Link copied!
Sign in / Sign up
10
Shares

ಪ್ರೆಗ್ನನ್ಸಿ ಸೆಕ್ಸ್ ಅಲ್ಲಿ ನೀವು ಏಕೆ ತೊಡಗಿಸಿಕೊಳ್ಳಲೇಬೇಕು ಎಂಬುದಕ್ಕೆ 5 ಕಾರಣಗಳು

ಗರ್ಭಿಣಿ ಹೆಂಗಸಿನ ತಲೆಯಲ್ಲಿ ಹರಿದಾಡುವ ಅನೇಕ ಪ್ರಶ್ನೆಗಳಲ್ಲಿ ಒಂದು ಪ್ರಶ್ನೆ ಎಂದರೆ ಅದು ತಾನು ಗರ್ಭಧಾರಣೆ ವೇಳೆ ತನ್ನ ಲೈಂಗಿಕ ಜೀವನವನ್ನ ಸಂಪೂರ್ಣವಾಗಿ ದೂರ ಮಾಡಬೇಕೆ ಎಂಬುದು. ನೀವು ಮೊದಮೊದಲಿಗೆ ಇದರಿಂದ ದೂರ ಉಳಿಯುವ ಮನಸ್ಸು ಮಾಡಿದರೂ, ನಿಮ್ಮ ಬಯಕೆಗಳನ್ನ ಹಿಡಿದಿಟ್ಟುಕೊಳ್ಳಲು ನಿಮಗೆ ಕಷ್ಟವಾಗುತ್ತದೆ. ನಿಮ್ಮ ಮಗುವು ಗರ್ಭದಿಂದ ಹೊರಬರಲು ತಯಾರಿ ಮಾಡಿಕೊಳ್ಳುತ್ತಿದ್ದರೆ, ನೀವು ರಸಮಯ ಕ್ಷಣಗಳಲ್ಲಿ ತೊಡಗಿಕೊಳ್ಳಬಹುದೇ? ಒಂದು ವೇಳೆ ನಿಮ್ಮಲ್ಲಿ ಗರ್ಭಧಾರಣೆಯಲ್ಲಿ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುವುದು ಸುರಕ್ಷಿತ ಅಲ್ಲ ಎಂದೋ ಅಥವಾ ಇನ್ನ್ಯಾವುದೋ ಕಾರಣಕ್ಕೆ ಅಂಜಿಕೆ ಇದ್ದರೆ, ನೀವು ತಿಳಿದಿರಬೇಕಾದ ಎಲ್ಲಾ ವಿಷಯಗಳು ಇಲ್ಲಿವೆ ಓದಿ.


೧. ಸಂಭೋಗವು ನ್ಯಾಯಸಮ್ಮತವಾಗಿದೆ

ನೀವೇನಾದರೂ ಗರ್ಭಿಣಿ ಆಗಿರುವ ವೇಳೆ ಸೆಕ್ಸ್ ಅಲ್ಲಿ ತೊಡಗಿಸಿಕೊಂಡರೆ ನಿಮ್ಮ ಮಗುವಿಗೆ ತೊಂದರೆ ಆಗುತ್ತದೆ ಎಂಬ ಅಭಿಪ್ರಾಯ ಹೊಂದಿದ್ದರೆ, ಖುಷಿಯ ವಿಷಯ ಏನೆಂದರೆ ನೀವು ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿಮ್ಮ ಮಗುವಿಗೆ ಯಾವುದೇ ತೊಂದರೆ ಆಗುವುದಿಲ್ಲ. ನಿಜ  ಹೇಳಬೇಕು ಎಂದರೆ ನೀವು ಹಿಂದೆಂದೂ ಅನುಭವಿಸಿರದ ಲೈಂಗಿಕ ತೃಪ್ತಿಯನ್ನ ಈ ಸಮಯದಲ್ಲಿ ಹೆಚ್ಚು ತೀವ್ರವಾದ ಲೈಂಗಿಕ ಪರಾಕಾಷ್ಠೆ (ಒರ್ಗ್ಯಾಸಮ್) ಹೊಂದುವ ಮೂಲಕ ನೀವು ಪಡೆಯಬಹುದು. ನೀವು ಕೆಲವೊಂದು ಸುರಕ್ಷಿತ ಸಂಭೋಗ ಭಂಗಿಗಳನ್ನ ಪ್ರಯತ್ನಿಸಬಹುದು, ಆದರೆ ಲೈಂಗಿಕ ಜೀವನ ಸಂಪೂರ್ಣವಾಗಿ ನಿಲ್ಲಿಸುವುದೇನು ಬೇಡ.


೨. ಚಿತ್ತಾಕರ್ಷಕ ಒರ್ಗ್ಯಾಸಮ್ಸ್

ಗರ್ಭಧಾರಣೆ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರ ಮೂಲಕ ಕೆಲವೊಂದು ಅನಿರೀಕ್ಷಿತ ಲಾಭಗಳನ್ನ ಪಡೆದುಕೊಳ್ಳಬಹುದು. ಈ ಉಪಯೋಗಗಳನ್ನ ಓದಿದ ಮೇಲೆ ನೀವು ಇವುಗಳ ಕಾರಣದಿಂದಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಹುದು. ಒಂದು ಮನಮೋಹಕ ಉಪಯೋಗ ಎಂದರೆ ಅದು ಪ್ರೆಗ್ನನ್ಸಿ ವೇಳೆ ಸೆಕ್ಸ್ ನಿಮಗೆ ಎಂದಿಗಿಂತ ಹೆಚ್ಚು ಮೋಜುಭರಿತವಾಗಿರುತ್ತದೆ ಮತ್ತು ಸುಖಭರಿತವಾಗಿರುತ್ತದೆ. ಯೋನಿಯು ಸ್ಪ್ರರ್ಶ ಹೊಂದಿದೊಡನೆ ಅದು ಲೈಗಿಕವಾಗಿ ಪ್ರಚೋದನೆ ಹೊಂದು, ಹೆಚ್ಚೆಚ್ಚು ರಕ್ತವು ಆ ಲೈಂಗಿಕ ಅಂಗಾಂಗಗಳಿಗೆ ಹರಿದು ನೀವು ಹೆಚ್ಚು ತೀವ್ರತೆಯ ಲೈಂಗಿಕ ಅನುಭವಕ್ಕೆ ಪಾತ್ರರಾಗುತ್ತೀರಿ. ಇದು ಹೆಚ್ಚು ಸೂಕ್ಷ್ಮತೆ ಉಂಟು ಮಾಡಿ, ಹೆಣ್ಣು ಹೆಚ್ಚು ಆಕ್ಸಿಟೋಸಿನ್ ಉತ್ಪಾದನೆ ಮಾಡಿ ತೀವ್ರವಾದ ಲೈಂಗಿಕ ಪರಾಕಾಷ್ಠೆ ಅನುಭವಿಸುವಂತೆ ಮಾಡುತ್ತದೆ.


೩. ಸೂಕ್ತ ಸಂಭೋಗ ಭಂಗಿಯನ್ನ ಪ್ರಯತ್ನಿಸಿ

ನೀವು ಗರ್ಭ ಧರಿಸಿದ ನಂತರ ನಿಮಗೆ ಅನುಕೂಲ ಎಣಿಸುತ್ತಿದ್ದ ಭಂಗಿಗಳು ಕೂಡ ನಿಮಗೆ ಅಹಿತಕರ ಅನುಭವ ಉಂಟು ಮಾಡಬಲ್ಲವು. ಏಕೆಂದರೆ ಈ ಸಮಯದಲ್ಲಿ ನಿಮ್ಮ ದೇಹದ ಮೇಲೆ ಅನೇಕಾನೇಕ ಬದಲಾವಣೆಗಳು ದಾಳಿ ಮಾಡುತ್ತಿರುತ್ತವೆ. ನೀವು ಪ್ರೆಗ್ನನ್ಸಿ ಮುನ್ನ ಇಷ್ಟಪಡದ ಭಂಗಿಯೇ ನಿಮಗೆ ಗರ್ಭಧಾರಣೆ ವೇಳೆ ಗರಿಷ್ಟ ಸುಖ ನೀಡಬಹುದು. ನೀವು ಬೇರೆ ಬೇರೆ ಭಂಗಿಗಳನ್ನ ಪ್ರಯತ್ನಿಸುತ್ತಾ ಹೋದರೆ, ನಿಮಗೆ ಯಾವುದು ಸೂಕ್ತ ಎಂಬುದನ್ನ ನೀವೇ ಅರಿಯಬಹುದು. ಈ ಪ್ರಕ್ರಿಯೆಯಲ್ಲಿ ನಿಮಗೆ ತಿಳಯದೆ ಇರದಂತಹ ವಿಷಯಗಳು ಕೂಡ ನಿಮ್ಮ ಲೈಂಗಿಕ ಅನುಭವವನ್ನ ಮತ್ತಷ್ಟು ಹಿತಕರವಾಗಿಸಬಹುದು.


೪. ಮೃದುವಾಗಿ ಮತ್ತು ಮೆಲ್ಲನೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಿ

ನೀವು ನಿಮ್ಮ ಗರ್ಭಧಾರಣೆಯಲ್ಲಿ ಮೃದುವಾಗಿ ಮತ್ತು ಮೆಲ್ಲನೆ ತೊಡಗಿಕೊಳ್ಳುವುದರಿಂದಲೇ ಹೆಚ್ಚು ರಸಮಯ ಕ್ಷಣಗಳನ್ನ ಕಳೆಯಬಹುದು. ನೀವು ರಭಸವಾಗಿ ಸಂಭೋಗ ಕ್ರಿಯೆಯಲ್ಲಿ ತೊಡಗಿಸಿಕೊಂಡರೆ ನಿಮ್ಮ ಸಂಗಾತಿಯ ಶಿಶ್ನವು ಮಗುವಿಗೆ ಯಾವುದೇ ತೊಂದರೆ ಮಾಡದೆ ಇದ್ದರು, ಅದು ನಿಮ್ಮ ಯೋನಿಗೆ ಅಥವಾ ಗರ್ಭಕಂಠಕ್ಕೆ ಹಾನಿ ಉಂಟುಮಾಡಬಹುದು. ನಿಮ್ಮ ಲೈಂಗಿಕ ಆಸಕ್ತಿಯಲ್ಲಿ ಉಂಟಾಗುವ ಅತಿಯಾದ ಏರಿಕೆಯು ನೀವು ಏನಾದರೂ ರಿಸ್ಕಿ ಆಗಿರುವುದರಲ್ಲಿ ತೊಡಗಿಸಿಕೊಳ್ಳಲು ದಾರಿ ಮಾಡಿಕೊಡಬಾರದು. ನಿಮ್ಮ ಸಂಗಾತಿಯೊಡನೆ ರಭಸದಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಬದಲು, ಮೃದುವಾಗಿ ಮತ್ತು ಸೌಮ್ಯವಾಗಿ ತೊಡಗಿಸಿಕೊಳ್ಳಿ.


೫. ನಿಮ್ಮ ಮಗುವಿಗೆ ಇದರ ಯಾವುದೇ ಅರಿವು ಇರುವುದಿಲ್ಲ

ಒಂದು ವೇಳೆ ಸಂಭೋಗ ಕಾರ್ಯದಲ್ಲಿ ನೀವು ನಿಮ್ಮ ಮಗುವಿಗೆ ತಿವಿಯುತ್ತೀರಿ ಎಂಬ ಭಯ ಏನಾದರು ನಿಮ್ಮಲ್ಲಿ ಇದ್ದರೆ, ಅದು ನಿಮ್ಮ ತಪ್ಪು ಗ್ರಹಿಕೆ ಅಷ್ಟೇ. ನಿಮ್ಮ ಮಗುವಿಗೆ ನೀವು ಏನು ಮಾಡುತ್ತಿರುವಿರಾ ಎಂಬುದರ ಅರಿವು ಕೂಡ ಇರುವುದಿಲ್ಲ. ಮಗುವಿಗೆ ಸ್ವಲ್ಪ ಅಲುಗಾಡುವ ಅನುಭವ ಆಗಬಹುದು. ನೀವು ಮೆಟ್ಟಿಲುಗಳನ್ನ ಹತ್ತುವಾಗಲು ನಿಮ್ಮ ಮಗುವಿಗೆ ಇದೇ ಅನುಭವ ಆಗುವುದು. ಹೀಗಾಗಿ ಅದರ ಬಗ್ಗೆ ನೀವು ಹೆಚ್ಚು ತಲೆ ಕೆಡಿಸಿಕೊಳ್ಳಲೇ ಬೇಡಿ.

ಗರ್ಭಧಾರಣೆಯಲ್ಲಿ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುವುದು ಸಂಪೂರ್ಣ ಸಹಜ ಮತ್ತು ಸುರಕ್ಷಿತ. ನೀವು ಇದರ ಬಗ್ಗೆ ಚಿಂತೆ ಆಗಲಿ ಅಥವಾ ಭಯ ಆಗಲಿ ಇಟ್ಟುಕೊಳ್ಳುವುದು ಮೂರ್ಖತನ. ನೀವು ಹೆಚ್ಚು ತೂಕ ಗಳಿಸಿಕೊಂಡಾಗಲೇ ನೀವು ಮತ್ತಷ್ಟು ಸುಖಕರವಾದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಹುದು.    

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon