Link copied!
Sign in / Sign up
6
Shares

ಏನೇ ಮಾಡಿದರೂ ನಿಮ್ಮ ತೂಕ ಕಡಿಮೆ ಆಗುತ್ತಿಲ್ಲವೇ? ಅದಕ್ಕೆ ಕಾರಣ ಇದಾಗಿರಬಹುದು

ನಿಮ್ಮ ಶರೀರಕ್ಕೆ ಸುಂದರವಾದ ರೂಪ ನೀಡುವುದರಲ್ಲಿ ನೀವು ನಿಮ್ಮಿಂದಾದ ಪ್ರಯತ್ನವನ್ನೆಲ್ಲಾ ಮಾಡುತ್ತಿದ್ದಿರಬಹುದು. ದಿನವೂ ಬಿರುಸು ನಡೆತ, ಮನಸೆಳೆಯುವ ರುಚಿಕರ ತಿಂಡಿಗಳ ಸೇವನೆಯ ಕಡಿತ. ಆದರೂ, ನಿಮ್ಮ ಶರೀರ ಭಾರವು ಕಡಿಮೆ ಆಗುತ್ತಿಲ್ಲವೆಂದು ಅನಿಸುತ್ತದೆಯೇ ? ಅಥವಾ ವ್ಯಾಯಾಮ ಪ್ರಾರಂಭಿಸಿದ ಮೊದಲ ದಿನಗಳಲ್ಲಿ ಲಭಿಸಿದ ಫಲಿತಾಂಶವು ನಂತರದ ದಿನಗಳಲ್ಲಿ ಲಭಿಸುತ್ತಿಲ್ಲವೆಂದು ಕೊರಗುತ್ತಿದ್ದೀರೆ ? ನೀವು ನಿರೀಕ್ಷಿಸಿದ ಫಲಿತಾಂಶ ನಿಮಗೇಕೆ ಲಭಿಸುತ್ತಿಲ್ಲವೆಂಬ ಕಾರಣಕ್ಕೆ ಉತ್ತರ ಕಂಡುಕೊಳ್ಳೋಣ ಬನ್ನಿ..

೧.ಅಳತೆ ಮೀರಿದ ಆಹಾರ ಸೇವನೆ

ನೀವು ಆರೋಗ್ಯಕರ ಆಹಾರವನ್ನು ಸೇವಿಸುತ್ತಿದ್ದರಬಹುದು. ಆದರೆ ತಪ್ಪಾದ ರೀತಿಯಲ್ಲಿ ಪೋಷಿತವಾದ, ಆರೋಗ್ಯಕರ ನೈಸರ್ಗಿಕ ಆಹಾರವಾಗಿದ್ದರೂ, ಅಳತೆ ಮೀರಿದ ರೀತಿಯಲ್ಲಿ ಸೇವಿಸುವುದು ಕ್ಯಾಲೋರಿಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಒಮ್ಮೆ ಆಹಾರ ಸೇವನೆಯಲ್ಲಿ ಏರುಪೇರಾದರೆ ವಾರದ ಡಯಟ್‍ನ ಫಲಿತಾಂಶ ಇಲ್ಲವಾಗುತ್ತದೆ.

೨.ಮಜಾ ಸಜಾ

ವಾರದಲ್ಲಿ ಯಾವುದಾದರೊಂದು ದಿನ ಮನಸೋ ಇಚ್ಛೆ ಸೇವಿಸುವುದು ಕೂಡ ನಿಮ್ಮ ಶರೀರ ತೂಕದ ಮೇಲೆ ಪರಿಣಾಮ ಬೀರುತ್ತದೆ. ದಾರಿಯುದ್ದಕ್ಕೂ ಕಂಡ ಸಿಹಿ ತಿನಿಸುಗಳು ಹಾಗೂ ಜಂಕ್‍ಫುಡ್‍ಗಳನ್ನು ಬಾಯೊಳಗೆ ತುಂಬಿಸುವುದು ಕೂಡ ನಿಮ್ಮ ಪ್ರಯತ್ನಕ್ಕೆ ಕೊಡಲಿ ಏಟು ನೀಡುತ್ತದೆ. ಮನಸ್ಸು ಬಯಸಿದ್ದನ್ನು ತಿನ್ನುವುದಕ್ಕೆ ಕಡಿವಾಣ ಹಾಕಲು ಸಾಧ್ಯವಾಗದಿದ್ದರೆ, ಮರು ದಿನ ನಿತ್ಯದ ಅಭ್ಯಾಸಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವ್ಯಾಯಾಮ ಮಾಡಬೇಕು ಎನ್ನುವುದನ್ನು ಕೂಡ ನೆನಪಲ್ಲಿಟ್ಟುಕೊಳ್ಳಿರಿ.

೩.ಕಾಫಿ ,ಚಹಾ ಮತ್ತು ತಂಪು ಪಾನೀಯಗಳು

ಆಹಾರ ಸೇವನೆಯನ್ನು ನಿಯಂತ್ರಣದಲ್ಲಿಟ್ಟುಕೊಂಡ ನೀವು ಪಾನೀಯಗಳ ಸೇವನೆಯನ್ನು ನಿಯಂತ್ರಣದಲ್ಲಿಟ್ಟು ಕೊಂಡಿದ್ದೀರೇ...? ಚಾ, ಕಾಫಿ, ಜ್ಯೂಸ್‍ನೊಂದಿಗೆ ನೀವು ಸೇವಿಸುವ ಪ್ರತಿಯೊಂದು ಚಮಚ ಸಕ್ಕರೆಯೂ ನಿಮ್ಮ ಶರೀರ ತೂಕದ ಮೇಲೆ ಪ್ರತಿಕೂಲವಾಗಿ ಬಾಧಿಸುತ್ತದೆ.

ಹಣ್ಣಿನ ಅಥವಾ ತರಕಾರಿಯ ರಸದ ಸೇವನೆಯು ಆರೋಗ್ಯಕರ.ಆದರೆ, ನೀವು ಕದಡಿದ ಸಕ್ಕರೆಯೂ ಶರೀರ ತೂಕವನ್ನು ಹೆಚ್ಚಿಸಲು ಕಾರಣವಾಗುವುದು.

೪.ನಿದ್ರೆಯ ಕೊರತೆ

ಸುಖ ನಿದ್ರೆಯು ನಿಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲ ನಿಮ್ಮ ಶರೀರ ಭಾರವನ್ನು ಕಾಯ್ದುಕೊಳ್ಳಲು ಕೂಡ ಸಹಾಯಮಾಡುತ್ತದೆ. ಅಧ್ಯಯನಗಳ ಪ್ರಕಾರ ಸರಿಯಾಗಿ ನಿದ್ದೆಯಿಲ್ಲದೆ ಬಳಲುವವರ ಶರೀರ ದಪ್ಪಗಾಗುವ ಸಾಧ್ಯತೆಯೂ ಐವತ್ತು ಶತಮಾನಕ್ಕಿಂತಲೂ ಹೆಚ್ಚು.

೫.ನಿರ್ಜಲೀಕರಣ

ಧಾರಾಳ ನೀರಿನ ಸೇವನೆಯೂ ಶರೀರದ ಕಾಲೋರಿಗಳನ್ನು ದಹಿಸುವುದು ಹಾಗೂ ಹೊಟ್ಟೆಯನ್ನು ತುಂಬಿರುವಂತೆ ಮಾಡುವುದು. ಇದರಿಂದ ಆಗಾಗ ಆಹಾರ ಸೇವಿಸಬೇಕೆಂದು ಕೂಡ ನಿಮಗನಿಸದು. ನಿಮಗೆ ಹಸಿವಾದಾಗ ಕೂಡ ಸ್ವಲ್ಪ ನೀರನ್ನು ಸೇವಿಸುವುದು ಉತ್ತಮ ಅಭ್ಯಾಸವೇ ಹೌದು. ನೀರು ಕುಡಿದರೆ, ಹೊಟ್ಟೆಯು ಊದಿಕೊಳ್ಳುವುದು ಎನ್ನುವ ಭಯ ಬೇಡ. ನಿಜವಾಗಲೂ ಅದರಲ್ಲಿ ಯಾವುದೇ ಹುರುಳಿಲ್ಲ....!!

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon