Link copied!
Sign in / Sign up
1
Shares

ಏನಿದು ನೀರಿನಲ್ಲಿ ಜನನ?

ನೀರಿನಲ್ಲಿ ಜನನ ಇತ್ತೀಚಿಗೆ ಹೊಸದಾಗಿ ಭಾರತದಲ್ಲಿ ವಿಕಸನಗೊಳ್ಳುತ್ತಿರುವ ಮತ್ತು ವಿದೇಶಗಳಲ್ಲಿ ವ್ಯಾಪಕವಾಗಿ ಅತಿ ಹೆಚ್ಚು ಆಧ್ಯತೆ ನೀಡುವ ಒಂದು ಮಗುವಿಗೆ ಜನ್ಮ ನೀಡುವ ವಿಧಾನವಾಗಿದೆ. ಪ್ರಸೂತಿಯ ಒಂದು ಭಾಗ, ಅಥವಾ ಮಗುವಿನ ಜನ್ಮ ಅಥವಾ ಎರಡು ಕೂಡ ಬೆಚ್ಚನೆಯ ನೀರಿನ ಕೊಳದೊಳಗೆ ನಡೆಯುವ ಒಂದು ಪ್ರಕ್ರಿಯೆಯಾಗಿದೆ. ಇದನ್ನು ಒದಗಿಸುವ ಆಸ್ಪತ್ರೆಗಳು ಮನೆಯ ವಾತಾವರಣದಂತೆ ಹೆರಿಗೆಯ ಕೋಣೆಯನ್ನು ನಿರ್ಮಿಸಿ ಬೆಚ್ಚನೆಯ ನೀರಿನಲ್ಲಿ ಈ ಪ್ರಕ್ರಿಯೆಯನ್ನು ಮಾಡುತ್ತಾರೆ, ಆದರೆ ಭಾರತದಲ್ಲಿ ಈಗ ಇದನ್ನು ಕೆಲವು ಆಸ್ಪತ್ರೆಗಳು ಮಾತ್ರ ಹೊಂದಿವೆ.

ನೀರಿನ ಜನನದಿಂದ ಆಗುವ ಪ್ರಯೋಜನಗಳು

೧.ಇದು ನಿಮ್ಮ ಸೂಲಗಿತ್ತಿಯ ಕೆಲಸವನ್ನು ಬೇಗ ಮುಗಿಸಲು ಸಹಾಯ ಮಾಡುತ್ತದೆ.

೨.ಇದು ಹೆರಿಗೆ ನೋವನ್ನು ಸರಾಗಗೊಳಿಸುತ್ತದೆ ಮತ್ತು ಅರಿವಳಿಕೆ ನೀಡುವುದನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ.

೩.ತೇಲಾಡುವ ನೀರು ಪ್ರಸೂತಿ ಮತ್ತು ಮಗುವಿನ ಜನ್ಮದ ಸಮಯದಲ್ಲಿ ದೇಹ ಸ್ಥಾನಗಳನ್ನು ಸುಲಭವಾಗಿ ಬದಲಿಸಲು ಸಹಾಯ ಮಾಡುತ್ತದೆ.

೪.ಬೆಚ್ಚಗಿನ ನೀರು ಹೆರಿಗೆ ಸಮಯದಲ್ಲಿ ಮಹಿಳೆಯು ಹಿತಕರವಾಗಿಸಲು ಸಹಾಯ ಮಾಡುತ್ತದೆ ಮತ್ತು ದೇಹವನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ.

೫.ಇದು ಹೆರಿಗೆಯ ಸಮಯದಲ್ಲಿ ತೀವ್ರ ಯೋನಿ ಹರಿದು ಹೋಗುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು.

೬.ನೀರಿನಲ್ಲಿ ಜನ್ಮವು ಗರ್ಭಾಶಯದ ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಇದು ವೇಗದ ಮತ್ತು ಸಮರ್ಥ ಸಂಕೋಚನಗಳಲ್ಲಿ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

೭.ಇದರಿಂದ, ಹೆರಿಗೆ ನಂತರ, ಇದು ಒತ್ತಡ ಸಂಬಂಧಿತ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಇದು ಭಯ ಮತ್ತು ಒತ್ತಡ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನೀರಿನ ಜನ್ಮದಿಂದ ಸಂಭವಿಸಬಹುದಾದ ಅಪಾಯಗಳು

ನೀರಿನಲ್ಲಿ ಜನ್ಮ ನೀಡಿದರೆ ಅಪರೂಪಕ್ಕೆ ಎದುರಾಗುವ ಕೆಲವು ಅಪಾಯಗಳು

೧.ಮಗುವಿಗೆ ಸೋಂಕು ಉಂಟಾಗಬಹುದು

೨.ಮಗುವಿನ ದೇಹದ ತಾಪಮಾನ ತೀರಾ ಕಡಿಮೆ ಅಥವಾ ಅತಿ ಹೆಚ್ಚಾಗಬಹುದು

೩.ನೀರಿನಲ್ಲಿ ಮಗುವಿಗೆ ಉಸಿರಾಡಲು ತೊಂದರೆಯಾಗಬಹುದು ಅಥವಾ ಸ್ನಾನದ ನೀರಿನಲ್ಲಿ ಉಸಿರಾಡಬೇಕಾಗಬಹುದು.

ಈ ಅಪಾಯಗಳನ್ನು ತಪ್ಪಿಸಿಕೊಳ್ಳಲು ಮೊದಲು ಸೂಲಗಿತ್ತಿಯ ಕೆಲಸ ಮುಗಿಸಿ ನಂತರ ನೀರಿನಲ್ಲಿ ಜನ್ಮ ನೀಡಿ. ಅಥವಾ ನಿಮ್ಮ ಯೋನಿಯು ನೀರಿನಲ್ಲಿ ಸಂಪೂರ್ಣ ಮುಳುಗುವವರೆಗೆ ಕೂತು ಮಗು ಜನಿಸುವ ಸಮಯದಲ್ಲಿ ಆಸ್ಪತ್ರೆಯ ಬೆಡ್(ಹಾಸಿಗೆ) ಅನ್ನು ಬಳಸಿಕೊಳ್ಳಿ.

ಯಾರು ನೀರಿನ ಜನ್ಮವನ್ನು ತಪ್ಪಿಸಬೇಕು?

ಇದನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ನೀವು ನಿಮ್ಮ ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ನಿಮ್ಮ ಆರೋಗ್ಯ ಮತ್ತು ಗರ್ಭಧಾರಣೆಯ ಆಧಾರದ ಮೇಲೆ ಈ ಪ್ರಕ್ರಿಯೆಯಲ್ಲಿ ತೊಡಗಿರುವ ಪ್ರಯೋಜನಗಳನ್ನು ಮತ್ತು ತೊಡಕುಗಳನ್ನು ಅರ್ಥಮಾಡಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.

ಕೆಳಗಿನ ಸ್ಥಿತಿಯನ್ನು ಹೊಂದಿರುವ ಮಹಿಳೆಯರು ನೀರಿನ ಜನ್ಮವನ್ನು ತಪ್ಪಿಸಬೇಕು

೧.ಗರ್ಭವಾಸ್ಥೆಯಲ್ಲಿ ಮಧುಮೇಹ, ಪ್ರಿಕ್ಲಾಂಪ್ಸಿಯ, ಸೋಂಕು, ಅವಳಿ ಅಥವಾ ಹೆಚ್ಚು ಮಗುವನ್ನು ಉದರದೊಳಗೆ ಹೊಂದಿರುವವರು.

೨.ಗರ್ಭಿಣಿಯು ೧೭ವರ್ಷಕ್ಕಿಂತ ಕಡಿಮೆ ಅಥವಾ ೩೫ ವರ್ಷಕ್ಕಿಂತ ಹೆಚ್ಚು ವಯಸ್ಸಿನವರಾಗಿದ್ದರೆ.

೩.ಮಗುವು ದೊಡ್ಡ ಗಾತ್ರವನ್ನು ಅಥವಾ ಬ್ರೀಚ್ ಮಗುವಾಗಿದ್ದರೆ.

೪.ಮಗುವು ಸರಿಯಾಗಿ ಬೆಳವಣಿಗೆ ಆಗಿರದಿದ್ದರೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon