುವರು

ಮಕ್ಕಳಿಗೆ ಒಂದು ವರ್ಷ ವಯಸ್ಸಾದೊಡನೆ, ಅವರಿಗೆ ಇದಕ್ಕಿದ್ದಂತೆ ಅಭಿಪ್ರಾಯಗಳು ಮೂಡಲು ಶುರು ಆಗುತ್ತವೆ. ಅವರು ಕೆಲವು ವಿಷಯಗಳನ್ನ ಇಷ್ಟಪಡುತ್ತಾರೆ, ಇನ್ನೂ ಕೆಲವನ್ನು ಇಷ್ಟಪಡುವುದಿಲ್ಲ ಮತ್ತು ಇದನ್ನು ಅವರು ಎಲ್ಲರಿಗೂ ತಿಳಿಯುವಂತೆ ಮಾಡುತ್ತಾರೆ. ಅವರಿಗೆ ಯಾವುದಾದರು ಇಷ್ಟವಾಗಲಿಲ್ಲ ಎಂದರೆ, ಅವರು ಸುಮ್ಮನೆ ನೆಲದ ಮೇಲೆ ಕುಳಿತು, ಜೋರಾಗಿ ಅಳುತ್ತಾ, ಕಿರುಚುತ್ತಾ, ದೊಡ್ಡ ಸನ್ನಿವೇಶವನ್ನೇ ಹುಟ್ಟು ಹಾಕುತ್ತಾರೆ. ಇದರೊಂದಿಗೆ, ಅವರು ಸುತ್ತಮುತ್ತಾ ಏನಿದೆ ಎಂದು ಕೂಡ ನೋಡುವುದಿಲ್ಲ, ರಸ್ತೆ ಆದರೂ ಸರಿಯೇ, ಅಂಗಡಿ ಆದರೂ ಸರಿಯೇ, ಅವರು ಹಾಗೆ ನಡೆದುಕೊಳ್ಳುವುದು!


೫. ಜನರು ಒಂದು ರೀತಿಯಲ್ಲಿ ನಿಮಗೆ ಸಹಾಯ ಮಾಡುವುದನ್ನು ನಿಲ್ಲಿಸುತ್ತಾರೆ

ತಾಯ್ತನದ ಮೊದಲ ವರ್ಷದ ನಂತರ, ಜನರು ಒಂದು ರೀತಿಯಲ್ಲಿ ನಿಮಗೆ ಸಹಾಯ ಹಸ್ತ ನೀಡುವುದನ್ನೇ ನಿಲ್ಲಿಸುತ್ತಾರೆ. ನಿಮಗೆ ಹೊಸದಾಗಿ ಮಗುವಾದಾಗ ಎಲ್ಲರೂ ನಿಮ್ಮ ಸಹಾಯಕ್ಕೆ ಬರುವರು, ಆದರೆ ಮಗುವಿಗೆ ಒಂದು ವರ್ಷ ಆಗುವಷ್ಟರಲ್ಲಿ ಅವರ್ಯಾರು ಇರುವುದಿಲ್ಲ. ನೀವು ಈ ಸಮಯಕ್ಕೆ ತಾಯ್ತನಕ್ಕೆ ಹೊಂದಿಕೊಂಡಿರುತ್ತೀರಾ ಎಂದು ಅವರೇ ಅಂದುಕೊಳ್ಳುತ್ತಾರೆ.


೬. ಅವರು ಇನ್ನಮುಂದೆ ಪಾಪು ಅಲ್ಲ

ಮಗುವು ಚಿಕ್ಕದಿದ್ದಾಗ, ನೀವು ಅದನ್ನು ನಿಮ್ಮ ಅಂಗೈಯಲ್ಲೇ ಇಟ್ಟುಕೊಂಡು, ಅವರನ್ನ ಮೂಸುತ್ತಾ, ನಿಮಗೆ ಬೇಕಾದಾಗಲೆಲ್ಲಾ ಅವರಿಗೆ ಮುತ್ತು ಕೊಡುತ್ತಿದ್ದಿರಿ. ಆದರೆ ಇವಾಗ ಅವರು ಕೈಯಿಗೆ ಸಿಗುವುದಿಲ್ಲ. ತಾಯ್ತನದ ಎರಡನೇ ವರ್ಷದ ಮಧ್ಯದಷ್ಟರಲ್ಲಿ ನಿಮ್ಮ ಮಗುವು ನಿಮ್ಮಿಂದ ಅಪ್ಪಿ ಮುದ್ದು ಮಾಡಿಸಿಕೊಳ್ಳುವುದಕ್ಕಿಂತ, ಆಚೆ ಓಡಿ ಹೋಗಿ ಮಣ್ಣು ತಿನ್ನುವುದು ಅಥವಾ ರಸ್ತೆಯಲ್ಲಿನ ಗಾಡಿಗಳಿಗೆ ಅಡ್ಡ ಹೋಗುವುದನ್ನೇ ಹೆಚ್ಚು ಕೇಳುತ್ತಾರೆ ಎಂಬುದನ್ನ ನೀವು ಅರ್ಥೈಸಿಕೊಳ್ಳುತ್ತೀರಾ!

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon