Link copied!
Sign in / Sign up
15
Shares

ಎಲೆಕ್ಟ್ರಾನಿಕ್ ಉಪಕರಣಗಳಿಂದ ಮಕ್ಕಳನ್ನು ದೂರವಿರಿಸಲಿರುವ 5 ಸರಳ ಮಾರ್ಗಗಳು

ಆಧುನಿಕ ಯುಗದ ವಿಪರ್ಯಾಸವೆಂದರೆ, ಭಿಕ್ಷುಕರಲ್ಲಿ ಕೂಡ ಸ್ಮಾರ್ಟ್ ಫೋನ್ ಗಳು ಕಾಣಸಿಗುತ್ತವೆ. ಹಿರಿಯರನ್ನು ಬಿಡಿ; ಈಗ ಏಳು ವರ್ಷದ ಮಕ್ಕಳಲ್ಲೂ ಐ-ಫೋನುಗಳು ಕಾಣಸಿಗುತ್ತವೆ. ಮಕ್ಕಳ ಕೈಗೆ ಮೊಬೈಲುಗಳನ್ನು ನೀಡುವುದರಲ್ಲೇನೂ ತಪ್ಪಿಲ್ಲ. ಆದರೆ, ಯಾವುದು ಎಲ್ಲೆ ಮೀರಬಾರದು !! ಎಷ್ಟು ಸಮಯಗಳವರೆಗೆ ಮಗುವು ಮೊಬೈಲನ್ನು ನೋಡಬಹುದು...?ಅದು ಒಳ್ಳೆಯದೇ...?ಮಕ್ಕಳು ಕಡಿಮೆ ಸಮಯಗಳ ವರೆಗೆ ಮಾತ್ರ ಮೊಬೈಲ್ ಅಥವಾ ಇತರ ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಆಡುವಂತೆ ಹೇಗೆ ಅವರ ಮನವೊಲಿಸಬಹುದು...? ಇಂತಹ ಎಲ್ಲಾ ಗೊಂದಲಗಳಿಂದ ಪಾರಾಗಲು ನಿಮಗೆ ಕೆಲವು ಸಲಹೆಗಳನ್ನು ಕೆಳಗೆ ನೀಡಲಾಗಿದೆ.

ಹೊರಾಂಗಣ ಕ್ರೀಡೆ

ಮಕ್ಕಳೊಂದಿಗೆ ಯಾವುದಾದರೂ ಆಟಗಳಲ್ಲಿ ಪಾಲ್ಗೊಳ್ಳಿ. ಚಿಕ್ಕಮಕ್ಕಳಾದರೆ, ಅವರನ್ನು ಪಾರ್ಕುಗಳಿಗೆ ಕರೆದೊಯ್ದು ಗಾಳಿಪಟವನ್ನು ಹೇಗೆ ಹಾರಾಡಿಸುವುದೆಂದು ಕಲಿಸಿರಿ. ಮಕ್ಕಳನ್ನು ಚಟುವಟಿಕೆಯಿಂದಿರುವಂತೆ ಕಣ್ಣಾಮುಚ್ಚಾಲೆ, ತ್ರೋಬಾಲ್ ಗಳಂತಹ ಆಟಗಳನ್ನು ಆಡಿಸಿ. ಹಿರಿಯ ಮಕ್ಕಳಾದರೆ ಬಾಸ್ಕೆಟ್ ಬಾಲ್ ,ಟೆನ್ನಿಸ್, ಕ್ರಿಕೆಟ್ ಅಥವಾ ಫುಟ್ಬಾಲ್ ಗಳಂತಹ ಅವರ ಅಚ್ಚುಮೆಚ್ಚಿನ ಆಟಗಳನ್ನಾಡಲು ಪ್ರೋತ್ಸಾಹಿಸಿರಿ ಅಥವಾ ತಜ್ಞರ ಪರಿಶೀಲನೆ ನೀಡಿರಿ. ಆಟೋಟಗಳು ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಮಾತ್ರವಲ್ಲ ಒಗ್ಗಟ್ಟು,ಶಿಸ್ತು ಮತ್ತು ಸಮಯಪ್ರಜ್ಞೆಗಳ ಮಹತ್ವದ ಬಗ್ಗೆ ಕೂಡ ತಿಳಿಸುತ್ತದೆ.

ಟಿವಿ ನೋಡುವ ಸಮಯವನ್ನು ಮಿತಿಗೊಳಿಸಿ

ಟಿವಿ ನೋಡುವುದನ್ನು ಸಂಪೂರ್ಣವಾಗಿ ನಿಷೇಧಿಸುವುದರಿಂದ, ಬಯಸಿದ ಯಾವುದೇ ಪ್ರಯೋಜನ ಸಿಗಲಾರದು.ಬದಲಿಗೆ ರೊಚ್ಚಿಗೇಳುವ ಮಕ್ಕಳು ಪ್ರತಿಕ್ರಿಯಿಸಲು ತೊಡಗುವರು. ಇದರ ಪರ್ಯಾಯವಾಗಿ ಮಕ್ಕಳು ಎಷ್ಟು ಗಂಟೆಗಳ ಕಾಲ ಯಾವೆಲ್ಲಾ ಕಾರ್ಯಕ್ರಮಗಳನ್ನು ನೋಡಬಹುದೆಂದು ಪಟ್ಟಿ ಮಾಡಿ. ಒಂದರಿಂದ ಆರು ವರ್ಷದವರೆಗಿನ ಮಕ್ಕಳಿಗೆ ಟಿವಿ ನೋಡಲು ಅನುಮತಿಸದಿದ್ದರೂ ತೊಂದರೆ ಇಲ್ಲ. ಎರಡು ವರ್ಷಗಳಾಗುವಷ್ಟರಲ್ಲಿ ಕಂಪ್ಯೂಟರಿನಲ್ಲಿಯ ಆಟದ ಸಮಯವನ್ನೂ ಒಳಪಡಿಸಿ ಕೇವಲ ಮೂವತ್ತು ಮಿನುಟುಗಳ ಕಾಲ ಟಿವಿ ನೋಡಲು ಅನುಮತಿಸಬಹುದು. ಟಿವಿ ಕಾರ್ಯಕ್ರಮಗಳನ್ನು ತೋರಿಸುವುದರ ಮೂಲಕ ಏನನ್ನಾದರೂ ಕಲಿಸಿಕೊಡಬೇಕು ಎನ್ನುವುದು ನಿಮ್ಮ ಉದ್ದೇಶವಾಗಿದ್ದರೆ, ಅದೇ ಆಶಯವನ್ನು ಅವರಿಗೆ ವಿಚಾರ ವಿನಿಮಯ ಅಥವಾ ಚರ್ಚೆಗಳ ಮೂಲಕ, ಚಿತ್ರಗಳನ್ನು ತೋರಿಸುವುದರಿಂದ ಅಥವಾ ಕಲಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದರಿಂದ,ಆಟಿಕೆಗಳಿಂದ ಅಥವಾ ಪಜಲುಗಳ ಬಳಕೆಯಿಂದಲೂ ಈ ಉದ್ದೇಶವನ್ನು ಈಡೆರಿಸಬಹುದು.

ಆಟವಾಡುವ ಸಮಯವನ್ನು ಉಲ್ಲಾಸಮಯವಾಗಿಸಿ

ಮಕ್ಕಳ ಆಸಕ್ತಿಯನ್ನು ಹೆಚ್ಚಿಸುವಂತಹ ಆಟಗಳಲ್ಲೇರ್ಪಡುವುದರಿಂದ, ಅವರು ಟಿವಿ ಅಥವಾ ವಿಡಿಯೋ ಗೇಮ್ಗಳಲ್ಲಿ ಮುಳುಗಿ ಸಮಯ ಕಳೆಯುವುದನ್ನು ತಪ್ಪಿಸಬಹುದು ಎಂದರೆ ಮಕ್ಕಳೊಂದಿಗೆ ಆಟವಾಡಲು ನೀವೂ ಅವರೊಂದಿಗೆ ಕಳೆಯಬೇಕೆಂದು ಮಕ್ಕಳ ಮೆದುಳಿಗೆ ಮೇವು ನೀಡುವಂತಹ ಆಟಗಳನ್ನು ಆಡಿಸಬಹುದು. ಮಾತ್ರವಲ್ಲದೆ ಮಕ್ಕಳನ್ನು ಅಡುಗೆ ಮನೆಗೆ ಕರೆದುಕೊಂಡು, ನಿಮಗಾಗಿ ಚಪಾತಿ ಹಣೆಯುವಂತೆ, ಕುಕೀಸ್ ಬಾಲ್ಗಳನ್ನು ಮಾಡುವಂತೆ ಅಥವಾ ಅಲಸಂದೆ ಕಾಳುಗಳನ್ನು ಬಿಡಿಸುವಂತಹ ಮೋಜಿನ ಕೆಲಸಗಳನ್ನು ಮಕ್ಕಳಿಗೆ ನೀಡಬಹುದು.

ಮಕ್ಕಳಿಗಾಗಿ ಸಮಯ ಮೀಸಲಾಗಿಡಿ

ಕೆಲವೊಮ್ಮೆ ಪಾಲಕರಾಗಿ ನೀವು ನಿಭಾಯಿಸಬೇಕಾದ ಜವಾಬ್ದಾರಿಯನ್ನು ನಿರ್ವಹಿಸುವುದರಿಂದ ಮಾತ್ರ ಮಕ್ಕಳ ಟಿವಿ ನೋಡುವ ಹವ್ಯಾಸವನ್ನು ಕಡಿಮೆಗೊಳಿಸಬಹುದು. ಮಕ್ಕಳೊಂದಿಗೆ ಮಾತನಾಡಲೆಂದು ಸ್ವಲ್ಪ ಸಮಯ ಮೀಸಲಾಗಿಡಿ. ಅವರ ದಿನದ ಅನುಭವಗಳ ಬಗ್ಗೆ, ಶಾಲಾ ಕಾಲೇಜು ವಿದ್ಯಾಭ್ಯಾಸದ ಬಗ್ಗೆ, ಅವರಿಗೆ ಕಣ್ಣೀರು ತರಿಸುವ ವಿಷಯಗಳ ಬಗ್ಗೆ ಅಥವಾ ನಿಮ್ಮ ದೈನಂದಿನ ಅನುಭವಗಳ ಬಗ್ಗೆಯೂ ಚರ್ಚಿಸಬಹುದು. ಆದರೆ ಚರ್ಚೆಯು ಮಕ್ಕಳಲ್ಲಿ ಸಕಾರಾತ್ಮಕ ಭಾವನೆಗಳನ್ನು ಮೈಗೂಡಿಸಿಕೊಳ್ಳಲು ನೆರವಾಗುವಂತಹವುಗಳಾಗಿರಬೇಕು.

ನೀವೇ ಉತ್ತಮ ಉದಾಹರಣೆ

ಮಕ್ಕಳು ಟಿವಿ ನೋಡಲಿರುವ ಸಮಯ ಕಡಿಮೆ ಮಾಡಲಿರುವ ಉತ್ತಮ ಕಾರಣಕರ್ತರು ನೀವೇ ಎಂಬುದನ್ನು ಖಂಡಿತ ಮರೆಯದಿರಿ. ನಿಮ್ಮ ದಿನ ನಿತ್ಯದ ಅನುಭವಗಳನ್ನು ಹಂಚಿಕೊಳ್ಳಿ. ಹಾಗೆ ಅನುಭವಗಳನ್ನು ಹಂಚಿಕೊಳ್ಳುವಾಗ,ಪ್ರಕೃತಿಯ ಮನೋಹರ ದೃಶ್ಯಗಳನ್ನು ಬಣ್ಣಿಸಿ. ಮನೆಯೊಳಗೆ ಟ್ಯೂಬ್ಲೈಟ್ಗಳ ಕೃತಕ ಬೆಳಕಿನಡಿಯಲ್ಲಿ, ಟಿವಿಯ ಮುಂದೆ ದಿನ ಕಳೆಯುವುದಕ್ಕಿಂತ, ಹೊರಗೆ ಪ್ರಕೃತಿಯ ಮಡಿಲಲ್ಲಿ ಸಮಯ ವ್ಯಯಿಸುವುದು ಎಷ್ಟೊಂದು ಅದ್ಭುತವಾದ ಅನುಭವವೆಂದು ತಿಳಿ ಹೇಳಿರಿ. ಟಿವಿಯಲ್ಲಿ ಕಾಣಿಸಿಕೊಳ್ಳುವ ಮಕ್ಕಳ ನೆಚ್ಚಿನ ಸೆಲೆಬ್ರಿಟಿಗಳು ಗಂಟೆಗಟ್ಟಲೆ ಟಿವಿಯ ಮುಂದೆ ಕುಳಿತುಕೊಂಡ ಕಾರಣವಲ್ಲ, ಅವರ ಸಾಧನೆಗಾಗಿ ಅವಿರತ ಪ್ರಯತ್ನದ ಫಲವಾಗಿ ಯಶಸ್ಸನ್ನು ಮುಡಿಗೇರಿಸಿಕೊಂಡರೆಂದು ವಿವರಿಸಿ.

ನಾಲ್ಕು ಗೋಡೆಗಳ ನಡುವಲ್ಲಿ ಬಂಧಿಯಾಗಿ, ಟಿವಿಯ ಮುಂದೆ ಕುಳಿತು ಸಮಯ ನಷ್ಟ ಪಡಿಸುವಂತಹ ಅಭ್ಯಾಸಗಳಿಂದ ಮಕ್ಕಳನ್ನು ಹೇಗೆ ಮುಕ್ತಗೊಳಿಸಬಹುದೆಂದು ತಿಳಿದುಕೊಂಡೀರಲ್ಲಾ...?

ನಿಮಗಿದು ಉಪಯುಕ್ತ ಮಾಹಿತಿಯೆಂದೆನಿಸಿದರೆ ದಯವಿಟ್ಟು ಶೇರ್ ಮಾಡಿರಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon