ಈಗ ಎಲ್ಲೆಡೆ ಹಬ್ಬುತ್ತಿರುವ ಶೀತ ,ನೆಗಡಿ ಮತ್ತು ಜ್ವರವನ್ನು ನೈಸರ್ಗಿಕವಾಗಿ ಶಮನಗೊಳಿಸಲು ಬೆಳ್ಳುಳ್ಳಿ ಸೂಪ್!
ಬೆಳ್ಳುಳ್ಳಿ, ಪ್ರತಿರಕ್ಷಣಾ-ಉತ್ತೇಜಿಸುವ ಘಟಕಾಂಶವಾಗಿದ್ದು , ಭಾರತದಲ್ಲಿ ಪ್ರತಿ ಅಡಿಗೆ ಮನೆಯಲ್ಲಿ ಕಂಡುಬರುತ್ತದೆ. ಬೆಳ್ಳುಳ್ಳಿ ತಿನ್ನುವುದು ಶೀತ ಮತ್ತು ಜ್ವರ ಸೋಂಕುಗಳ ವಿರುದ್ಧ ಮಾತ್ರ ಹೋರಾಡುವುದಿಲ್ಲ, ಅಂತಹ ಸೋಂಕುಗಳು ವ್ಯಕ್ತಿಯನ್ನು ಮತ್ತೊಮ್ಮೆ ಬಾಧಿಸದಂತೆ ತಡೆಯಬಹುದು.
ಸಾಮಾನ್ಯವಾಗಿ, ನಾವು ರೋಗಿಗಳಾಗಿದ್ದಾಗ, ನಮ್ಮ ಸಾಮಾನ್ಯ ಊಟವನ್ನು ತಿನ್ನಲು ನಮಗೆ ಸಾಧ್ಯವಾಗುವುದಿಲ್ಲ. ದೇಹದಲ್ಲಿ ಸಾಕಷ್ಟು ಅಸ್ವಸ್ಥತೆ ಮತ್ತು ನೋವು ಇರುತ್ತದೆ. ಆಗ ಬೆಳ್ಳುಳ್ಳಿ ಸಹಾಯ ಮಾಡುತ್ತದೆ! ಬೆಳ್ಳುಳ್ಳಿ ಎಲ್ಲಾ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸೋಂಕಿನ ವಿರುದ್ಧ ಒಳಗೆ ಮತ್ತು ಹೊರಗೆ ಹೋರಾಡುತ್ತದೆ ಆದ್ದರಿಂದ ಬೆಳ್ಳುಳ್ಳಿ ಸೂಪ್ ಕುಡಿಯುವುದನ್ನು ನಾವು ಶಿಫಾರಸು ಮಾಡುತ್ತೇವೆ . ನೀವು ಅದನ್ನು ಹೇಗೆ ತಯಾರಿಸಬಹುದು ಎಂಬುವುದು ಇಲ್ಲಿದೆ.
ಬೆಳ್ಳುಳ್ಳಿಯನ್ನು ಜಜ್ಜಿ ಮತ್ತು ಬದಿಗಿಡಿ
ಅದೇ ಸಮಯದಲ್ಲಿ ತರಕಾರಿ ಸಾರು(ಬ್ರೋತ್) ಮಾಡಿ
ನೀವು ತರಕಾರಿಗಳು ಅಥವಾ ಚಿಕನ್ ನ ನಡುವೆ ಆಯ್ಕೆ ಮಾಡಬಹುದು. ಅಡಿಗೆ ತಯಾರಿಕೆಯು ತುಂಬಾ ಸುಲಭ. ನೀವು ಕೇವಲ ೧೫ ರಿಂದ ೨೦ ನಿಮಿಷಗಳ ಕಾಲ ಕಡಿಮೆ ಜ್ವಾಲೆಯೊಂದಿಗೆ ನೀರಿನಲ್ಲಿ ತರಕಾರಿಗಳನ್ನು ಕುದಿಸಿಕೊಳ್ಳಬೇಕು. ಕ್ಯಾರೆಟ್, ಪಾಲಕ, ಈರುಳ್ಳಿಗಳು, ಮತ್ತು ಕೆಲವು ಆಲೂಗಡ್ಡೆಗಳನ್ನು ಆರಿಸಿ. ರುಚಿಗೆ ಸ್ವಲ್ಪ ಉಪ್ಪು ಸೇರಿಸಿ.
ಈ ಸಾರಿಗೆ ಜಜ್ಜಿದ ಬೆಳ್ಳುಳ್ಳಿ ಸೇರಿಸಿ. ಚೆನ್ನಾಗಿ ಬೆರೆಸಿ ಬೆಚ್ಚಗಿರುವಾಗ ಸೇವಿಸಿ. ಬೆಳ್ಳುಳ್ಳಿಯ ಚಿಕಿತ್ಸಕ ಗುಣಗಳು ನಿಮ್ಮನ್ನು ತಕ್ಷಣವೇ ಶಮನಗೊಳಿಸುತ್ತದೆ.
