Link copied!
Sign in / Sign up
9
Shares

ಸೆಕ್ಸ್ ಬಗ್ಗೆ ಏನೆಲ್ಲಾ ಅಧ್ಯಯನಗಳು ನಡೆದಿವೆ ಗೊತ್ತ? ಅವುಗಳಿಂದ ತಿಳಿದು ಬಂದ ವಿಚಿತ್ರ ಸಂಗತಿಗಳು ಇಲ್ಲಿವೆ ಓದಿ!

ಸೆಕ್ಸ್ ಅನ್ನುವುದು ಒಳ್ಳೆಯ ಅನುಭವ ನೀಡುತ್ತದೆ ಮತ್ತು ನಿಮಗೆ ಒಳ್ಳೆಯದು ಕೂಡ. ಆದರೆ ಸಂಶೋಧಕರು ನಿಮಗೆ ಇದರ ಬಗ್ಗೆ ತಿಳಿದಿರದ ಕೆಲವು ಅಪರೂಪದ ಸಂಗತಿಗಳನ್ನ ಕಂಡುಹಿಡಿದ್ದಾರೆ - ಉದಾಹರಣೆಗೆ ದುಡ್ಡು ಹೇಗೆ ಅನ್ಯೋನ್ಯತೆಯನ್ನು ನಿಯಂತ್ರಿಸುತ್ತದೆ - ಈ ಕ್ರಿಯೆಯು ಎಷ್ಟು ಕ್ಯಾಲೋರಿಗಳನ್ನ ಸುಡುತ್ತದೆ ಹಾಗು ಇಂತಹ ಅನೇಕ ಸಂಗತಿಗಳು. ತಿಳಿದುಕೊಳ್ಳುವುದರಲ್ಲಿ ತಪ್ಪೇನಿಲ್ಲ ಅಲ್ಲವಾ? ಇದರ ಬಗ್ಗೆ ಜಾಸ್ತಿ ತಿಳಿದುಕೊಂಡಷ್ಟು ನಿಮ್ಮ ಅನುಭವ ಮತ್ತಷ್ಟು ಹಿತಕರ ಮಾಡಿಕೊಳ್ಳಬಹುದು.

೧. ಜಾಸ್ತಿ ಲೈಂಗಿಕ ಆಸಕ್ತಿ ಹೊಂದಿರುವ ಹುಡುಗಿಯು, ತನ್ನ ಸಂಗಾತಿಯು ಹೇಗಿರಬೇಕು ಎಂಬುದರ ಬಗ್ಗೆ ಹೆಚ್ಚಿನ ಅಪೇಕ್ಷೆಗಳನ್ನ ಹೊಂದಿರುತ್ತಾಳೆ

ನೀವು ಲೈಂಗಿಕ ಆಸಕ್ತಿ ಜಾಸ್ತಿ ಇರುವ ವ್ಯಕ್ತಿಗಳು ಎಷ್ಟು ಬೇಗ ಆಗುತ್ತದೋ ಅಷ್ಟು ಬೇಗ ಮದುವೆಯಾಗಿ ಆ ಕಾರ್ಯದಲ್ಲಿ ತೊಡಗಿಕೊಳ್ಳಲು ಯೋಚಿಸುವರು ಎಂದುಕೊಳ್ಳುವಿರಿ. ಗಂಡಸರ ವಿಷಯದಲ್ಲಿ ಇದು ಅಕ್ಷರಸಹ ಸತ್ಯ. ಆದರೆ ಹೆಂಗಸರ ವಿಷಯದಲ್ಲಿ ಇದು ಸುಳ್ಳು. 2013 ರಲ್ಲಿ “ಜರ್ನಲ್ ಆಫ್ ರಿಸರ್ಚ್ ಇನ್ ಪರ್ಸನಾಲಿಟಿ” ನಡೆಸಿದ ಅಧ್ಯಯನದಲ್ಲಿ ಒಂದು ಹೆಂಗಸಿನ ಲೈಂಗಿಕ ಆಸಕ್ತಿ ಹೆಚ್ಚು ಇದ್ದಷ್ಟು ಆಕೆ ಹೆಚ್ಚೆಚ್ಚು ಅಪೇಕ್ಷೆಗಳನ್ನ ಹೊಂದಿರುತ್ತಾಳೆ ಹಾಗು ಆಕೆಯು ದೈಹಿಕವಾಗಿ ಅತ್ಯುತ್ತಮವಾದ ವ್ಯಕ್ತಿಯನ್ನೇ ಆರಿಸಲು ಹುಡುಕುವಳು ಎಂಬುದು ತಿಳಿದು ಬಂದಿತು.

೨. ತಮಗಿಂತ ಹೆಚ್ಚು ದುಡ್ಡು ದುಡಿಯುವ ಹೆಂಡತಿಯರ ಗಂಡಂದಿರಲ್ಲಿ ನಿಮಿರುವಿಕೆಯ ಅಪಸಾಮಾನ್ಯ(erectile dysfunction) ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ

ಜಾಸ್ತಿ ದುಡ್ಡು ಎಂದರೆ ಜಾಸ್ತಿ ತೊಂದರೆಗಳು? “ಪರ್ಸನಾಲಿಟಿ ಅಂಡ್ ಸೋಶಿಯಲ್ ಸೈಕಾಲಜಿ ಬುಲೆಟಿನ್” ಎಂಬ ಪತ್ರಿಕೆ 2013 ರಲ್ಲಿ  ನಡೆಸಿದ ಅಧ್ಯಯನದಲ್ಲಿ ೨ ಲಕ್ಷ ಜೋಡಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಯಿತು. ಇದರಲ್ಲಿ ತಿಳಿದು ಬಂದಿದ್ದು ಏನು ಎಂದರೆ ಯಾವ ಜೋಡಿಗಳಲ್ಲಿ ಹೆಂಡತಿ ಗಂಡನಿಗಿಂತ ಜಾಸ್ತಿ ದುಡಿಯುತ್ತಿದ್ದಳೋ ಅವುಗಳಲ್ಲಿನ ಗಂಡಸರಿಗೆ ನಿಮಿರುವಿಕೆಯ ಅಪಸಾಮಾನ್ಯ ಇರುವು ಸಾಧ್ಯತೆಗಳು ಹೆಚ್ಚಿದ್ದವು. ಇದಕ್ಕೆ ಕಾರಣ ಹೆಂಡತಿಯು ತನ್ನ ಕೆಲಸದ ಸ್ಥಳದಲ್ಲಿ ಅನುಭವಿಸುವ ಒತ್ತಡ ಕೂಡ ಆಗಿರಬಹುದು. ಆದರೆ ಇದಕ್ಕೆ ಮುಖ್ಯ ಕಾರಣ ಎಂದರೆ ಅದು ಹಿಂದಿನ ಕಾಲದಿಂದಲೂ ಇರುವ ಸಾಮಾಜಿಕ ಕಟ್ಟುಪಾಡಿಗೆ ವಿರುದ್ಧವಾಗಿ ಜೀವನ ಸಾಗಿಸುವುದರಿಂದ ಇಬ್ಬರ ದೈಹಿಕ ಹಾಗು ಮಾನಸಿಕ ಆರೋಗ್ಯದ ಮೇಲೆ ಆಗುವ ಪರಿಣಾಮಗಳು.

೩. ಸೆಕ್ಸ್ ಮತ್ತು ಮದ್ಯಪಾನ, ಜನರಿಗೆ ಮಕ್ಕಳು ಮಾಡುವುದಕ್ಕಿಂತ ಹೆಚ್ಚು ಸಂತೋಷ ನೀಡುತ್ತದೆ

ನ್ಯೂಜಿಲ್ಯಾಂಡ್ ದೇಶದ ಯೂನಿವರ್ಸಿಟಿ ಆಫ್ ಕ್ಯಾಂಟಬುರಿ ಅಲ್ಲಿ ನಡೆಸಿದ 6000 ಅಭ್ಯರ್ಥಿಗಳನ್ನ ಒಳಗೊಂಡಿದ್ದ ಅಧ್ಯಯನದಲ್ಲಿ ಆ ಅಭ್ಯರ್ಥಿಗಳಿಗೆ 30 ಸುಖಕರ, 30 ಅರ್ಥಪೂರ್ಣ ಹಾಗು 30 ಆಕರ್ಷಕ ಕಾರ್ಯಗಳ ಪಟ್ಟಿ ಮಾಡಿ ಎಂದು ಹೇಳಲಾಯಿತು. ಆಗ ಅವರು ನೀಡಿದ ಪಟ್ಟಿಗಳ ಸಮಗ್ರ ಫಲಿತಾಂಶ ಏನು ಎಂದರೆ, ಆ ಮೂರು ಪಟ್ಟಿಗಳಲ್ಲಿ ಟಾಪ್ ಬಂದಿದ್ದು ಸೆಕ್ಸ್. ಮದ್ಯಪಾನ ಎರಡನೇ ಸ್ಥಾನದಲ್ಲಿ ಇದ್ದರೆ, ಮಕ್ಕಳು ಮಾಡಿಕೊಳ್ಳುವುದು ಐದನೇ ಸ್ಥಾನದಲ್ಲಿ ಇತ್ತು.

೪. ಮನೆಗೆಲಸದಲ್ಲಿ ಜಾಸ್ತಿ ತೊಡಗಿಸಿಕೊಳ್ಳುವ ಗಂಡಸರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಕಡಿಮೆ

ಹೌದು, ಮನೆಗೆಲಸದಲ್ಲಿ ಹೆಂಡತಿಗೆ ಸಹಾಯ ಮಾಡುವ ಗಂಡಂದಿರಿಗೆ, ಏನು ಮನೆಗೆಲಸ ಮಾಡದ ಗಂಡಸರಿಗಿಂತ ಕಡಿಮೆ ಸೆಕ್ಸ್ ಲಭಿಸುತ್ತದೆ. “ಅಮೆರಿಕನ್ ಸೋಷಿಯೋಲೋಜಿಕಲ್ ಸೊಸೈಟಿ” ಅವರು ೪೫೦೦ ದಂಪತಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದ್ದು ಏನು ಎಂದರೆ ಅದು ಮನೆಗೆಲಸ ಮಾಡುವ ಹೆಚ್ಚಿನ ಗಂಡಸರು, ಮನೆಗೆಲಸಗಳಲ್ಲಿ ಭಾಗಿ ಆಗದ ಗಂಡಸರಿಗಿಂತ ಕಡಿಮೆ ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವವರು ಎಂದು.

೫. ಒಟ್ಟಿಗೆ ಪ್ರಯಾಣ ಮಾಡುವ ದಂಪತಿಗಳು ಹೆಚ್ಚಿನ ಲೈಂಗಿಕ ತೃಪ್ತಿ ಹೊಂದಿರುತ್ತಾರೆ

ಯು.ಎಸ್ ಟ್ರಾವೆಲ್ ಅಸೋಸಿಯೇಷನ್ ಅವರು ಫೆಬ್ರವರಿ 2013 ರಲ್ಲಿ ನಡೆಸಿದ ಅಧ್ಯಯನದಲ್ಲಿ ವರ್ಷಕ್ಕೆ ಒಂದು ಬಾರಿ ಆದರೂ ಪ್ರವಾಸಕ್ಕೆ ತೆರಳುವ ದಂಪತಿಗಳು ಇತರರಿಗಿಂತ ಹೆಚ್ಚಿನ ಲೈಂಗಿಕ ತೃಪ್ತಿ ಹೊಂದಿರುತ್ತಾರೆ ಎಂದು ತಿಳಿದು ಬಂದಿದೆ. 1100 ವಯಸ್ಕರರನ್ನು ಒಳಗೊಂಡಿದ್ದ ಈ ಅಧ್ಯಯನದಲ್ಲಿ ಜೋಡಿಯಾಗಿ ಪ್ರವಾಸ ತೆರಳುವ 77% ದಂಪತಿಗಳು ತಮ್ಮ ಲೈಂಗಿಕ ಜೀವನದ ಬಗ್ಗೆ ಸಂಪೂರ್ಣ ತೃಪ್ತಿ ಇದೆ ಎಂದು ಹೇಳಿದರೆ, ಪ್ರವಾಸಕ್ಕೆ ತೆರಳದ ದಂಪತಿಗಳಲ್ಲಿ ಕೇವಲ 66% ಜನರು ತಮ್ಮ ಲೈಂಗಿಕ ಜೀವನ ತೃಪ್ತಿ ನೀಡಿದೆ ಎನ್ನುತ್ತಾರೆ.

೬. ಸೆಕ್ಸ್ ತಲೆನೋವನ್ನು ಕಡಿಮೆ ಮಾಡುತ್ತದೆ

ನೀವು ನಿಮ್ಮ ಪತಿಯ ಬಳಿ ಇವತ್ತು ಬೇಡ ನನಗೆ ತಲೆನೋವಿದೆ ಎಂದು ಹೇಳಿ ಜಾರಿಕೊಂಡರೆ, ನೀವು ಒಂದು ಒಳ್ಳೆಯ ಟ್ರೀಟ್ಮೆಂಟ್ ಇಂದ ವಂಚಿತರಾಗುತ್ತೀರ! “ಸೆಫಾಲಜಿಯ” ನಡೆಸಿದ 800 ತಲೆನೋವು ಬೇನೆ ಅನುಭವಿಸುತ್ತಿರುವವರು ಮತ್ತು 200 ಮೈಗ್ರೇನ್ ಇಂದ ಬಳಲುತ್ತಿರುವವರನ್ನು ಒಳಗೊಂಡ ಒಂದು ಅಧ್ಯಯನ ನಡೆಸಿತು. ಮೈಗ್ರೇನ್ ಶುರು ಆಗುತ್ತಿದ್ದಂತೆ ಲೈಂಗಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವವರಲ್ಲಿ 60% ಅಷ್ಟು ಮೈಗ್ರೇನ್ ಲಕ್ಷಣಗಳು ಮಾಯವಾದವು ಮತ್ತು ಪದೇ ಪದೇ ತಲೆನೋವು ಉಂಟಾಗುತ್ತಿದ್ದವರು ತಲೆನೋವಿನ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ಅವರಲ್ಲಿ 37% ಅಷ್ಟು ತಲೆನೋವಿನ ಲಕ್ಷಣಗಳು ಕಡಿಮೆ ಆದವು.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon